ಪಂಚಾಯತ್ ಚುನಾವಣೆಯಲ್ಲಿ ಜಯಗಳಿಸಿದ ನಂತರ ಮತಾಂಧರು ಮಾಜಿ ಹಿಂದೂ ಸರಪಂಚರ ಮನೆಗೆ ನುಗ್ಗಿ ಗುಂಡು ಹಾರಿಸಿದರು

ಒಬ್ಬ ಮಹಿಳೆಯ ಹತ್ಯೆ, ಇಬ್ಬರಿಗೆ ಗಾಯ

ಮತಾಂಧರ ಕೈಗೆ ಅಧಿಕಾರವು ಬಂದಾಗ ಏನಾಗುತ್ತದೆ ಎಂಬುದು ಇದರಿಂದ ಗಮನಕ್ಕೆ ಬರುತ್ತದೆ. ಹಿಂದುತ್ವನಿಷ್ಠ ಯೋಗಿ ಆದಿತ್ಯನಾಥ ಅಧಿಕಾರದಲ್ಲಿರುವ ಉತ್ತರ ಪ್ರದೇಶದಲ್ಲಿ ಈ ರೀತಿ ಸಂಭವಿಸುವುದು ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ !

ಅಜಮ್‍ಗಡ (ಉತ್ತರ ಪ್ರದೇಶ) – ಇಲ್ಲಿನ ಇಶಹಾಕ್‍ಪುರ ಗ್ರಾಮದಲ್ಲಿ ಕಳೆದ ಪಂಚಾಯತ್ ಚುನಾವಣೆಯ ಸೇಡನ್ನು ತೀರಿಸಿಕೊಳ್ಳಲು ವಿಜಯಗಳಿಸಿದ ಮತಾಂಧ ಸರಪಂಚನು ಆತನ ಮತಾಂಧ ಸಹಚರರೊಂದಿಗೆ ಮಾಜಿ ಸರಪಂಚ ರಾಮ ಅವಧ ರಾಜಭರ ಅವರ ಮನೆಗೆ ನುಗ್ಗಿ ಗುಂಡು ಹಾರಿಸಿದರು. ಇದರಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ೨೦೧೦ ರ ಚುನಾವಣೆಯಲ್ಲಿ ಫೈಜ್ ಅವರನ್ನು ರಾಮ ಅವಧ ರಾಜಭರರು ಸೋಲಿಸಿದ್ದರು. ಈ ಬಾರಿ ಫೈಜ್ ಬೆಂಬಲಿತ ಅಭ್ಯರ್ಥಿಯು ರಾಜಭರ ಅವರನ್ನು ಸೋಲಿಸಿದರು. ಅದರ ನಂತರ ಮತಾಂಧರು ರಾಜಭರ ಅವರ ಮನೆಗೆ ನುಗ್ಗಿ ಗುಂಡು ಹಾರಿಸಿದರು. ಹತ್ಯೆಯನಂತರ ಇಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ.