ಬುಲಂದಶಹರ (ಉತ್ತರ ಪ್ರದೇಶ) ನ ದೇವಾಲಯದ ಅರ್ಚಕನ ರುಂಡ ಕತ್ತರಿಸಿ ಹತ್ಯೆ !

ಉತ್ತರ ಪ್ರದೇಶದಲ್ಲಿ ಸಾಧುಗಳ, ಪುರೋಹಿತರು ಮತ್ತು ಹಿಂದುತ್ವನಿಷ್ಠರ ನಿರಂತರ ಹತ್ಯೆಯಾಗುವುದು ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ ! ಅವರನ್ನು ರಕ್ಷಿಸಲು ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕ್ರಮ ಕೈಗೊಳ್ಳಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

ಉತ್ತರ ಪ್ರದೇಶದಲ್ಲಿ ಸಾಧುಗಳು ಮತ್ತು ಪುರೋಹಿತರ ಕೊಲೆಗಳ ಸರಣಿ ನಡೆಯುತ್ತಿದೆ ಮತ್ತು ಇದು ಹಿಂದೂದ್ವೇಷಿಗಳ ಪೂರ್ವನಿಯೋಜಿತ ಸಂಚು ಇರುವ ಸಾಧ್ಯತೆಯ ಬಗ್ಗೆ ತನಿಖೆ ನಡೆಸುವ ಅವಶ್ಯಕತೆಯಿದೆ !

ಬುಲಂದಶಹರ (ಉತ್ತರ ಪ್ರದೇಶ) – ಇಲ್ಲಿಯ ಶಿಕಾರಪುರದಲ್ಲಿ ಅಶೋಕ ಕುಮಾರ ಎಂಬ ಪುರೋಹಿತನ ರುಂಡ ತುಂಡರಿಸಿ ಹತ್ಯೆ ಮಾಡಲಾಗಿದೆ. ಈ ಕಾರಣದಿಂದಗಿ, ಇಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದರಿಂದ ಇಲ್ಲಿ ಪೊಲೀಸರು ದೊಡ್ಡ ಭದ್ರತಾ ವ್ಯವಸ್ಥೆಯನ್ನು ನಿರ್ಮಿಸಿದ್ದಾರೆ. ಈ ದೇವಾಲಯವು ಆಚರು ಕಲಾ ಗ್ರಾಮದಲ್ಲಿದೆ ಮತ್ತು ಅಶೋಕ ಕುಮಾರ ಕಳೆದ ವಾರ ಇಲ್ಲಿ ಅರ್ಚಕರಾಗಿ ಬಂದಿದ್ದರು. ಮಾರ್ಚ್ ೨೮ ರ ರಾತ್ರಿ ಅವರನ್ನು ಹತ್ಯೆ ಮಾಡಲಾಯಿತು. ಮರುದಿನ ಬೆಳಿಗ್ಗೆ ಭಕ್ತರು ದೇವಸ್ಥಾನಕ್ಕೆ ಬಂದಾಗ ಅವರಿಗೆ ಮಾಹಿತಿ ಸಿಕ್ಕಿತು.

೪ ಗೋಹತ್ಯೆ

ಕೆಲವು ದಿನಗಳ ಹಿಂದೆ ಬುಲಂದಶಹರನ ನಿಖೋವ ಗ್ರಾಮದಲ್ಲಿ ಮಾವಿನ ತೋಟದಲ್ಲಿ ೪ ಹಸುಗಳನ್ನು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿತ್ತು. ಇದರ ನಂತರವೂ ಇಲ್ಲಿ ಉದ್ವಿಗ್ನತೆ ಉಂಟಾಗಿತ್ತು ನಂತರ ‘ಈಗ ಅರ್ಚಕನ ಹತ್ಯೆಯಾಗುವುದು ಇದರ ಹಿಂದೆ ಏನೋ ಒಂದು ಪಿತೂರಿ ಇದೆಯೇನು ಎಂಬ ಅನುಮಾನವು ವ್ಯಕ್ತವಾಗುತ್ತಿದೆ.