`ಸಾಧಕರೇ 2024 ರಲ್ಲಿ, ಸೆಪ್ಟೆಂಬರ್ 18 ರಂದು ಚಂದ್ರಗ್ರಹಣ ಇತ್ತು ಮತ್ತು ಅಕ್ಟೋಬರ್ 2 ರಂದು ಕಂಕಣಾಕೃತಿ ಸೂರ್ಯಗ್ರಹಣ ಆಗಲಿದೆ. ಈ ಎರಡೂ ಗ್ರಹಣಗಳು ಭಾರತದಲ್ಲಿ ಗೋಚರಿಸದಿದ್ದರೂ, ಅವು ಸ್ವಲ್ಪ ಮಟ್ಟಿಗೆ ಪರಿಣಾಮ ಬೀರಬಹುದು. ಈ ನಿಟ್ಟಿನಲ್ಲಿ, ‘ಗ್ರಹಣವು ನಮ್ಮ ಮೇಲೆ ಪ್ರತಿಕೂಲ ಪರಿಣಾಮ ಆಗಬಾರದು’ ಎಂದು ಭಾರತ ಸಹಿತ ಜಗತ್ತಿನಾದ್ಯಂತದ ಎಲ್ಲಾ ಸಾಧಕರು ಅಕ್ಟೋಬರ್ 2 ರವರೆಗೆ ಈ ಕೆಳಗಿನ ಮಂತ್ರಗಳನ್ನು ಪಠಿಸಬಹುದು.
1. ಗ್ರಹಣದಿಂದ ದುಷ್ಪರಿಣಾಮ ಆಗಬಾರದು ಎಂದು ಮಾಡಬೇಕಾದ ಜಪ
ಅ.. ಮಹಾಶೂನ್ಯ ಜಪ : ಗ್ರಹಣದಿಂದ ಆಗುವ ಅನಾಹುತವನ್ನು ತಪ್ಪಿಸಲು ಅರ್ಧ ಘಂಟೆ ಕಾಲ ‘ಮಹಾಶೂನ್ಯ’ ಮಾಡಬೇಕು
ಆ. ಓಂ ನ ನಾಮಜಪ: ಗ್ರಹಣದಿಂದ ನಿರ್ಗುಣ ಸ್ತರದ ಎಲ್ಲಾ ದುಷ್ಪರಿಣಾಮಗಳನ್ನು ದೂರಗೊಳಿಸಲು ಅರ್ಧ ಘಂಟೆಯವರೆಗೆ ‘ಓಂ’ ನಾಮಜಪಿಸಬೇಕು
2. ಪಿತೃಪಕ್ಷದಲ್ಲಿ ಪಿತೃರಿಂದ ನಮಗೆ ತೊಂದರೆ ಆಗಬಾರದು ಎಂದು ದತ್ತನ ನಾಮಜಪ : ಪಿತೃಪಕ್ಷದಲ್ಲಿ ಪಿತೃರಿಂದ ತೊಂದರೆ ಆಗಬಾರದು ಎಂದು ಈ ನಾಮಜಪವನ್ನು ಅರ್ಧಗಂಟೆ ಮಾಡಬೇಕು – ಓಂ ಓಂ ಶ್ರೀ ಗುರುದೇವ ದತ್ತ ಓಂ’ (ಈ ಮೊದಲು ಈ ಜಪವನ್ನು ಒಂದು ಗಂಟೆ ಮಾಡಲು ಹೇಳಲಾಗಿತ್ತು. ಈಗ ಈ ಕಾಲಾವಧಿಯಲ್ಲಿ ಇತರ ಜಪವನ್ನೂ ಮಾಡಲಿಕ್ಕಿರುವುದರಿಂದ ಈ ಜಪವನ್ನು ಅರ್ಧಗಂಟೆ ಮಾಡಬೇಕು)
ಅಪಘಾತಗಳಿಂದ ರಕ್ಷಣೆ ಯಾಗಲು ‘ಮಹಾಶೂನ್ಯ’ ಜಪ : ಇದಲ್ಲದೇ ಸದ್ಗುರು ಡಾ. ಮುಕುಲ್ ಗಾಡ್ಗೀಳರು ಹೇಳಿದ ‘ಮಹಾಶೂನ್ಯ’ ನಾಮಜಪವನ್ನು 1 ಗಂಟೆ ಪ್ರತ್ಯೇಕವಾಗಿ ಜಪಿಸಬೇಕು.
ದತ್ತ, ಮಹಾಶೂನ್ಯ, ಮತ್ತು ಓಂ ಈ ನಾಮಜಪಗಳು ಸಾತ್ತ್ವಿಕ ಧ್ವನಿಯಲ್ಲಿ ಸನಾತನ ಸಂಸ್ಥೇಯ ಜಾಲತಾಣದಲ್ಲಿ ಕೆಳಗಿನ ಲಿಂಕ್‌ನಲ್ಲಿ ಲಭ್ಯವಿದೆ. ಲಿಂಕ್ – https://www.sanatan.org/mr/audio-gallery
– ಸುಶ್ರೀ (ಕು.) ಮಧುರಾ ಭೋಸಲೆ, ಸನಾತನ ಆಶ್ರಮ, ರಾಮನಾಥಿ, ಗೋವಾ.