ಪ್ರೀತಿಸ್ವರೂಪ ಪರಾತ್ಪರ ಗುರು ಡಾ. ಆಠವಲೆ

ಪರಾತ್ಪರ ಗುರು ಡಾ. ಆಠವಲೆ

ಶ್ರೀಗುರುಗಳ ಮಹಿಮೆಯನ್ನು ಕೊಂಡಾಡಲು ಅವಕಾಶ ಸಿಗುವುದು ಶಿಷ್ಯನಿಗೆ ಪರಮಭಾಗ್ಯದ ವಿಷಯವಾಗಿದೆ ! ಸಮಾಜಕ್ಕೆ ಅವರ ಅಲೌಕಿಕ ಗುಣಗಳ ಪರಿಚಯವಾಗಬೇಕೆಂದು ಗುರುದೇವರ ದೈವೀ ಕಾರ್ಯವನ್ನು ಕೃತಜ್ಞತಾಭಾವದಿಂದ ಈ ಜನ್ಮೋತ್ಸವದ ವಿಶೇಷಾಂಕಗಳಲ್ಲಿ ಮಂಡಿಸುತ್ತಿದ್ದೇವೆ !

೧೩.೫.೨೦೨೦ ಈ ದಿನದಂದು ಪರಾತ್ಪರ ಗುರು ಡಾ. ಆಠವಲೆಯವರ ೭೮ ನೇ ಜನ್ಮೋತ್ಸವವಾಯಿತು. ಆ ಸಮಯದಲ್ಲಿ ಲಾಕ್‌ಡೌನ್‌ದಿಂದಾಗಿ ಸಂಚಿಕೆಯ ಮುದ್ರಣವಾಗಲಿಲ್ಲ; ಗುರುಕೃಪೆಯಿಂದಲೇ ಅದು ಈಗ ಅದರ ಮುದ್ರಣವಾಗುತ್ತಿದೆ.

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರ ಅಧ್ಯಾತ್ಮಪ್ರಸಾರದ ಕಾರ್ಯವು ೨೯ ವರ್ಷಗಳಲ್ಲಿ ವಟವೃಕ್ಷವಾಯಿತು. ನೂರಾರು ಸಾಧಕರು ಕುಟುಂಬದ ತ್ಯಾಗ ಮಾಡಿ ಪೂರ್ಣವೇಳೆ ಧರ್ಮಪ್ರಸಾರವನ್ನು ಮಾಡುತ್ತಿದ್ದಾರೆ. ಪಾತರಗಿತ್ತಿಗಳು ಹೇಗೆ ಹೂವುಗಳ ಕಡೆಗೆ ಆಕರ್ಷಿತವಾಗುತ್ತವೆಯೋ, ಅದೇ ರೀತಿ ಜಿಜ್ಞಾಸುಗಳು ಅವರ ಬಳಿ ಬರುತ್ತಾರೆ. ಗುರುದೇವರು ಇವರೆಲ್ಲರಿಗೆ ತೋರಿಸಿದ ಅಪಾರ ಪ್ರೀತಿಯ ಕೆಲವು ಕ್ಷಣಮುತ್ತುಗಳನ್ನು ಈ ಸಂಚಿಕೆಯ ಮಾಧ್ಯಮದಿಂದ ಅನುಭವಿಸೋಣ !