ಪರಾತ್ಪರ ಗುರು ಡಾ. ಆಠವಲೆಯವರ ಜನ್ಮೋತ್ಸವದ ನಿಮಿತ್ತ ಪ್ರಕಾಶಿಸಲಾಗುವ ವಿಶೇಷಾಂಕದ ನಿರ್ವಹಣೆ ಮತ್ತು ಸಂಗ್ರಹ ಒಳ್ಳೆಯ ರೀತಿಯಲ್ಲಿ ಮಾಡಿ !

ಪರಾತ್ಪರ ಗುರು ಡಾ. ಆಠವಲೆ

ಕಳೆದ ವರ್ಷ ಕೊರೋನಾ ಮಹಾಮಾರಿಯಿಂದ ಅನೇಕ ತಿಂಗಳು ಸಾಪ್ತಾಹಿಕ ಸನಾತನ ಪ್ರಭಾತದ ಮುದ್ರಣ ಮಾಡಿರಲಿಲ್ಲ. ಆ ಸಮಯದಲ್ಲಿ ಸನಾತನದ ಗ್ರಂಥ, ಈ ಹಿಂದೆ ಪ್ರಕಾಶಿಸಲಾಗಿದ್ದ ‘ಸನಾತನ ಪ್ರಭಾತ ನಿಯತಕಾಲಿಕಗಳೇ ಸಾಧಕರಿಗೆ ಆಧಾರವಾಗಿತ್ತು. ಈಗಲೂ ಕೊರೋನಾ ಮಹಾಮಾರಿಯ ಭೀಕರತೆಯು ಹೆಚ್ಚಾಗುತ್ತಲೇ ಇದೆ. ಇದರಿಂದ ಮುಂದಿನ ಆಪತ್ಕಾಲ ಹೇಗಿರಬಹುದು ಎಂಬುದರ ಬಗ್ಗೆ ನಮಗೆ ಕಲ್ಪನೆ ಬರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ಸಲ ಪರಾತ್ಪರ ಗುರು ಡಾ. ಆಠವಲೆ ಇವರ ಜನ್ಮೋತ್ಸವದ ನಿಮಿತ್ತ ಪ್ರಕಾಶಿಸಲಾಗುವ ಬಣ್ಣದ ವಿಶೇಷಾಂಕವನ್ನು ಅತ್ಯುತ್ತಮ ದರ್ಜೆಯ ಕಾಗದದಲ್ಲಿ ಮುದ್ರಿಸಲಾಗಿದೆ. ಇದರಿಂದ ಆಪತ್ಕಾಲದ ಮುಂದಿನ ಕೆಲವು ವರ್ಷಗಳ ಕಾಲ ಸಾಧಕರು ಅದನ್ನು ಸಂಗ್ರಹಿಸಿಡಬಹುದು. ಈ ವಿಶೇಷಾಂಕ ಉಪಯೋಗಿಸುವಾಗ ಮಾಡುವಾಗ ಏನೆಲ್ಲ ಕಾಳಜಿ ವಹಿಸಬೇಕು, ಇದರ ಬಗ್ಗೆ ಕೆಲವು ಸೂಚನೆಗಳನ್ನು ಇಲ್ಲಿ ನೀಡಲಾಗುತ್ತಿದೆ.

೧. ವಿಶೇಷಾಂಕವನ್ನು ಓದಿದ ನಂತರ ಅದನ್ನು ಪ್ಲಾಸ್ಟಿಕ್‌ನ ಗಾಳಿಯಾಡದ ಚೀಲದಲ್ಲಿ ಇಡಬೇಕು.

೨. ಈ ಸಂಚಿಕೆಯನ್ನು ವರ್ಷಕ್ಕೊಮ್ಮೆ ೧೦ ನಿಮಿಷಗಳ ಕಾಲ ಬಿಸಿಲಿನಲ್ಲಿ ಇಡಬೇಕು. ನಂತರ ಅದನ್ನು ಕೂಡಲೇ ಚೀಲದಲ್ಲಿ ಇಡದೇ ಅದು ಸಂಪೂರ್ಣವಾಗಿ ತಣ್ಣಗಾದ ನಂತರವೇ ಚೀಲದಲ್ಲಿಡಬೇಕು.

. ಈ ವಿಶೇಷಾಂಕದಲ್ಲಿ ಸಾಧಕರಿಗೆ ಸಹಜವಾಗಿ ಭಾವಜಾಗೃತಿ ಆಗುವ ಪರಾತ್ಪರ ಗುರುದೇವರ ಹಾಗೂ ಸಂತರ ವಿಶೇಷ ಛಾಯಾಚಿತ್ರಗಳು ಇರುವುದರಿಂದ ಅದನ್ನು ಆವರಣ ತೆಗೆಯುವುದು ಇತ್ಯಾದಿಗಳಿಗಾಗಿ ಉಪಯೋಗಿಸಬೇಡಿ.

. ಸಂಚಿಕೆಯನ್ನು ಸಂಗ್ರಹದಲ್ಲಿಡುವಾಗ ಅದನ್ನು ತುಂಬಾ ಮಡಚದಿರಿ, ಮಡಚುವ ಸ್ಥಳದಲ್ಲಿ ಅದು ಬಹಳ ಬೇಗ ಹಾಳಾಗುತ್ತದೆ.