‘ಬ್ರಾಹ್ಮಣರು ಭಾರತೀಯರಲ್ಲ, ಅವರು ರಷ್ಯಾ ಮತ್ತು ಯುರೋಪಿಯನ್ ದೇಶಗಳಿಂದ ಬಂದವರು!’ – ಯದುವಂಶ ಕುಮಾರ ಯಾದವ

ರಾಷ್ಟ್ರೀಯ ಜನತಾ ದಳದ ಮಾಜಿ ಶಾಸಕ ಯದುವಂಶ ಕುಮಾರ ಯಾದವ ಅವರು ಬ್ರಾಹ್ಮಣರ ವಿರುದ್ಧ ಟೀಕೆ ಮಾಡಿದ ಹಳೆಯ ವಿಡಿಯೋ ಮರುಪ್ರಸಾರ

ಪಾಟಲಿಪುತ್ರ (ಬಿಹಾರ) – ಬಿಹಾರದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ಪ್ರಸಾರವಾಗಿದೆ. ಇದು ಏಪ್ರಿಲ್ 29, 2023ರ ವಿಡಿಯೊ ಆಗಿದೆ; ಆದರೆ ರಾಜ್ಯ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿದ್ದಂತೆ, ಈ ವೀಡಿಯೊ ಮತ್ತೆ ಪ್ರಸಾರವಾಗಿದೆ. ಇದರಲ್ಲಿ, ರಾಷ್ಟ್ರೀಯ ಜನತಾದಳದ ಮಾಜಿ ಶಾಸಕ ಯದುವಂಶ ಕುಮಾರ ಯಾದವ ಬ್ರಾಹ್ಮಣರ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುವುದು ಕಂಡುಬಂದಿದೆ. ಅದರಲ್ಲಿ ಅವರು ಡಿಎನ್ಎ (ಡಿಯೋಕ್ಸಿರೈಬೋ ನ್ಯೂಕ್ಲಿಯಿಕ್ ಆಸಿಡ್, ಅಂದರೆ ವ್ಯಕ್ತಿಯ ಮೂಲ ಗುರುತನ್ನು ಕಂಡು ಹಿಡಿಯುವ ಆಮ್ಲ) ಪರೀಕ್ಷೆಗಳಿಂದ ಯಾವುದೇ ಬ್ರಾಹ್ಮಣರು ಈ ದೇಶದವರಲ್ಲ ಎಂದು ತಿಳಿದುಬಂದಿದೆ. ಅವರು ರಷ್ಯಾ ಮತ್ತು ಇತರ ಯುರೋಪಿಯನ್ ದೇಶಗಳಿಂದ ಇಲ್ಲಿ ಬಂದು ನೆಲೆಸಿದ್ದಾರೆ. ಬ್ರಾಹ್ಮಣರು ನಮ್ಮನ್ನು ವಿಭಜಿಸುವ ಮೂಲಕ ಆಳಲು ಪ್ರಯತ್ನಿಸುತ್ತಾರೆ. ನಾವು ಬ್ರಾಹ್ಮಣರನ್ನು ಇಲ್ಲಿಂದ ಓಡಿಸಬೇಕು. ಯಾದವ ಸಮುದಾಯ ಮೂಲತಃ ಭಾರತದವರಾಗಿದ್ದಾರೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ನಾಲಿಗೆಗೆ ಎಲುಬು ಇಲ್ಲ ಅಂತ ಹೇಗೆಬೇಕು ಹಾಗೆ ಹೊರಳಿಸುವವರು ಹಿಂದೆ ಶಾಸಕರಾಗಿದ್ದರು. ಇದು ಅವರನ್ನು ಆಯ್ಕೆ ಮಾಡಿದವರಿಗೆ ನಾಚಿಕೆಗೇಡಿನ ಸಂಗತಿ! ಅಂತಹ ಹೇಳಿಕೆಗಳನ್ನು ನೀಡುವವರನ್ನು ಜೈಲಿಗೆ ಹಾಕಬೇಕು!