|
ನವ ದೆಹಲಿ – ಬಾಂಗ್ಲಾದೇಶದಲ್ಲಿ ಕಳೆದ ಕೆಲವು ದಿನಗಳಿಂದ ಮೀಸಲಾತಿಗಾಗಿ ಹಿಂಸಾಚಾರ ನಡೆದಿದೆ ಇದೀಗ ಸರ್ವೋಚ್ಚ ನ್ಯಾಯಾಲಯವು ಮೀಸಲಾತಿ ಮಿತಿಯನ್ನು ಶೇ.7ಕ್ಕೆ ಇಳಿಸಿದ್ದು, ಚಳುವಳಿಗಾರರಿಗೆ ಜಯ ಸಿಕ್ಕಿದೆ. ಈ ಹಿಂಸಾಚಾರ ಸಂದರ್ಭದ ವೀಡಿಯೊವೊಂದನ್ನು ‘ಎಕ್ಸ್’ ನಲ್ಲಿ ವೈರಲ್ ಆಗಿದೆ. ಇದರಲ್ಲಿ ಹಿಂಸಾಚಾರದ ಮೂಲಕ ಹಿಂದೂಗಳ ಮನೆಗಳನ್ನು ಸುಡುತ್ತಿರುವುದು ಕಂಡು ಬಂದಿದೆ. ಜಿತೇಂದ್ರ ಪ್ರತಾಪ್ ಸಿಂಗ್ ಎಂಬ ವ್ಯಕ್ತಿ ಈ ವಿಡಿಯೋವನ್ನು ಪ್ರಸಾರ ಮಾಡಿದ್ದಾರೆ.
1. ಜಿತೇಂದ್ರ ಸಿಂಗ ಇವರು, ಪ್ರತಿಭಟನಕಾರರು ಧ್ವನಿವರ್ಧಕಗಳ ಮೂಲಕ, ‘ಭಾರತ್ ಜಾಡರ್ ಮಾಮರ್ ಬಾರಿ, ಬಾಂಗ್ಲಾ ಛರೋ ತಾರಿ’ ಅಂದರೆ ಯಾರ ಮಾವನ ಮನೆ ಭಾರತವಾಗಿದೆಯೋ ಅವರು ಆದಷ್ಟು ಬೇಗ ಬಾಂಗ್ಲಾದೇಶವನ್ನು ತೊರೆಯಬೇಕು’. ಎಂದು ಹೇಳುತ್ತಿದ್ದರು. ಎಂದು ಪೋಸ್ಟನಲ್ಲಿ ಬರೆದಿದ್ದಾರೆ.
2. ಬಾಂಗ್ಲಾದೇಶದಲ್ಲಿ ಈ ಹಿಂಸಾಚಾರದ ನೆಪದಲ್ಲಿ ಅನೇಕ ಹಿಂದೂಗಳ ಮನೆಗಳನ್ನು ಸುಡಲಾಗುತ್ತಿದೆ, ಅವರ ಮೇಲೆ ದಾಳಿಗಳಾಗುತ್ತಿವೆ ಮತ್ತು ಸಂಪೂರ್ಣ ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ವಾತಾವರಣ ನಿರ್ಮಿಸಲಾಗುತ್ತಿದೆ.
3. ಬಾಂಗ್ಲಾದೇಶದಲ್ಲಿ ಹಿಂಸಾಚಾರದಿಂದಾಗಿ 4 ಸಾವಿರದ 500 ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು ತಾಯ್ನಾಡಿಗೆ ಮರಳಿದ್ದಾರೆ. ಈ ಹಿಂಸಾಚಾರದಲ್ಲಿ ಇಲ್ಲಿಯವರೆಗೆ 115 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹೇಳಿಕೆ ಪ್ರಕಾರ, ಬಾಂಗ್ಲಾದೇಶದಲ್ಲಿರುವ ಭಾರತೀಯ ಹೈಕಮಿಷನರ್ ಭಾರತೀಯ ಪ್ರಜೆಗಳ ಸುರಕ್ಷತೆಗಾಗಿ ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಸಂಪಾದಕೀಯ ನಿಲುವು
|