ರಾತ್ರಿ ೧೦ ರಿಂದ ಬೆಳಗ್ಗೆ ೬ ರ ವರೆಗೆ ದರ್ಗಾ ಮತ್ತು ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಹಾಕಬಾರದು ! – ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್‌ನಿಂದ ಸುತ್ತೋಲೆ

ಇದರಲ್ಲಿ ಸುತ್ತೋಲೆ ಹೊರಡಿಸುವುದೇನಿದೆ ? ಇದು ಸರ್ವೋಚ್ಚ ನ್ಯಾಯಾಲಯದ ನಿಯಮವಾಗಿದೆ. ಇದನ್ನು ದರ್ಗಾಗಳು ಮತ್ತು ಮಸೀದಿಗಳು ಅನುಸರಿಸದಿದ್ದರೆ, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೋರ್ಡ್ ಪೊಲೀಸರಲ್ಲಿ ಹೇಳಬೇಕು ! ಅಲ್ಲದೆ, ಈ ನಿಯಮಗಳನ್ನು ಪಾಲಿಸದ ದರ್ಗಾ ಮತ್ತು ಮಸೀದಿಗಳ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳದಿದ್ದರೆ, ಇಂತಹ ಕಿವುಡ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು !

ಬೆಂಗಳೂರು – ರಾಜ್ಯದಲ್ಲಿ ಶಬ್ದ ಮಾಲಿನ್ಯದ ಸಮಸ್ಯೆಯನ್ನು ನಿಗ್ರಹಿಸಲು ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ದರ್ಗಾ ಮತ್ತು ಮಸೀದಿಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸುವ ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆಯ ಪ್ರಕಾರ, ರಾಜ್ಯದ ದರ್ಗಾ ಮತ್ತು ಮಸೀದಿಗಳಲ್ಲಿ ರಾತ್ರಿ ೧೦ ರಿಂದ ಬೆಳಗ್ಗೆ ೬ ರ ವರೆಗೆ ಧ್ವನಿವರ್ಧಕಗಳ ಬಳಕೆ ನಿಷೇಧಿಸಲಾಗಿದೆ. ಹಗಲಿನಲ್ಲಿ ಧ್ವನಿವರ್ಧಕಗಳನ್ನು ಸ್ಥಾಪಿಸುವಾಗ ಶಬ್ದವು ‘ಏರ್ ಕ್ವಾಲಿಟಿ’ಯ ಮಾನದಂಡಗಳಿಗೆ ಅನುಗುಣವಾಗಿರಬೇಕು ಈ ದೃಷ್ಟಿಯಿಂದ ಜಾಗರೂಕತೆಯನ್ನು ವಹಿಸಬೇಕು ಎಂದೂ ಸಹ ಶಿಫಾರಸ್ಸು ಮಾಡಲಾಗಿದೆ. ಮಸೀದಿಗಳ ಹತ್ತಿರ ಕರ್ಣಕಠೋರ ಪಟಾಕಿಗಳನ್ನು ಸಿಡಿಸುವುದನ್ನು ಕೂಡ ನಿಷೇಧಿಸಲಾಗಿದೆ.

ವಕ್ಫ ಬೋರ್ಡ್ ಮಸೀದಿ ಆವರಣದಲ್ಲಿ ಮತ್ತು ರಾಜ್ಯದ ವಿವಿಧ ಸ್ಥಳಗಳಲ್ಲಿ ಮರಗಳನ್ನು ನೆಡಲು ಸೂಚನೆ ನೀಡಿದೆ. ‘ಹಣ್ಣು ಹಾಗೂ ನೆರಳು ನೀಡುವ ಗಿಡಗಳನ್ನು ಅಲ್ಲಲ್ಲಿ ನೆಡಲು, ಅದೇ ರೀತಿ ಬಿಸಿಲಿನಲ್ಲಿ ಪಶು ಪಕ್ಷಿಗಳಿಗೆ ನೀರು ಸಿಗಬೇಕು ಅದಕ್ಕಾಗಿ ಅಲ್ಲಲ್ಲಿ ನೀರಿನ ಟ್ಯಾಂಕ್‌ಗಳನ್ನು ಇಡಬೇಕು’, ಎಂದು ಬೋರ್ಡ್ ಹೇಳಿದೆ. ಅದೇರೀತಿ ಮಸೀದಿ ಪ್ರದೇಶದಲ್ಲಿ ಭಿಕ್ಷುಕರ ಸಂಖ್ಯೆಯನ್ನು ನಿಗ್ರಹಿಸಲು ಭಿಕ್ಷುಕರಿಗೆ ಸಲಹೆ ನೀಡಲು ಸೂಚನೆಗಳನ್ನು ಈ ಸುತ್ತೋಲೆಯಲ್ಲಿ ನೀಡಲಾಗಿದೆ.