ಅಲ್ ಖೈದಾದ ಕಟ್ಟರ ಭಯೋತ್ಪಾದಕರು ಅಫಘಾನಿಸ್ತಾನ ಮತ್ತು ಪಾಕಿಸ್ತಾನದ ಗಡಿಯಲ್ಲಿ ಅಡಗಿದ್ದಾರೆ ! – ವಿಶ್ವಸಂಸ್ಥೆ

ನ್ಯೂಯಾರ್ಕ್ (ಅಮೇರಿಕ) – ವಿಶ್ವಸಂಸ್ಥೆಯ ಉಗ್ರನಿಗ್ರಹ ದಳವು ಸಲ್ಲಿಸಿದ ವರದಿಯಲ್ಲಿ, ಅಲ್ ಖೈದಾದ ಹೆಚ್ಚಿನ ಭಯೋತ್ಪಾದಕರು ಅಫಘಾನಿಸ್ತಾನ ಮತ್ತು ಪಾಕಿಸ್ತಾನದ ಗಡಿಯಲ್ಲಿ ಅಡಗಿಕೊಂಡಿದ್ದಾರೆ ಇದರಲ್ಲಿ ಮಾಜಿ ಅಲ್ ಖೈದಾ ಮುಖ್ಯಸ್ಥ ಅಯಮಾನ್ ಅಲ್ ಜವಾಹರಿ ಬದುಕಿದ್ದಾನೆ. ಈ ಮೊದಲು, ಆತನ ಸಾವಿನ ಸುದ್ದಿ ತಿಳಿದುಬಂದಿತ್ತು; ಆದರೆ, ಅದಕ್ಕೆ ಅಧಿಕೃತವಾಗಿ ದೃಢಿಕರಣ ಸಿಕ್ಕಿರಲಿಲ್ಲ.