ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ‘ಮೀಸಲಾತಿಯಲ್ಲಿ ಮೀಸಲಾತಿ’ ನೀಡಲು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು!

ನವದೆಹಲಿ – ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಈಗ ಮೀಸಲಾತಿಯಲ್ಲಿ ಈಗ ಮೀಸಲಾತಿ ಅಂದರೆ ಕೋಟಾದ ಅಡಿಯಲ್ಲಿ ಕೋಟಾ ಇರಲಿದೆ. ಮುಖ್ಯ ನ್ಯಾಯಮೂರ್ತಿ ಧನಂಜಯ್ ಚಂದ್ರಚೂಡ್ ನೇತೃತ್ವದ 7 ಸದಸ್ಯರ ಸಂವಿಧಾನ ಪೀಠ ಈ ತೀರ್ಪು ನೀಡಿದೆ. ತೀರ್ಪು 6 ರ ವಿರುದ್ಧ 1 ಈ ರೀತಿಯಲ್ಲಿ ನಿರ್ಣಯ ಆಗಿತ್ತು. ಅಂತಹ ಮೀಸಲಾತಿ ನೀಡುವ ಅಧಿಕಾರ ರಾಜ್ಯ ಸರಕಾರಕ್ಕೆ ಇರುತ್ತದೆ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ. ಮೀಸಲಾತಿಗೆ ಸಂಬಂಧಿಸಿದಂತೆ 2004 ರಲ್ಲಿನ ನಿರ್ಧಾರದ ನಂತರ ಈ ನಿರ್ಧಾರವನ್ನು ಮಹತ್ವವೆಂದು ಪರಿಗಣಿಸಲಾಗಿದೆ.

ಮೀಸಲಾತಿಯಲ್ಲಿ ಮೀಸಲಾತಿ ಎಂದರೇನು (ಕೋಟಾದೊಳಗಿನ ಕೋಟಾ)?

ಸರ್ವೋಚ್ಚ ನ್ಯಾಯಾಲಯವು, ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡವು ಏಕೀಕೃತ ಗುಂಪು ಅಲ್ಲ. ಅವರಿಗೆ ಮೀಸಲಾತಿಯಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲು ಸರಕಾರವು ಉಪ-ವರ್ಗೀಕರಿಸಬಹುದು. ಉಪ-ವರ್ಗೀಕರಣದ ಆಧಾರವು ನಿಖರವಾದ ರಾಜ್ಯ ಅಂಕಿಅಂಶಗಳನ್ನು ಆಧರಿಸಿರಬೇಕು. ರಾಜ್ಯವು ತನ್ನ ಸ್ವಂತ ಇಚ್ಛೆಗೆ ಅನುಗುಣವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಒಂದು ಸಮುದಾಯ ಅಥವಾ ವರ್ಗಕ್ಕೆ ಸೇರಿದವರಿಗೆ ಮೀಸಲಾತಿ ನೀಡಿದರೆ, ಆ ವರ್ಗವನ್ನು ಉಪವರ್ಗೀಕರಿಸಿ ಅವರಲ್ಲಿ ಮೀಸಲಾತಿ ಸ್ಥಾನಗಳನ್ನು ಹಂಚಬೇಕು. ಇದಕ್ಕೆ ಉದಾಹರಣೆ ಎಂದರೆ ಪರಿಶಿಷ್ಟ ಜಾತಿ ವರ್ಗಕ್ಕೆ ಶೇ.15ರಷ್ಟು ಮೀಸಲಾತಿ ನಿಗದಿಪಡಿಸಿದರೆ ಈ ವರ್ಗಕ್ಕೆ ಸೇರಿದ ಜಾತಿಗಳು ಮತ್ತು ಅವರ ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆಗಳ ಆಧಾರದ ಮೇಲೆ ಶೇ.15ರಲ್ಲಿ ವಿವಿಧ ಮೀಸಲಾತಿ ನೀಡಬೇಕು.