ನವರಾತ್ರಿ ಹಬ್ಬದ ಸಂದರ್ಭದಲ್ಲಿ ಸನಾತನ ಸಂಸ್ಥೆಯು ಪ್ರಕಾಶಿಸಿರುವ ವಿವಿಧ ಗ್ರಂಥಗಳು, ಕಿರುಗ್ರಂಥಗಳು, ಹಾಗೆಯೇ ದೇವತೆಗಳ ಚಿತ್ರಗಳು ಮತ್ತು ನಾಮಪಟ್ಟಿಗಳನ್ನು ಸಮಾಜದ ವರೆಗೆ ತಲುಪಿಸಲು ಪ್ರಯತ್ನಿಸಿರಿ.

೩.೧೦.೨೦೨೪ರಿಂದ ನವರಾತ್ರಿ ಪ್ರಾರಂಭವಾಗುತ್ತದೆ. ಈ ಕಾಲಾವಧಿಯಲ್ಲಿ ಎಲ್ಲೆಡೆ ಬೃಹತ್ ಪ್ರಮಾಣದಲ್ಲಿ ದೇವಿಯ ಆರಾಧನೆ ಮಾಡಲಾಗುತ್ತದೆ. ಸನಾತನ ಸಂಸ್ಥೆಯು ದೇವಿಯ ವಿಷಯದ ಅಧ್ಯಾತ್ಮಶಾಸ್ತ್ರೀಯ ಜ್ಞಾನ ನೀಡುವ ಗ್ರಂಥ, ಕಿರುಗ್ರಂಥ ಹಾಗೆಯೇ ದೇವಿತತ್ತ್ವದ ಅನುಭೂತಿ ನೀಡುವ ಚಿತ್ರಗಳು ಮತ್ತು ನಾಮಪಟ್ಟಿಗಳನ್ನು ತಯಾರಿಸಿದೆ. ನವರಾತ್ರಿಯ ಅವಧಿಯಲ್ಲಿ ದೇವಿಯ ಆರಾಧನೆಯನ್ನು ಶಾಸ್ತ್ರೀಯವಾಗಿ ಆಚರಿಸಿ ಭಕ್ತರಿಗೆ ದೇವಿತತ್ತ್ವದ ಲಾಭ ಹೆಚ್ಚು ಹೆಚ್ಚು ಆಗಬೇಕು ಎನ್ನುವ ದೃಷ್ಟಿಯಿಂದ ಈ ಗ್ರಂಥಗಳು ಮತ್ತು ಉತ್ಪಾದನೆಗಳನ್ನು ಸಮಾಜದ ವರೆಗೆ ತಲುಪಿಸುವುದು ಆವಶ್ಯಕವಾಗಿದೆ.

೧. ದೇವಿಗೆ ಸಂಬಂಧಿಸಿದ ಗ್ರಂಥಗಳು ಮತ್ತು ಕಿರುಗ್ರಂಥಗಳು

೧ ಅ. ‘ಶಕ್ತಿ’ಯ ಉಪಾಸನೆ ಹೇಗೆ ಮಾಡಬೇಕು ?, ಈ ವಿಷಯದ ಮಾಹಿತಿ ನೀಡುವ ‘ಶಕ್ತಿಯ ಪ್ರಾಸ್ತಾವಿಕ ವಿವೇಚನೆ’ ಮತ್ತು ‘ಶಕ್ತಿಯ ಉಪಾಸನೆ’ ಈ ಗ್ರಂಥ : ಈ ೨ ಗ್ರಂಥಗಳಲ್ಲಿ ಶಕ್ತಿಯ ವಿವಿಧ ಹೆಸರುಗಳು, ಅವುಗಳ ಪ್ರಕಾರಗಳು ಮತ್ತು ಕಾರ್ಯಗಳು, ದೇವಿಯ ಉಪಾಸನೆಯ ವೈಶಿಷ್ಟ್ಯಗಳು, ಹಾಗೆಯೇ ಮೂರ್ತಿವಿಜ್ಞಾನವನ್ನು ವಿವರಿಸಲಾಗಿದೆ. ಇದರೊಂದಿಗೆ ‘ಯಾವ ರಂಗೋಲಿಯನ್ನು ಬಿಡಿಸುವುದರಿಂದ ಶಕ್ತಿತತ್ತ್ವವು ಆಕರ್ಷಿತವಾಗುತ್ತದೆ ? ಕಾಲಾನುಸಾರ ಯಾವ ದೇವಿಯ ಉಪಾಸನೆ ಮಾಡಬೇಕು ? ಮತ್ತು ಅದನ್ನು ಹೇಗೆ ಮಾಡಬೇಕು ? ನವರಾತ್ರಿ ಉತ್ಸವವನ್ನು ಹೇಗೆ ಆಚರಿಸ ಬೇಕು ? ಈ ವಿಷಯದ ಅಮೂಲ್ಯ ಮಾಹಿತಿಯನ್ನು ಇದರಲ್ಲಿ ನೀಡ ಲಾಗಿದೆ. (ಈ ವಿಷಯದ ಕಿರುಗ್ರಂಥವೂ ಲಭ್ಯವಿದೆ)

೧ ಆ. ದೇವಿಯ ಆರಾಧನೆಯ ಬಗ್ಗೆ ಜ್ಞಾನ ನೀಡುವ ಕಿರುಗ್ರಂಥ – ‘ದೇವಿ ಪೂಜೆಯ ಶಾಸ್ತ್ರ’ : ಈ ಕಿರುಗ್ರಂಥದಲ್ಲಿ ‘ನವರಾತ್ರಿಯಲ್ಲಿ ಘಟಸ್ಥಾಪನೆ ಹೇಗೆ ಮಾಡುವುದು ? ದಸರೆಯಲ್ಲಿ ಅಪರಾಜಿತಾ ದೇವಿಯನ್ನು ಏಕೆ ಪೂಜಿಸಬೇಕು ? ‘ದೇವಿಯ ಮೂರ್ತಿಗೆ ‘ಕುಂಕುಮಾರ್ಚನೆ’ ಏಕೆ ಮಾಡುತ್ತಾರೆ ?’ ಮುಂತಾದ ವಿವರವಾದ ಮಾಹಿತಿಯನ್ನು ನೀಡಲಾಗಿದೆ.

೨. ಸನಾತನದ ಇತರ ಸಾತ್ತ್ವ್ವಿಕ ಉತ್ಪಾದನೆಗಳು

೨ ಅ. ಶಕ್ತಿತತ್ತ್ವವಿರುವ ಚಿತ್ರಗಳು : ಸನಾತನ ಸಂಸ್ಥೆಯು ರಚಿಸಿರುವ ಶ್ರೀ ದುರ್ಗಾದೇವಿಯ ಸಾತ್ತ್ವಿಕ ಚಿತ್ರದಲ್ಲಿ ಶೇ. ೩೦.೫ ರಷ್ಟು ದೇವಿ ತತ್ತ್ವ ಆಕರ್ಷಿಸಲ್ಪಟ್ಟಿವೆ. ಈ ಚಿತ್ರಗಳು ಸಣ್ಣ, ಮಧ್ಯಮ ಮತ್ತು ದೊಡ್ಡ ಗಾತ್ರಗಳಲ್ಲಿ ಲಭ್ಯವಿವೆ. (ಕಲಿಯುಗದಲ್ಲಿನ ಮೂರ್ತಿ ಅಥವಾ ಚಿತ್ರದಲ್ಲಿ ಸರಾಸರಿ ಶೇ. ೩೦ ರಷ್ಟು ಪ್ರಮಾಣದಲ್ಲಿ ದೇವತೆಯ ತತ್ತ್ವ ಬರಬಲ್ಲದು. ಇತರೆಡೆ ಲಭ್ಯವಿರುವ ದೇವತೆಗಳ ಚಿತ್ರಗಳಲ್ಲಿ ಈ ತತ್ತ್ವ ಸರಾಸರಿ ಶೇ. ೨-೩ ರಷ್ಟು ಮಾತ್ರ ಇರುತ್ತದೆ.)

೨ ಆ. ‘ಶಿವ-ದುರ್ಗಾ’ ಮತ್ತು ‘ಶ್ರೀಕೃಷ್ಣ-ಲಕ್ಷ್ಮೀ’ ಈ ದೇವತೆಗಳ ಚಿತ್ರಗಳಿರುವ ಪದಕಗಳು (ಲಾಕೆಟ್ಗಳು) ಲಭ್ಯವಿವೆ.

೨ ಆ. ನಾಮಪಟ್ಟಿ : ಅಕ್ಷರ ಸಾತ್ತ್ವ್ವಿಕವಾಗಿದ್ದರೆ ಅದರಲ್ಲಿ ಚೈತನ್ಯವಿರುತ್ತದೆ. ಸಾತ್ತ್ವ್ವಿಕ ಅಕ್ಷರಗಳನ್ನು ಮತ್ತು ಅವುಗಳ ಸುತ್ತಲಿನ ದೇವತೆಗಳ ತತ್ತ್ವಕ್ಕೆ ಅನುರೂಪವಾಗಿರುವ ಚೌಕಟ್ಟುಗಳನ್ನು ಅಧ್ಯಯನ ಮಾಡಿ ಸನಾತನವು ವಿವಿಧ ದೇವತೆಗಳ ನಾಮಜಪಗಳ ಪಟ್ಟಿಗಳನ್ನು ತಯಾರಿಸಿದೆ.

ಮೇಲಿನ ಗ್ರಂಥಗಳೊಂದಿಗೆ ಮುಂದಿನ ಗ್ರಂಥಗಳನ್ನು ಮತ್ತು ಕಿರುಗ್ರಂಥಗಳನ್ನು ವಿತರಣೆ ಮಾಡಬಹುದು.

೧. ಗ್ರಂಥ

ಅ. ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ
ಆ. ಧಾರ್ಮಿಕ ಉತ್ಸವ ಮತ್ತು ವ್ರತಗಳ ಹಿಂದಿನ ಶಾಸ್ತ್ರ
ಇ. ಆಭರಣಗಳ ಮಹತ್ವ
ಈ. ಸ್ತ್ರೀ-ಪುರುಷರ ಆಭರಣಗಳು
ಉ. ಚೂಡಾಮಣಿಯಿಂದ ಕರ್ಣಾಭರಣಗಳ ವರೆಗಿನ ಆಭರಣಗಳು (ಆಭರಣದ ಬಗೆಗಿನ ಶಾಸ್ತ್ರ ಮತ್ತು ಸೂಕ್ಷ್ಮದಲ್ಲಿನ ಪ್ರಯೋಗ)
೨. ಕಿರುಗ್ರಂಥ
ಅ. ಆರತಿ ಮಾಡುವ ಶಾಸ್ತ್ರೋಕ್ತ ಪದ್ಧತಿ
ಆ. ಸಾತ್ತ್ವಿಕ ರಂಗೋಲಿಗಳು