ಸಾಧನೆಯಲ್ಲಿ ಸಾಧಕರ ಅಧೋಗತಿಯಾಗಬಾರದು, ಎಂಬ ತಳಮಳದಿಂದ ಕೇವಲ ಕೆಲವು ಕ್ಷಣಗಳ ವರ್ತನೆಯನ್ನು ನಿರೀಕ್ಷಿಸಿ ಅವರಿಗೆ ಸಹಾಯ ಮಾಡುವ ಪರಾತ್ಪರ ಗುರು ಡಾಕ್ಟರರು !

– (ಪರಾತ್ಪರ ಗುರು) ಡಾ. ಆಠವಲೆ

ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದ ಸ್ವಭಾವದೋಷ ನಿರ್ಮೂಲನೆ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯು ಅಖಿಲ ಮನುಕುಲಕ್ಕೆ ನೀಡಿದ ಬಹುದೊಡ್ಡ ಕೊಡುಗೆಯಾಗಿದೆ. ಇಂದು ಪ್ರತಿಯೊಬ್ಬ ವ್ಯಕ್ತಿಯು ತನ್ನ ಸ್ವಭಾವದೋಷ ಹಾಗೂ ಅಹಂನಿಂದ ತನ್ನ ಜೀವನದ ಆನಂದದಿಂದ ವಂಚಿತನಾಗಿದ್ದಾನೆ. ಆ ಆನಂದದ ಸ್ರೋತವು ನಮ್ಮ ಆಂತರ್ಯದಲ್ಲಿಯೇ ಇದೆ, ಎಂದು ಪುನಃ ಪುನಃ ಹೇಳಿ ಷಡ್ವೈರಿಗಳ ಜಾಲದಿಂದ ಸಾಧಕರನ್ನು ಹೊರತೆಗೆಯುವುದು, ಅವರ ಪ್ರೀತಿಯ ಅತ್ಯುಚ್ಚ ಸ್ಥಿತಿಯಾಗಿದೆ. ಇದನ್ನು ಮಾಡಲು ಅವರು ಕೇವಲ ದುಃಖದ ಕಾರಣಗಳನ್ನು ಹೇಳಿ ಅಲ್ಲಿಗೆ ನಿಲ್ಲದೇ, ಸ್ವಭಾವದೋಷ ಹಾಗೂ ಅಹಂನ್ನು ದೂರ ಮಾಡಲು ಯಾವ ರೀತಿ ಪ್ರಯತ್ನಿಸಬೇಕು, ಎಂಬುದನ್ನೂ ಹೇಳಿದ್ದಾರೆ. ಸಾಧಕರಿಂದ ನಿರಂತರವಾಗಿ ಆ ಪ್ರಯತ್ನಗಳಾಗಬೇಕೆಂದು ಅದರ ವರದಿಯನ್ನು ಕೊಡುವ ಪದ್ಧತಿಯನ್ನೂ ಅವರು ಪ್ರಾರಂಭಿಸಿದ್ದಾರೆ. ಸನಾತನದಲ್ಲಿ ತೆಗೆದುಕೊಳ್ಳಲಾಗುವ ‘ವ್ಯಷ್ಟಿ ಸಾಧನೆಯ ವರದಿಯು ಸನಾತನದ ಅದ್ವಿತೀಯ ವೈಶಿಷ್ಟ್ಯವಾಗಿದೆ. ಸಾಧಕರಿಗೆ ಪ್ರೀತಿಯಿಂದ, ಸಂಯಮದಿಂದ ಮತ್ತು ಕೆಲವೊಮ್ಮೆ ಸಾಧಕರ ಸಾಧನೆಯಲ್ಲಿ ಅಧೋಗತಿಯಾಗಬಾರದೆಂಬ ಪ್ರೀತಿಯಿಂದ ಕಠೋರವಾಗಿ ಅರಿವು ಮಾಡಿಕೊಡುವ ಈ ವರದಿಯು, ಸನಾತನದ ಸಾಧಕರ ಆಧ್ಯಾತ್ಮಿಕ ಪ್ರಗತಿಯು ಅತ್ಯಂತ ವೇಗದಿಂದಾಗುತ್ತಿರುವುದರ ಹಿಂದಿನ ರಹಸ್ಯವಾಗಿದೆ ! ಪರಾತ್ಪರ ಗುರು ಡಾಕ್ಟರರು ಸಾಧಕರಿಗೆ ಯಾವ ರೀತಿ ಸಾಧನೆಯಲ್ಲಿ ಸಹಾಯ ಮಾಡುತ್ತಾರೆ, ಎಂಬುದರ ಕೆಲವು ಆಯ್ದ ಉದಾಹರಣೆಗಳನ್ನು ಇಲ್ಲ ಕೊಡಲಾಗಿದೆ. – ಸದ್ಗುರು (ಸೌ.) ಬಿಂದಾ ಸಿಂಗಬಾಳ

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

೧. ಪರಾತ್ಪರ ಗುರು ಡಾಕ್ಟರರು ಸಾಧಕನ ಕೃತಿಯಿಂದಲೇ ಅವನ ಅಹಂ ಹೆಚ್ಚು ಇರುವ ಬಗ್ಗೆ ತಿಳಿಸುವುದು

ಒಂದು ಸಲ ಕೆಲವು ಸಾಧಕರು ಟ್ರಕ್‌ನಲ್ಲಿದ್ದ ಸಾಹಿತ್ಯಗಳನ್ನು ಕೆಳಗೆ ಇಳಿಸುತ್ತಿದ್ದರು. ಆಗ ಓರ್ವ ಸಾಧಕನು ಅಲ್ಲಿ ಸುಮ್ಮನೆ ನಿಂತುಕೊಂಡಿದ್ದನು ಮತ್ತು ತಾನು ಸೇವೆಯನ್ನು ಮಾಡದೇ ಇತರರಿಗೆ ‘ನೀವು ಇದನ್ನು ಮಾಡಿರಿ, ನೀವು ಅದನ್ನು ಮಾಡಿರಿ, ಎಂದು ಹೇಳುತ್ತಿದ್ದನು. ಪ್ರತ್ಯಕ್ಷದಲ್ಲಿ ಬಹಳಷ್ಟು ಸಾಹಿತ್ಯಗಳನ್ನು ಇಳಿಸಲು ಇದ್ದುದರಿಂದ ಅವನೂ ಸಹಾಯ ಮಾಡುವುದು ಅಪೇಕ್ಷಿತವಿತ್ತು. ಅದನ್ನು ನೋಡಿ ಪರಾತ್ಪರ ಗುರು ಡಾಕ್ಟರರು, “ಇಷ್ಟು ಸಾಮಾನುಗಳನ್ನು ಇಳಿಸುವುದಿದ್ದರೂ, ಅವನು ತಾನು ಏನೂ ಮಾಡುವುದಿಲ್ಲ. ಕೇವಲ ಇತರರಿಗೆ ಹೇಳುತ್ತಿದ್ದಾನೆ. ಅವನಲ್ಲಿ ಎಷ್ಟು ಅಹಂ ಇದೆ ನೋಡಿ ! ಎಂದರು. ಅದರ ನಂತರ ಅವನ ಬಗ್ಗೆ ಜವಾಬ್ದಾರ ಸಾಧಕರನ್ನು ಕೇಳಿದಾಗ, ಅವನಲ್ಲಿ ‘ನಾನು ಮಾಡುವುದೇ ಯೋಗ್ಯವಾಗಿದೆ, ಎಂದು ಅನಿಸುವುದು, ಸ್ವೀಕರಿಸುವ ವೃತ್ತಿ ಇಲ್ಲದಿರುವುದು, ತನ್ನ ಮನಸ್ಸಿನಂತೆ ಮಾಡುವುದು, ಕೇಳುವವೃತ್ತಿ ಇಲ್ಲದಿರುವುದು ಇತ್ಯಾದಿ ಅಹಂನ ಲಕ್ಷಣಗಳು ತೀವ್ರ ಪ್ರಮಾಣದಲ್ಲಿರುವುದು ತಿಳಿಯಿತು. ‘ಅಹಂನಿಂದ ಸಾಧನೆಯಲ್ಲಿ ಬಹಳ ಹಾನಿಯುಂಟಾಗುತ್ತದೆ, ಎಂದು ಗಮನದಲ್ಲಿ ತೆಗೆದುಕೊಂಡು ಆ ಸಾಧಕನಿಗೆ ಸಾಧನೆಯ ದೃಷ್ಟಿಯಿಂದ ಸಹಾಯ ಮಾಡಲಾಯಿತು.

೨. ಸಾಧಕರಿಗೆ, ಕಾಗದಗಳ ಆಕಾರಗಳಿಗನುಸಾರ ವಿಂಗಡಿಸಲು ಹೇಳಿದ್ದರೂ, ಅವರು ಅದನ್ನು ಮಾಡಲಿಲ್ಲ ಎಂಬ ತಪ್ಪಿಗಾಗಿ ಪ್ರಾಯಶ್ಚಿತ್ತ ತೆಗೆದುಕೊಳ್ಳಲು ಹೇಳುವುದು

‘ಕೆಲವು ವರ್ಷಗಳ ಹಿಂದೆ ಪರಾತ್ಪರ ಗುರು ಡಾಕ್ಟರರು ಗ್ರಂಥ ವಿಭಾಗದಲ್ಲಿನ ಸಾಧಕರಿಗೆ ಒಂದು ಬದಿಯಲ್ಲಿ ಬರೆದ ಕಾಗದಗಳನ್ನು ಅವುಗಳ ಆಕಾರಗಳಿಗನುಸಾರ (ಚೀಟಿಗಳನ್ನು ಬರೆಯಲು ಉಪಯೋಗವಾಗುವಂತಹ ಕಾಗದದ ತುಂಡುಗಳು, ಹಾಗೆಯೇ ಚಿಕ್ಕ, ಮಧ್ಯಮ, ದೊಡ್ಡ, ಹಾಗೂ A4 ಆಕಾರದ ಕಾಗದಗಳು) ವಿಂಗಡಿಸಲು ಹೇಳಿದ್ದರು. ಇದರಿಂದ ಬರೆಯಲು ಆವಶ್ಯಕವಿರುವ ಆ ಕಾಗದಗಳು ಸಹಜವಾಗಿ ಲಭ್ಯವಾಗುವವು (ಉದಾ. ಚಿಕ್ಕ ಕಾಗದದ ಆವಶ್ಯಕತೆಯಿರುವಾಗ ಅದೇ ಆಕಾರದ ಕಾಗದವು ಸಹಜವಾಗಿ ಸಿಗುವುದು) ಹಾಗೆಯೇ ಕಾಗದವೂ ವ್ಯರ್ಥವಾಗಬಾರದೆಂದು ಈ ರೀತಿ ಮಾಡಲು ಹೇಳಲಾಗಿತ್ತು, ಆದರೆ  ಸಾಧಕರು ಈ ರೀತಿಯ ವಿಂಗಡನೆಯನ್ನು ಮಾಡಿರಲಿಲ್ಲ ಎಂದು ಪರಾತ್ಪರ ಗುರು ಡಾಕ್ಟರರ ಗಮನಕ್ಕೆ ಬಂದಾಗ ಅವರು ವಿಭಾಗದಲ್ಲಿನ ಎಲ್ಲ ಸಾಧಕರಿಗೆ ಈ ತಪ್ಪಿನ ಬಗ್ಗೆ ಪ್ರಾಯಶ್ಚಿತ್ತ ತೆಗೆದುಕೊಳ್ಳಲು ಹೇಳಿದ್ದರು.