ಆಮ್ಲಜನಕದ ಸಿಲಿಂಡರ್ ಗಳು ಸಿಗದೇ ಇದ್ದರಿಂದ ೪-೫ ಜನರು ಕಳೆದ ಕೆಲವು ದಿನಗಳಿಂದ ಅಶ್ವಥ ಮರದ ಕೆಳಗೆ ಮಲಗಿ ಆಮ್ಲಜನಕವನ್ನು ತೆಗೆದುಕೊಳ್ಳುತ್ತಿದ್ದಾರೆ !

ಅಶ್ವಥ ಮರದ ಕೆಳಗೆ ಮಲಗುವುದರಿಂದ ಲಾಭವಾಗುತ್ತದೆ ಎಂದು ಹೇಳಿಕೊಳ್ಳಲಾಗುತ್ತಿದೆ !

ಶಹಜಹಾನಪುರ (ಉತ್ತರ ಪ್ರದೇಶ) – ದೇಶದಲ್ಲಿ ಹೆಚ್ಚುತ್ತಿರುವ ಕೊರೋನಾ ರೋಗಿಗಳ ಸಂಖ್ಯೆಯಿಂದ ಆರೋಗ್ಯ ವ್ಯವಸ್ಥೆಯು ಹದಗೆಡುತ್ತಿದೆ. ಆಮ್ಲಜನಕದ ಕೊರತೆಯಿಂದ ರೋಗಿಗಳು ಸಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ, ಶಹಜಹಾನ್‍ಪುರದ ತಿಲ್‍ಹಾರ್‍ನಲ್ಲಿ ಆಮ್ಲಜನಕ ಸಿಲಿಂಡರ್ ಗಳು ಲಭ್ಯವಿಲ್ಲದ ಕಾರಣ ಬಳಲುತ್ತಿದ್ದ ೪-೫ ಜನರು ಅಶ್ವಥ ಮರದ ಕೆಳಗೆ ಹೋಗಿ ಮಲಗಿದರು. ಈ ರೋಗಿಗಳು ಅಶ್ವಥ ಮರದ ಕೆಳಗೆ ಮಲಗಿದ್ದನ್ನು ನೋಡಿ, ಇತರರಿಂದಲೂ ಸಹ ಅಲ್ಲಿ ಜನದಟ್ಟಣೆಯಾಗತೊಡಗಿತು. ಈ ಎಲ್ಲಾ ಆಮ್ಲಜನಕ ಪರೀಕ್ಷಾ ವರದಿಗಳು ನಕಾರಾತ್ಮಕವಾಗಿ ಬಂದಿದೆ; ಆದರೆ ಸೋಂಕಿನ ಲಕ್ಷಣಗಳು ಈ ಜನರಲ್ಲಿ ಕಂಡು ಬರುತ್ತಿದೆ. ನಕಾರಾತ್ಮಕ ವರದಿಗಳ ಕಾರಣ ಆಸ್ಪತ್ರೆಗಳು ಆವರನ್ನು ದಾಖಲಿಸಲು ನಿರಾಕರಿಸಿ ಮನೆಗೆ ಕಳುಹಿಸಿದ್ದಾರೆ. ಮನೆಯಲ್ಲಿ ಉಸಿರಾಡಲು ತೊಂದರೆಯಾಯಿತು. ನಂತರ ಆಮ್ಲಜನಕದ ಸಿಲಿಂಡರ್ ಗಾಗಿ ಹುಡುಕಾಟವು ಪ್ರಾರಂಭವಾಯಿತು; ಆದರೆ ಎಲ್ಲಿಯೂ ಆಮ್ಲಜನಕ ಸಿಲಿಂಡರ್ ಲಭ್ಯವಿರಲಿಲ್ಲ. ಆದ್ದರಿಂದ ಅವರು ಅಶ್ವಥ ಮರದ ಕೆಳಗೆ ಆಮ್ಲಜನಕವನ್ನು ಪಡೆಯಲು ಓಡಿದರು. ಅಶ್ವಥ ಮರವು ದಿನದ ೨೪ ಗಂಟೆಗಳ ಕಾಲ ಆಮ್ಲಜನಕವನ್ನು ಬಿಡುಗಡೆ ಮಾಡುತ್ತಿದ್ದರಿಂದ ಅದರ ಲಾಭ ಪಡೆಯಲು ಅವರು ಪ್ರಯತ್ನಿಸುತ್ತಿದ್ದಾರೆ.

ಈ ಜನರನ್ನು ಕೇಳಿದಾಗ, ಅವರು ಮನೆಯಲ್ಲಿ ಉಸಿರಾಡಲು ತೊಂದರೆಯಾಗುತ್ತಿತ್ತು; ಆದರೆ ಅಶ್ವಥ ಮರದ ಕೆಳಗೆ ಬಂದ ನಂತರ ಆರಾಮವೆನಿಸುತ್ತಿದೆ ಎಂದು ಹೇಳಿದರು. ಈ ರೀತಿಯ ಮಾಹಿತಿ ಸಿಕ್ಕಿದ ತಕ್ಷಣ, ಅಶ್ವಥ ಮರದ ಕೆಳಗೆ ಮಲಗಿರುವ ರೋಗಿಗಳನ್ನು ನೋಡಲು ತಿಲಹರನ ಶಾಸಕ ರೋಶನಲಾಲ್ ಕೂಡ ಅಲ್ಲಿಗೆ ಬಂದರು. ನಂತರ ಅವರೆಲ್ಲರಿಗೂ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ಶಾಸಕ ರೋಶನಲಾಲ್ ಆಡಳಿತಕ್ಕೆ ಸೂಚನೆ ನೀಡಿದ್ದಾರೆ.