BBC On Trail On Documentary: ‘ಬಿಬಿಸಿ’ಯ ಕರಾಳ ಮುಖವನ್ನು ಬಯಲಿಗೆಳೆಯುವ ಸಾಕ್ಷ್ಯಚಿತ್ರ ‘ಬಿಬಿಸಿ ಆನ್ ಟ್ರಯಲ್’ ಬಿಡುಗಡೆ !

‘ಸನಾತನ ಪ್ರಭಾತ್’ಗೆ ವಿಶೇಷ ಧನ್ಯವಾದ ಅರ್ಪಣೆ !

ಪಂಡಿತ್ ಸತೀಶ್ ಶರ್ಮಾ

(ಡಾಕ್ಯುಮೆಂಟ್ರಿ ಅಂದರೆ ಸಾಕ್ಷ್ಯಚಿತ್ರ !)

ಜೈಪುರ (ರಾಜಸ್ಥಾನ) – ಭಾರತ ಮತ್ತು ಹಿಂದೂ ವಿರೋಧಿ ‘ಬಿಬಿಸಿ’ ಸುದ್ದಿ ವಾಹಿನಿಯ ಕರಾಳ ಮುಖವನ್ನು ಬಯಲಿಗೆಳೆಯುವ ‘ಬಿಬಿಸಿ ಆನ್ ಟ್ರಯಲ್’ ಎಂಬ ‘ಸಾಕ್ಷ್ಯಚಿತ್ರ’ವನ್ನು ಅಕ್ಟೋಬರ್ 25 ರ ರಾತ್ರಿ 3 ದಿನಗಳ ಜಾಗತಿಕ ಕಾರ್ಯಕ್ರಮ ‘ರಿಕ್ಲೈಮಿಂಗ್ ಇಂಡಿಯಾ’ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ‘ದಿ ಜೈಪುರ ಡೈಲಾಗ್ಸ್’ ಈ ಸಂಸ್ಥೆಯು ಕಾರ್ಯಕ್ರಮವನ್ನು ಆಯೋಜಿಸಿದೆ. ಇದನ್ನು ವಿವಿಧ ಪ್ರಸಿದ್ಧ ಮತ್ತು ಪ್ರಖರ ಹಿಂದುತ್ವನಿಷ್ಠ ಆನ್‌ಲೈನ್ ಮಾಧ್ಯಮಗಳು ಇದರ ಪ್ರಸಾರ ಮಾಡಿದವು. ಸಾಕ್ಷ್ಯಚಿತ್ರದ ನಿರ್ಮಾಪಕರಾದ ಗ್ಲೋಬಲ್ ಹಿಂದೂ ಫೆಡರೇಶನ್ ಸಾಕ್ಷ್ಯಚಿತ್ರದ ಪ್ರಸರಣದಲ್ಲಿ ಸಹಕರಿಸಿದ ‘ದಿ ಜೈಪುರ ಡೈಲಾಗ್ಸ್’, ‘ಸ್ಟ್ರಿಂಗ್ ರಿವೀಲ್ಸ್’, ‘ಪ್ರಾಚ್ಯಂ’, ‘ಸ್ವರಾಜ್ಯ ಮ್ಯಾಗ್’ ಮತ್ತು ‘ಸನಾತನ ಪ್ರಭಾತ್’ ಅವರಿಗೆ ವಿಶೇಷ ಧನ್ಯವಾದಗಳನ್ನು ತಿಳಿಸಿದ್ದಾರೆ.

‘ಸ್ಟ್ರಿಂಗ್ ರಿವೀಲ್ಸ್’ ಮತ್ತು ‘ಪ್ರಾಚ್ಯಂ’ ನ OTT ಜೊತೆಗೆ ಈ ಸಾಕ್ಷ್ಯಚಿತ್ರವು ‘ಗ್ಲೋಬಲ್ ಹಿಂದೂ ಫೆಡರೇಶನ್’ ನ ಯೂಟ್ಯೂಬ್ ಚಾನೆಲ್‌ನಲ್ಲಿಯೂ ಪ್ರಸಾರವಾಗಿದೆ. ಇದನ್ನು ಗ್ಲೋಬಲ್ ಹಿಂದೂ ಫೆಡರೇಶನ್ ಅಧ್ಯಕ್ಷ ಪಂಡಿತ್ ಸತೀಶ ಶರ್ಮಾ ಲೇಖನ ಮತ್ತು ನಿರ್ದೇಶಿಸಿದ್ದೂ ವೀಡಿಯೊವನ್ನು ‘ಸ್ಟ್ರಿಂಗ್ ರಿವೀಲ್ಸ್’ ಮುಖ್ಯಸ್ಥ ವಿನೋದ್ ಕುಮಾರ್ ಸಂಕಲನೆ ಮಾಡಿದ್ದಾರೆ. ಭಾರತ ಹಾಗೂ ಯುನೈಟೆಡ್ ಕಿಂಗ್‌ಡಮ್, ಅಮೆರಿಕ ಮತ್ತು ನ್ಯೂಜಿಲೆಂಡ್‌ನ ಅನೇಕ ಹಿಂದೂಗಳು ಈ ಸಾಕ್ಷ್ಯಚಿತ್ರದ ನಿರ್ಮಾಣಕ್ಕೆ ಸಹಾಯ ಮಾಡಿದ್ದಾರೆ.

ಈ ‘ಸಾಕ್ಷ್ಯಚಿತ್ರ’ದಿಂದ ಮಂಡಿಸಲಾದ ಭಾಗ !

1. ಈ ಸಾಕ್ಷ್ಯಚಿತ್ರದ ಒಟ್ಟು ಅವಧಿ 1 ಗಂಟೆ 8 ನಿಮಿಷಗಳಾಗಿದ್ದೂ ಅದರ 5 ಭಾಗಗಳನ್ನು (ಅಧ್ಯಾಯಗಳು) ಮಾಡಲಾಗಿದೆ. ಪ್ರತಿ ಸಂಚಿಕೆಯಿಂದ, ಬಿಬಿಸಿಯ ಹಿಂದೂ ಮತ್ತು ಭಾರತ ದ್ವೇಷಿ ಮಖವಾಡ ಮಾತ್ರವಲ್ಲ, ಬದಲಾಗಿ ಇರಾನ್, ಲಿಬಿಯಾ, ಇರಾಕ್ ಇತ್ಯಾದಿ ದೇಶಗಳ ಹಿತದ ವಿರುದ್ಧ ಹೋಗಿ ಅಲ್ಲಿ ಸರಕಾರಗಳನ್ನು ಹೇಗೆ ಉರುಳಿಸಿತು, ಬಿಬಿಸಿ ಸ್ವತಃ ನಿಷ್ಠಾವಂತ ಸಂಪಾದಕರು ಮತ್ತು ಪತ್ರಕರ್ತರಿಗೆ ಹೇಗೆ ಅನ್ಯಾಯ ಮಾಡಿದೆ BBC, ಅನೇಕ BBC ಉದ್ಯೋಗಿಗಳು ಲೈಂಗಿಕ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ ಎಂಬುದಕ್ಕೆ ಹಲವು ಪುರಾವೆಗಳು ಇದ್ದರೂ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ, ಇತ್ಯಾದಿ. ಬಹಳ ಅಭ್ಯಾಸಪೂರ್ಣ ಮಾಹಿತಿಯನ್ನು ತೋರಿಸಲಾಗಿದೆ.

2. ಬಿಬಿಸಿಯು ಇದು ಭಾರತದ ಕುರಿತು ಆಧಾರರಹಿತ ಮತ್ತು ನೈಜಸ್ಥಿತಿಯ ಅರಿವಿಲ್ಲದೇ ಮಾಡಿದ ವರದಿಗಳನ್ನು ತೋರಿಸಲಾಗಿದೆ. ಉದಾ. 26/11 ರಲ್ಲಿ ಮುಂಬಯಿ ಮೇಲೆ ಜಿಹಾದಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ, ದಾಳಿಕೋರರನ್ನು ‘ಭಯೋತ್ಪಾದಕರು’ ಬದಲಿಗೆ ‘ಬಂದೂಕುಧಾರಿ’ ಎಂದು ಕರೆದಿರುವುದು ಇತ್ಯಾದಿ.

3. ‘ನವ ವಸಾಹತುಶಾಹಿ’ಯ ನೈಜ ಸ್ವರೂಪವನ್ನು ವಿವರಿಸುವಾಗ, ಎಲ್ಲೆಲ್ಲಿ ಬ್ರಿಟೀಷ್ ವಸಾಹತುಗಳು ಇತ್ತು, ಅಲ್ಲಲ್ಲಿ ಬ್ರಿಟಿಷರು ತೊರೆದ ನಂತರ ಆ ದೇಶಗಳ ಸ್ಥಿತಿ ಎಷ್ಟು ಕೀಳು ಮಟ್ಟಕ್ಕೆ ಹೋಯಿತು ಎಂಬುದನ್ನು ಬಿಬಿಸಿ ತೋರಿಸಲು ಏಕಾಂಗಿ ಪ್ರಯತ್ನ ಮಾಡಿದೆ.

4. ಬಿಬಿಸಿಯನ್ನು 1942 ರಲ್ಲಿ ಸುಭಾಷ ಚಂದ್ರ ಬೋಸ್ ಅವರು ‘ಬ್ಲಫ್ ಮತ್ತು ಬ್ಲಸ್ಟರ್ ಕಾರ್ಪೊರೇಷನ್’ ಎಂದು ಉಲ್ಲೇಖಿಸಿದ್ದಾರೆ ಎಂದು ಹೇಳಲಾಗುತ್ತದೆ. ಇದರೊಂದಿಗೆ, ಡಾಕ್ಯುಮೆಂಟ್ರಿಯಲ್ಲಿ ಅಲ್ಲಲ್ಲಿ ‘ಸಾಮೂಹಿಕ ವಿನಾಶದ ಶಸ್ತ್ರ ಅಂದರೆ ಬಿಬಿಸಿ’, ‘ಸುದ್ದಿ ಸೇವೆ’ಯ ನೆಪದಲ್ಲಿ ಬಿಬಿಸಿ ವಿಶ್ವಯುದ್ಧದ ರಹಸ್ಯ ಸಾಧನ ಅಂದರೆ ಬಿಬಿಸಿ’, ‘ದ್ವಿಮುಖ ನೀತಿ ಅಲ್ಲ, ಬದಲಾಗಿ ಅಧಿಕಾರ ನಡೆಸುವ ಬಿಬಿಸಿ’, ‘ವಾರ್ತೆಯನ್ನು ಯುದ್ಧವಾಗಿ ಬಳಸುವ ಬಿಬಿಸಿ’ ಈ ರೀತಿ ಬಿಬಿಸಿಯ ಅರ್ಥ ಬರುವಂತೆ ಚಿತ್ರಿಕರಿಸಲಾಗಿದೆ.

5. 2019 ರಿಂದ 2021 ರವರೆಗಿನ 3 ವರ್ಷಗಳ ಅವಧಿಯಲ್ಲಿ, ಬಿಬಿಸಿ ಭಾರತದಲ್ಲಿ ಶೇ. 173 ರಷ್ಟು ಬೆಳೆದರೇ ಅದೇ ಅವಧಿಯಲ್ಲಿ ಅದರ ಜಾಗತಿಕ ಬೆಳವಣಿಗೆಯು ಕೇವಲ ಶೇ. 35 ರಷ್ಟು ಮಾತ್ರ ಉಳಿಯಿತು. 2020 ರಲ್ಲಿ ದೆಹಲಿಯಲ್ಲಿ ವಿದೇಶಿ ಏಜೆಂಟರ ಮೂಲಕ ಭಾರತ-ವಿರೋಧಿ ರೈತರ ಚಳುವಳಿ ನಡೆದಿತ್ತು ಎಂಬುದನ್ನು ನಾವು ಮರೆಯಬಾರದು.

ಈ ಸಾಕ್ಷ್ಯಚಿತ್ರವನ್ನು ವೀಕ್ಷಿಸಲು ಕೆಳಗಿನ ಲಿಂಕ್‌ಗೆ ಭೇಟಿ ನೀಡಿ! : bbcontrial.com