ಮಮತಾ ಬ್ಯಾನರ್ಜಿ ಹೇಳಿಕೆಗೆ ಅಖಿಲೇಶ್ ಯಾದವ ಬೆಂಬಲ
ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರು ಮಹಾಕುಂಭವನ್ನು ‘ಮೃತ್ಯುಕುಂಭ’ ಎಂದು ಕರೆದಿದ್ದರು. ಅವರ ಹೇಳಿಕೆಯನ್ನು ಸಮಾಜವಾದಿ ಪಕ್ಷದ ಮುಖ್ಯಸ್ಥ ಸಂಸದ ಅಖಿಲೇಶ ಯಾದವ ಬೆಂಬಲಿಸಿದ್ದಾರೆ. ಅವರು, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೇಳಿದ್ದು ಸರಿಯಾಗಿದೆ’, ಎಂದು ಹೇಳಿದರು. ಅವರ ರಾಜ್ಯದ ಜನರು ಕೂಡ ಪ್ರಾಣ ಕಳೆದುಕೊಂಡಿದ್ದಾರೆ. ಬಂಗಾಳ ಮತ್ತು ಇತರ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸಾವನ್ನಪ್ಪಿದ್ದಾರೆ. ವ್ಯವಸ್ಥೆಗಳನ್ನು ಮಾಡುವ ಜವಾಬ್ದಾರಿ ಯಾರದಿತ್ತು? ಭಾಜಪ ಜನರ ಭಾವನೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಈ ಕುಂಭದಲ್ಲಿ ಅತಿ ಹೆಚ್ಚು ಕಾಣೆಯಾದ ಪ್ರಕರಣಗಳು ಬೆಳಕಿಗೆ ಬಂದವು, ಈ ಕುಂಭದಲ್ಲಿ ಅತಿ ಹೆಚ್ಚು ಸಾವುಗಳು ಸಂಭವಿಸಿದವು, ಈ ಕುಂಭದಲ್ಲಿ ಅತಿ ಹೆಚ್ಚು ಜನರು ಅನಾರೋಗ್ಯ ಹೊಂದಿದರು. (ಕಳೆದ ಕುಂಭಮೇಳದ ಸಮಯದಲ್ಲಿ, ಅಖಿಲೇಶ್ ಸಿಂಗ ಮುಖ್ಯಮಂತ್ರಿ ಆಗಿದ್ದಾಗಲೂ ಅನೇಕ ಜನರು ಕಾಲ್ತುಳಿತದಲ್ಲಿ ಸಾವನ್ನಪ್ಪಿದರು. ಅವರು ಅದರ ಬಗ್ಗೆ ಏಕೆ ಮಾತನಾಡುವುದಿಲ್ಲ ? – ಸಂಪಾದಕರು)
ಸಂಪಾದಕೀಯ ನಿಲುವುಕರಸೇವಕರನ್ನು ಗುಂಡಿಕ್ಕಿ ಶವಕ್ಕೆ ಕಲ್ಲು ಕಟ್ಟಿ ಸರಯು ನದಿಗೆ ಎಸೆದ ಮುಲಾಯಂ ಸಿಂಗ ಯಾದವ ಅವರ ಮಗ ಇಂತಹ ಹೇಳಿಕೆ ನೀಡಿರುವುದು ವಿನೋದ ಎಂದೇ ಹೇಳಬೇಕಾಗಬಹುದು ! |