ದೇವರೇ ಅದೆಷ್ಟು ಅಗಾಧ ಪ್ರೇಮ ನೀಡುವಿರಿ ನೀವು | ನಿಮ್ಮ ಪ್ರೇಮದಲ್ಲಿಯೇ ಮಿಂದೆದ್ದೆವು ನಾವು |
ಮಧುರ ವಚನಗಳಿಂದ ಆನಂದದಲ್ಲಿಟ್ಟಿರುವ ಭಾಗ್ಯ ನಮ್ಮದು | ತಮ್ಮವನೆಂದು ಸಂಬೋಧಿಸಿದ ಗುರುವೇ ಎಂತಹ ಮಹಾನ್ ತತ್ತ್ವ ನಿಮ್ಮದು ||
‘ಭಕ್ತರು ದೇವರ ಸೇವೆಯನ್ನು ಮಾಡುವುದಿಲ್ಲ, ದೇವರೇ ಭಕ್ತರ ಸೇವೆಯನ್ನು ಮಾಡುತ್ತಾನೆ, ಎಂಬುದನ್ನು ಪರಾತ್ಪರ ಗುರು ಡಾಕ್ಟರರ ಸಹವಾಸದಲ್ಲಿದ್ದಾಗ ಹೆಜ್ಜೆಹೆಜ್ಜೆಗೂ ಕಂಡುಬರುತ್ತದೆ. ತಮ್ಮ ಆಧ್ಯಾತ್ಮಿಕ ಅಧಿಕಾರದ ಯಾವುದೇ ಆಡಂಬರವನ್ನು ತೋರಿಸದೇ ಸಾಧಕರಲ್ಲಿ ಓರ್ವ ಸಾಧಕರಾಗಿ ಅವರು ಕೆಲವೊಮ್ಮೆ ತಾವೇ ಸಾಧಕರಿಗೆ ಊಟವನ್ನು ಬಡಿಸುವುದು, ಸೇವೆಯಲ್ಲಿ ನಿರತರಾಗಿ ಜಾಗರಣೆ ಮಾಡುವ ಸಾಧಕರಿಗಾಗಿ ಹಾಸಿಗೆ-ಹೊದಿಕೆಗಳ ವ್ಯವಸ್ಥೆಯನ್ನು ಮಾಡುವುದು, ಸಮಯಬಂದಾಗ ಸಾಧಕರ ಬಾಯಿಗೆ ಒಂದೊಂದು ತುತ್ತು ನೀಡಿ ತಿನ್ನಿಸುವುದು, ಅಡಚಣೆಯ ಸಮಯದಲ್ಲಿ ಸಾಧಕರಿಗೆ ತಮ್ಮ ಬಟ್ಟೆಗಳನ್ನೂ ಧರಿಸಲು ಕೊಡುವುದು ಮುಂತಾದವುಗಳನ್ನು ಮಾಡುತ್ತಾರೆ. ಕಳೆದ ಕೆಲವು ವರ್ಷಗಳಿಂದ ಅವರ ಪ್ರಾಣಶಕ್ತಿಯು ಅತ್ಯಲ್ಪವಾಗಿದ್ದರೂ ಅವರ ಕೋಣೆಯಲ್ಲಿ ಸೇವೆಗೆಂದು ಹೋಗುವ ಇತರ ಸಾಧಕರಿಗೂ ಅವರು ಈಗಲೂ ಸಹಾಯ ಮಾಡಲು ಪ್ರಯತ್ನಿಸುತ್ತಾರೆ. ತಮ್ಮ ಯಾವುದೇ ಪ್ರತ್ಯೇಕ ಅಸ್ತಿತ್ವವನ್ನು ತೋರಿಸದೇ ಸಾಧಕರಿಗೆ ಎಲ್ಲ ರೀತಿಯಿಂದ ಸಹಾಯ ಮಾಡುವ ಪರಾತ್ಪರ ಗುರು ಡಾಕ್ಟರರ ಸಹವಾಸದಲ್ಲಿನ ಈ ಪ್ರಸಂಗಗಳು ನಿಜಕ್ಕೂ ನಿಮ್ಮ ಮನಸ್ಸಿನಲ್ಲಿ ಸ್ಥಾನವನ್ನು ಪಡೆದುಕೊಳ್ಳುವವು ! ಅವರ ಇಂತಹ ಸಾಮಾನ್ಯರಂತೆ ಸಹಜ ಜೀವನದಿಂದಲೇ ಅವರು ‘ಅಸಾಮಾನ್ಯರಾಗಿರುವುದು ಗಮನಕ್ಕೆ ಬರುತ್ತದೆ ! ತಮ್ಮ ಕೃತಿಗಳಿಂದ ಸಾಧಕರಿಗೆ ಇಂತಹ ಅಮೂಲ್ಯ ಬೋಧನೆಯನ್ನು ನೀಡುವ ಪರಾತ್ಪರ ಗುರು ಡಾಕ್ಟರರ ಚರಣಗಳಲ್ಲಿ ಕೋಟಿ ಕೋಟಿ ವಂದನೆಗಳು !
೧. ಚಾಲಕ ಸಾಧಕನಿಗೆ ತಮ್ಮ ಕೈಯಿಂದ ಬಾಯಿಯಲ್ಲಿ ತುತ್ತು ನೀಡುವ ಪರಾತ್ಪರ ಗುರು ಡಾಕ್ಟರರು !
ಒಂದು ಸಲ ನಾನು ಪರಾತ್ಪರ ಗುರು ಡಾಕ್ಟರರೊಂದಿಗೆ ಪುಣೆಗೆ ಹೋಗುತ್ತಿದ್ದೆ. ಸಮಯಕ್ಕೆ ಸರಿಯಾಗಿ ತಲುಪಬೇಕಾಗಿರುವುದರಿಂದ ಮಧ್ಯದಲ್ಲಿ ವಾಹನವನ್ನು ನಿಲ್ಲಿಸಿ ಡಬ್ಬಿಯಲ್ಲಿದ್ದ ಊಟವನ್ನು ಮಾಡಲು ಸಾಧ್ಯವಿರಲಿಲ್ಲ. ಆಗ ಪರಾತ್ಪರ ಗುರು ಡಾಕ್ಟರರು, “ನಾನು ಒಂದೊಂದು ತುತ್ತು ಕೊಡುತ್ತೇನೆ. ನೀನು ತಿನ್ನುತ್ತ ವಾಹನವನ್ನು ಓಡಿಸು, ಎಂದು ಹೇಳಿದರು. ಅವರು ಒಂದೊಂದು ತುತ್ತು ನನ್ನ ಕೈಯಲ್ಲಿ ಕೊಡುತ್ತಿದ್ದರು ಮತ್ತು ನಾನು ತಿನ್ನುತ್ತ ವಾಹನವನ್ನು ನಡೆಸುತ್ತಿದ್ದೆನು. ಮಧ್ಯದಲ್ಲಿಯೇ ವಾಹನ ದಟ್ಟಣೆಯಾಯಿತು. ಆಗ ಅವರು, “ತುಂಬಾ ವಾಹನ ದಟ್ಟಣೆ ಇದೆ. ನೀನು ಕೈಗಳನ್ನು ಬಿಡಬೇಡ. ನೀನು ಬಾಯಿ ತೆರೆ. ನಾನು ತುತ್ತನ್ನು ನಿನ್ನ ಬಾಯಿಗೆ ಹಾಕುತ್ತೇನೆ, ಎಂದು ಹೇಳಿದರು. ಪ.ಪೂ. ಡಾಕ್ಟರರ ಕೈಯಿಂದ ತಿಂದಿರುವ ಆ ತುತ್ತುಗಳು ನನ್ನ ಜೀವನದ ಸರ್ವೋಚ್ಚ ಆನಂದದ ಕ್ಷಣಗಳಾದವು. – ಶ್ರೀ. ಪಾಟೀಲ (೨೩.೩.೨೦೦೪)
೨. ಎಲ್ಲ ಸಾಧಕರು ವಾತಾನುಕೂಲ (ಎ.ಸಿ.) ಯಂತ್ರ ಉಪಯೋಗಿಸುವುದಿಲ್ಲ ಎಂದು ಸೆಖೆ ಆಗುತ್ತಿದ್ದರೂ ತಾವೂ ವಾತಾನುಕೂಲಯಂತ್ರವನ್ನು ಉಪಯೋಗಿಸದಿರುವುದು
ತುಂಬಾ ಸೆಖೆಯಾಗುತ್ತಿದ್ದರೂ ಪರಾತ್ಪರ ಗುರು ಡಾಕ್ಟರರು ತಮ್ಮ ಕೋಣೆಯಲ್ಲಿರುವ ವಾತಾನುಕೂಲಯಂತ್ರವನ್ನು (ಎ.ಸಿ.) ಉಪಯೋಗಿಸುವುದಿಲ್ಲ. ಆ ಕುರಿತು ಅವರಿಗೆ ಕೇಳಿದಾಗ ಅವರು, ‘ಎಲ್ಲ ಸಾಧಕರಿಗಾಗಿ ವಾತಾನುಕೂಲಯಂತ್ರಗಳಿಲ್ಲ; ಆದುದರಿಂದ ನಾನು ಸಹ ಉಪಯೋಗಿಸುವುದಿಲ್ಲ, ಎಂದು ಹೇಳಿದರು. ಪರಾತ್ಪರ ಗುರು ಡಾಕ್ಟರರ ಮಾತುಗಳಿಂದ ಅವರಲ್ಲಿ ಸಾಧಕರ ಬಗೆಗಿರುವ ಪ್ರೀತಿ ಹೇಗಿದೆ, ಎಂಬುದು ನನಗೆ ಅನುಭವಿಸಲು ಸಿಕ್ಕಿತು. ವಿಶೇಷವೆಂದರೆ ‘ಸೌಲಭ್ಯವಿದ್ದರೂ ಸಾಧಕರ ಮೇಲಿನ ಪ್ರೀತಿಯಿಂದ, ಎಲ್ಲರಿಗೂ ಅದು ಸಿಗದಿರುವುದರಿಂದ ಅದನ್ನು ಉಪಯೋಗಿಸದಿರುವುದು, ಇದು ಅವರ ಹಿರಿತನವಾಗಿದೆ ! – ಶ್ರೀ. ಪ್ರಕಾಶ ಮರಾಠೆ
೩. ಸಾಧಕನ ವೇದನೆಗಳ ತೀವ್ರತೆಯು ಗಮನಕ್ಕೆ ಬರಬೇಕೆಂದು ಸ್ವತಃ ಮುರಕಲ್ಲುಗಳನ್ನು ಕೆತ್ತುವುದು
‘೨೦೦೩ ರಲ್ಲಿ ಒಮ್ಮೆ ಕಟ್ಟಡಕಾಮಗಾರಿ ವಿಭಾಗದ ಓರ್ವ ಸಾಧಕನು ಮುರಕಲ್ಲುಗಳನ್ನು ಕೆತ್ತಿದ್ದರಿಂದ ಕೈಗಳಲ್ಲಿ ಗೀರುಗಳು ಬಿದ್ದಿದ್ದವು. ಆ ಸಾಧಕನ ಗೀರು ಬಿದ್ದ ಕೈಗಳನ್ನು ನೋಡಿದ ಪ.ಪೂ. ಡಾಕ್ಟರರ ಕಣ್ಣುಗಳಲ್ಲಿ ನೀರು ಬಂದಿತು. ನಂತರ ಅವರು ಸ್ವತಃ ಕಲ್ಲುಗಳನ್ನು ಕೆತ್ತುವ ಸೇವೆಯನ್ನು ಮಾಡಿದರು. ಇದರಿಂದ ಪ.ಪೂ. ಡಾಕ್ಟರರ ಕೈಗಳಿಗೂ ಗೀರುಗಳು ಬಿದ್ದವು. ಸಹಸಾಧಕನಿಗೆ ಆಗುವ ವೇದನೆಗಳ ತೀವ್ರತೆಯು ಗಮನಕ್ಕೆ ಬರಬೇಕೆಂದು; ಪ.ಪೂ. ಡಾಕ್ಟರರು ಸ್ವತಃ ಆ ಸೇವೆಯನ್ನು ಮಾಡಿ ನೋಡಿದರು. – ಸೌ. ಶ್ರದ್ಧಾ, ರಾಮನಾಥಿ, ಗೋವಾ. (೨೮.೬.೨೦೧೪)
ಈಗ ಪರಾತ್ಪರ ಗುರು ಡಾಕ್ಟರರ ರೂಪದಲ್ಲಿ ಆ ಶ್ರೀಹರಿಯ ದರ್ಶನವಾಗುತ್ತಿದೆ ! ನಿಜವಾಗಲೂ ಭಕ್ತನ ಮನೆಯಲ್ಲಿ ದುಡಿಯುವ ಆ ಶ್ರೀಹರಿಯೇ ಅವನ ಅವತಾರದ ವಿವಿಧ ಗುಣಗಳನ್ನು ಸಾಧಕರಿಗೆ ಗುರುರೂಪದಲ್ಲಿ ತೋರಿಸುತ್ತಿದ್ದಾನೆ. ಇತರರಿಗಾಗಿ ತ್ಯಾಗವನ್ನು ಮಾಡುವುದು ಹೇಗೇ? ಇದರ ಪರೋಕ್ಷ ಬೋಧನೆ ಯನ್ನು ಶ್ರೀಗುರುಗಳು ತಮ್ಮ ಆಚರಣೆಯಿಂದ ತೋರಿಸಿದ್ದಾರೆ. ಶ್ರೀಗುರುಗಳ ಪ್ರತಿಯೊಂದು ಕೃತಿ, ಅವರ ಪ್ರತಿಯೊಂದು ಶಬ್ದ, ಅವರ ಮನಸ್ಸಿನಲ್ಲಿನ ಪ್ರತಿಯೊಂದು ವಿಚಾರವು ಸಾಧಕರಿಗೆ ಹೇಗೆ ನಿರಂತರವಾಗಿ ಕಲಿಸುತ್ತಿರುತ್ತದೆ, ಎಂಬುದರ ಅನುಭೂತಿಯು ಹೆಜ್ಜೆಹೆಜ್ಜೆಗೂ ಬರುತ್ತದೆ. ಶಬ್ದದಲ್ಲಿ ಮತ್ತು ಶಬ್ದಾತೀತ ಮತ್ತು ಸ್ಥೂಲ ಹಾಗೂ ಸೂಕ್ಷ್ಮದಲ್ಲಿ ಶ್ರೀಗುರುಗಳ ಪ್ರತಿಯೊಂದು ಕೃತಿ ಸಮಷ್ಟಿಗೆ ದಿಶಾದರ್ಶಕವಾಗಿರುತ್ತದೆ ! ಇಂತಹ ಭಕ್ತವತ್ಸಲ ಶ್ರೀಗುರುಗಳು ನಮಗೆ ಲಭಿಸಿದರು, ಇದು ನಮ್ಮೆಲ್ಲ ಸಾಧಕರ ದೊಡ್ಡ ಭಾಗ್ಯ ! ಅದಕ್ಕಾಗಿ ಅವರ ಚರಣಗಳಲ್ಲಿ ಅನಂತಾನಂತ ಕೃತಜ್ಞತೆಗಳು ! |