ಶ್ರೀ ಸರಸ್ವತೀದೇವಿಯ ಸಂದರ್ಭದಲ್ಲಿ ಪತ್ರಕರ್ತ ದಿಲೀಪ ಮಂಡಲರವರ ಅಶ್ಲೀಲ ಟ್ವಿಟ್

ಮಂಡಲರವರನ್ನು ಬಂಧಿಸಲು ಸಾಮಾಜಿಕ ಮಾಧ್ಯಮಗಳ ಮೂಲಕ ಬೇಡಿಕೆ

ಈ ರೀತಿಯ ಕೃತ್ಯಗಳಿಗೆ ಭಾರತದಲ್ಲಿ ಕಠಿಣ ಕಾನೂನು ಇಲ್ಲದಿರುವುದರಿಂದ ಧರ್ಮದ್ರೋಹಿಗಳು ಬೆಳೆದಿದ್ದಾರೆ. ವಿವಿಧ ಮಾಧ್ಯಮಗಳಿಂದ ಆಗುತ್ತಿರುವ ಹಿಂದೂ ದೇವತೆಗಳ ಅವಮಾನವನ್ನು ತಡೆಗಟ್ಟಲು ಕೇಂದ್ರದ ಭಾಜಪ ಸರಕಾರವು ಪಾಕ್‌ನಂತೆ ದೇವನಿಂದನೆ ವಿರೋಧಿ ಕಾಯಿದೆಯಂತೆ ಕಾನೂನು ಮಾಡುವುದು ಅಗತ್ಯ !

ದಿಲೀಪ್ ಮಂಡಲ

ನವ ದೆಹಲಿ – ವಸಂತ ಪಂಚಮಿಯ ದಿನದಂದು ಶ್ರೀ ಸರಸ್ವತೀದೇವಿಯ ಸಂದರ್ಭದಲ್ಲಿ ಆಕ್ಷೇಪಾರ್ಹ ಟ್ವೇಟ್ ಮಾಡಿದ ಪ್ರಕರಣದಲ್ಲಿ ಪತ್ರಕರ್ತ ದಿಲೀಪ್ ಮಂಡಲರವರನ್ನು ಬಂಧಿಸಬೇಕೆಂಬ ಬೇಡಿಕೆ ಮಾಡಲಾಗುತ್ತಿದೆ. ಅದಕ್ಕಾಗಿ ಹ್ಯಾಶ್‌ಟಾಗ್ ಕೂಡ ತಯಾರಿಸಲಾಗಿದೆ. ಮಂಡಲರವರು ತಮ್ಮ ಟ್ವಿಟ್‌ನಲ್ಲಿ, ‘ನಾನು ಸರಸ್ವತಿಗೆ ವಿದ್ಯೆಯ ದೇವಿಯೆಂದು ನಂಬುವುದಿಲ್ಲ. ಅವಳು ಯಾವುದೇ ಶಾಲೆಯನ್ನು ಪ್ರಾರಂಭಿಸಲಿಲ್ಲ ಅಥವಾ ಯಾವುದೇ ಪುಸ್ತಕವನ್ನು ಬರೆಯಲಿಲ್ಲ. ಮಾತಾ ಸಾವಿತ್ರೀಬಾಯಿ ಫುಲೆರವರು ಇವರೆಡನ್ನೂ ಮಾಡಿದ್ದಾರೆ. ಆದರೂ ನಾನು ಸರಸ್ವತಿಯ ಜೊತೆಗಿದ್ದೇನೆ. ಬ್ರಹ್ಮನು ಆಕೆಯ ಲೈಂಗಿಕ ಶೋಷಣೆ ಮಾಡಿದ್ದಾನೆಎಂದಿದ್ದಾರೆ. ಅದಕ್ಕಾಗಿ ಅವರು ಮಹಾರಾಷ್ಟ್ರ ಸರಕಾರವು ಪ್ರಕಾಶಿಸಿದ ಒಂದು ಪುಸ್ತಕವನ್ನು ಉಲ್ಲೇಖಿಸಿದ್ದಾರೆ.