ಪೊಲೀಸ್ ದಳದ ‘ಸಜ್ಜನರ ರಕ್ಷಣೆ ಮತ್ತು ದುಷ್ಟರ ನಿಗ್ರಹ ಎಂಬ ಧ್ಯೇಯವಾಕ್ಯವನ್ನು ಪೊಲೀಸರು ಸಾರ್ಥಕಗೊಳಿಸುವರೇ ?

‘ಸಂತರಿಗೆ ಶಿಕ್ಷೆ, ದುಷ್ಟರಿಗೆ ರಕ್ಷೆ, ಇದು ಪೊಲೀಸ್ ದಳದ ಇಂದಿನ ಸ್ಥಿತಿಯಾಗಿದೆ !

ಕಳಪೆ ದರ್ಜೆಯ ಲೇಖನಸಾಮಗ್ರಿಗಳ ಕಾರಣದಿಂದ ಪೊಲೀಸರು ಭ್ರಷ್ಟಾಚಾರದಲ್ಲಿ ತೊಡಗುವುದು

ಪೊಲೀಸರ ಭ್ರಷ್ಟಾಚಾರಕ್ಕೆ ರಾಜಕಾರಣಿಗಳ ಮೂಕಸಮ್ಮತಿ !

ಸುರಾಜ್ಯ ಸ್ಥಾಪನೆಯ ಒಂದು ಅಂಗ : ಆದರ್ಶ ಪೊಲೀಸ್

ಪೊಲೀಸರ ಕುರಿತು ಓದಲು ಸಿಗುವ ವಾರ್ತೆಗಳು, ಅವರ ಚಲನಚಿತ್ರಗಳಲ್ಲಿ ತೋರಿಸಲಾಗುವ ಖಳನಾಯಕರ ಪಾತ್ರ ಇವುಗಳಿಂದಾಗಿ ಮತ್ತು ಅನೇಕ ಬಾರಿ ನಮ್ಮ ಅನುಭವಗಳಿಂದಾಗಿ ಪೊಲೀಸರಲ್ಲಿ ಮತ್ತು ಸಮಾಜದಲ್ಲಿ ಅಂತರವಿರುವುದು ಕಂಡುಬರುತ್ತದೆ. ನಿಜವಾಗಿ ನೋಡಿದರೆ ಇದು ಬದಲಾಗಬೇಕು. ಸಮಾಜ ಆದರ್ಶವಾಗಿದ್ದರೆ, ಪೊಲೀಸರು  ಆದರ್ಶರಾಗಿರುವರು ಮತ್ತು ಪೊಲೀಸರು ಆದರ್ಶರಾಗಿದ್ದರೆ, ಸಮಾಜವೂ ಆದರ್ಶದ ಕಡೆಗೆ ಹೊರಳುವುದು. ಹೀಗೆ ಈ ಪರಸ್ಪರಾವಲಂಬಿ ಚಿತ್ರವಿರುವುದರಿಂದ ಜಾಗೃತಿಗಾಗಿ ಈ ಲೇಖನವನ್ನು ಮುದ್ರಿಸುತ್ತಿದ್ದೇವೆ. – ಸಂಪಾದಕರು

‘ಭಾರತದಲ್ಲಿ ಮಹಾರಾಷ್ಟ್ರ ಪೊಲೀಸ್ ದಳವು ಮೂರನೇ ಕ್ರಮಾಂಕದ ಹಾಗೂ ಅತೀ ದೊಡ್ಡ ಪೊಲೀಸ್ ದಳವಿರುವ ರಾಜ್ಯವಾಗಿದೆ. ‘ಸದ್ರಕ್ಷಣಾಯ ಖಲನಿಗ್ರಹಣಾಯ (ಸಜ್ಜನರ ರಕ್ಷಣೆ ಮತ್ತು ದುಷ್ಟರ ನಿಗ್ರಹ) ಇದು ಮಹಾರಾಷ್ಟ್ರ ಪೊಲೀಸ್ ದಳದ ಧ್ಯೇಯವಾಕ್ಯವಾಗಿದೆ; ಆದರೆ ಈ ಧ್ಯೇಯವಾಕ್ಯದಂತೆ ಮಹಾರಾಷ್ಟ್ರದಲ್ಲಿ ಸಜ್ಜನರ ರಕ್ಷಣೆಯಾಗುತ್ತದೆಯೇ ? ಭೂತಕಾಲದ ಕೆಲವು ಘಟನೆಗಳನ್ನು ಮೆಲುಕು ಹಾಕಿದರೆ, ಅರಿವಾಗುವುದೇನೆಂದರೆ, ‘ಸಂತರಿಗೆ ಶಿಕ್ಷೆ ಹಾಗೂ ದುಷ್ಟರಿಗೆ ರಕ್ಷೆ, ಇದು ಪೊಲೀಸ್ ದಳದ ಸ್ಥಿತಿಯಾಗಿದೆ. ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋಗುವ ಜನಸಾಮಾನ್ಯರಿಗೆ ಏನೆಲ್ಲ ತೊಂದರೆಯಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದ್ದರಿಂದಲೇ ‘ಪೊಲೀಸ್ ಠಾಣೆಯ ಹಾಗೂ ನ್ಯಾಯಾಲಯದ ಮೆಟ್ಟಿಲು ಹತ್ತಬಾರದು, ಎಂಬುದು ಜನಸಾಮಾನ್ಯರ ಅಭಿಪ್ರಾಯವಾಗಿದೆ. ಹಾಗಾದರೆ ‘ಪೊಲೀಸ್ ದಳದ ಧ್ಯೇಯವಾಕ್ಯವನ್ನು ಪೊಲೀಸ್ ದಳವು ಸಾರ್ಥಕಪಡಿಸುತ್ತದೆಯೇ ?, ಎಂಬುದನ್ನು ವಿಚಾರ ಮಾಡಬೇಕು.

ಪೊಲೀಸ್ ದಳದಲ್ಲಿ ಅನೇಕ ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ, ನಿವೃತ್ತಿ ಹೊಂದಿರುವ ಒಬ್ಬ ಪೊಲೀಸ್ ಅಧಿಕಾರಿಯು ಪೊಲೀಸ್ ದಳದ ವಿಷಯದಲ್ಲಿ ಅನುಭವಿಸಿರುವುದನ್ನು ಅವರ ಮಾತುಗಳಲ್ಲಿಯೇ ಇಲ್ಲಿ ನೀಡಲಾಗಿದೆ. ಇಲ್ಲಿಯವರೆಗೆ ಪ್ರಕಟಪಡಿಸಲಾದ ಲೇಖನಗಳಲ್ಲಿ ನಾವು ಪೊಲೀಸರಿಗೆ ನೀಡಲಾಗುವ ತರಬೇತಿ, ಅದರಲ್ಲಾಗುವ ಭ್ರಷ್ಟಾಚಾರ; ಪೊಲೀಸ್ ಮುಖ್ಯಾಲಯದಲ್ಲಿ ಕೆಲಸಗಳ ಹಂಚಿಕೆಯಲ್ಲಾಗುವ ಭ್ರಷ್ಟಾಚಾರ; ಪೊಲೀಸ್ ಕಲ್ಯಾಣ ವಿಭಾಗದಲ್ಲಾಗುವ ಭ್ರಷ್ಟಾಚಾರ; ಕಾರ್ಯಾಲಯ ಸಹಕಾರಿ ಮತ್ತು ಮನೆಯ ಕೆಲಸಗಳ ಸಂದರ್ಭದಲ್ಲಿನ (ಹೌಸ್) ಸಹಕಾರಿ ಇವರ ನಿಯುಕ್ತಿಯಲ್ಲಾಗುವ ಭ್ರಷ್ಟಾಚಾರ ಮುಂತಾದ ಮಾಹಿತಿಗಳನ್ನು ಓದಿದೆವು. ಈ ವಾರದ ಅದರ ಅಂತಿಮ ಭಾಗವನ್ನು ನೀಡುತ್ತಿದ್ದೇವೆ.              (ಮುಕ್ತಾಯ)

೧೬. ಪೊಲೀಸ್ ಗೃಹನಿರ್ಮಾಣ ಸಂಸ್ಥೆಯಲ್ಲಿ ನಡೆದ ಭ್ರಷ್ಟಾಚಾರ !

ವರ್ಷ ೧೯೯೫-೯೬ ರಲ್ಲಿ ಸರಕಾರವು ಪೊಲೀಸರಿಗೆ ಕಡಿಮೆ ವೆಚ್ಚದಲ್ಲಿ ಸ್ವಂತ ಮನೆ ಸಿಗಬೇಕೆಂದು ೨ ಸ್ಥಳಗಳಲ್ಲಿ ‘ಪೊಲೀಸ್ ಗೃಹ ನಿರ್ಮಾಣ ಸಂಸ್ಥೆಗಳನ್ನು ಸ್ಥಾಪಿಸಿ ಪೊಲೀಸರನ್ನು ಸದಸ್ಯರನ್ನಾಗಿ ಮಾಡಿಕೊಂಡಿತು. ‘ಪೊಲೀಸ್ ಉಪ-ಆಯುಕ್ತ ಹುದ್ದೆಯ ಅಧಿಕಾರಿಯನ್ನು ಈ ಸಂಸ್ಥೆಯ ವಕ್ತಾರರನ್ನಾಗಿ ನೇಮಿಸಿದ್ದರು. ಅವರು ಆ ಸಮಯದಲ್ಲಿ ಪೊಲೀಸ್ ಸದಸ್ಯರಿಂದ ಆಗ ಪ್ರಚಲಿತವಿದ್ದ ದರದಲ್ಲಿ ಹಣವನ್ನು ಸಂಗ್ರಹಿಸಿದರು. ಸರಕಾರದಿಂದ ಎಲ್ಲ ಅನುಮತಿಗಳನ್ನು ಪಡೆದುಕೊಳ್ಳಲು ಸಾಕಷ್ಟು ಸಮಯವನ್ನು ತೆಗೆದುಕೊಂಡರು. ವಿಳಂಬವಾದರೂ ಕೆಲವು ಪೊಲೀಸ್ ಸದಸ್ಯರ ಮೊದಲ ಗೃಹನಿರ್ಮಾಣ ಸಂಸ್ಥೆ ಸ್ಥಾಪಿಸಲ್ಪಟ್ಟಿತು ಮತ್ತು ಅವರಿಗೆ ಮನೆಗಳನ್ನು ಕೊಡಲಾಯಿತು. ಆದರೆ ಆ ಕಟ್ಟಡಗಳ ಕಾಮಗಾರಿ ಕಳಪೆ ದರ್ಜೆಯದಾಗಿತ್ತು. ಹಾಗೆಯೇ ಆವಶ್ಯಕವಿರುವ ಎಲ್ಲ ಸೌಕರ್ಯಗಳನ್ನು ಪೂರೈಸಿರಲಿಲ್ಲ. ಆದುದರಿಂದ ಕೆಲವು ಸದಸ್ಯರು ತಮ್ಮ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಕೋರಿ ಮನವಿ ಅರ್ಜಿಯನ್ನು ಸಲ್ಲಿಸಿದರು. ಅವರಿಗೆ ಅವರ ಹಣವನ್ನು ಮರಳಿ ಪಡೆಯಲು ಸಂಸ್ಥೆಯ ಕಾರ್ಯಾಲಯಕ್ಕೆ ಬಹಳಷ್ಟು ಸಲ ಓಡಾಡಬೇಕಾಯಿತು. ಸಂಸ್ಥೆಯು ನೀಡಿದ ಕೆಲವರ ಚೆಕ್‌ಗಳು ‘ಬೌನ್ಸ್ ಆದವು. ಘಾಟಕೋಪರ ಪೂರ್ವ ಭಾಗದಲ್ಲಿ ಎರಡನೇಯ ಗೃಹ ನಿರ್ಮಾಣ ಸ್ಥಾಪನೆಯಲ್ಲಿ ಭ್ರಷ್ಟಾಚಾರ ನಡೆದಿದ್ದರಿಂದ ವಕ್ತಾರರ ವಿರುದ್ಧ ಮುಂಬಯಿಯ ಪಂತನಗರ ಪೊಲೀಸ್ ಠಾಣೆಯಲ್ಲಿ ದೂರು ನೊಂದಾಯಿಸಲಾಯಿತು.

ಒಂದು ನಿಯೋಜಿತ ಗೃಹನಿರ್ಮಾಣ ಸಂಸ್ಥೆಯಲ್ಲಿ ೧೦ ಸಾವಿರ ಪೊಲೀಸರಿಗೆ ಕಡಿಮೆ ವೆಚ್ಚದಲ್ಲಿ ತಮ್ಮ ಹಕ್ಕಿನ ಮನೆಯನ್ನು ನೀಡಲು ವರ್ಷ ೨೦೧೧ ರಿಂದ ಸದಸ್ಯತ್ವವನ್ನು ನೀಡಲಾಯಿತು. ಇಂದಿಗೂ ಸದರಿ ಸಂಸ್ಥೆಯಲ್ಲಿ ಮೇಲಿಂದ ಮೇಲೆ ಸಭೆಗಳು ನಡೆದರೂ ಕಳೆದ ೯ ವರ್ಷಗಳಾದರೂ ಗೃಹನಿರ್ಮಾಣ ಪೂರ್ಣಗೊಂಡಿಲ್ಲ. ಇಲ್ಲಿಯೂ ಪೊಲೀಸರು ಸಾಲ ಪಡೆದು ಹಣ ತುಂಬಿದ್ದಾರೆ. ಸೇವಾ ನಿವೃತ್ತಿಯ ಬಳಿಕ ತಮ್ಮ ಸ್ವಂತದ ಮನೆ ಸಿಗುವ ನಿರೀಕ್ಷೆಯಲ್ಲಿರುವ  ಪೊಲೀಸರು ತಮ್ಮ ಕನಸಾದ ಸ್ವಂತ ಮನೆಯಿಂದ ವಂಚಿತರಾಗಬೇಕಾಗಿದೆ.

೧೭. ಸರಕಾರದಿಂದ ಲೇಖನಸಾಮಾಗ್ರಿಗಳ ಪೂರೈಕೆಯಾಗದೇ ಇರುವುದರಿಂದ ಪೊಲೀಸರು ಭ್ರಷ್ಟಾಚಾರದಲ್ಲಿ ತೊಡಗುವುದು

ಕೆಲವು ಪ್ರಕರಣಗಳಲ್ಲಿ ಸರಕಾರದ ಧ್ಯೇಯ ಧೋರಣೆಗಳ ಕಾರಣದಿಂದಲೂ ಪೊಲೀಸರು ಭ್ರಷ್ಟಾಚಾರದಲ್ಲಿ ತೊಡಗಿರುವುದು ಗಮನಕ್ಕೆ ಬಂದಿದೆ, ಉದಾ. ಸರಕಾರದಿಂದ ದೈನಂದಿನ ‘ಸ್ಟೇಶನರಿ ಪೂರೈಕೆಯಾಗುವುದಿಲ್ಲ ಅಥವಾ ಪೂರೈಸಿದ ‘ಸ್ಟೇಶನರಿ ಕಳಪೆ ಗುಣಮಟ್ಟದ್ದಾಗಿರುತ್ತವೆ. ‘ಜೆರಾಕ್ಸ್ ಮಶೀನ, ಗಣಕಯಂತ್ರ ಮತ್ತು ಕಾಗದಗಳ ಅಭಾವವಿರುತ್ತದೆ. ಕೆಲವು ಯಂತ್ರಗಳು ಹಳೆಯ ದಾಗಿರುತ್ತವೆ.   ಯಾವುದಾದರೊಂದು ಪ್ರಕರಣದ ಕುರಿತು ಸರಕಾರಕ್ಕೆ ವರದಿಯನ್ನು ಕಳುಹಿಸಲು (‘ಗಡಿಪಾರು ಶಿಕ್ಷೆ, ಮೊಕ್ಕಾ ಕಾಯ್ದೆ, ಕೋರ್ಟಿನ ಪತ್ರವ್ಯವಹಾರ) ಭಾಷಾಂತರಕಾರರ ಆವಶ್ಯಕತೆಯಿರುತ್ತದೆ. ಕೆಲವು ಸರಕಾರಿ ಇಲಾಖೆಗಳಿಂದ ಅನುಮೋದನೆ ಪಡೆಯಲು ಪೊಲೀಸರು ಅವರಿಗೆ ಹಣ ಕೊಡಬೇಕಾಗುತ್ತದೆ. ಈ ವೆಚ್ಚವನ್ನು ಸಹ ಪೊಲೀಸರು ತಮ್ಮ ಸ್ವಂತ ಹಣದಿಂದ ನೀಡಬೇಕಾಗುತ್ತದೆ. ಒಂದು ಅಪರಾಧ ನಡೆದರೆ, ಆ ವಿಷಯದಲ್ಲಿ ೧೦-೧೨ ಕಾಗದಗಳ ೧ ಕಟ್ಟು ಹೀಗೆ ೫-೧೦ ಕಟ್ಟುಗಳನ್ನು ಮಾಡಿ ವರಿಷ್ಠ ಕಚೇರಿಗೆ ಕಳುಹಿಸಬೇಕಾಗುತ್ತದೆ. ಇಷ್ಟು ‘ಸ್ಟೇಶನರಿ ಸರಕಾರದಿಂದ ಉಪಲಬ್ಧ ವಾಗುವುದಿಲ್ಲ. ಆದುದರಿಂದ ಈ ಖರ್ಚಿಗಾಗಿ ಪೊಲೀಸರು ಯಾರನ್ನಾದರೂ ‘ಬಲಿಪಶು ಮಾಡುತ್ತಾರೆ. ಯಾವಾಗ ಪೊಲೀಸರಿಗೆ ಅಪರಾಧಗಳ ತಪಾಸಣೆಗಾಗಿ ಇತರ ರಾಜ್ಯಗಳಿಗೆ ಅಥವಾ ಜಿಲ್ಲೆಗಳಿಗೆ ಹೋಗಬೇಕಾಗುತ್ತದೆಯೋ ಆಗ ಪ್ರವಾಸಕ್ಕಾಗಿ ಅವರಿಗೆ ಹಣ ಕೊಡಲಾಗುತ್ತದೆ. ಆದರೆ ಅಲ್ಲಿ ಕೆಲವು ದಿನಗಳ ವರೆಗೆ ವಾಸ್ತವ್ಯವಿರಬೇಕಾದಾಗ ಅವರ ಸ್ವಂತ ಹಣ ಖರ್ಚಾಗುತ್ತದೆ. ಆ ಹಣ ಯಾವತ್ತೂ ಸಮಯಕ್ಕೆ ಸರಿಯಾಗಿ ಅವರಿಗೆ ಮರುಪಾವತಿಯಾಗುವುದಿಲ್ಲ  ಅಥವಾ ಮುಂಗಡಹಣವನ್ನು ಕೊಟ್ಟರೂ ಅದೂ ಬಹಳ ಕಡಿಮೆಯಿರುತ್ತದೆ.

೧೮. ಪೊಲೀಸ್ ಇಲಾಖೆಯ ಭ್ರಷ್ಟಾಚಾರಕ್ಕೆ ರಾಜಕಾರಣಿಗಳ ಮೂಕಸಮ್ಮತಿ !

ಪೊಲೀಸ್ ಇಲಾಖೆಯಲ್ಲಿ ನಡೆಯುವ ಭ್ರಷ್ಟಾಚಾರಕ್ಕೆ ರಾಜಕಾರಣಿಗಳು ಮೂಕ ಸಮ್ಮತಿ ನೀಡುತ್ತಾರೆ. ರಾಜಕಾರಣಿಗಳು ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳಿಂದ ಹಣ ಪಡೆದು ಅವರ ವರ್ಗಾವಣೆಗಳನ್ನು ಮಾಡುತ್ತಾರೆ. ಈ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳು ತಮ್ಮ ಕೈಕೆಳಗಿರುವ ಪೊಲೀಸ್ ಅಧಿಕಾರಿಗಳಿಂದ ಹಣ ಪಡೆದು ಅವರ ವರ್ಗಾವಣೆ ಮಾಡುತ್ತಾರೆ.

ಈ ರೀತಿ ಈ ಭ್ರಷ್ಟಾಚಾರದ ಸರಪಳಿ ಭ್ರಷ್ಟ ರಾಜಕಾರಣಿಗಳಿಂದ ಕೆಳಗಿನವರೆಗೆ ಅವ್ಯಾಹತವಾಗಿ ನಡೆದಿರುತ್ತದೆ. ಈ ಇಲಾಖೆಯ ಭ್ರಷ್ಟಾಚಾರಕ್ಕೆ ಭ್ರಷ್ಟ ರಾಜಕಾರಣಿಗಳು, ಉದ್ಧಟ ಜನರು ಮತ್ತು ಭ್ರಷ್ಟ ಪೊಲೀಸರು ಜವಾಬ್ದಾರರಾಗಿದ್ದಾರೆ. ಕೆಲವು ವರ್ಷಗಳ ಹಿಂದೆ ಬಂದಿದ್ದ ‘ಝೆಂಡಾ ಚಲನಚಿತ್ರದಲ್ಲಿ ಈ ವಿಷಯದ ನೈಜ ಚಿತ್ರಣವನ್ನು ತೋರಿಸಲಾಗಿತ್ತು. ಅನೇಕ ಚಲನಚಿತ್ರಗಳಲ್ಲಿ ಸದ್ಯದ ಈ ಸ್ಥಿತಿಯನ್ನು ತೋರಿಸಲಾಗುತ್ತದೆ, ಏಕೆಂದರೆ ವಾಸ್ತವದಲ್ಲಿ ಸಹ ಇದೇ ಸ್ಥಿತಿ ಇದೆ.

೧೮ ಅ. ಪ್ರಾಮಾಣಿಕ ಮತ್ತು ಕರ್ತವ್ಯದಕ್ಷ ಅಧಿಕಾರಿಗಳು ರಾಜಕಾರಣಿಗಳಿಗೆ ಬೇಡವಾಗಿರುವುದು : ಪೊಲೀಸ್ ಇಲಾಖೆಯಲ್ಲಿ ಹಗಲೂ ರಾತ್ರಿ ತನಿಖೆ ನಡೆಸಿ ನಿಜವಾದ ಆರೋಪಿಗಳಿಗೆ ಶಿಕ್ಷೆಯಾಗುವವರೆಗೆ ಬೆಂಬತ್ತಿ ಕಾರ್ಯನಿರ್ವಹಿಸುವ ಅಧಿಕಾರಿಗಳೂ ಇರುತ್ತಾರೆ. ಅವರು ಬಹಳ ಪ್ರಾಮಾಣಿಕವಾಗಿರುತ್ತಾರೆ; ಆದರೆ ನಿಜವಾಗಿ ಪ್ರಾಮಾಣಿಕತನದಿಂದ ಕಾರ್ಯನಿರ್ವಹಿಸುವ ಕರ್ತವ್ಯದಕ್ಷ ಅಧಿಕಾರಿಗಳು ರಾಜಕಾರಣಿಗಳಿಗೆ ಬೇಡವಾಗಿರುತ್ತಾರೆ. ಅವರನ್ನು ಮೇಲಿಂದ ಮೇಲೆ ವರ್ಗಾವಣೆ ಮಾಡಲಾಗುತ್ತದೆ. ಉದಾ : ಮಹಾರಾಷ್ಟ್ರದಲ್ಲಿನ ಶ್ರೀ. ಅರವಿಂದ ಇನಾಮದಾರ, ಶ್ರೀ. ಸಂಜಯ ಪಾಂಡೆ, ವಾಬಳೆ ಇತ್ಯಾದಿ.

೧೯. ಪ್ರಾಮಾಣಿಕ ಮತ್ತು ಪಾರದರ್ಶಕ ಕಾರ್ಯವನ್ನು ಮಾಡುವ ಅಧಿಕಾರಿಗಳ, ಸಿಬ್ಬಂದಿಗಳನ್ನು ಹೀಯಾಳಿಸುವುದು ಮತ್ತು ಮಾನಹಾನಿಯನ್ನು ಮಾಡಲಾಗುತ್ತದೆ

ಯಾವುದಾದರೊಬ್ಬ ಸಜ್ಜನ, ಪ್ರಾಮಾಣಿಕ ಪೊಲೀಸ್ ಭ್ರಷ್ಟಾಚಾರದ ಹಣವನ್ನು ತೆಗೆದುಕೊಳ್ಳದಿದ್ದರೆ, ಅವನಿಗೆ ‘ಏನಪ್ಪಾ, ಜಮೀನ್ದಾರನಾಗಿದ್ದೀಯೇನು?, ‘ನೀನು ಅಷ್ಟು ಶ್ರೀಮಂತನಾಗಿದ್ದರೆ ಪೊಲೀಸ್ ಇಲಾಖೆಯಲ್ಲಿ ಏಕೆ ಕೆಲಸ ಮಾಡುತ್ತೀಯಾ ? ಎಂದು ಹೇಳಿ ಆ ಪೊಲೀಸ್ ಪೇದೆಯನ್ನು ಹೀಯಾಳಿಸುವ ಪೊಲೀಸ್ ಅಧಿಕಾರಿಗಳೂ ಇದ್ದಾರೆ. ‘ನಿನ್ನಿಂದ ನಮಗೆ ನಷ್ಟವಾಗುತ್ತದೆ. ನಡೆದು ಬಂದ ಲಕ್ಷ್ಮಿಯನ್ನು ನೀನು ಒದೆಯುತ್ತೀಯಾ, ಎಂದೂ ಹೇಳುತ್ತಾರೆ.

ಭ್ರಷ್ಟಾಚಾರದಿಂದ ಸಿಕ್ಕಿರುವ ಸಂಪತ್ತಿಗೆ ಭ್ರಷ್ಟ ಪೊಲೀಸರು ‘ಲಕ್ಷ್ಮೀ ಎನ್ನುತ್ತಾರೆ, ಅಂದರೆ ಒಂದು ರೀತಿಯಲ್ಲಿ ದೇವರಿಗೆ ಅಗೌರವ ತೋರಿಸಿ ಪಾಪವನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಭ್ರಷ್ಟಾಚಾರ ಮಾಡದಿರುವ ಪೊಲೀಸ್ ಪೇದೆಯು ‘ನೀರಿನಲ್ಲಿದ್ದು ತಿಮಿಂಗಿಲಗಳೊಂದಿಗೆ ವೈರತ್ವ ಬೇಡ ಎಂದುಕೊಂಡು ಶಾಂತ ವಾಗಿರುತ್ತಾನೆ ಮತ್ತು ಪ್ರಾಮಾಣಿಕವಾಗಿ ನೌಕರಿ ಮಾಡುತ್ತಾನೆ. ಇಂದಿಗೂ ಇಂತಹ ನಿಷ್ಕಳಂಕ ಅಧಿಕಾರಿಗಳು ಮತ್ತು ನೌಕರರು ಸಹ ಇಲಾಖೆಯಲ್ಲಿದ್ದಾರೆ. ಆದರೆ ಅವರು ಕೈಬೆರಳೆಣಿಕೆಯಷ್ಟು ಮಾತ್ರ ಇದ್ದಾರೆ.

(ಬೇರೆ ರಾಜ್ಯಗಳ (ಉದಾ. ಕರ್ನಾಟಕ) ಪೊಲೀಸ್ ದಳದ ಸ್ಥಿತಿಯೂ ಸಹ ಹೆಚ್ಚು-ಕಡಿಮೆ ಹೀಗೇ ಇದೆ, ಮಹಾರಾಷ್ಟ್ರ ಕೇವಲ ಒಂದು ಉದಾಹರಣೆ ಮಾತ್ರ, ಅಷ್ಟೇ – ಸಂಕಲನಕಾರರು) (ಮುಕ್ತಾಯ) –

ಓರ್ವ ನಿವೃತ್ತ ಪೊಲೀಸ್ ಅಧಿಕಾರಿ


ಗೊತ್ತಿರುವ ಕೆಲವು ಒಳ್ಳೆಯ ಪೊಲೀಸ ಅಧಿಕಾರಿಗಳು

೧. ಶಿಸ್ತು ಮತ್ತು ಸ್ವಚ್ಛ ಹಾಗೂ ಪಾರದರ್ಶಕ ಪೊಲೀಸ್ ಅಧಿಕಾರಿ ಸಂಜಯ ಪಾಂಡೆ

ಶ್ರೀ. ಸಂಜಯ ಪಾಂಡೆ

ಶ್ರೀ. ಸಂಜಯ ಪಾಂಡೆ ವರ್ಷ ೧೯೮೭ ರ ಬ್ಯಾಚಿನ ಶ್ರೀ. ಸಂಜಯ ಪಾಂಡೆ ಹೆಸರಿನ ಓರ್ವ ಐ.ಪಿ.ಎಸ್. ಅಧಿಕಾರಿಗಳಿದ್ದರು. ಅವರು ಸಾಮಾನ್ಯ ನೌಕರರ ದೂರುಗಳನ್ನು ಕೇಳುತ್ತಿದ್ದರು. ಅವರ ತೊಂದರೆಗಳನ್ನು ಅರಿತುಕೊಳ್ಳುತ್ತಿದ್ದರು. ರಾಜಕಾರಣಿಗಳು ಮತ್ತು ಆಡಳಿತಾಧಿಕಾರಿಗಳ ಕಾನೂನುಬಾಹಿರ ಕೃತಿಗಳನ್ನು ಸಹಿಸುತ್ತಿರಲಿಲ್ಲ. ಪ್ರಾರಂಭದ ೧೫ ವರ್ಷದ ಸೇವೆಯ ಕಾಲಾವಧಿಯಲ್ಲಿ ಅವರನ್ನು ೧೪ ಸಲ ವರ್ಗಾಯಿಸಲಾಯಿತು (ಟ್ರಾನ್ಸಫರ್). ಅವರು ಶಿಸ್ತು, ಸ್ವಚ್ಛ (ಭ್ರಷ್ಟಾಚಾರ ಮಾಡದಿರುವ) ಮತ್ತು ಪಾರದರ್ಶಕವಾಗಿ ಕೆಲಸ ಮಾಡುವ ಅಧಿಕಾರಿಯಾಗಿದ್ದರು. ಅದೇ ರೀತಿ ಇತ್ತೀಚೆಗಷ್ಟೇ ಸಹಾಯಕ ಪೊಲೀಸ್ ಆಯುಕ್ತರ ಹುದ್ದೆಯಿಂದ ನಿವೃತ್ತರಾಗಿರುವ ಶ್ರೀ. ಸಂಜಯ ಬುಣಗೆ, ಶ್ರೀ. ವಾಬಳೆ, ಶ್ರೀ. ಭುಜಬಳ ಮುಂತಾದ ಸ್ವಚ್ಛ ಮತ್ತು ಪಾರದರ್ಶಕ ಕಾರ್ಯವನ್ನು ನಿರ್ವಹಿಸುವ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳೂ ಇಲಾಖೆಯಲ್ಲಿದ್ದರು. ಕೆಲವರು ಇಂದಿಗೂ ಇದ್ದಾರೆ.

೨. ಕೇವಲ ೧ ರೂಪಾಯಿ ವೇತನವನ್ನು ಪಡೆಯುವ ಮತ್ತು ಪೊಲೀಸ್ ನೌಕರರ ಹಿತವನ್ನು ಕಾಪಾಡುವ ಪೊಲೀಸ್ ಆಯುಕ್ತ ಅಹ್ಮದ್ ಜಾವೇದ !

ಶ್ರೀ.ಅಹ್ಮದ್ ಜಾವೇದ

ಓರ್ವ ಐ.ಪಿ.ಎಸ್. ಅಧಿಕಾರಿ ಅಹ್ಮದ್ ಜಾವೇದ ಇವರು ಮುಂಬಯಿ ಪೊಲೀಸ್ ಆಯುಕ್ತರಾಗಿದ್ದರು. ಅವರು ಸರಕಾರದಿಂದ ಕೇವಲ ೧ ರೂಪಾಯಿ ಸಂಬಳವನ್ನು ಪಡೆಯುತ್ತಿದ್ದರು. ಇನ್ನುಳಿದ ವೇತನವನ್ನು ಅವರು ಪೊಲೀಸ್ ಕಲ್ಯಾಣನಿಧಿಗೆ ನೀಡುತ್ತಿದ್ದರು. ಅವರು ಸಾಮಾನ್ಯ ನೌಕರರ ಹಿತವನ್ನು ನೋಡುತ್ತಿದ್ದರು. ಪೊಲೀಸರ ಕುಟುಂಬದವರ ಕಲ್ಯಾಣಕ್ಕಾಗಿ ಅವರ ಕಾಲಾವಧಿಯಲ್ಲಿ ವಿವಿಧ ಯೋಜನೆಗಳನ್ನು ಕೂಡ ಪ್ರಾರಂಭಿಸಿದ್ದರು. ಜಾವೇದಸಾಹೇಬರು ವರ್ಷ ೧೯೮೦ ರ ‘ಬ್ಯಾಚಿನ ಐ.ಪಿ.ಎಸ್. ಅಧಿಕಾರಿಯಾಗಿದ್ದರು. ಅವರು  ಉತ್ತರಪ್ರದೇಶದ ನವಾಬ ಮನೆತನದವರಾಗಿದ್ದು, ಕೇವಲ ದೇಶಸೇವೆಯೆಂದು ನೌಕರಿಯನ್ನು ಮಾಡುತ್ತಿದ್ದರು. ಅವರ ಮನೆಯಲ್ಲಿ ಯಾರೂ ನೌಕರಿಯನ್ನು ಮಾಡುತ್ತಿರಲಿಲ್ಲ. ಜಾವೇದಸಾಹೇಬರು ಸೇವೆಯಲ್ಲಿರುವಾಗ ಖಾಸಗಿ ಕೆಲಸಕ್ಕಾಗಿ ಯಾವತ್ತೂ ಸರಕಾರಿ ವಾಹನವನ್ನು ಉಪಯೋಗಿಸಲಿಲ್ಲ. ೩೬ ವರ್ಷಗಳ ವರೆಗೆ ನೌಕರಿಯನ್ನು ಮಾಡಿ ಅವರು ಸೇವಾ ನಿವೃತ್ತರಾದರು.

೩. ಪೊಲೀಸ್ ಇಲಾಖೆಯ ಕರ್ತವ್ಯನಿಷ್ಠ ಮತ್ತು ಪಾರದರ್ಶಕ ಪೊಲೀಸ್ ಅಧಿಕಾರಿ ಮತ್ತು ಇತರ ನೌಕರರು !

ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಸಿಪಾಯಿ ಸಮವಸ್ತ್ರ ದಲ್ಲಿರುವಾಗ ಟೊಪ್ಪಿಗೆಯನ್ನು ಹಾಕಿಲ್ಲವೆಂದು ‘ಗಿಡಕ್ಕೆ ನೂರು ಸಲ ಸೆಲ್ಯೂಟ್ ಮಾಡಲು ಹೇಳಿ ಶಿಸ್ತು ಕಲಿಸುವ ಮತ್ತು ಅವರನ್ನು ಅಂತಃಕರಣದಿಂದ ಪ್ರೀತಿಸುವ ಶ್ರೀ. ಅರವಿಂದ ಇನಾಮದಾರರಂತಹ ಸ್ವಚ್ಛ ಚಾರಿತ್ರ್ಯ, ಕರ್ತವ್ಯನಿಷ್ಠ ಮತ್ತು ಪಾರದರ್ಶಕ ಕಾರ್ಯವನ್ನು ನಿರ್ವಹಿಸುವ  ಉನ್ನತ ಪೊಲೀಸ್ ಅಧಿಕಾರಿಗಳೂ ಆಗಿ ಹೋಗಿದ್ದಾರೆ. ಎಲ್ಲ ಅಧಿಕಾರಿಗಳು ಮತ್ತು ಪೊಲೀಸರು ಕೆಲಸಗಳ್ಳರು ಮತ್ತು ಭ್ರಷ್ಟರಾಗಿರುವುದಿಲ್ಲ ಇಲಾಖೆಗಾಗಿ ಪ್ರಾಮಾಣಿಕತನದಿಂದ ಹಗಲು-ರಾತ್ರಿ ಕಷ್ಟಪಡುವ ಅನೇಕ ಹಿರಿಯ ಅಧಿಕಾರಿಗಳು ಮತ್ತು ಪೊಲೀಸರು ಈಗಲೂ ಇದ್ದಾರೆ; ಆದರೆ ನರಿಬುದ್ಧಿಯ ಮತ್ತು ಕೆಲಸಗಳ್ಳ ಪೊಲೀಸ್ ಅಧಿಕಾರಿ ಹಾಗೂ ನೌಕರರ ಕಾರಣದಿಂದ ಇತರ ಪೊಲೀಸರ ಗೌರವವೂ ಮಲಿನಗೊಳ್ಳುತ್ತಿದೆ.

೪. ಜನರಿಗೆ ಸಹಾಯ ಮಾಡುವ ಮತ್ತು ಮನುಷ್ಯತ್ವವಿರುವ ಪೊಲೀಸರು !

ಜನರ ಸೇವೆಯನ್ನು ಮಾಡುವ ಪೊಲೀಸ್ ಅಧಿಕಾರಿಗಳೂ ಇದ್ದಾರೆ. ಇಂತಹ ಅಧಿಕಾರಿಗಳು ತಮ್ಮ ಸ್ವಂತ ಹಣವನ್ನು ವೆಚ್ಚಮಾಡಿ ಅನಾಥ ಮೃತದೇಹಗಳ ಅಂತಿಮ ಸಂಸ್ಕಾರವನ್ನು ಮಾಡುತ್ತಾರೆ ಮತ್ತು ಮರಣದ ಬಳಿಕ ಮಾಡಬೇಕಾದ ಅವರ ಕ್ರಿಯಾಕರ್ಮ ಗಳನ್ನೂ ಮಾಡುತ್ತಾರೆ. ಈ ಮೊದಲು ಸರಕಾರದಿಂದ ಇಂತಹ ಮೃತದೇಹಗಳ ಅಗ್ನಿಸಂಸ್ಕಾರ ಮಾಡಲು ಸ್ವಲ್ಪ ಸಹಾಯ ದೊರಕುತ್ತಿತ್ತು. (ಆ ಕಾಲದಲ್ಲಿ ಕೇವಲ  ೨೫೦ ರೂಪಾಯಿಗಳು ಮಾತ್ರ ಸಿಗುತ್ತಿದ್ದವು ಮತ್ತು ಈಗ ೧೫೦೦ ರೂಪಾಯಿಗಳು ಸಿಗುತ್ತವೆ.

ಇಂತಹ ಸಮಯದಲ್ಲಿ ಈ ಪೊಲೀಸ್ ಅಧಿಕಾರಿಗಳು ತಾವಾಗಿಯೇ ಎಲ್ಲ ವೆಚ್ಚವನ್ನು ಮಾಡುತ್ತಿದ್ದರು. ಅಪಘಾತದಲ್ಲಿ ಗಾಯಗೊಂಡ ರೋಗಿಗಳಿಗೆ ಸ್ವತಃ ವೆಚ್ಚ ಮಾಡುವ ಅಧಿಕಾರಿಗಳನ್ನು ನಾನು ಕಣ್ಣಾರೆ ಕಂಡಿದ್ದೇನೆ. ಮರಣ ಹೊಂದಿದವರ ಸಂಬಂಧಿಕರಿಂದ ಹಣವನ್ನು ಪಡೆಯುವ ಅಧಿಕಾರಿಗಳನ್ನೂ ನಾನು ನೋಡಿದ್ದೇನೆ. ಕರ್ಮಸಿದ್ಧಾಂತಕ್ಕನುಸಾರ ಇಂತಹ ಪೊಲೀಸ್ ಅಧಿಕಾರಿಗಳ ಅವನತಿಯನ್ನೂ ಸಹ ನಾನು ನೋಡಿದ್ದೇನೆ.

– ಓರ್ವ ನಿವೃತ್ತ ಪೊಲೀಸ್

ಸಾಧಕರಿಗೆ ಸೂಚನೆ ಮತ್ತು ವಾಚಕರಲ್ಲಿ ಮತ್ತು ಹಿತಚಿಂತಕರಲ್ಲಿ ವಿನಂತಿ !

ಪೊಲೀಸರು ಮತ್ತು ಆಡಳಿತವರ್ಗದವರ ವಿಷಯದಲ್ಲಿ ಬರುವ ಕಹಿ ಅನುಭವವನ್ನು ತಿಳಿಸಿರಿ !

ಇಲ್ಲಿ ಲೇಖನದಲ್ಲಿ ನೀಡಿದಂತೆ ಅಥವಾ ಪೊಲೀಸ್-ಆಡಳಿತದಲ್ಲಿ ಸಿಪಾಯಿ ಅಥವಾ ಅಧಿಕಾರಿಗಳ ಕುರಿತು ಕಹಿ ಅನುಭವ ಬಂದಿದ್ದರೆ ಅದನ್ನು ಮುಂದೆ ಕೊಡಲಾದ ವಿಳಾಸಕ್ಕೆ ಕಳುಹಿಸಬೇಕು. ಪೊಲೀಸರು ಮತ್ತು ಆಡಳಿತವು ಹೇಗಿರಬಾರದು ಎಂದು ಗಮನಕ್ಕೆ ಬರಬೇಕು, ಸಂಬಂಧಿತ ಸಿಬ್ಬಂದಿ/ಅಧಿಕಾರಿಗಳಿಗೆ ಅವರ ಅಯೋಗ್ಯ ಕೃತ್ಯಗಳ ಅರಿವಾಗಿ ಅವರು ಅದರಲ್ಲಿ ಸುಧಾರಣೆಗಳನ್ನು ಮಾಡಿಕೊಳ್ಳಬೇಕು ಮತ್ತು ನಾಗರಿಕರು ತಮ್ಮ ರಾಷ್ಟ್ರಕರ್ತವ್ಯವೆಂದು ಇಂತಹ ವಿಷಯಗಳನ್ನು ದುರ್ಲಕ್ಷಿಸದೇ ಅವುಗಳನ್ನು ಸುಧಾರಿಸಲು ಪ್ರಯತ್ನಿಸಬೇಕು, ಸಮಯ ಬಂದಾಗ ಇದರ ವಿರುದ್ಧ ದೂರು ನೀಡಬೇಕು, ಎಂಬುದಕ್ಕಾಗಿ ಈ ಲೇಖನ ನೀಡಲಾಗಿದೆ.

ವಿಳಾಸ : ನ್ಯಾಯವಾದಿ ನೀಲೇಶ ಸಾಂಗೋಲಕರ

C/o ಸನಾತನ ಆಶ್ರಮ, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ.

ಸಂಪರ್ಕ ಕ್ರಮಾಂಕ : 9595984844

ವಿ-ಅಂಚೆ ವಿಳಾಸ : [email protected]