|
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿ ನಿಲ್ಲಿಸಲಾಗಿರುವ ಮೀಸಲಾತಿಯನ್ನು ಆಗ್ರಹಿಸಿ ಪ್ರತಿಭಟನೆಯನ್ನು ಪುನಃ ಆರಂಭಿಸಿದೆ. ಇಂತಹದರಲ್ಲಿ ಅದನ್ನು ತಡೆಯುವುದಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಕ್ರಮ ಕೈಗೊಳ್ಳಲು ಆರಂಭಿಸಿದೆ. ಇದರ ಅಡಿಯಲ್ಲಿ ಕಳೆದ ಮೂರು ದಿನದಲ್ಲಿ ೧೦ ಸಾವಿರಗಿಂತಲೂ ಹೆಚ್ಚಿನ ಜನರನ್ನು ಬಂಧಿಸಲಾಗಿದೆ. ಇದರಲ್ಲಿ ಮುಖ್ಯ ವಿರೋಧಿ ಪಕ್ಷ ‘ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ’ ಸಹಿತ (ಬಿ.ಎಂ.ಪಿ.ಸಹಿತ) ಇತರ ವಿರೋಧಿ ಪಕ್ಷದ ಒಟ್ಟು ೯ ಸಾವಿರದ ೨೦೦ ನಾಯಕರ ಮತ್ತು ಕಾರ್ಯಕರ್ತರ ಸಮಾವೇಶವಿದೆ.
೧. ಮೀಸಲಾತಿಯಲ್ಲಿನ ಕೋಟಾ ತಿದ್ದುಪಡಿಗಾಗಿ ಆಗ್ರಹಿಸಿ ಜುಲೈ ೧ ರಿಂದ ನಡೆಯುತ್ತಿರುವ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಜುಲೈ ೧೮ ವರೆಗೆ ಹಿಂಸಾತ್ಮಕ ರೂಪ ತಾಳಿತ್ತು. ಆದ್ದರಿಂದ ಕಳೆದ ೨೦ ದಿನದಿಂದ ದೇಶದಲ್ಲಿನ ಪ್ರಾಥಮಿಕ ವಿದ್ಯಾಲಯಗಳು ಹಾಗೂ ಕಾಲೇಜುಗಳಂತಹ ಎಲ್ಲಾ ಶೈಕ್ಷಣಿಕ ಸಂಸ್ಥೆಗಳನ್ನು ಮುಚ್ಚಲಾಗಿದೆ.
೨. ಜಮಾತ್ ಹಾಗೂ ಬಿ.ಎಂ.ಪಿ.ಯ ನಾಯಕರು ಹಸೀನಾ ಸರಕಾರವನ್ನು ಪದಚ್ಚುತಗೊಳಿಸಲು ಕರೆ ನೀಡುತ್ತಿದೆ. ಅವರಿಂದ ಬಾಂಗ್ಲಾದೇಶದ ಗೃಹ ಸಚಿವಾಲಯವು ಪಾಕಿಸ್ತಾನ ಬೆಂಬಲಿತವಾಗಿದ್ದು ಅದು ಭಯೋತ್ಪಾದಕ ಚಟುವಟಿಕೆಯಲ್ಲಿ ಸಹಭಾಗಿ ಇದೆ ಎಂದು ಆರೋಪಿಸಲಾಗುತ್ತಿದೆ.
೩. ಹೀಗಿದ್ದರೂ ಯಾವುದೇ ವಿದ್ಯಾರ್ಥಿ ಗುಂಪು ಅಥವಾ ಅವುಗಳ ನಾಯಕರಿಂದ ಸರಕಾರ ಪದಚ್ಯುತಗೊಳಿಸುವ ಕರೆ ನೀಡಿಲ್ಲ. ವಿದ್ಯಾರ್ಥಿಗಳು ಗೃಹ ಸಚಿವ ಹಾಗೂ ಶಿಕ್ಷಣ ಸಚಿವ ಸಹಿತ ಹಸೀನಾ ಸರಕಾರದಲ್ಲಿನ ೬ ಸಚಿವರ ರಾಜೀನಾಮೆಗೆ ಆಗ್ರಹಿಸಿದೆ.
೪. ಇಂತಹದರಲ್ಲಿ ಮಾಜಿ ಪ್ರಧಾನಮಂತ್ರಿ ಖಾಲಿದಾ ಝಿಯಾ ಇವರ ಪುತ್ರ ತಾರೀಕ ರಹಮಾನ್ ಇವರ ಹೆಸರು ಕೂಡ ಹಿಂಸಾಚಾರಿಗಳ ಸಂಬಂಧದಿಂದ ಬೆಳಕಿಗೆ ಬಂದಿದೆ. ತಾರಿಕ್ ಇವರು ಪೊಲೀಸರ ಹತ್ಯೆಗಾಗಿ ೭ ಸಾವಿರ ರೂಪಾಯಿ ಹಾಗೂ ಇತರ ಒಬ್ಬರ ಹತ್ಯೆಗಾಗಿ ೩ ಸಾವಿರದ ೫೦೦ ರೂಪಾಯಿ ನೀಡುವ ಆಶ್ವಾಸನೆ ನೀಡಿರುವ ಆರೋಪವಿದೆ.