ದೇಶದಲ್ಲಿ ರಸ್ತೆಗಳಿಗೆ ಮೊಘಲರ ಮತ್ತು ಆಂಗ್ಲರ ಹೆಸರು ನೀಡಿದ್ದನ್ನು ಬದಲಾಯಿಸಿ !

ಅಖಿಲ ಭಾರತೀಯ ಅಖಾಡಾ ಪರಿಷತ್ತಿನ ಅಧ್ಯಕ್ಷ ಮಹಂತ ನರೇಂದ್ರ ಗಿರಿಯವರ ಬೇಡಿಕೆ

ಇಂತಹ ಬೇಡಿಕೆಗಳನ್ನು ಏಕೆ ಮಾಡಬೇಕಾಗುತ್ತದೆ ? ಸ್ವಾತಂತ್ರ್ಯದ ೭೪ ವರ್ಷಗಳಲ್ಲಿ ಎಲ್ಲ ಪಕ್ಷ ಸರಕಾರಗಳು ಇದನ್ನು ಏಕೆ ಮಾಡಿಲ್ಲ ? ಹಿಂದೂ ರಾಷ್ಟ್ರದಲ್ಲಿ ಮೊದಲು ಈ ಹೆಸರುಗಳನ್ನು ಬದಲಾಯಿಸಲಾಗುವುದು !

ಮಹಂತ ನರೇಂದ್ರ ಗಿರಿ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಅಖಿಲ ಭಾರತ ಅಖಾಡಾ ಪರಿಷತ್ತಿನ ಅಧ್ಯಕ್ಷ ಮಹಂತ ನರೇಂದ್ರ ಗಿರಿ ಇವರು ದೇಶದಲ್ಲಿನ ಮೊಘಲರ ಮತ್ತು ಬ್ರಿಟಿಷರ ಹೆಸರುಗಳನ್ನು ರಸ್ತೆಗಳಿಗೆ ನೀಡಿರುವುದನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿದ್ದಾರೆ. ಈ ಹೆಸರುಗಳಿಗೆ ಬದಲಾಗಿ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮಹಾಪುರುಷರ ಹೆಸರನ್ನು ನೀಡಬೇಕು ಎಂದು ಅವರು ಹೇಳಿದರು.

ಮಹಂತ ನರೇಂದ್ರ ಗಿರಿ ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಸ್ವಾತಂತ್ರ್ಯ ಸಿಕ್ಕ ೭೪ ವರ್ಷಗಳ ನಂತರವೂ ದೇಶದ ಹಲವು ರಸ್ತೆಗಳಿಗೆ ಮೊಘಲರು ಮತ್ತು ಬ್ರಿಟಿಷರ ಹೆಸರಿಡಲಾಗಿದೆ. ಆಕ್ರಮಣಕಾರರ ಹೆಸರನ್ನು ನೋಡಿ, ಸಾಧು-ಸಂತರು ಮಾತ್ರವಲ್ಲ, ದೇಶದ ಯುವಕರಿಗೂ ತೊಂದರೆಯಾಗುತ್ತಿದೆ. ಸ್ವಾತಂತ್ರ್ಯದ ಮೊದಲು ಮತ್ತು ನಂತರ ದೇಶದ್ರೋಹ ಮಾಡಿದವರ ಹೆಸರನ್ನು ಅಳಿಸಿ ದೇಶಪ್ರೇಮಿಗಳಾದ ಹುತಾತ್ಮ ಚಂದ್ರಶೇಖರ ಆಜಾದ, ನೇತಾಜಿ ಸುಭಾಷ ಚಂದ್ರ ಬೋಸ, ಸರ್ದಾರ ವಲ್ಲಭಭಾಯಿ ಪಟೇಲ ಅವರ ಹೆಸರನ್ನು ಇಡಬೇಕು.

‘ಸರಕಾರ ಅಂತಹ ವಿಷಯಗಳ ಬದಲು ಅಭಿವೃದ್ಧಿಯತ್ತ ಗಮನ ಹರಿಸಬೇಕು!(ಅಂತೆ) – ಸಮಾಜವಾದಿ ಪಕ್ಷ

ಮೊಘಲರ ವಂಶಜರ ಪಕ್ಷ ಎಂಬಂತೆ ವರ್ತಿಸುವ ಸಮಾಜವಾದಿ ಪಕ್ಷದಿಂದ ಇನ್ನೇನು ಅಪೇಕ್ಷಿಸಬಹುದು ? ಸಮಾಜವಾದಿ ಪಕ್ಷವು ‘ಉತ್ತರಪ್ರದೇಶದಲ್ಲಿ ಅಧಿಕಾರದಲ್ಲಿದ್ದಾಗ ಎಷ್ಟು ಅಭಿವೃದ್ಧಿ ಮಾಡಿದೆ ಎಂದು ಮೊದಲು ಹೇಳಬೇಕು ! ಯಾರಿಗೆ ರಾಷ್ಟ್ರ ಮತ್ತು ಧರ್ಮದ ಅಭಿಮಾನ ಇಲ್ಲವೋ ಅವರು ಯಾವಾಗಲೂ ಗುಲಾಮಗಿರಿಯಲ್ಲಿರುತ್ತಾರೆ ಎಂಬುದು ಸಮಾಜವಾದಿ ಪಕ್ಷ ತೋರಿಸಿ ಕೊಟ್ಟಿದೆ !

ಸರಕಾರವು ಮರುನಾಮಕರಣ ಮಾಡುವ ಬದಲು ಅಭಿವೃದ್ಧಿಯತ್ತ ಗಮನ ಹರಿಸಬೇಕು ಎಂದು ಸಮಾಜವಾದಿ ಪಕ್ಷದ ವಕ್ತಾರ ವಿವೇಕ ಸಿಲಾಸ ಇವರು ಮಹಂತ ನರೇಂದ್ರ ಗಿರಿ ಅವರ ಬೇಡಿಕೆಗೆ ಪ್ರತಿಕ್ರಿಯಿಸಿದ್ದಾರೆ.

‘ಧರ್ಮಗುರುಗಳು ಇಂತಹ ಬೇಡಿಕೆಗಳನ್ನು ಮಾಡಬಾರದು !'(ಅಂತೆ) – ಕಾಂಗ್ರೆಸ್

ಸಂವಿಧಾನವು ಎಲ್ಲರಿಗೂ ವಿಚಾರ ಸ್ವಾತಂತ್ರ್ಯವನ್ನು ನೀಡಿದೆ. ಆದ್ದರಿಂದ ಯಾವುದೇ ವ್ಯಕ್ತಿಯು ರಾಷ್ಟ್ರದ ವಿಷಯದಲ್ಲಿ ಬೇಡಿಕೆಗಳನ್ನು ಮಾಡಬಹುದು. ಕಾಂಗ್ರೆಸ್ಸಿಗರು ಮೊದಲು ಸಂವಿಧಾನವನ್ನು ಅಧ್ಯಯನ ಮಾಡಬೇಕು ಮತ್ತು ನಂತರ ಮಾತನಾಡಬೇಕು !

ಕಾಂಗ್ರೆಸ್ಸಿನ ವಕ್ತಾರ ಅಶೋಕ್ ಸಿಂಗ ಅವರು ಮಾತನಾಡಿ, ದೇಶವು ಸಂವಿಧಾನದ ಪ್ರಕಾರ ನಡೆಯುತ್ತದೆ ಹೊರತು ಧರ್ಮಗುರುಗಳ ಸಲಹೆಯ ಮೇರೆಗೆ ಅಲ್ಲ. ಅದು ಹಿಂದೂ, ಮುಸ್ಲಿಂ ಅಥವಾ ಇನ್ನಾವುದೇ ಧರ್ಮದ ಧರ್ಮಗುರು ಆಗಿರಲಿ. ಯಾವುದೇ ಧರ್ಮಗುರುಗಳು ಅಂತಹ ಹೇಳಿಕೆ ಅಥವಾ ಬೇಡಿಕೆಯನ್ನು ಮಾಡಬಾರದು ಎಂದು ಹೇಳಿದರು.