ಪರಾತ್ಪರ ಗುರು ಡಾ. ಆಠವಲೆಯವರು ಹೇಳಿರುವ ನಾಮಜಪ ಮುಂತಾದ ಉಪಾಯಗಳೆಂದರೆ ಸಂಕಟಕಾಲದಲ್ಲಿ ಜೀವಂತವಾಗಿರಲು ನೀಡಿದ ಸಂಜೀವಿನಿಯೇ ಆಗಿವೆ, ಎಂಬುದನ್ನು ಗಮನದಲ್ಲಿಟ್ಟು ಎಲ್ಲ ಉಪಾಯಗಳನ್ನು ಗಂಭೀರವಾಗಿ ಮಾಡಿ !

ಕೊರೋನಾರೂಪಿ ಆಪತ್ಕಾಲಕ್ಕಾಗಿ ಮಾರ್ಗದರ್ಶಕ ಅಂಕಣ !

ಸಾಧಕರಿಗಾಗಿ ಮಹತ್ವದ ಸೂಚನೆ

‘ಸದ್ಯ ಎಲ್ಲೆಡೆಗೆ ಪ್ರತಿಕೂಲವಾದ ಪರಿಸ್ಥಿತಿ ಉದ್ಭವಿಸಿದೆ. ಸಾಧಕರು ಈ ಕಾಲದಲ್ಲಿ ಪ್ರತಿದಿನ ಮುಂದಿನ ನಾಮಜಪ ಮುಂತಾದ ಉಪಾಯಗಳನ್ನು ಪೂರ್ಣ ಮಾಡುವತ್ತ ಗಮನ ನೀಡಬೇಕು.

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

೧. ನಾಮಜಪ

‘ಸದ್ಯದ ಸ್ಥಿತಿಯಲ್ಲಿ ನಮ್ಮೊಳಗಿನ ಪ್ರತಿಕಾರಕ್ಷಮತೆಯನ್ನು ಹೆಚ್ಚಿಸಲು ಮತ್ತು ನಮಗೆ ಆಧ್ಯಾತ್ಮಿಕ ಬಲ ದೊರಕಬೇಕು, ಎಂಬುದಕ್ಕಾಗಿ ಸದ್ಗುರು ಡಾ. ಮುಕುಲ ಗಾಡಗೀಳರವರು ಹೇಳಿರುವ ನಾಮಜಪವನ್ನು (‘ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ಗುರುದೇವ ದತ್ತ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ದುರ್ಗಾದೇವ್ಯೈ ನಮಃ – ಓಂ ನಮಃ ಶಿವಾಯ !) ಪ್ರತಿದಿನ ೧೦೮ ಸಲ ಮಾಡಬೇಕು. ಈ ನಾಮಜಪವು ಈ https://sanatanprabhat.org/kannada/41716.html ಗಣಕೀಯ ಲಿಂಕ್‌ನಲ್ಲಿ ಲಭ್ಯವಿದೆ.

೧ ಅ. ಎದೆಯಲ್ಲಿ ಕಫ ಆಗಿರುವುದಾಗಿ ಗಮನಕ್ಕೆ ಬಂದರೆ ಅಥವಾ ಕೆಮ್ಮು ಬಂದರೆ ಕಫ ಆಗಬಾರದು, ಎಂದು
“ಶ್ರೀ ದುರ್ಗಾದೇವ್ಯೈ ನಮಃ – ಶ್ರೀ ಹನುಮತೇ ನಮಃ – ಶ್ರೀ ಹನುಮತೇ ನಮಃ – ಓಂ ನಮಃ ಶಿವಾಯ – ಓಂ ನಮಃ ಶಿವಾಯ ! ಈ ನಾಮಜಪವನ್ನು ಪ್ರತಿದಿನ ೧೦೮ ಸಲ ಮಾಡಬೇಕು.

೨. ಸ್ತೋತ್ರಪಠಣ

ಆಪತ್ಕಾಲದಲ್ಲಿ ರಕ್ಷಣೆಯಾಗಬೇಕೆಂದು ಪ್ರತಿದಿನ ಬೆಳಗ್ಗೆ ಚಂಡೀಕವಚ (ದೇವಿಕವಚ) ಹಾಗೂ ಸಾಯಂಕಾಲ ‘ಬಗಲಾಮುಖಿ ದಿಗ್ಬಂಧನ ಸ್ತೋತ್ರವನ್ನು ಕೇಳಬೇಕು. ಈ ಸ್ತೋತ್ರಗಳು https://www.sanatan.org/mr/audio-gallery ಈ ಗಣಕೀಯ ಲಿಂಕ್‌ನಲ್ಲಿ ಲಭ್ಯವಿದೆ.

೩. ‘ರಕ್ಷಾಯಂತ್ರ ಮತ್ತು ರಾಮಕವಚವನ್ನು ಧರಿಸುವುದು

ಪರಾತ್ಪರ ಗುರು ಪಾಂಡೆ ಮಹಾರಾಜರ ಆಜ್ಞೆಗನುಸಾರ ಪ್ರತಿದಿನ ‘ರಕ್ಷಾಯಂತ್ರ’ವನ್ನು ಹಾಕಿಕೊಳ್ಳಬೇಕು, ಹಾಗೆಯೇ ರಾಮಕವಚವನ್ನು ಧರಿಸಬೇಕು. ರಕ್ಷಾಯಂತ್ರ ಮತ್ತು ರಾಮಕವಚ ಇವುಗಳ ನೂಲು, ಹಾಗೆಯೇ ತಾಯಿತದಲ್ಲಿನ ರಕ್ಷಾಯಂತ್ರದ ಪ್ರತಿಯನ್ನು ಪ್ರತಿ ೨ ತಿಂಗಳಿಗೊಮ್ಮೆ ಬದಲಾಯಿಸಬೇಕು. ಹಳೆಯ ನೂಲನ್ನು ಮತ್ತು ರಕ್ಷಯಂತ್ರದ ಪ್ರತಿಯನ್ನು ಅಗ್ನಿಯಲ್ಲಿ ವಿಸರ್ಜನೆ ಮಾಡಿ ಹೊಸ ನೂಲು ಮತ್ತು ಪ್ರತಿಯನ್ನು ತಾಯಿತದಲ್ಲಿ ಹಾಕಬೇಕು. ರಕ್ಷಾಯಂತ್ರದ ತಾಯಿತವನ್ನು ಬದಲಾಯಿಸುವ ಅವಶ್ಯಕತೆ ಇಲ್ಲ. ರಕ್ಷಾಯಂತ್ರದ ಪ್ರತಿ ಮತ್ತು ಆ ಸಂದರ್ಭದಲ್ಲಿ ಸೂಚನೆಗಳು ಎಲ್ಲರಿಗೂ ಲಭ್ಯವಾಗಲೆಂದು ಅವುಗಳನ್ನು https://www.sanatan.org/kannada/91081.html ಈ ಗಣಕೀಯ ಲಿಂಕ್‌ನಲ್ಲಿ ಇಡಲಾಗಿದೆ.

೪. ಪ್ರತಿ ಒಂದು ಗಂಟೆಗೆ ಊದುಬತ್ತಿ ಅಥವಾ ತನ್ನ ಕೈಗಳಿಂದ ಸಪ್ತಚಕ್ರಗಳ ಮೇಲಿನ ಆವರಣ ತೆಗೆಯುವುದು

ಪ್ರತಿ ಒಂದು ಗಂಟೆಗೆ ಸಹಸ್ರಾರದಿಂದ ಸ್ವಾಧಿಷ್ಠಾನ ಚಕ್ರಗಳ ಮೇಲಿನ ತೊಂದರೆಯುಕ್ತ ಶಕ್ತಿಯ ಆವರಣವನ್ನು ೨-೩ ನಿಮಿಷ ತೆಗೆಯಬೇಕು. ಆಧ್ಯಾತ್ಮಿಕ ತೊಂದರೆ ಇರುವ ಸಾಧಕರು ಊದುಬತ್ತಿಯ ಸಹಾಯದಿಂದ ತೆಗೆದರೆ ತೊಂದರೆ ಇಲ್ಲದಿರುವ ಸಾಧಕರು ತಮ್ಮ ಕೈಗಳಿಂದ ಆವರಣವನ್ನು ತೆಗೆಯಬೇಕು. ಅನಂತರ ‘ಭೀಮಸೇನಿ’ ಕರ್ಪೂರದ ಪರಿಮಳವನ್ನು ತೆಗೆದುಕೊಂಡು ಉಪಾಯ ಮಾಡಬೇಕು. ‘ನನ್ನ ದೇಹದ ಶುದ್ಧಿಯಾಗಿ ನನಗೆ ಉತ್ಸಾಹವೆನಿಸಲಿ’, ಎಂದು ಭಗವಾನ ಶ್ರೀಕೃಷ್ಣನಿಗೆ ಪ್ರಾರ್ಥನೆ ಮಾಡಬೇಕು.

ಕೆಟ್ಟ ಶಕ್ತಿಗಳು ಸಾಧಕರ ಸಾಧನೆಯಲ್ಲಿ ವ್ಯತ್ಯಯವನ್ನುಂಟು ಮಾಡಿ ಅವರಿಗೆ ತೊಂದರೆ ನೀಡಬೇಕೆಂದು ಏನಾದರೊಂದು ಪ್ರಯತ್ನ ಮಾಡುತ್ತಿವೆ. ಸಂಕಟಕಾಲದಲ್ಲಿಯಂತೂ ಈ ತೊಂದರೆಗಳು ಇನ್ನೂ ಹೆಚ್ಚುತ್ತಿರುವುದರಿಂದ ಈ ಕಾಲದಲ್ಲಿ ಎಲ್ಲರೂ ನಾಮಜಪ ಮುಂತಾದ ಉಪಾಯಗಳನ್ನು ಮಾಡುವುದು ಅನಿವಾರ್ಯವಿದೆ.

ಸಾಧಕರೇ, ಸರ್ವಶಕ್ತಿಮಾನ ಈಶ್ವರನು ನಮ್ಮೊಂದಿಗೆ ಇರುವುದರಿಂದ ಪ್ರತಿಕೂಲ ಪರಿಸ್ಥಿತಿಯಲ್ಲಿ ಧೃತಿಗೆಡದೇ ಸ್ಥಿರವಾಗಿದ್ದು ಶ್ರದ್ಧೆಯಿಂದ ಎಲ್ಲ ಉಪಾಯಗಳನ್ನು ಮಾಡಿರಿ ! – (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ.(೧೩.೪.೨೦೨೧)

ಸಾಧಕರು ವ್ಯಷ್ಟಿ ಸಾಧನೆಯ ವರದಿಯಲ್ಲಿ ‘ತಮ್ಮಿಂದ ಮೇಲಿನ ಎಲ್ಲ ಆಧ್ಯಾತ್ಮಿಕ ಉಪಾಯಗಳು ನಿಯಮಿತವಾಗಿ ಆಗುತ್ತವೆಯೇ ?, ಎಂಬುದರ ವರದಿಯನ್ನು ವರದಿಸೇವಕರಿಗೆ ಕೊಡಬೇಕು.

ಎಲ್ಲ ಸಾಧಕರು ಕೊರೋನಾದ ಕುರಿತ ಚೌಕಟ್ಟುಗಳನ್ನು ಸಂಗ್ರಹಿಸಿಡಬೇಕು !