ಸಂತರಲ್ಲಿ ‘ಪ್ರೀತಿ, ಎಂದರೆ ನಿರಪೇಕ್ಷ ಪ್ರೇಮ ಇರುತ್ತದೆ. ಯಾವ ರೀತಿ ಆಕಾಶದಿಂದ ಸುರಿಯುವ ಮಳೆಯು ಪೃಥ್ವಿಗೆ ಶೀತಲ ಜಲದಿಂದ ಸ್ನಾನವನ್ನು ಮಾಡಿಸುತ್ತದೆಯೋ ಹಾಗೆಯೇ, ಸಂತರು ಎಲ್ಲರ ಮೇಲೆಯೂ ಸಮಾನ ಪ್ರಮಾಣದಲ್ಲಿ ತಮ್ಮ ಪ್ರೀತಿಯ ಸುರಿಮಳೆಯನ್ನು ಗೈಯ್ಯುತ್ತಿರುತ್ತಾರೆ. ಪರಾತ್ಪರ ಗುರು ಡಾ. ಆಠವಲೆಯವರು ಪ್ರೀತಿಯ ಸಾಗರವಾಗಿದ್ದಾರೆ ಜ್ಯೋತಿಷ್ಯಶಾಸ್ತ್ರಕ್ಕನುಸಾರ ‘ಪ್ರೀತಿ ಈ ಗುಣಕ್ಕೆ ಸಂಬಂಧಿಸಿದ ಗ್ರಹಯೋಗ ಮತ್ತು ಪರಾತ್ಪರ ಗುರು ಡಾಕ್ಟರರ ಜಾತಕದಲ್ಲಿ ‘ಪ್ರೀತಿ ಈ ಗುಣವನ್ನು ತೋರಿಸುವ ಗ್ರಹಯೋಗಗಳ ವಿಶ್ಲೇಷಣೆಯನ್ನು ಮುಂದೆ ನೀಡಲಾಗಿದೆ.
೧. ಜ್ಯೋತಿಷ್ಯಶಾಸ್ತ್ರಕ್ಕನುಸಾರ ‘ಪ್ರೀತಿ ಈ ದೈವೀ ಗುಣಕ್ಕೆ ಸಂಬಂಧಿಸಿದ ಗ್ರಹಯೋಗ
ಪ್ರೀತಿ ಈ ದೈವೀ ಗುಣವು ‘ಗುರು ಮತ್ತು ‘ಶುಕ್ರ ಈ ಎರಡು ಗ್ರಹಗಳಿಗೆ ಸಂಬಂಧಿಸಿದೆ. ಗುರು ಗ್ರಹವು ಆಕಾಶತತ್ತ್ವಕ್ಕೆ ಮತ್ತು ಶುಕ್ರ ಗ್ರಹವು ಜಲತತ್ತ್ವಕ್ಕೆ ಸಂಬಂಧಿಸಿದೆ. ಯಾವಾಗ ಪ್ರೇಮದ ಕಾರಕವಾಗಿರುವ ಶುಕ್ರ ಗ್ರಹಕ್ಕೆ ಗುರುಗ್ರಹದ ಜೊತೆ ಸಿಗುತ್ತದೆಯೋ, ಆಗ ಪ್ರೇಮವು ಪ್ರೀತಿಯಲ್ಲಿ ರೂಪಾಂತರವಾಗುತ್ತದೆ; ಏಕೆಂದರೆ ‘ವ್ಯಾಪಕತೆ ಮತ್ತು ಎಲ್ಲರನ್ನೂ ಸಮಾವೇಶ ಮಾಡಿಕೊಳ್ಳುವುದು ಇವು ಗುರು ಗ್ರಹದ ವೈಶಿಷ್ಟ್ಯ ಗಳಾಗಿವೆ. ಯಾವಾಗ ಗುರು ಮತ್ತು ಶುಕ್ರ ಗ್ರಹಗಳು ಜಾತಕದಲ್ಲಿ ಶುಭ ಸ್ಥಿತಿಯಲ್ಲಿದ್ದು, ಅವುಗಳಲ್ಲಿ ಶುಭಯೋಗವಿರುತ್ತದೆಯೋ, ಆಗ ಮತ್ತು ಯಾವಾಗ ಜಾತಕವು ಅಧ್ಯಾತ್ಮಕ್ಕೆ ಪೂರಕವಾಗಿರು ತ್ತದೆಯೋ, ಆಗ ವ್ಯಕ್ತಿಯಲ್ಲಿ ಪ್ರೀತಿ ಈ ಗುಣದ ದರ್ಶನವಾಗುತ್ತದೆ. ಪ್ರೀತಿಯು ಆಧ್ಯಾತ್ಮಿಕ ಗುಣವಾಗಿರುವುದರಿಂದ ಅದು ಸಂತರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ.
೨. ಪರಾತ್ಪರ ಗುರು ಡಾಕ್ಟರರ ಜಾತಕದಲ್ಲಿ ಗುರು ಮತ್ತು ಶುಕ್ರ ಈ ಗ್ರಹಗಳ ಶುಭಯೋಗವಿದ್ದು, ಅವು ಪ್ರೀತಿ ಗುಣದ ದೃಷ್ಟಿಯಿಂದ ಅತ್ಯಂತ ಪೂರಕವಾಗಿವೆ
ಪರಾತ್ಪರ ಗುರು ಡಾಕ್ಟರರ ಜಾತಕದಲ್ಲಿ ಗುರು ಮತ್ತು ಶುಕ್ರ ಗ್ರಹಗಳ ‘ಅನೋನ್ಯ ಹೆಸರಿನ ಶುಭಯೋಗವಿದೆ. ಅನೋನ್ಯ ಯೋಗದಲ್ಲಿ ಎರಡು ಗ್ರಹಗಳು ಪರಸ್ಪರರ ರಾಶಿಯಲ್ಲಿರುತ್ತವೆ. ಪರಾತ್ಪರ ಗುರು ಡಾಕ್ಟರರ ಜಾತಕದಲ್ಲಿ ಗುರು ಗ್ರಹದ ‘ವೃಷಭವು ಶುಕ್ರ ಗ್ರಹದ ರಾಶಿಯಲ್ಲಿ ಮತ್ತು ಶುಕ್ರ ಗ್ರಹವು ‘ಮೀನ ಈ ಗುರು ಗ್ರಹದ ರಾಶಿಯಲ್ಲಿದೆ. ಅವರ ಜಾತಕದ ಈ ಅನೋನ್ಯ ಯೋಗವು ಪ್ರೀತಿ ಗುಣದ ದೃಷ್ಟಿಯಿಂದ ಅತ್ಯಂತ ಪೂರಕ ಮತ್ತು ಶುಭಫಲದಾಯಕವಾಗಿದೆ. ಪರಾತ್ಪರ ಗುರು ಡಾಕ್ಟರರಲ್ಲಿರುವ ಪ್ರೀತಿಯಿಂದಾಗಿ ಅವರು ಎಲ್ಲ ಸಾಧಕರೊಂದಿಗೆ ಆತ್ಮೀಯತೆಯನ್ನು ಸಾಧಿಸಿದ್ದಾರೆ. ಸಾಧಕರಲ್ಲಿ ಎಷ್ಟೇ ದೋಷಗಳಿದ್ದರೂ, ಪರಾತ್ಪರ ಗುರು ಡಾಕ್ಟರರು ಅವರ ಮೇಲೆ ನಿರಪೇಕ್ಷವಾಗಿ ಪ್ರೀತಿಯ ವರ್ಷಾಧಾರೆಯನ್ನು ಸುರಿಯುತ್ತಾರೆ ಮತ್ತು ಅವರಲ್ಲಿರುವ ದೋಷಗಳನ್ನು ದೂರಗೊಳಿಸಲು ಅವರಿಗೆ ಮಾರ್ಗದರ್ಶನವನ್ನೂ ಮಾಡುತ್ತಾರೆ. ಇದರಿಂದ ಪರಾತ್ಪರ ಗುರು ಡಾಕ್ಟರರು ಮತ್ತು ಸಾಧಕರಲ್ಲಿ ಶಾಶ್ವತವಾದ ಅವಿನಾಭಾವ ಸಂಬಂಧ ಉಂಟಾಗಿದೆ.
೩. ಪರಾತ್ಪರ ಗುರು ಡಾಕ್ಟರರ ಜಾತಕದಲ್ಲಿ ಶುಕ್ರ, ಚಂದ್ರ ಮತ್ತು ನೆಪ್ಚೂನ್ ಈ ಗ್ರಹಗಳಲ್ಲಿ ಶುಭಯೋಗವಿರುವುದರಿಂದ ಅವರ ಪ್ರೀತಿಯು ಅಸಾಮಾನ್ಯ ಮತ್ತು ಅಲೌಕಿಕವಾಗಿರುವುದು
ಪರಾತ್ಪರ ಗುರು ಡಾಕ್ಟರರ ಜಾತಕದಲ್ಲಿ ಶುಕ್ರ ಗ್ರಹವು ಮೀನ ರಾಶಿಯಲ್ಲಿದೆ. ಮೀನ ಗ್ರಹವು ವ್ಯಾಪಕತೆಯನ್ನು ತೋರಿಸುವ ರಾಶಿಯಾಗಿದೆ. ಇದರಿಂದಾಗಿ ಪರಾತ್ಪರ ಗುರು ಡಾಕ್ಟರರಲ್ಲಿರುವ ಪ್ರೇಮಭಾವದಲ್ಲಿ ವ್ಯಾಪಕತೆ ಇದೆ. ಶುಕ್ರ ಗ್ರಹದ ಚಂದ್ರ ಮತ್ತು ನೆಪ್ಚೂನ ಈ ಎರಡು ಗ್ರಹಗಳ ಶುಭಯೋಗವಿದೆ. ಶುಕ್ರ ಗ್ರಹಕ್ಕೆ ಚಂದ್ರ ಮತ್ತು ನೆಪ್ಚೂನ್ ಈ ಎರಡೂ ಜಲತತ್ತ್ವ ಗ್ರಹಗಳ ಬೆಂಬಲ ಲಭಿಸಿರುವುದರಿಂದ ಪರಾತ್ಪರ ಗುರು ಡಾಕ್ಟರರ ಪ್ರೀತಿಯು ಅಸಾಮಾನ್ಯ ಮತ್ತು ಅಲೌಕಿಕವಾಗಿದೆ.
೪. ಪರಾತ್ಪರ ಗುರು ಡಾಕ್ಟರರ ಜಾತಕದಲ್ಲಿ ಗುರು ಗ್ರಹ ವ್ಯಯ ಸ್ಥಾನದಲ್ಲಿರುವುದರಿಂದ ಸಂಪೂರ್ಣ ಸಮಾಜದ ಮೇಲೆ ಅವರಿಗೆ ಪ್ರೀತಿಯಿದೆ
ಪರಾತ್ಪರ ಗುರು ಡಾಕ್ಟರರ ಜಾತಕದಲ್ಲಿ ಗುರು ಗ್ರಹ ವ್ಯಯ (ಹನ್ನೆರಡನೇಯ) ಸ್ಥಾನದಲ್ಲಿ ವೃಷಭ ರಾಶಿಯಲ್ಲಿದೆ. ವ್ಯಯ ಸ್ಥಾನವು ಸಮಾಜಕ್ಕೆ ಸಂಬಂಧಿಸಿದ ಸ್ಥಾನವಾಗಿದೆ. ಆದುದರಿಂದ ಪರಾತ್ಪರ ಗುರು ಡಾಕ್ಟರರಿಗೆ ಸಂಪೂರ್ಣ ಸಮಾಜದ ಮೇಲೆ ಪ್ರೀತಿಯಿದೆ. ಇದರಿಂದ ಅವರು ‘ಜಿಜ್ಞಾಸುಗಳಿಗೆ ಅಧ್ಯಾತ್ಮವನ್ನು ಶಾಸ್ತ್ರೀಯ ಭಾಷೆಯಲ್ಲಿ ಪರಿಚಯ ಮಾಡಿಕೊಡುವುದು ಮತ್ತು ‘ಸಾಧಕರಿಗೆ ಸಾಧನೆ ವಿಷಯದಲ್ಲಿ ಮಾರ್ಗದರ್ಶನ ಮಾಡಿ ಈಶ್ವರಪ್ರಾಪ್ತಿಯ ಮಾರ್ಗವನ್ನು ತೋರಿಸುವುದು, ಈ ಎರಡು ಉದ್ದೇಶಗಳಿಂದ ‘ಸನಾತನ ಸಂಸ್ಥೆಯನ್ನು ಸ್ಥಾಪಿಸಿದರು. ಸನಾತನ ಸಂಸ್ಥೆಯು ಸತ್ಸಂಗ, ಬಾಲಸಂಸ್ಕಾರ ವರ್ಗ, ನಿಯತಕಾಲಿಕೆ, ಗ್ರಂಥ, ಜಾಲತಾಣ, ದೃಕ್-ಶ್ರಾವ್ಯ (audio-video) ಮುಂತಾದ ವಿವಿಧ ಮಾಧ್ಯಮಗಳಿಂದ ಅಧ್ಯಾತ್ಮಪ್ರಸಾರದ ಕಾರ್ಯವನ್ನು ಮಾಡುತ್ತಿದೆ. ಸನಾತನ ಸಂಸ್ಥೆಯ ಮಾರ್ಗದರ್ಶನದಲ್ಲಿ ಸಾಧನೆಯನ್ನು ಮಾಡಿ ಇಲ್ಲಿಯವರೆಗೆ ಒಂದು ಸಾವಿರಕ್ಕಿಂತ ಹೆಚ್ಚು ಸಾಧಕರು ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾಗಿದ್ದಾರೆ !
– ಶ್ರೀ. ರಾಜ ಧನಂಜಯ ಕರ್ವೆ, ಜ್ಯೋತಿಷ್ಯ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ.