ಪರಾತ್ಪರ ಗುರು ಡಾ. ಆಠವಲೆಯವರ ಸಹಜ ಕೃತಿಗಳಿಂದಲೂ ವ್ಯಕ್ತವಾಗುವ ಸಾಧಕರ ಮೇಲಿನ ಪ್ರೀತಿ !

ಪರಾತ್ಪರ ಗುರು ಡಾ. ಆಠವಲೆ

ಸರಿಸಾಟಿ ಇಲ್ಲದ ಈ ನಿಮ್ಮ ಪ್ರೇಮ |

ಸಾಧಕರಿಗಿದೆ ಅದರ ಅಭಿಮಾನ |

ಪ್ರೀತಿಯ ಸಾಕಾರಮೂರ್ತಿ |

ವಿಷ್ಣುಸ್ವರೂಪಿ ಗುರುಮೂರ್ತಿ

‘ಗುರುಗಳ ಹೊರತು ಶಿಷ್ಯನಿಲ್ಲ ಮತ್ತು ಶಿಷ್ಯನ ಹೊರತು ಗುರುವಿಲ್ಲ, ಎಂಬ ಒಂದು ನಾಣ್ನುಡಿಯಿದೆ. ‘ಶಿಷ್ಯನ ಆನಂದದಲ್ಲಿಯೇ, ಗುರುಗಳ ಆನಂದವಿರುತ್ತದೆ. ಪರಾತ್ಪರ ಗುರು ಡಾ. ಆಠವಲೆಯವರ ಬಗ್ಗೆಯೂ ಹೀಗೆ ಇದೆ. ಸನಾತನದ ಪ್ರತಿಯೊಬ್ಬ ಸಾಧಕನು ಸಂಕಟಕಾಲದಲ್ಲಿ ಅವರ ಪ್ರೀತಿಯನ್ನು ಮತ್ತು ಕೃಪೆಯನ್ನು ಅನುಭವಿಸಿದ್ದಾನೆ. ನಮ್ಮ ಕುಟುಂಬದ ಸದಸ್ಯರು ಹಾಗೂ ಸಂಬಂಧಿಕರು ನಮಗೆ ಶಾರೀರಿಕ ಹಾಗೂ ಮಾನಸಿಕ ಸ್ತರದಲ್ಲಿ ಅವರ ಕ್ಷಮತೆಗನುಸಾರ ಸಹಾಯ ಮಾಡಬಹುದು; ಆದರೆ ಅದಕ್ಕಿಂತ ಹೆಚ್ಚೇನೂ ಅವರಿಂದ ಮಾಡಲು ಸಾಧ್ಯವಿಲ್ಲ; ಆದರೆ ‘ಗುರುಗಳು ತಮ್ಮ ಶಿಷ್ಯರನ್ನು ಹಾಗೂ ಸಾಧಕರನ್ನು ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಹೀಗೆ ಎಲ್ಲ ರೀತಿಯ ಸಂಕಟಗಳಿಂದ ಬಿಡುಗಡೆಗೊಳಿಸುತ್ತಾರೆ, ಎಂಬುದರ ಅನುಭವವನ್ನು ಸನಾತನದ ಸಾಧಕರು ಪಡೆಯುತ್ತಿದ್ದಾರೆ.

ವಾಸ್ತವದಲ್ಲಿ ಸಾಧಕರೇ ಗುರುಗಳ ಸೇವೆಯನ್ನು ಮಾಡಬೇಕಿರುತ್ತದೆ. ಮಾಡುವವರು-ಮಾಡಿಸಿಕೊಳ್ಳುವವರು ಶ್ರೀಗುರುಗಳೇ ಆಗಿದ್ದಾರೆ. ಆದರೂ, ಸ್ಥೂಲದಲ್ಲಿಯಾದರೂ ಸಾಧಕರು ಎಲ್ಲ ರೀತಿಯಿಂದಲೂ ಅವರ ಕಾಳಜಿಯನ್ನು ವಹಿಸಬೇಕಿರುತ್ತದೆ. ಪರಾತ್ಪರ ಗುರು ಡಾಕ್ಟರರು ಎಷ್ಟು ಸಾಧಕವತ್ಸಲರಾಗಿದ್ದಾರೆಂದರೆ, ಅತ್ಯಂತ ತೀವ್ರ ಶಾರೀರಿಕ ತೊಂದರೆಗಳಾಗುತ್ತಿರುವಾಗಲೂ, ಅವರೇ ಸಾಧಕರ ಬೇಕು-ಬೇಡಗಳ ವಿಚಾರ ಮಾಡಿ ನೆನಪಿನಿಂದ ಸಾಧಕರಿಗಾಗಿ ನಿರಂತರವಾಗಿ ಏನಾದರೂ ಸಹಾಯ ಮಾಡುತ್ತಿರುತ್ತಾರೆ. ಸಾಧಕರು ಪರಾತ್ಪರ ಗುರು ಡಾಕ್ಟರರ ಪ್ರೀತಿಯ ಅನುಭೂತಿಯನ್ನು ಹೇಗೆ ಪಡೆಯುತ್ತಾರೆ, ಎಂಬುದು ಮುಂದಿನ ಕೆಲವು ಪ್ರಸಂಗಗಳಿಂದ ಗಮನಕ್ಕೆ ಬರಬಹುದು !

ಸಂಕಲನ : ಕು. ಸಾಯಲಿ ಡಿಂಗರೆ, ಸನಾತನ ಆಶ್ರಮ, ರಾಮನಾಥಿ, ಗೋವಾ (೫.೫.೨೦೨೦)

ಕೇವಲ ಜನ್ಮದಿಂದ ಮಾತ್ರವಲ್ಲ, ಜನನವಾಗುವುದಕ್ಕಿಂತ ಮೊದಲಿನಿಂದ ಹಿಡಿದು ಮೃತ್ಯುವಿನವರೆಗೆ, ಮತ್ತು ಮೃತ್ಯುವಿನ ನಂತರವೂ ಸಾಧಕರ ಯೋಗಕ್ಷೇಮವನ್ನು ನೋಡಿಕೊಳ್ಳುವ, ಜನ್ಮಜನ್ಮಾಂತರಗಳಲ್ಲಿ ಅವರ ಪಾಲನೆ-ಪೋಷಣೆ ಮಾಡುವ ಗುರುದೇವರೆಂದರೆ ಪರಾತ್ಪರ ಗುರು ಡಾ. ಆಠವಲೆಯವರು !

‘ಆಪತ್ಕಾಲ ಬರುವ ಮೊದಲು ಪೃಥ್ವಿಯ ಮೇಲಿನ ಅನೇಕ ಸಂತರು ದೇಹತ್ಯಾಗ ಮಾಡುವವರಿದ್ದಾರೆ. ಆದರೆ ನಾನು ಮಾತ್ರ ನಿಮ್ಮೆಲ್ಲ ಸಾಧಕರೊಂದಿಗೆ ಕೊನೆಯವರೆಗೆ, ಅಂದರೆ ಸಂಪತ್ಕಾಲ ಬರುವವರೆಗೆ (ಹಿಂದೂ ರಾಷ್ಟ್ರ ಸ್ಥಾಪನೆಯಾಗುವವರೆಗೆ) ಇರುವೆನು – ಪರಾತ್ಪರ ಗುರು ಡಾ. ಆಠವಲೆ

೧. ಎಲ್ಲ ಸ್ತರಗಳ ಎಲ್ಲ ವಯಸ್ಸಿನ ಸಾಧಕರ ಮೇಲೆ ಅವರ ಕೃಪಾಛತ್ರವಿದೆ

‘ಪರಾತ್ಪರ ಗುರು ಡಾಕ್ಟರರ ಕೃಪಾಛತ್ರವು ಬಡವ-ಶ್ರೀಮಂತ, ಶಿಕ್ಷಿತ-ಅಶಿಕ್ಷಿತ, ಚಿಕ್ಕ-ದೊಡ್ಡ ಎಂಬ ಭೇದಭಾವವನ್ನು ಮಾಡದೇ ಎಲ್ಲ ಸಾಧಕರ ಮೇಲಿದೆ. ಇದನ್ನು ನಾನು ಸ್ವತಃ ಅನುಭವಿಸಿದ್ದೇನೆ. ಪ್ರತಿಯೊಬ್ಬರಿಗೂ ಅವರು ಅವಶ್ಯಕತೆಗನುಸಾರ ಸಹಾಯವನ್ನು ಮಾಡುತ್ತಾರೆ. ಅವರ ಆಧ್ಯಾತ್ಮಿಕ ತೊಂದರೆಗಳಿಗೆ ನಾಮಜಪಾದಿ ಉಪಾಯಗಳನ್ನು ಹೇಳುತ್ತಾರೆ. ಅವರ ಕೃಪಾಛತ್ರದಲ್ಲಿರುವ ಎಲ್ಲ ಸಾಧಕರು ಸದಾ ಆನಂದದಲ್ಲಿರುತ್ತಾರೆ.’ – ಶ್ರೀ. ಪ್ರಕಾಶ ರಾ. ಮರಾಠೆ, ರಾಮನಾಥಿ, ಗೋವಾ.

೨. ಸಾಧಕರ ಆನಂದದ ಕ್ಷಣಗಳನ್ನು ಆಚರಿಸುವುದು

೨ ಅ. ಆಶ್ರಮದಲ್ಲಿ ಸಾಧಕಿಯ ಮೊದಲ ಹುಟ್ಟುಹಬ್ಬಕ್ಕಾಗಿ ಅವಳಿಗೆ ಇಷ್ಟವಾಗುವ ಸೀರೆಯನ್ನು ಕೊಡುವುದು : ‘ಆಶ್ರಮದ ಕು. ಕನಕಮಹಾಲಕ್ಷ್ಮೀ ದೇವಕರ ಇವಳಿಗೆ ಸೀರೆಯನ್ನು ಉಡುವುದು ಇಷ್ಟವಾಗುತ್ತಿತ್ತು, ಆದರೆ ಅವಳ ಬಳಿ ಸೀರೆಯೇ ಇರಲಿಲ್ಲ. ಇದು ಪರಮ ಪೂಜ್ಯರಿಗೆ ತಿಳಿದಾಗ ಅವರು ತಕ್ಷಣ ಇತರ ಸಾಧಕಿಯರಿಗೆ ಅವಳಿಗೆ ಸೀರೆಯನ್ನು ಕೊಡಲು ಹೇಳಿದರು. ಕೆಲವು ದಿನಗಳ ನಂತರ ಆಶ್ರಮದಲ್ಲಿ ಮೊದಲ ಬಾರಿಗೆ ಅವಳ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಅವಳ ಹುಟ್ಟುಹಬ್ಬದ ದಿನ ಪರಾತ್ಪರ ಗುರು ಡಾಕ್ಟರರು, “ಇಂದು ಕನಕಮಹಾಲಕ್ಷ್ಮಿಯ ಹುಟ್ಟುಹಬ್ಬವಿದೆಯಲ್ಲ ! ಅವಳಿಗೆ ನಾವು ಒಂದು ಸೀರೆಯನ್ನು ಉಡುಗೊರೆಯಾಗಿ ಕೊಡೋಣ. ಅವಳ ಬಳಿ ಸೀರೆ ಇಲ್ಲವಲ್ಲ ! ಅವಳಿಗೆ ಯಾವ ಬಣ್ಣ ಇಷ್ಟವಾಗುತ್ತದೆಯೋ, ಆ ಬಣ್ಣದ ಸೀರೆಯನ್ನು ಅವಳಿಗೆ ಆಯ್ಕೆ ಮಾಡಿಕೊಳ್ಳಲು ಹೇಳಿರಿ. ಆಶ್ರಮದ ಮೊದಲ ಹುಟ್ಟುಹಬ್ಬಕ್ಕೆ (ಅವಳಿಗೆ) ಮೊದಲ ಸೀರೆ ಸಿಗುವುದು !” ಎಂದರು. – ಕು. ವೈಭವಿ ಸುನೀಲ ಭೋವರ (ವಯಸ್ಸು ೧೬ ವರ್ಷ)  (೨೩.೬.೨೦೧೩)

ಈ ರೀತಿ ಆಶ್ರಮದಲ್ಲಿ ಎಲ್ಲ ಸಾಧಕರ ಹುಟ್ಟುಹಬ್ಬವನ್ನು ಆಚರಿಸಲಾಗುತ್ತದೆ. ಸಾಧಕರ ಹುಟ್ಟುಹಬ್ಬದ ನಿಮಿತ್ತ ಆಶ್ರಮದಲ್ಲಿ ಭೋಜನಕಕ್ಷೆಯಲ್ಲಿರುವ ಕಪ್ಪು ಹಲಗೆಯ (ಬ್ಲ್ಯಾಕ್ ಬೋರ್ಡ್) ಮೇಲೆ ಅವರ ಹೆಸರುಗಳನ್ನು ಬರೆದು ಅವರಿಗೆ ಶುಭಾಶಯವನ್ನು ನೀಡಲಾಗುತ್ತದೆ. ಇದರಿಂದ ಎಲ್ಲ ಸಾಧಕರಿಗೆ ಆ ಸಾಧಕನ ಹುಟ್ಟುಹಬ್ಬದ ಬಗ್ಗೆ ತಿಳಿಯುತ್ತದೆ. ಆ ಸಾಧಕನೊಂದಿಗೆ ಸೇವೆಯನ್ನು ಮಾಡುವ ಸಾಧಕರು ಅವನಿಗಾಗಿ ತಮ್ಮ ಕೈಯಿಂದ ಒಳ್ಳೆಯ ಶುಭಾಶಯಪತ್ರವನ್ನು ತಯಾರಿಸುತ್ತಾರೆ. ಅವನ ಗುಣವೈಶಿಷ್ಯಗಳನ್ನು ವರ್ಣಿಸುವ ಕವಿತೆ ಬರೆಯುತ್ತಾರೆ.

೨ ಆ. ವಿವಾಹ, ಉಪನಯನ ಮುಂತಾದ ಮಂಗಲ ಕಾರ್ಯಗಳ ನಂತರವೂ ಪರಾತ್ಪರ ಗುರು ಡಾಕ್ಟರರು ನವದಂಪತಿಗಳನ್ನು ಅಥವಾ ಸಂಬಂಧಿತ ಕುಟುಂಬದವರನ್ನು ಭೇಟಿಯಾಗಿ ಆಶೀರ್ವಾದ ಮಾಡುತ್ತಾರೆ. ಜೀವನದ ಹೊಸ ಪರ್ವದ ಆರಂಭವನ್ನು ಮಾಡುವಾಗ ಗುರುಗಳ ಈ ಅಮೂಲ್ಯ ಆಶೀರ್ವಾದವನ್ನು ಸಾಧಕರೂ ಹೃದಯಮಂದಿರದಲ್ಲಿ ಸಂಗ್ರಹಿಸಿಡುತ್ತಾರೆ.

೩. ಸಾಧಕರು ಮನೆಗೆ ಹೋಗುವಾಗ ಅವರೊಂದಿಗೆ ಎಲ್ಲರಿಗೂ ತಿನಿಸನ್ನು ಕಳುಹಿಸುವುದು

೩ ಅ. ಸಾಧಕರಿಗೆ ಅವರ ಇಷ್ಟಕ್ಕನುಸಾರ ತಿನಿಸನ್ನು ಕೊಡುವುದು : ‘ಪರಾತ್ಪರ ಗುರು ಡಾಕ್ಟರರು ಅನೇಕ ಸಾಧಕರಿಗೆ ತಿನಿಸನ್ನು ಕೊಡಲು ಹೇಳುತ್ತಾರೆ. ಆಗ ಅವರು ಯುವಕರು, ಚಿಕ್ಕ ಮಕ್ಕಳು, ವಯಸ್ಕರು ಮುಂತಾದವರ ವಿಚಾರ ಮಾಡಿ ಅವರಿಗೆ ಇಷ್ಟವಾಗುವಂತಹ ತಿನಿಸನ್ನು ಕೊಡುತ್ತಾರೆ. ಅವರಿಗೆ ‘ಸಿಹಿ ಇಷ್ಟವಾಗುತ್ತದೆಯೋ ಅಥವಾ ಖಾರ ?, ಎಂದೂ ಕೇಳುತ್ತಾರೆ. ಆಧ್ಯಾತ್ಮಿಕ ತೊಂದರೆಯಿರುವ ಸಾಧಕರ ಬಗ್ಗೆ ವಿಚಾರಿಸಿ ಅವರಿಗೂ ಅವರು ತಿನಿಸನ್ನು ಕಳುಹಿಸುತ್ತಾರೆ. ಅವರು ಆಶ್ರಮದಿಂದ ಮನೆಗೆ ಹೋಗುವ ಸಾಧಕರೊಂದಿಗೆ ಅವರ ಮನೆಯವರಿಗೆ, ಹಾಗೂ ಅಲ್ಲಿನ ಸಂತರು ಹಾಗೂ ಧರ್ಮಾಭಿಮಾನಿ ಹೀಗೆ ಎಲ್ಲರಿಗೂ ತಿನಿಸನ್ನು ಕೊಡಲು ಹೇಳುತ್ತಾರೆ. ಇಷ್ಟೇ ಅಲ್ಲ, ಅವರು ಸಾಧಕರ ಊರಿನ ಸಾಧಕರಿಗೂ ತಿನಿಸನ್ನು ಕಳುಹಿಸಲು ಹೇಳುತ್ತಾರೆ. – ಶ್ರೀ. ಪ್ರಕಾಶ ರಾ. ಮರಾಠೆ, ಗೋವಾ.

ಸನಾತನದ ಅನೇಕ ಸಾಧಕರು ವಿವಿಧ ಜಿಲ್ಲೆಗಳಿಗೆ, ವಿವಿಧ ರಾಜ್ಯಗಳಿಗೆ ಧರ್ಮಪ್ರಸಾರಕ್ಕಾಗಿ ಹೋಗುತ್ತಾರೆ. ಇತರ ಪ್ರಾಂತ್ಯಗಳಿಗೆ ಹೋದಾಗ ಅಲ್ಲಿ ಏನು ಸಿಗುತ್ತದೆಯೋ ಅದನ್ನು ಪ್ರಸಾದವೆಂದು ಸೇವಿಸಿ ಅವರು ಆನಂದದಿಂದ ಧರ್ಮಪ್ರಸಾರ ಮಾಡುತ್ತಿರುತ್ತಾರೆ. ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ ಅಥವಾ ಸಾಧನೆಯ ಬಗೆಗಿನ ಶಿಬಿರಗಳ ನಿಮಿತ್ತ ಯಾವಾಗ ಎಲ್ಲೆಡೆಯ ಸಾಧಕರು ರಾಮನಾಥಿಯಲ್ಲಿ ಸನಾತನದ ಆಶ್ರಮದಲ್ಲಿ ಒಟ್ಟಾಗುತ್ತಾರೆಯೋ, ಆಗ ದೂರ ಹೋಗಿರುವ ಮಕ್ಕಳು ಮನೆಗೆ ಹಿಂದಿರುಗಿದ ನಂತರ ತಾಯಿಗೆ ಎಷ್ಟು ಆನಂದವಾಗುತ್ತದೆಯೋ, ಹಾಗೆಯೇ ಪ.ಪೂ. ಡಾಕ್ಟರರಿಗೂ ಆನಂದವಾಗುತ್ತದೆ. ಆನಂದದಿಂದ ಅವರಿಗೆ ತಿನ್ನಲು ವಿವಿಧ ಪದಾರ್ಥಗಳನ್ನು ಮಾಡಲು ಹೇಳುತ್ತಾರೆ. ವರ್ಷದಲ್ಲಿ ಯಾವಾಗಲಾದರೊಮ್ಮೆ ಗುರುದೇವರ ಮಡಿಲಲ್ಲಿ ಬರುವ ಈ ಸಾಧಕರ ಬೇಕುಬೇಡಗಳನ್ನು ಗಮನದಲ್ಲಿಟ್ಟುಕೊಂಡು ಬೇರೆ ಬೇರೆ ಪದಾರ್ಥಗಳನ್ನು ತಯಾರಿಸಿ ಅವರಿಗೆ ತಿನ್ನಿಸುವ ಈ ಕಲಿಕೆಯೂ ಪರಾತ್ಪರ ಗುರು ಡಾ. ಆಠವಲೆಯವರದ್ದೇ ಆಗಿದೆ ! ಮನೆಯಲ್ಲಿದ್ದು ಪ್ರಸಾರಸೇವೆಯನ್ನು ಮಾಡುವವರಿಗೆ ಅಥವಾ ಆಶ್ರಮದಲ್ಲಿದ್ದು ಧರ್ಮಸೇವೆಯನ್ನು ಮಾಡುವ ಸಾಧಕರಿಗೆ ಸಹಜವಾಗಿ ಯಾವುದಾದರೊಂದು ಕಾರಣದಿಂದ ಸಿಹಿ ಊಟವನ್ನು ಕೊಡಲಾಗುತ್ತದೆ. ಯಾವ ಸಾಧಕರು ಹೊರಗಿನ ಪ್ರಾಂತ್ಯಗಳಿಗೆ ಹೋಗಿ ಧರ್ಮಸೇವೆಯನ್ನು ಮಾಡುತ್ತಾರೆಯೋ, ಅವರನ್ನು ಪ.ಪೂ. ಡಾಕ್ಟರರು ವಿಶೇಷವಾಗಿ ಪ್ರಶಂಸಿಸುತ್ತಾರೆ.

ಹೀಗೆ ಒಂದಲ್ಲ ಅನೇಕ ಪ್ರಸಂಗಗಳಲ್ಲಿ ಗುರುದೇವರು ಸಾಧಕರ ತಾಯಿಯಾಗಿರುತ್ತಾರೆ. ನಮ್ಮ ಕುಟುಂಬದವರೂ ಮಾಡಲು ಸಾಧ್ಯವಿಲ್ಲದಷ್ಟು ಪ್ರೀತಿಯನ್ನು ಅವರು ಮಾಡುತ್ತಾರೆ !

ಈಗಲೂ ಪ.ಪೂ. ಡಾಕ್ಟರರು ಸನಾತನದ ಆಶ್ರಮದಲ್ಲಿ ಸಾಧಕರ ಬಗ್ಗೆ ಅತ್ಯಂತ ಪ್ರೀತಿಯಿಂದ ಕಾಳಜಿ ವಹಿಸುವುದು

ಪರಾತ್ಪರ ಗುರು ಡಾಕ್ಟರರ ಕಲಿಕೆಯಿಂದ ಸನಾತನದ ಆಶ್ರಮಗಳಲ್ಲಿನ ಎಲ್ಲ ಸಾಧಕರು, ಕಾಯಿಲೆಯಿಂದ ಬಳಲುವ ಸಾಧಕರನ್ನು ಹಾಗೂ ವಯಸ್ಸಾದ ಸಾಧಕರನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಅವರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದು, ಅವರ ಪಥ್ಯ ಕ್ಕನುಸಾರ ಆಹಾರವನ್ನು ಕೊಡುವುದು, ಇಂತಹ ಎಲ್ಲ ಕಾಳಜಿಗಳನ್ನು ತೆಗೆದುಕೊಳ್ಳುತ್ತಾರೆ. ಕೋಣೆಯಲ್ಲಿ ಮಲಗಿಯೇ ಇರಬೇಕಾದರೆ ಅವರನ್ನು ಭೇಟಿಯಾಗಿ ಸಾಧನೆಯ ಕುರಿತಾದ ಅಂಶಗಳನ್ನು ಹೇಳಿ ಪ್ರೋತ್ಸಾಹಿಸುವುದು, ಓದಲು ಗ್ರಂಥಗಳನ್ನು ಉಪಲಬ್ಧ ಮಾಡಿಕೊಡುವುದು, ಇದು ಸಹ ಸಹಜವಾಗಿಯೇ ಆಗುತ್ತದೆ. ಕಳೆದ ಕೆಲವು ವರ್ಷಗಳ ಹಿಂದೆಯೇ ಪರಾತ್ಪರ ಗುರು ಡಾಕ್ಟರರು, ‘ಮುಂಬರುವ ಕಾಲದಲ್ಲಿ ಸನಾತನ ವಾನಪ್ರಸ್ಥಾಶ್ರಮವನ್ನೂ ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ. ಯಾವ ಸಾಧಕರು ಜೀವಮಾನವಿಡೀ ಈಶ್ವರಪ್ರಾಪ್ತಿಗಾಗಿ ಸಾಧನೆಯನ್ನು ಮಾಡಿರುವರೋ, ಆ ಸಾಧಕರ ಮನಸ್ಸು ಇಳಿವಯಸ್ಸಿನಲ್ಲಿಯೂ ಮಾಯೆಯಲ್ಲಿ ಸುಖಪಡುವುದಿಲ್ಲ. ಕೊನೆಯವರೆಗೂ ಇಂತಹ ಸಾಧಕರ ಕಾಳಜಿ ವಹಿಸುವಂತಾಗಬೇಕು ಹಾಗೂ ಅವರಿಗೆ ಸಾಧನೆಯ ವಾತಾವರಣವು ಲಭಿಸಬೇಕು ಎಂಬುದು ಇದರ ಹಿಂದಿನ ಉದ್ದೇಶವಾಗಿದೆ. ನಿಜವಾಗಿಯೂ, ಈ ಪ್ರೀತಿಗೆ ಸರಿಸಾಟಿಯೇ ಇಲ್ಲ !

ವಿವಾಹ ನಿಶ್ಚಿತವಾದ ಸಾಧಕಿಗೆ ಅವಳಿಗಿಷ್ಟವಾದುದೆಲ್ಲವನ್ನೂ ಕೊಡಲು ಹೇಳುವುದು

‘೨೦೦೬ ನೇ ಇಸವಿಯಲ್ಲಿ ಓರ್ವ ಸಾಧಕಿಯ ವಿವಾಹವು ನಿಶ್ಚಯವಾಗಿತ್ತು. ಅವಳನ್ನು ಭೇಟಿಯಾಗಲು ನಾನು ಹೋಗುವವಳಿದ್ದೆ. ನಾನು ಹೊರಡುವ ಮೊದಲು ಪ.ಪೂ. ಡಾಕ್ಟರರು ನನ್ನನ್ನು ಕರೆದು ಸ್ವಲ್ಪ ಹಣವನ್ನು ನೀಡಿದರು ಹಾಗೂ, ‘ನೀವಿಬ್ಬರೂ ಹೊರಗೆ ಖರೀದಿಗೆ ಹೋಗುವವರಿದ್ದೀರಿ. ಆಗ ಅವಳಿಗೆ ಏನು ಇಷ್ಟವಾಗುತ್ತದೆಯೋ, ಅದನ್ನು ಖರೀದಿಸಿ ಕೊಡು. ಹೊರಗೆ ಹೋದಾಗ ತಿನ್ನಲು-ಕುಡಿಯಲು ಈ ಹಣವನ್ನು ಉಪಯೋಗಿಸಿರಿ. ಯಾವುದಕ್ಕೂ ಕಡಿಮೆಯಾಗದಂತೆ ನೋಡು. ಸದ್ಯದ ಕಾಲದಲ್ಲಿ ಎಷ್ಟು ಹಣ ಬೇಕಾಗುತ್ತದೆ ಎಂದು ನನಗೆ ಗೊತ್ತಿಲ್ಲ. ಇನ್ನೂ ಬೇಕಾದರೆ ನನಗೆ ಹೇಳಿರಿ. ಐಸಕ್ರೀಮ್ ಅಥವಾ ಯಾವುದು ಅವಳಿಗೆ ಇಷ್ಟವಾಗುತ್ತದೆಯೋ, ಅದನ್ನು ಅವಳಿಗೆ ಕೊಡಿಸು. ನಮ್ಮ ವತಿಯಿಂದ ಅವಳಿಗೆ ವಿವಾಹಪೂರ್ವ ವಿಧಿಯನ್ನು ಸಹ ಮಾಡೋಣ. ನಾವಲ್ಲದಿದ್ದರೆ ಅವಳಿಗೆ ಯಾರು ಪ್ರೀತಿಯನ್ನು ತೋರಿಸುವರು ?, ಎಂದರು. – ಸೌ. ಮನೀಷಾ ಪಾನಸರೆ, ಸನಾತನ ಆಶ್ರಮ, ರಾಮನಾಥಿ, ಗೋವಾ.

ಇಂದಿಗೂ ಆಶ್ರಮದಲ್ಲಿ ಸಾಧಕರ ವಿವಾಹದ ಮೊದಲು ಒಂದು ವಿವಾಹಪೂರ್ವ ವಿಧಿಯನ್ನು ಮಾಡಲಾಗುತ್ತದೆ. ಆ ಸಮಯದಲ್ಲಿ ಆ ಸಾಧಕರ ವಿಭಾಗದ ಎಲ್ಲ ಸಾಧಕರು ಒಟ್ಟು ಸೇರಿ ಆ ಸಾಧಕನಿಗೆ / ಸಾಧಕಿಗೆ ಮುಂದಿನ ವೈವಾಹಿಕ ಜೀವನಕ್ಕಾಗಿ ಶುಭಾಶಯವನ್ನು ನೀಡುತ್ತಾರೆ.