ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯವು ಸದ್ಯದ ಅವಶ್ಯಕತೆ ! – ಸ್ವಾಮಿ ಶ್ರೀ ಮಹಾರಾಜ

ಸ್ವಾಮಿ ಶ್ರೀ ಮಹಾರಾಜ ಅವರೊಂದಿಗೆ ಚರ್ಚಿಸುವಾಗ, ಶ್ರೀ. ಸುನೀಲ ಘನವಟ

ಹರಿದ್ವಾರ – ಭಾರತವು ಹಿಂದೂ ರಾಷ್ಟ್ರವೇ ಆಗಿದೆ, ಆದರೆ ಅದನ್ನು ರಕ್ಷಿಸುವ ಕೆಲಸವನ್ನು ನಾವು ಮಾಡಲೇ ಬೇಕಾಗುವುದು. ಈ ರಾಷ್ಟ್ರವನ್ನು ಜಾತ್ಯತೀತವನ್ನಾಗಿ ಮಾಡಿದುದರಿಂದ ಪ್ರಾಕೃತಿಕ ಸಮಸ್ಯೆಗಳು ಉದ್ಭವಿಸಿವೆ. ಸಂವಿಧಾನದಲ್ಲಿ ಜಾತ್ಯತೀತ ಈ ಶಬ್ದವನ್ನು ತುರುಕಿಸಲಾಗಿದೆ, ಅದಕ್ಕೆ ನಮ್ಮ ವಿರೋಧವಿದೆ. ಹಿಂದೂ ಜನಜಾಗೃತಿ ಸಮಿತಿಯು ಈ ಕುರಿತು ಜನಜಾಗೃತಿಯನ್ನು ಮಾಡುತ್ತಿದ್ದು ನಿಮ್ಮ ಈ ಕಾರ್ಯವು ಪ್ರಶಂಸನೀಯವಾಗಿದೆ. ದೇವತೆಗಳ ವಿಡಂಬನೆ ಮತ್ತು ಸಂತರ ಮೇಲಾಗುವ ಆಘಾತಗಳನ್ನು ತಡೆಗಟ್ಟಲು ಸರಕಾರವು ಕಠಿಣ ಕಾನೂನನ್ನು ಕೂಡಲೇ ಮಾಡಬೇಕು. ಹಿಂದೂ ರಾಷ್ಟ್ರ ಬಂದರೆ ಮಾತ್ರ ಗೋಮಾತೆಯೊಂದಿಗೆ ಎಲ್ಲರೂ ಸುರಕ್ಷಿತರಾಗಿರುವರು. ಹಿಂದೂ ಜನಜಾಗೃತಿ ಸಮಿತಿಯ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಿಂದ ನಾನು ಪ್ರಸನ್ನನಾಗಿದ್ದೇನೆ. ಪ್ರಸ್ತುತ ಇದೇ ಕಾರ್ಯದ ಆವಶ್ಯಕತೆ ಇದೆ, ಎಂಬ ಮಾರ್ಗದರ್ಶನವನ್ನು ಹರಿನಗರದ ಭಾಗೀರಥ ಧಾಮದ ಸ್ವಾಮಿ ಶ್ರೀ ಮಹಾರಾಜರು ಮಾಡಿದರು. ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ‘ಹಿಂದೂ ರಾಷ್ಟ್ರ ಸಂಪರ್ಕ ಅಭಿಯಾನವನ್ನು ನಡೆಸಲಾಗುತ್ತಿದೆ. ಈ ಅಭಿಯಾನದ ಅಂತರ್ಗತ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತಿಸಗಡ ರಾಜ್ಯದ ಸಂಘಟಕರಾದ ಶ್ರೀ. ಸುನೀಲ ಘನವಟ ಇವರು ಸ್ವಾಮಿ ಶ್ರೀ ಮಹಾರಾಜರನ್ನು ಭೇಟಿ ಮಾಡಿದರು. ಆ ಸಮಯದಲ್ಲಿ ಅವರು ಮೇಲಿನಂತೆ ಮಾರ್ಗದರ್ಶನ ಮಾಡಿದರು. ಈ ಸಮಯದಲ್ಲಿ ಶ್ರೀ. ಘನವಟ ಇವರು ಮಹಾರಾಜರಿಗೆ ಸಮಿತಿಯ ಕಾರ್ಯದ ಕುರಿತು ಮಾಹಿತಿಯನ್ನು ನೀಡಿದರು, ಹಾಗೆಯೇ ಕುಂಭಮೇಳದಲ್ಲಿ ಧರ್ಮ ಮತ್ತು ರಾಷ್ಟ್ರ ಇವುಗಳ ಕುರಿತಾದ ಚಿತ್ರಮಯ ಪ್ರದರ್ಶನವಿರುವ ‘ಸನಾತನ ಧರ್ಮಶಿಕ್ಷಣ ಮತ್ತು ಹಿಂದೂ ರಾಷ್ಟ್ರ- ಜಾಗೃತಿ ಕೇಂದ್ರಕ್ಕೆ ಭೇಟಿ ನೀಡುವ ಕುರಿತು ಆಮಂತ್ರಣವನ್ನೂ ಅವರಿಗೆ ನೀಡಿದರು. ಈ ಸಮಯದಲ್ಲಿ ಸಮಿತಿಯ ಸರ್ವಶ್ರೀ ರಾಜೇಶ ಉಮರಾಣಿ ಮತ್ತು ಹರಿಕೃಷ್ಣ ಶರ್ಮಾ ಇವರೂ ಉಪಸ್ಥಿತರಿದ್ದರು.