ಹಿಂದೂಗಳ ಯಾತ್ರೆಗಳ ಮೇಲಿನ ತೆರಿಗೆಯನ್ನು ತಪ್ಪಿಸಲು ಹಿಂದೂ ರಾಷ್ಟ್ರ ಅಗತ್ಯ ! – ಶ್ರೀ ನೀಲಮಣಿದಾಸ ಮಹಾರಾಜರು

ಹರಿದ್ವಾರ, ಏಪ್ರಿಲ್ ೨೫ (ವಾರ್ತೆ) – ಸತ್ಸಂಗದ ಮೂಲಕ ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಮಾಹಿತಿ ನೀಡುವುದು ಅವಶ್ಯಕವಾಗಿದೆ. ಎಲ್ಲರಿಗೂ ಧರ್ಮ ಶಿಕ್ಷಣವನ್ನು ನೀಡುವ ಮೂಲಕ ಹಿಂದೂ ರಾಷ್ಟಕ್ಕಾಗಿ ಒಂದು ಪ್ರಸ್ತಾಪವನ್ನು ಸಿದ್ಧಪಡಿಸಿ ಪ್ರತಿ ಗ್ರಾಮ ಪಂಚಾಯಿತಿಗಳ ಮೂಲಕ ಠರಾವನ್ನು ಸಮ್ಮತಿಸಿ ಅದನ್ನು ಸರಕಾರಕ್ಕೆ ಕಳುಹಿಸಬೇಕು. ಮುಸ್ಲಿಮರಿಗೆ ಹಜ್ ಯಾತ್ರೆಗೆ ನಿಧಿ ನೀಡಲಾಗುತ್ತದೆ; ಆದರೆ, ಹಿಂದೂಗಳ ತೀರ್ಥಯಾತ್ರೆಗಳಿಗೆ ತೆರಿಗೆ ವಿಧಿಸುವುದು ಸರಿಯಲ್ಲ. ಅದನ್ನು ತಡೆಯಲು ಹಿಂದೂ ರಾಷ್ಟ್ರದ ಅಗತ್ಯವಿದೆ. ಹಿಂದೂ ರಾಷ್ಟ್ರದ ಬಗ್ಗೆ ಆಂದೋಲನ ಮಾಡುವುದರೊಂದಿಗೆ ಸತ್ಸಂಗಗಳು ಮತ್ತು ಕೀರ್ತನೆಗಳ ಮೂಲಕ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ನಾನು ಹಿಂದೂ ಜನಜಾಗೃತಿ ಸಮಿತಿಯ ಕೆಲಸವನ್ನು ಅತ್ಯಂತ ಹತ್ತಿರದಿಂದ ನೋಡಿದ್ದೇನೆ ಮತ್ತು ನಿಮ್ಮ ಆನ್‌ಲೈನ್ ಸತ್ಸಂಗವನ್ನೂ ನೋಡುತ್ತಿದ್ದೇನೆ. ಆ ಸತ್ಸಂಗಗಳು ತುಂಬಾ ಒಳ್ಳೆಯದು ಮತ್ತು ಮನಸ್ಸು ಪ್ರಸನ್ನವಾಗುತ್ತದೆ. ನಿಮ್ಮ ‘ಸನಾತನ ಪಂಚಾಂಗ’ ಆಪ್ ಅನ್ನು ನಾನೂ ಡೌನ್‌ಲೋಡ್ ಮಾಡುತ್ತೇನೆ ಮತ್ತು ಇತರ ಸಂತರಿಗೂ ಡೌನ್‌ಲೋಡ್ ಮಾಡಲು ಹೇಳುತ್ತೇನೆ ಎಂದು ಶ್ರೀ ನೀಲಮಣಿದಾಸ ಮಹಾರಾಜರು ಹೇಳಿದ್ದಾರೆ. ಹಿಂದೂ ಜನಜಾಗೃತಿ ಸಮಿತಿಯ ಪರವಾಗಿ ಕುಂಭಮೇಳದಲ್ಲಿ ‘ಹಿಂದೂ ರಾಷ್ಟ್ರ ಸಂಪರ್ಕ ಅಭಿಯಾನ’ ಹಮ್ಮಿಕೊಳ್ಳಲಾಗುತ್ತಿದೆ. ಈ ಅಭಿಯಾನದ ಅಡಿಯಲ್ಲಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಡ ರಾಜ್ಯ ಸಂಘಟಕ ಶ್ರೀ. ಸುನೀಲ ಘನವಟ ಇವರು ಶ್ರೀ ನೀಲಮಣಿದಾಸ ಮಹಾರಾಜ ಅವರನ್ನು ಭೇಟಿಯಾದಾಗ ಅವರು ಮಾತನಾಡುತ್ತಿದ್ದರು. ಈ ಸಮಯದಲ್ಲಿ ‘ಸನಾತನ ಭಾಗವತ ಸಂಪ್ರದಾಯ’ದ ಮಹಾಮಂಡಲೇಶ್ವರ ಶ್ರೀ ನಾರಾಯಣದಾಸ ಮಹಾರಾಜರು, ಶ್ರೀ ರಾಮದಾಸ ರಾಮಬಾಬು ಶರ್ಮಾ ಇವರನ್ನೂ ಸಹ ಭೇಟಿಯಾದರು.