Love Jihad book : ಲವ್ ಜಿಹಾದ್ ಪುಸ್ತಕ ಬಿಡುಗಡೆ ತಡೆ: ಮುತಾಲಿಕ್‌ಗೆ ಶಿವಮೊಗ್ಗ ಪ್ರವೇಶ ನಿರ್ಬಂಧಿಸಿದ ಆಡಳಿತ

‘ಲವ್ ಜಿಹಾದ್’ ಪುಸ್ತಕ ಪ್ರಕಾಶನದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜಿಲ್ಲಾ ಆಡಳಿತದಿಂದ ಕ್ರಮ

ಶಿವಮೊಗ್ಗ – ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಶ್ರೀ. ಪ್ರಮೋದ್ ಮುತಾಲಿಕ್ ಇವರು ಫೆಬ್ರುವರಿ ೨೮ ರಂದು ಶಿವಮೊಗ್ಗದಲ್ಲಿ ‘ಲವ್ ಜಿಹಾದ್’ ಪುಸ್ತಕ ಪ್ರಕಾಶನಕ್ಕಾಗಿ ಬರುವಾಗ ಅವರನ್ನು ಪೊಲೀಸರು ತಡೆದರು ಮತ್ತು ಹಿಂತಿರುಗಿ ಕಳುಹಿಸಿರುವ ಘಟನೆ ನಡೆದಿದೆ. ಶ್ರೀ. ಪ್ರಮೋದ ಮುತಾಲಿಕ್ ಇತರ ಧರ್ಮದ ಬಗ್ಗೆ ದ್ವೇಷಪೂರಿತ ಭಾಷಣ ಮಾಡುತ್ತಾರೆ. ಅವರ ವಿರುದ್ಧ ರಾಜ್ಯಾದ್ಯಂತ ಸುಮಾರು ೩೦ ದೂರಗಳು ದಾಖಲಾಗಿವೆ. ಶಿವಮೊಗ್ಗ ಇದು ಸೂಕ್ಷ್ಮ ಪ್ರದೇಶ ಆಗಿರುವುದರಿಂದ ಮುಂಜಾಗ್ರತೆ ಕ್ರಮ ಎಂದು ಈ ಆದೇಶ ಜಾರಿಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ. (ಹೀಗೆ ಇದ್ದರೆ, ಶಿವಮೊಗ್ಗದಲ್ಲಿ ಟಿಪ್ಪು ಸುಲ್ತಾನನಿಂದ ಅನೇಕ ವಿಷಯದ ಕುರಿತು ಅನೇಕ ಬಾರಿ ಮತಾಂಧ ಮುಸಲ್ಮಾನರಿಂದ ಗಲಭೆಗಳು ನಡೆದಿರುವಾಗ ಅವರ ಮೇಲೆ ಎಂದೂ ಕ್ರಮ ಕೈಗೊಳ್ಳಲಾಗಿದೆಯೇ ? – ಸಂಪಾದಕರು) ಶ್ರೀ. ಮುತಾಲಿಕ ಇವರು ಫೆಬ್ರುವರಿ ೨೮ ರಂದು ಮುಂದಿನ ೭ ದಿನಗಳವರೆಗೆ ಜಿಲ್ಲೆಯಲ್ಲಿ ಪ್ರವೇಶ ನಿಷೇಧಿಸಲಾಗಿದೆ.

೧. ಮಾರ್ಚ್ ೧ ಬೆಳಿಗ್ಗೆ ೧೧ ಗಂಟೆಗೆ ವಾರ್ತಾಭವನದಲ್ಲಿ ಪುಸ್ತಕ ಪ್ರಕಾಶನದ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಂತರ ಶುಭಂ ಹೋಟಲಿನಲ್ಲಿ ಪತ್ರಕರ್ತರ ಸಭೆ ಕೂಡ ಆಯೋಜಿಸಲಾಗಿತ್ತು; ಆದರೆ ಪೊಲೀಸರು ಪ್ರಮೋದ ಮುತಾಲಿಕ ಇವರಿಗೆ ಶಿವಮೊಗ್ಗದಲ್ಲಿ ಪ್ರವೇಶಿಸಲು ಬಿಡಲಿಲ್ಲ. ಈ ಸಮಯದಲ್ಲಿ ಪೊಲೀಸರು ಅವರಿಗೆ ನೋಟಿಸ್ ವಿಧಿಸಿದರು ಮತ್ತು ಜಿಲ್ಲಾಧಿಕಾರಿಗಳು ನೀಡಿರುವ ಆದೇಶದ ಪ್ರಕಾರ ಅವರನ್ನು ಹಿಂತಿರುಗಿ ಕಳುಹಿಸಿದರು. (ಅಲ್ಲಿ ಏನಾದರೂ ಮುಸಲ್ಮಾನ ಸಂಘಟನೆಗಳ ನಾಯಕರು ಬಂದಿದ್ದರೆ, ಆಗ ಅವರ ಮೇಲೆ ಇದೇ ರೀತಿ ತಕ್ಷಣ ಕ್ರಮ ಕೈಗೊಳ್ಳುವ ಧೈರ್ಯ ತೋರಿಸುತ್ತಿದ್ದರೆ ? – ಸಂಪಾದಕರು)

೨. ಜಿಲ್ಲಾದಂಡಾಧಿಕಾರಿಗಳ ಈ ಕೃತಿಯ ಬಗ್ಗೆ ಪ್ರಮೋದ ಮುತಾಲಿಕ ಅವರು ಸರಕಾರದ ಕುರಿತು ವಾಗ್ದಾಳಿ ನಡೆಸುತ್ತಾ, ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿ ಆಗಿದೆ. ಕಾಂಗ್ರೆಸ್ಸಿನ ಕೆಟ್ಟ ಆಡಳಿತ ಕಂಡು ಬರುತ್ತಿದೆ. (ತನ್ನನ್ನು ಹಿಂದೂ ಎಂದು ಹೇಳಿಕೊಳ್ಳುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇದರ ಬಗ್ಗೆ ಏನಾದರೂ ಮಾತನಾಡುವರೇ ? – ಸಂಪಾದಕರು)

ರಸ್ತೆಯಲ್ಲೇ ನೆರವೇರಿದ ಪುಸ್ತಕ ಪ್ರಕಾಶನ

ಭಾಜಪದ ಶಾಸಕ ಚನ್ನಬಸಪ್ಪ ಮತ್ತು ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಕೆ.ಇ. ಕಾಂತೇಶ ಸಹಿತ ಪ್ರಮುಖ ವ್ಯಕ್ತಿಗಳು ಘಟನಾ ಸ್ಥಳಕ್ಕೆ ತಲುಪಿದರು. ಆ ಸಮಯದಲ್ಲಿ ಶ್ರೀ. ಪ್ರಮೋದ ಮುತಾಲಿಕ ಇವರು ರಸ್ತೆಯಲ್ಲಿಯೇ ಪುಸ್ತಕದ ಮತ್ತು ಅದಕ್ಕೆ ಸಂಬಂಧಿತ ಭಿತ್ತಿಪತ್ರಕದ ಪ್ರಕಾಶನ ಮಾಡಿದರು.(ಹಿಂದುಗಳ ಸ್ಥಿತಿ ಎಷ್ಟು ದಯನೀಯವಾಗಿದೆ ಇದಕ್ಕೆ ಇದು ಒಂದು ಸಾಕ್ಷಿ. ಬೇರೆ ಸಮಯದಲ್ಲಿ ವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಕೂಗಾಡುವ ಗ್ಯಾಂಗ್ ಈಗ ಇದರ ಬಗ್ಗೆ ಏನಾದರೂ ಮಾತನಾಡುವರೇ ಅಥವಾ ಎಂದಿನಂತೆ ಮೌನವಾಗಿ ಕುರುವರೆ? – ಸಂಪಾದಕರು)

ಸಂಪಾದಕೀಯ ನಿಲುವು

‘ಲವ್ ಜಿಹಾದ್’ದಿಂದ ಎಷ್ಟೋ ಮಹಿಳೆ, ಹುಡುಗಿಯರ ಜೀವನ ಹಾಳಾಗಿದೆ, ಇದರ ಬಗ್ಗೆ ತನಿಖೆ ನಡೆಸಿ ಮತಾಂಧ ಮುಸಲ್ಮಾನರ ಮೇಲೆ ಕ್ರಮ ಕೈಗೊಳ್ಳುವ ಬದಲು ಇದರ ವಿರುದ್ಧ ಪ್ರತಿಭಟಿಸುವವರನ್ನು ವಿರೋಧಿಸುವ ಕಾಂಗ್ರೆಸ್ ಸರಕಾರ  !