ದೇಶದಿಂದ ಜಿಹಾದಿ ಭಯೋತ್ಪಾದನೆ ಯಾವಾಗ ಕೊನೆಗೊಳ್ಳುವುದು ?

೧. ಹಿಂದೂಗಳೇ ಇದನ್ನು ಗಮನದಲ್ಲಿಡಿ !

‘ನಾವು (ಹಿಂದೂಗಳು) ಒಟ್ಟಾಗಿರುವ ಅವಶ್ಯಕತೆ ಇದೆ; ಏಕೆಂದರೆ ನಾವು ವಿಭಜಿಸಲ್ಪಟ್ಟರೆ, ನಾವು ಕತ್ತರಿಸಲ್ಪಡುತ್ತೇವೆ. ನಮ್ಮ ನಾಶ ಖಚಿತವಿದೆ’, ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇವರು ಮಥುರಾದಲ್ಲಿ ಹೇಳಿಕೆ ನೀಡಿದ್ದಾರೆ.

೨. ಇದು ಭಾರತಕ್ಕೆ ಲಜ್ಜಾಸ್ಪದ ಸಂಗತಿ !

ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗವು ಪ್ರಕಟಿಸಿದ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಪ್ರತಿ ೩ ಗಂಟೆಗಳಿಗೊಮ್ಮೆ ಒಬ್ಬ ಮಹಿಳೆಯು ಅತ್ಯಾಚಾರಕ್ಕೊಳಗಾಗುತ್ತಾಳೆ. ೨೦೨೨ ರಲ್ಲಿ ದೇಶದಲ್ಲಿ ಒಟ್ಟು ೩೧ ಸಾವಿರದ ೫೧೬ ಅತ್ಯಾಚಾರದ ಪ್ರಕರಣಗಳು ವರದಿಯಾಗಿವೆ. ಇಂತಹ ಪ್ರಕರಣಗಳಲ್ಲಿ ೧೦೦ ಆರೋಪಿಗಳ ಪೈಕಿ ೨೭ ಜನರಿಗೆ ಮಾತ್ರ ಶಿಕ್ಷೆಯಾಗಿದೆ.

೩. ದೇಶದಿಂದ ಜಿಹಾದಿ ಭಯೋತ್ಪಾದನೆ ಯಾವಾಗ ಕೊನೆಗೊಳ್ಳುವುದು ?

ಪಾಕಿಸ್ತಾನದ ಜಿಹಾದಿ ಭಯೋತ್ಪಾದಕ ಫರಹಾತುಲ್ಲಾ ಘೋರಿ ಇವನು ಭಾರತದಲ್ಲಿ ಸ್ಥಳೀಯ ಭಯೋತ್ಪಾದಕ ಗುಂಪುಗಳನ್ನು (‘ಸ್ಲೀಪರ್‌ ಸೆಲ್‌’ಗಳನ್ನು) ‘ಭಾರತೀಯ ರೈಲ್ವೆ, ಇಂಧನ ಮತ್ತು ನೀರಿನ ಪೈಪ್‌ಲೈನ್‌ಗಳು, ಪೊಲೀಸರು ಮತ್ತು ಹಿಂದೂ ನಾಯಕರನ್ನು ಗುರಿಯಾಗಿಸಲು’ ಪ್ರಚೋದಿಸಿದ್ದಾನೆ.

೪. ಭಾರತದಲ್ಲಿ ಇಂತಹ ಕ್ರಮ ಯಾವಾಗ ?

ಬ್ರಿಟನ್‌ನಲ್ಲಿ ದ್ವೇಷಪೂರ್ಣ ಭಾಷಣಗಳಿಂದ ಮುಸ್ಲಿಮೇತರರ ವಿರುದ್ಧ ಫತ್ವಾ ಹೊರಡಿಸಿದ್ದ ಆರೋಪದಲ್ಲಿ ೨೪ ಮಸೀದಿಗಳ ತನಿಖೆ ಆರಂಭವಾಗಿದೆ. ಈ ಮಸೀದಿಗಳನ್ನು ಪಾಕಿಸ್ತಾನಿ ಮೂಲದವರು ನಡೆಸುತ್ತಿದ್ದಾರೆ. ಅದರಲ್ಲಿ ‘ಇಸ್ರೈಲ್‌ನ್ನು ನಾಶ ಮಾಡಿ’, ‘ಯಹೂದಿಗಳನ್ನು ಕೊಲ್ಲಿ’ ಮುಂತಾದ ಸಂದೇಶಗಳಿದ್ದವು.

೫. ಈಗ ದೇವಸ್ಥಾನಗಳ ಸರಕಾರೀಕರಣವನ್ನು ಸಹ ರದ್ದುಪಡಿಸಿ !

ಆಂಧ್ರಪ್ರದೇಶ ರಾಜ್ಯದ ದೇವಸ್ಥಾನಗಳಲ್ಲಿ ಕೇವಲ ಹಿಂದೂಗಳನ್ನೇ ನೇಮಿಸುವುದರೊಂದಿಗೆ ದೇವಸ್ಥಾನದ ಅರ್ಚಕರ ವೇತನವನ್ನು ಶೇ. ೫೦ ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಅಲ್ಲದೆ ವೇದಾಧ್ಯಯನ ಮಾಡುತ್ತಿರುವ ನಿರುದ್ಯೋಗಿ ಯುವಕರಿಗೆ ಮಾಸಿಕ ೩ ಸಾವಿರ ರೂಪಾಯಿ ಭತ್ತೆ ಕೊಡಲಾಗುವುದು.

೬. ದೇವಸ್ಥಾನಗಳಲ್ಲಿ ಕಳ್ಳತನ ಯಾರು ಮಾಡುತ್ತಾರೆ ಎಂದು ಗುರುತಿಸಿರಿ !

ಅಸ್ಸಾಂನ ಕಳ್ಳರಾದ ಅಲ್ತಾಬ್‌ ಅಲಿ ಮತ್ತು ಮೀರ್‌ ಹುಸೇನ್‌ ಮಡಿಕೇರಿಯ ಕೋಟೆ ಮಾರಿಯಮ್ಮ ದೇವಸ್ಥಾನದ ಬಾಗಿಲು ಮುರಿದು ೨ ಲಕ್ಷದ ೫೦ ಸಾವಿರ ರೂಪಾಯಿ ನಗದು ಮತ್ತು ಚಿನ್ನಾಭರಣ ದೋಚಿದ್ದಾರೆ.

೬. ಇಂತಹವರನ್ನು ಇಡೀ ದೇಶದಲ್ಲಿ ನಿಷೇಧಿಸಬೇಕು !

ಬರೇಲಿ (ಉತ್ತರಪ್ರದೇಶ) ದಲ್ಲಿ ಆಲಾ ಹಜರತ್‌ ಅವರ ಉರುಸ (ಮುಸ್ಲಿಮರ ಧಾರ್ಮಿಕ ಹಬ್ಬ) ದಲ್ಲಿ ಭಾಗವಹಿಸಲು ಬಂದಿದ್ದ ಕೆಲವು ಯುವಕರು ಮಧ್ಯಾಹ್ನ ಖಲೀಲ್‌ ಚೌಕ್‌ನಲ್ಲಿ ನಮಾಜ್‌ ಗಾಗಿ ರಸ್ತೆಯಲ್ಲಿ ಕುಳಿತಾಗ ಅವರನ್ನು ಪೊಲೀಸರು ಓಡಿಸಿದರು.