ಉದ್ಯಮಿಗಳಿಗೆ ಸವಿನಯ ವಿನಂತಿ
ಅನೇಕ ವ್ಯವಹಾರಸ್ಥರು ತಮ್ಮ ಸಂಸ್ಥೆಯ (ಕಂಪನಿಯನ್ನು ಪ್ರಸಿದ್ಧಗೊಳಿಸಲು ತಮ್ಮ ಜಾಹೀರಾತು ಇರುವ ದಿನದರ್ಶಿಕೆ (ಕ್ಯಾಲೆಂಡರ್) ಪ್ರಕಾಶಿಸಿ ಅದನ್ನು ಗ್ರಾಹಕರಿಗೆ, ನೌಕರರಿಗೆ, ಬಂಧುಬಳಗ ಮೊದಲಾದವರಿಗೆ ಉಡುಗೊರೆಯಾಗಿ ನೀಡುತ್ತಾರೆ. ವ್ಯಾವಹಾರಿಕ ವ್ಯಸ್ತತೆಯಿಂದ ಅನೇಕ ಉದ್ಯಮಿಗಳಿಗೆ ಪ್ರತ್ಯಕ್ಷ ಧರ್ಮಕಾರ್ಯದಲ್ಲಿ ಪಾಲ್ಗೊಳ್ಳಲು ಆಗುವುದಿಲ್ಲ. ಮೇಲಿನ ಎರಡೂ ಉದ್ದೇಶಗಳನ್ನು ಸಾಧ್ಯಗೊಳಿಸಲು ಉದ್ಯಮಿಗಳು ಸನಾತನ ಪಂಚಾಂಗದ ಜಾಹೀರಾತುಗಳಿಗಾಗಿ ಇರುವ ಜಾಗದಲ್ಲಿ ಕೇವಲ ತಮ್ಮದೇ ಜಾಹೀರಾತು ನೀಡಿ ದಿನದರ್ಶಿಕೆಯನ್ನು ವಿತರಿಸಬಹುದು. ಇದರಿಂದ ವಾಚಕರಿಗೆ ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಯ ವಿಷಯಗಳ ಲಾಭವಾಗಿ ಉದ್ಯಮಿಗಳೂ ಧರ್ಮಕಾರ್ಯದಲ್ಲಿ ಪಾಲ್ಗೊಂಡಂತೆ ಆಗುವುದು ಹಾಗೆಯೇ ಅವರ ಉದ್ಯಮದ ಪ್ರಸಿದ್ಧಿಯೂ ಆಗುವುದು ಸನಾತನದ ನಿಸ್ವಾರ್ಥ ಕಾರ್ಯವನ್ನು ನೋಡಿ ಇಂದಿನ ತನಕ ಸಿರಗುಪ್ಪದ ‘ಶ್ರೀ ಗೋಪಾಲರೆಡ್ಡಿ ಪ್ರೈಮರಿ ಆಗ್ರಿಕಲ್ಚರಲ್ ಕೊ ಆಪರೇಟಿವ್ ಸೊಸೈಟಿ’ ಪುಣೆಯ ‘ಭಾಫ್ನಾ ಜ್ಯುವೆಲರ್ಸ್’ ಗುಜರಾತಿನ ‘ಇಲೆಕ್ಟ್ರೋಥರ್ಮ’ ದೆಹಲಿಯ ‘ಮೆಟ್ರೋ ಬಿಲ್ಡ್‌ಟೆಕ್’ ಮತ್ತು ಚೆನೈಯ ‘ಕುಮಾರನ್ ಸಿಲ್ಕ್ಸ್’ ಮೊದಲಾದ ಸಂಸ್ಥೆಗಳು ಕೇವಲ ತಮ್ಮದೇ ಜಾಹೀರಾತು ಇರುವ ‘ಸನಾತನ ಪಂಚಾಂಗ’ವನ್ನು ಮುದ್ರಿಸಿಕೊಂಡಿವೆ.
‘ಸನಾತನ ಪಂಚಾಂಗ’ ದ ವೈಶಿಷ್ಟ್ಯಗಳು
೧. ಆಕರ್ಷಕ ಬಣ್ಣಸಂಯೋಜನೆ, ಸಾತ್ತ್ವಿಕ ಅಂಕೆಗಳು ಮತ್ತು ಅಕ್ಷರಗಳಿರುವ ಬರವಣಿಗೆ !
೨. ದೇವತೆಗಳ ಸಾತ್ತ್ವಿಕ ಚಿತ್ರಗಳು, ರಾಷ್ಟ್ರ ಮತ್ತು ಧರ್ಮದ ವಿಷಯದಲ್ಲಿ ಪ್ರಬೋಧನೆ, ಹಾಗೂ ಆಪತ್ಕಾಲವನ್ನು ಎದುರಿಸಲು ಅವಶ್ಯಕ ಪೂರ್ವಸಿದ್ಧತೆ ಮತ್ತು ಮನೋಬಲ ಹೆಚ್ಚಿಸುವ ಪರಿಹಾರೋಪಾಯಗಳ ಸಮಾವೇಶ
೩. ಮರಾಠಿ, ಹಿಂದಿ, ಕನ್ನಡ, ತಮಿಳು, ತೆಲುಗು, ಗುಜರಾತಿ ಭಾಷೆಗಳಲ್ಲಿ ಲಭ್ಯ !
ಉದ್ಯಮಿಗಳೇ, ಹಿಂದೂಗಳಿಗೆ ಧರ್ಮಶಿಕ್ಷಣ ನೀಡಿ ಧರ್ಮರಕ್ಷಣೆಗಾಗಿ ಉದ್ಯುಕ್ತಗೊಳಿಸುವ ‘ಸನಾತನ ಪಂಚಾಂಗ’ದಲ್ಲಿ ನಿಮ್ಮ ಸಂಸ್ಥೆಯ ಜಾಹೀರಾತನ್ನು ಮುದ್ರಿಸಿಕೊಂಡು ಅವುಗಳ ವಿತರಣೆಯ ಮೂಲಕ ಧರ್ಮಪ್ರಸಾರದ ಕಾರ್ಯದಲ್ಲಿ ಪಾಲ್ಗೊಳ್ಳಿ !
ಈ ಪಂಚಾಂಗವನ್ನು ಮುದ್ರಿಸಿಕೊಳ್ಳಲು ಇಚ್ಛಿಸುವ ಉದ್ಯಮಿಗಳು ಪಂಚಾಂಗ ಮುದ್ರಣದ ೩-೪ ವಾರದೊಳಗೆ ತಮ್ಮ ಮಾಹಿತಿಯನ್ನು [email protected] ಈ ಈಮೆಲ್ ವಿಳಾಸಕ್ಕೆ ಕಳಿಸಬೇಕು. ಈ ಬಗ್ಗೆ ಏನಾದರೂ ಸಂದೇಹಗಳಿದ್ದಲ್ಲಿ ಸೌ. ಭಾಗ್ಯಶ್ರೀ ಸಾವಂತ ಇವರನ್ನು ೭೦೫೮೮೮೫೬೧೦ ಈ ಸಂಖ್ಯೆಯಲ್ಲಿ ಸಂಪರ್ಕಿಸಬೇಕು ಎಂದು ವಿನಂತಿ.
ಟಿಪ್ಪಣಿ : ಪಂಚಾಂಗದಲ್ಲಿ ಮುದ್ರಿಸಬೇಕಾಗಿರುವ ಜಾಹೀರಾತಿನ ಕಲಾಕೃತಿ (ಆರ್ಟ್‌ವರ್ಕ್) ಉದ್ಯಮಿಗಳೇ ಮಾಡಿಕೊಟ್ಟರೆ ತುಂಬಾ ಅನುಕೂಲವಾಗುವುದು
ಸನಾತನದ ಗ್ರಂಥಗಳ ೧ ಕೋಟಿಗೂ ಅಧಿಕ ಪ್ರತಿಗಳು ಪ್ರಕಟ !
ಸಾಧಕರೆ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ
ಅರ್ಪಣೆದಾರರೇ, ಅಧಿಕ ಮಾಸದ ನಿಮಿತ್ತ ಧರ್ಮಪ್ರಸಾರದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿರುವ ಸನಾತನದ ಆಶ್ರಮಗಳಿಗೆ ಅನ್ನದಾನ ಮಾಡಿ ಪುಣ್ಯಸಂಚಯದೊಂದಿಗೆ ಆಧ್ಯಾತ್ಮಿಕ ಲಾಭವನ್ನು ಪಡೆಯಿರಿ !
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಸಂಕ್ಷಿಪ್ತ ಚರಿತ್ರೆ
‘ಸನಾತನ ಪ್ರಭಾತ’ಕ್ಕಾಗಿ ಕೇವಲ ನಾವೀನ್ಯ ಮತ್ತು ವೈಶಿಷ್ಟ್ಯಪೂರ್ಣ ಲೇಖನಗಳನ್ನು ಸಂಕ್ಷಿಪ್ತವಾಗಿ ಮತ್ತು ನಿಖರವಾಗಿ ಕಳುಹಿಸಿ !