100 ವರ್ಷಗಳ ಹಿಂದೆ ಶಾಲೆಗೆ ಬಾಡಿಗೆ ಆಧಾರದಲ್ಲಿ ಸ್ಥಳ ನೀಡಲಾಗಿತ್ತು ಎಂದು ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷರ ಹೇಳಿಕೆ!
ಮಂಗಳೂರು – ನಗರದ ಡೊಂಗರಕೇರಿಯ ಕೆನರಾ ಶಾಲೆಯ ಸ್ಥಳವು ವಕ್ಫ್ ಆಸ್ತಿ ಎಂದು ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಎನ್.ಕೆ.ಎಂ. ಶಾಫಿ ಸಾದಿ ಹೇಳಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಕೇಂದ್ರ ವಕ್ಫ್ ಸುಧಾರಣಾ ಕಾಯ್ದೆಯನ್ನು ಹಿಂಪಡೆಯುವಂತೆ ಅವರು ಇದೇ ಸಂದರ್ಭದಲ್ಲಿ ಆಗ್ರಹಿಸಿದರು.
‘ಶಾಲೆಯ ಸ್ಥಳವು ಕಚ್ಚಿ ಮೆಮನ್ ಮಸೀದಿಯ ‘ವಕ್ಫ್’ಗೆ ಸೇರಿದ್ದು, 100 ವರ್ಷಗಳ ಹಿಂದೆ ಒಂದು ಎಕರೆ ಜಾಗವನ್ನು ಶಾಲೆಗೆ ಬಾಡಿಗೆಗೆ ನೀಡಲಾಗಿತ್ತು. 100 ವರ್ಷಗಳ ಹಿಂದೆ ಈ ಸ್ಥಳಕ್ಕೆ ವಾರ್ಷಿಕ 100 ರೂಪಾಯಿ ಆದಾಯ, ಅಂದರೆ ಬಾಡಿಗೆ ವಕ್ಫ್‌ಗೆ ಜಮಾ ಆಗುತ್ತಿತ್ತು. ಒಪ್ಪಂದದ ಸಮಯದಲ್ಲಿ ‘ಕೆನರಾ ಶಾಲೆಯಲ್ಲಿ 2 ಮಕ್ಕಳಿಗೆ ಉರ್ದು ಭಾಷೆ ಕಲಿಸಬೇಕು’ ಎಂದು ನಿರ್ಧರಿಸಲಾಗಿತ್ತು; ಆದರೆ ಕಳೆದ 12 ವರ್ಷಗಳಿಂದ ಈ ಬಾಡಿಗೆ ಸಿಗುವುದು ನಿಂತುಹೋಗಿದೆ. ‘ಕಚ್ಚಿ ಮೆಮನ್ ಮಸೀದಿ’ ದಾಖಲೆಗಳ ಪ್ರಕಾರ ಈ ಸ್ಥಳ ನಮ್ಮದು’ ಎಂದು ಶಾಫಿ ಸಾದಿ ಕೂಗಾಡುತ್ತಿದ್ದಾರೆ.
ಸಂಪಾದಕೀಯ ನಿಲುವುಈ ರೀತಿ ದಾವೆ ಮಾಡುವವರು ಮುಸ್ಲಿಂ ಆಕ್ರಮಣಕಾರರು ಹಿಂದೂಗಳ ಸ್ಥಳಗಳನ್ನು ಆಕ್ರಮಿಸಿ ವಶಪಡಿಸಿಕೊಂಡಿದ್ದಾರೆ ಎಂಬುದನ್ನು ನೆನಪಿನಲ್ಲಿಡಬೇಕು. ಹಿಂದೂಗಳು ‘ನಮ್ಮ ಎಲ್ಲಾ ಸ್ಥಳಗಳನ್ನು ಹಿಂದಿರುಗಿಸಿ ಭಾರತದಿಂದ ತೊಲಗಿ’ ಎಂದು ಹೇಳುವ ಮೊದಲು ವಕ್ಫ್ ಗಂಟುಮೂಟೆ ಕಟ್ಟಿಕೊಳ್ಳಬೇಕು’ ಎಂದು ಹಿಂದೂಗಳು ಯಾವಾಗ ಹೇಳುವ ಧೈರ್ಯ ತೋರಿಸುತ್ತಾರೆ? |