೨೪ ಜನರ ಬಂಧನ ಓರ್ವ ಮಹಿಳೆಯೂ ಸಹಭಾಗ
|
ಗೌಹಟಿ (ಅಸ್ಸಾಂ) – ಅಸ್ಸಾಂನ ಹೊಜೈ ಜಿಲ್ಲೆಯ ಒಂದು ಕೋವಿಡ್ ಆರೈಕೆ ಕೇಂದ್ರದಲ್ಲಿ ಕೊರೋನಾ ಪೀಡಿತ ರೋಗಿಯೊಬ್ಬರು ಮೃತನಾದಾಗ ಆತನ ಮತಾಂಧ ಕುಟುಂಬಸ್ಥರು ಅಲ್ಲಿಯ ಡಾ. ಸೆಜುಕುಮಾರ ಸೇನಾಪತಿಯವರ ಕೇಂದ್ರಕ್ಕೆ ನುಗ್ಗಿ ಥಳಿಸಿ ಕೇಂದ್ರವನ್ನು ಧ್ವಂಸಮಾಡಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೊಹಮ್ಮದ್ ಕಮರುದ್ದೀನ್, ಮೊಹಮ್ಮದ್ ಜೈನಲುದ್ದೀನ್, ರೆಹನುದ್ದೀನ್, ಸೈದುಲ್ ಆಲಂ, ರಹೀಮುದ್ದೀನ್, ರಾಜುಲ್ ಇಸ್ಲಾಂ, ತೈಬರ್ ರೆಹಮಾನ್ ಮತ್ತು ಸಾಹಿಲ್ ಇಸ್ಲಾಂ ಸೇರಿದಂತೆ ೨೪ ಮಂದಿ ಮತಾಂಧರನ್ನು ಬಂಧಿಸಿದ್ದಾರೆ. ಅವರಲ್ಲಿ ಒಬ್ಬ ಮಹಿಳೆಯೂ ಸೇರಿದ್ದಾಳೆ. ಈ ಹಲ್ಲೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿದೆ. ಘಟನೆಯ ನಂತರ, ಇಂಡಿಯನ ಮೆಡಿಕಲ ಅಸೋಸಿಯೇಶನ ಇದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಪತ್ರ ಬರೆದಿದ್ದು, ವೈದ್ಯಕೀಯ ಸಿಬ್ಬಂದಿಗಳ ಸುರಕ್ಷತೆಯ ಬಗ್ಗೆ ಗಮನ ಹರಿಸಿ ಜೊತೆಗೆ ಇಂತಹವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದೆ.
24 arrested for assault on doctor in Assam’s Covid-19 care centre https://t.co/wdzldYnx2n
— Hindustan Times (@HindustanTimes) June 2, 2021