‘ಸಂತರಿಗೆ ಶಿಕ್ಷೆ, ದುಷ್ಟರಿಗೆ ರಕ್ಷೆ, ಇದು ಪೊಲೀಸ್ ದಳದ ಇಂದಿನ ಸ್ಥಿತಿಯಾಗಿದೆ !
ಬ್ರಿಟಿಷರ ಕಾಲದ ಪೊಲೀಸ್ ಸಂಸ್ಕೃತಿಯ ಆಗುತ್ತಿರುವ ವೈಭವೀಕರಣ
ಮಂತ್ರಿಗಳ ಭದ್ರತೆಯ ನಿಯುಕ್ತಿಯಲ್ಲಿ ಆಗುವ ಭ್ರಷ್ಟಾಚಾರ
ಸುರಾಜ್ಯ ಸ್ಥಾಪನೆಯ ಒಂದು ಅಂಗ : ಆದರ್ಶ ಪೊಲೀಸ್ಪೊಲೀಸರ ವಿಷಯದಲ್ಲಿ ಓದುವ ವಾರ್ತೆಗಳಿಂದ, ಚಲನಚಿತ್ರಗಳಲ್ಲಿ ತೋರಿಸುವ ಅವರ ಖಳನಾಯಕತ್ವದಿಂದ ಮತ್ತು ಅನೇಕಬಾರಿ ಸ್ವತಃ ನಮ್ಮ ಅನುಭವ ಗಳಿಂದ ಪೊಲೀಸರು ಮತ್ತು ಸಮಾಜದ ನಡುವೆ ಅಂತರ ನಿರ್ಮಾಣವಾಗಿರುವುದು ಕಾಣಿಸುತ್ತದೆ. ನಿಜವಾಗಿಯೂ ಇದನ್ನು ಬದಲಾಯಿಸಬೇಕು. ಪೊಲೀಸರು ಆದರ್ಶವಾಗಿದ್ದರೆ, ಸಮಾಜವೂ ಆದರ್ಶದತ್ತ ಸಾಗುವುದು, ಇಂತಹ ಪರಸ್ಪರಾವಲಂಬಿ ಚಿತ್ರಣವಿರುವುದರಿಂದ ಜಾಗೃತಿಗಾಗಿ ಈ ಲೇಖನವನ್ನು ಪ್ರಕಟಿಸುತ್ತಿದ್ದೇವೆ. – ಸಂಪಾದಕರು |
‘ಭಾರತದಲ್ಲಿ ಮಹಾರಾಷ್ಟ್ರ ಪೊಲೀಸ್ ದಳವು ಮೂರನೇ ಕ್ರಮಾಂಕದಲ್ಲಿನ ಹಾಗೂ ಅತೀ ದೊಡ್ಡ ಪೊಲೀಸ್ ದಳವಿರುವ ರಾಜ್ಯವಾಗಿದೆ. ‘ಸದ್ರಕ್ಷಣಾಯ ಖಲನಿಗ್ರಹಣಾಯ (ಸಜ್ಜನರ ರಕ್ಷಣೆ ಮತ್ತು ದುಷ್ಟರ ನಿಗ್ರಹ) ಇದು ಮಹಾರಾಷ್ಟ್ರ ಪೊಲೀಸ್ ದಳದ ಧ್ಯೇಯವಾಕ್ಯವಾಗಿದೆ; ಆದರೆ ಈ ಧ್ಯೇಯವಾಕ್ಯದಂತೆ ಮಹಾರಾಷ್ಟ್ರದಲ್ಲಿ ಸಜ್ಜನರ ರಕ್ಷಣೆಯಾಗುತ್ತದೆಯೇ ? ಕಳೆದ ಭೂತಕಾಲದ ಘಟನೆಗಳನ್ನು ಮೆಲುಕು ಹಾಕಿದರೆ, ಅರಿವಾಗುವುದೇನೆಂದರೆ, ‘ಸಂತರಿಗೆ ಶಿಕ್ಷೆ ಹಾಗೂ ದುಷ್ಟರಿಗೆ ರಕ್ಷೆ, ಇದು ಪೊಲೀಸ್ ದಳದ ಸ್ಥಿತಿಯಾಗಿದೆ. ಪಾಲಘರ್‌ನಲ್ಲಿ ಗೂಂಡಾಗಳ ಗುಂಪು ಸಾಧು-ಸಂತರಿಗೆ ಹೊಡೆಯುತ್ತಿರುವಾಗ ಪೊಲೀಸರು ಕೇವಲ ಮೂಕಪ್ರೇಕ್ಷಕವಾಗಿ ನಿಂತಿದ್ದರು. ಹಿಂದೂ ಧರ್ಮದ ಶ್ರೀ ಶಂಕರಾಚಾರ್ಯರನ್ನು ಬಂಧಿಸಲಾಗುತ್ತದೆ. ಹಿಂದುತ್ವದ ಕಾರ್ಯ ಮಾಡುವ ಸಾಧ್ವಿ ಪ್ರಜ್ಞಾಸಿಂಹ ಠಾಕೂರ್ ಇವರ ಮೇಲೆ ಸುಳ್ಳು ಅಪರಾಧವನ್ನು ದಾಖಲಿಸಿ ಪುರುಷ ಪೊಲೀಸರು ಅವರನ್ನು ಅಮಾನವೀಯವಾಗಿ ಥಳಿಸುತ್ತಾರೆ. ಉತ್ತರಪ್ರದೇಶದ ಕುಪ್ರಸಿದ್ಧ ಗೂಂಡಾ ವಿಕಾಸ ದುಬೆಯನ್ನು ಬಂಧಿಸಲು ಅಲ್ಲಿನ ಪೊಲೀಸರು ಬಲೆ ಬೀಸಿದಾಗ ಪೊಲೀಸ್ ದಳದ ಕೆಲವು ಪೊಲೀಸರೇ ದುಬೆಯ ವಿರುದ್ಧ ನಡೆಸಲಿಕ್ಕಿದ್ದ ಕಾರ್ಯಾಚರಣೆಯ ರಹಸ್ಯವನ್ನು ಅವನಿಗೆ ತಿಳಿಸಿದರು. ಇಂದು ಸಹ ಭ್ರಷ್ಟಾಚಾರದ ಆರೋಪವಿರುವ ವ್ಯಕ್ತಿ ಜಾಮೀನಿನಲ್ಲಿ ಹೊರಗೆ ಬಂದು ಅವನು ಮಂತ್ರಿಯಾಗುತ್ತಾನೆ. ೧೯೯೩ ನೇ ಇಸವಿಯಲ್ಲಿ ಮುಂಬಯಿಯ ಸರಣಿ ಬಾಂಬ್‌ಸ್ಫೋಟದ ತನಿಖೆ ನಡೆಯುವಾಗ ಚಿತ್ರ ನಟ ಸಂಜಯ ದತ್‌ನು ಅನಧಿಕೃತ ಬಂದೂಕುಗಳನ್ನು (ಎಕೆ-೫೬) ಇಟ್ಟುಕೊಂಡಿರುವುದು ಬೆಳಕಿಗೆ ಬಂದಿತ್ತು. ಅವನು ಅದನ್ನು ಸ್ಫೋಟದ ಒಬ್ಬ ಆರೋಪಿಯಿಂದ ತೆಗೆದುಕೊಂಡಿದ್ದನು. ಇಂತಹ ಗಂಭೀರ ಅಪರಾಧವಿರುವ ಆರೋಪಿಯನ್ನು ಪದೇ ಪದೇ ಪೇರೋಲ್‌ನಲ್ಲಿ ಬಿಡಲಾಯಿತು. ಅವನ ಶಿಕ್ಷೆ ಕಡಿಮೆಯಾಗಿತ್ತು; ಸಾಮಾನ್ಯ ಕೈದಿಗಳಿಗೆ ವರ್ಷದಲ್ಲಿ ಒಮ್ಮೆಯೂ ಪೇರೋಲ್‌ನಲ್ಲಿ ಬಿಡುವುದಿಲ್ಲ ಅಥವಾ ಅವರಿಗೆ ಸೌಲಭ್ಯಗಳೂ ಸಿಗುವುದಿಲ್ಲ. ರಾಜಕಾರಣಿಗಳ ಒತ್ತಡದಿಂದ ಇಂತಹ ಗೂಂಡಾಗಳಿಗೆ ಮತ್ತು ಮಾಫಿಯಾಗಳಿಗೆ ಶಿಕ್ಷೆಯಲ್ಲಿ ವಿನಾಯಿತಿ ಕೊಡುವಂತಹ ಅನೇಕ ಪ್ರಕರಣಗಳಿವೆ. ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋಗುವ ಜನಸಾಮಾನ್ಯರಿಗೆ ಏನೆಲ್ಲ ತೊಂದರೆಯಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದ್ದರಿಂದಲೇ ‘ಪೊಲೀಸ್ ಠಾಣೆಯ ಹಾಗೂ ನ್ಯಾಯಾಲಯದ ಮೆಟ್ಟಿಲು ಹತ್ತಬಾರದು, ಎಂಬುದು ಜನಸಾಮಾನ್ಯರ ಅಭಿಪ್ರಾಯವಾಗಿದೆ. ಹಾಗಾದರೆ ‘ಪೊಲೀಸ್ ದಳದ ಧ್ಯೇಯವಾಕ್ಯವನ್ನು ಪೊಲೀಸ್ ದಳವು ಸಾರ್ಥಕಪಡಿಸುತ್ತದೆಯೇ ?, ಎಂಬುದನ್ನು ವಿಚಾರ ಮಾಡಬೇಕು.
ಪೊಲೀಸ್ ದಳದಲ್ಲಿ ಅನೇಕ ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ, ನಿವೃತ್ತಿ ಹೊಂದಿರುವ ಒಬ್ಬ ಪೊಲೀಸ್ ಅಧಿಕಾರಿಯು ಪೊಲೀಸ್ ದಳದ ವಿಷಯದಲ್ಲಿ ಅನುಭವಿಸಿರುವುದನ್ನು ಅವರ ಮಾತುಗಳಲ್ಲಿಯೇ ಇಲ್ಲಿ ನೀಡಲಾಗಿದೆ. ಕಳೆದ ಸಂಚಿಕೆಯಲ್ಲಿ ಕೆಲವು ವಿಷಯ ನೋಡಿದೆವು ಈ ವಾರದ ಅದರ ಮುಂದಿನ ಭಾಗವನ್ನು ಇಲ್ಲಿ ನೀಡುತ್ತಿದ್ದೇವೆ.
೫. ಪೊಲೀಸ್ ಕಲ್ಯಾಣ ವಿಭಾಗದಲ್ಲಾಗುವ ಭ್ರಷ್ಟಾಚಾರ !
ಪೊಲೀಸ್ ಕಲ್ಯಾಣ ವಿಭಾಗದ ಮೂಲಕ ಪೊಲೀಸ್‌ರ ಅನುಕೂಲಕ್ಕಾಗಿ ಮುಖ್ಯಕಚೇರಿ ಮತ್ತು ಆಯುಕ್ತರ ಕಚೇರಿಯಲ್ಲಿ ‘ಸಬ್ಸಿಡಿಯರಿ ಕ್ಯಾಂಟೀನ್ (ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ) ಪೊಲೀಸರಿಗೆ ಕಡಿಮೆ ಬೆಲೆಯಲ್ಲಿ ಧಾನ್ಯ, ಇಲೆಕ್ಟ್ರಾನಿಕ್ಸ್ ಸಾಮಗ್ರಿ ಮತ್ತು ದೈನಂದಿನ ಸಾಮಗ್ರಿಗಳು ದೊರೆಯುತ್ತವೆ. ಪೊಲೀಸರಿಗಾಗಿ ‘ವಸ್ತ್ರಭಂಡಾರ’ ಇರುತ್ತದೆ. ಪೊಲೀಸ್ ಕಲ್ಯಾಣ ವಿಭಾಗದವತಿಯಿಂದ ಉಪಹಾರಗೃಹಗಳನ್ನು ನಡೆಸಲಾಗುತ್ತದೆ. ಅದರಲ್ಲಿಯೂ ಕ್ಯಾಂಟೀನ್ ಗುತ್ತಿಗೆದಾರ ಮತ್ತು ಪೂರೈಕೆದಾರರಿಂದ ಸಾಮಗ್ರಿಗಳ ರೂಪದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷರೂಪದಲ್ಲಿ ದಲ್ಲಾಲಿ ಪಡೆಯಲಾಗುತ್ತದೆ.
ಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ಮನೆಗೆಲಸ ಇತ್ಯಾದಿ ಮಾಡಲು ನೇಮಿಸಲಾಗುವ ಪೊಲೀಸ್‌ರ ನಿಯುಕ್ತಿಯನ್ನು ಸ್ಥಗಿತಗೊಳಿಸುವುದು ಆವಶ್ಯಕ ಕೆಲವು ಪೊಲೀಸರು ಮಂತ್ರಿ, ಶಾಸಕರ ಮನೆಯ ಟೆಲಿಫೋನ್ ಆಪರೇಟರ್ ಕೆಲಸವನ್ನು ಮಾಡುತ್ತಾರೆ. ಈ ಸ್ಥಳದಲ್ಲಿ ಪೊಲೀಸರು ಏಕೆ ಬೇಕು ? ಇತರ ವ್ಯಕ್ತಿಗಳೂ ‘ಟೆಲಿಫೋನ್ ಆಪರೇಟರ್ ಕೆಲಸವನ್ನು ಮಾಡಬಲ್ಲರು. ಈ ರೀತಿ ಅನೇಕ ಸ್ಥಳಗಳಲ್ಲಿ (ಕಾನೂನು-ಸುವ್ಯವಸ್ಥೆಯ ಕಾರಣದಿಂದ) ಪೊಲೀಸರನ್ನು ಅನಗತ್ಯವಾಗಿ ನಿಯುಕ್ತಿಗೊಳಿಸಲಾಗಿದೆ. ಮನೆಕೆಲಸಕ್ಕಾಗಿ ಪೊಲೀಸರು, ವೈಯಕ್ತಿಕ ಕೆಲಸಕ್ಕಾಗಿ ಪೊಲೀಸರು ಈ ರೀತಿ ನೇಮಿಸಲಾಗಿದೆ. ಅದನ್ನು ಸ್ಥಗಿತಗೊಳಿಸಬೇಕಾಗಿದೆ. ಪೊಲೀಸರಿಗೆ ಪೊಲೀಸರ ಕರ್ತವ್ಯವನ್ನು ನಿರ್ವಹಿಸಲು ಅವಕಾಶವನ್ನು ಕೊಡಬೇಕಾಗಿದೆ. ಬ್ರಿಟಿಷರ ಕಾಲದ ಬಂದೂಕಿನಂತೆ ಬ್ರಿಟಿಷರ ಕಾಲದ ಪೊಲೀಸರ ಅನಾವಶ್ಯಕ ಸಂಸ್ಕೃತಿ ಇಂದಿಗೂ ಕಂಡು ಬರುತ್ತದೆ. |
೬. ಕಚೇರಿಯ ಸಹಾಯಕ ಮತ್ತು ಮನೆಗೆಲಸದ (ಹೌಸ್) ಸಹಾಯಕರ ನಿಯುಕ್ತಿಯಲ್ಲಿ ಆಗುವ ಭ್ರಷ್ಟಾಚಾರ ಮತ್ತು ಮಾನವಸಂಪನ್ಮೂಲದ ಹಾನಿ !
೬ ಅ. ಹಿರಿಯ ಪೊಲೀಸ್ ಅಧಿಕಾರಿಗಳ ‘ಆರ್ಡರ್ಲಿ (ಕಾರ್ಯಾಲಯದ ಸಹಾಯಕ) ಮುಖಾಂತರ ಆಗುವ ವಸೂಲಿ ! : ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ನಿರೀಕ್ಷಕನಿಂದ ಹಿಡಿದು ಪೊಲೀಸ್ ಮಹಾ ಸಂಚಾಲಕರವರೆಗೆ ಎಲ್ಲರಿಗೂ ‘ಆರ್ಡರ್ಲಿ (ಕಚೇರಿ ಸಹಾಯಕ) ಇರುತ್ತಾರೆ. ಪೊಲೀಸ್ ನಿರೀಕ್ಷಕರಿಂದ ಪೊಲೀಸ್ ಉಪ ಅಧೀಕ್ಷಕರು/ಸಹಾಯಕ ಪೊಲೀಸ್ ಆಯುಕ್ತರಿಗೆ ಒಬ್ಬರು ಅಥವಾ ಇಬ್ಬರು ಸಹಾಯಕರು ಇರುತ್ತಾರೆ. ಅವರು ಕಚೇರಿಯ ಕೆಲಸ ಕಾರ್ಯಗಳನ್ನು ನಿರ್ವಹಿಸಿ ಅಧಿಕಾರಿಗಳ ವೈಯಕ್ತಿಕ ಕೆಲಸಗಳನ್ನು ಮಾಡುತ್ತಾರೆ. ಅಧಿಕಾರಿಗಳ ಅನೈತಿಕ ಆರ್ಥಿಕ ಮೂಲಗಳೂ ಅವರಿಗೆ ತಿಳಿದಿರುತ್ತವೆ. ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆಯುವ ಎಲ್ಲ ಅನೈತಿಕ ವ್ಯವಹಾರಗಳಿಗೆ ಸಂಬಂಧಿಸಿದಂತೆ ವಸೂಲಿಯನ್ನು ‘ಆರ್ಡರ್ಲಿ ಮಾಡುತ್ತಾರೆ. ಅಧಿಕಾರಿ ಮತ್ತು ಜನತೆಯ ನಡುವೆ ಹಣಕಾಸಿನ ವ್ಯವಹಾರಗಳು ಇವರ ವತಿಯಿಂದ ಆಗುತ್ತದೆ. ಕೆಲವೊಮ್ಮೆ ಭ್ರಷ್ಟಾಚಾರ ನಿಗ್ರಹ ದಳ (ಎ.ಸಿ.ಬಿ.) ದಾಳಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಇವರೂ ಸಿಕ್ಕಿ ಬೀಳುತ್ತಾರೆ.
೬ ಆ. ಹಿರಿಯ ಪೊಲೀಸ್ ಅಧಿಕಾರಿಗಳ ಬಳಿ ಮನೆ ಕೆಲಸಗಳನ್ನು ಮಾಡುವ ಪೊಲೀಸ್ ಕಾನ್ಸಟೇಬಲ್ !
ಹಿರಿಯ ಪೊಲೀಸ್ ಅಧಿಕಾರಿ (ಪೊಲೀಸ್ ಉಪಆಯುಕ್ತರು ಮತ್ತು ಅವರಿಗಿಂತ ಮೇಲ್ದರ್ಜೆಯ ಅಧಿಕಾರಿ) ಇವರ ಮನೆಯಲ್ಲಿ ಇಬ್ಬರು ಪೊಲೀಸ್ ಕಾನ್ಸಟೇಬಲ್‌ಗಳನ್ನು ನಿಯುಕ್ತಿಗೊಳಿಸಲಾಗಿರುತ್ತದೆ. ಈ ಪೊಲೀಸ್ ಕಾನ್ಸಟೇಬಲ್‌ಗಳು ಅಲ್ಲಿ ಮನೆಯ ಎಲ್ಲ ಕೆಲಸಗಳನ್ನು ಮಾಡುತ್ತಾರೆ; ಏಕೆಂದರೆ ಅವರು ಅಲ್ಲಿರುವಾಗ ಹೊರಗಿನ ನೌಕರಿ ಮಾಡುವುದು ಕಠಿಣವಾಗುತ್ತದೆ. ಹೊರಗಿನ ೧೨-೧೨ ಗಂಟೆಯ ‘ಡ್ಯೂಟಿ ಅವರಿಗೆ ಹೊರೆಯಾಗುತ್ತದೆ. ಆದುದರಿಂದ ಅವರು ಸಾಹೇಬರಲ್ಲಿ ಮನೆಗೆಲಸ ಮಾಡುತ್ತಾರೆ. ಇಂತಹ ಕೆಲಸಗಳನ್ನು ಮಾಡುವ ನೌಕರರು ಎಲ್ಲ ಅಧಿಕಾರಿಗಳ ಬಳಿ ಇದ್ದಾರೆ. ಸರಕಾರಕ್ಕೆ ಒಬ್ಬ ನೌಕರನಿಗೆ ೩೦ ಸಾವಿರದಿಂದ ೩೫ ಸಾವಿರದ ವರೆಗೆ ವೇತನವನ್ನು ನೀಡಬೇಕಾಗುತ್ತದೆ. ಈ ಹಣ ಸರಕಾರ ಮನೆಗೆಲಸ ಮಾಡುವುದಕ್ಕಾಗಿ ಪೊಲೀಸರಿಗೆ ನೀಡುತ್ತದೆಯೇ? ವಾಸ್ತವಿಕವಾಗಿ ಪೊಲೀಸ್ ಪೇದೆಯ ಕರ್ತವ್ಯ ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಡಿ ಶಾಂತಿಯನ್ನು ಸ್ಥಾಪಿಸುವುದಾಗಿರುತ್ತದೆ. ಆಯುಕ್ತರ ಕಚೇರಿಯಲ್ಲಿ ‘ಇಂತಹ ‘ಹೋಮ್ ಆರ್ಡರ್ಲಿ(ಮನೆಗೆಲಸ ಮಾಡು ವವರು) ಅಧಿಕ ಸಂಖ್ಯೆಯಲ್ಲಿರುತ್ತಾರೆ.
೬ ಆ ೧. ನ್ಯಾಯಾಲಯದ ನ್ಯಾಯಾಧೀಶರ ಸುರಕ್ಷತೆಗಾಗಿ ಮತ್ತು ಸರಕಾರಿ ನ್ಯಾಯವಾದಿಗಳಿಗೆ ಪೊಲೀಸ್ ಕಾನ್ಸಟೇಬಲ್‌ಗಳನ್ನು (ಆರ್ಡರ್ಲಿ) ನಿಯುಕ್ತಿಗೊಳಿಸಿರುತ್ತಾರೆ. ಇದರಿಂದ ಪೊಲೀಸ್ ಪಡೆಯ ಮಾನವಸಂಪನ್ಮೂಲ ಅನಾವಶ್ಯಕ ಸ್ಥಳದಲ್ಲಿ ಉಪಯೋಗಿಸಲ್ಪಡುತ್ತದೆ.
೬ ಇ. ಮಂತ್ರಿಗಳ ಭದ್ರತೆ ಮತ್ತು ಕಚೇರಿಯ ಕೆಲಸವೆಂದು ನಿಯುಕ್ತಿಗೊಳಿಸುವಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ : ಬೃಹನ್ಮುಂಬಯಿ ಪೊಲೀಸ್ ದಳದ ಸಂರಕ್ಷಣೆ ಮತ್ತು ಸುರಕ್ಷತಾ ವಿಭಾಗ, ವಿಶೇಷ ಸುರಕ್ಷಾ ವಿಭಾಗದಲ್ಲಿ ಮುಖ್ಯ ಕಚೇರಿಯ ಯುವ ಪೊಲೀಸ್ ಕಾನ್ಸಟೇಬಲ್‌ಗಳನ್ನು ಮಂತ್ರಿಗಳು, ಮಹಾನಗರಪಾಲಿಕೆಯ ಅಧ್ಯಕ್ಷರು, ಗಣ್ಯವ್ಯಕ್ತಿಗಳು ಮತ್ತು ಕಟ್ಟಡ ನಿರ್ಮಾಣಕಾರರ ವೈಯಕ್ತಿಕ ಭದ್ರತೆಗಾಗಿ (ಪಿ.ಎಸ್.ಒ) ಎಂದು ನಿಯುಕ್ತಿಗೊಳಿಸಲಾಗುತ್ತದೆ. ಪ್ರಮುಖ ಖಾತೆಗಳ ಮಂತ್ರಿಗಳು, ಶಾಸಕರು ಮತ್ತು ಕಟ್ಟಡ ನಿರ್ಮಾಣಕಾರರ ವೈಯಕ್ತಿಕ ಭದ್ರತೆಗಾಗಿ ನಿಯುಕ್ತಿಗೊಳಿಸಿರುವ ಸಿಬ್ಬಂದಿಯು ಮುಖ್ಯ ಕಚೇರಿಯ ಹಿರಿಯ ಪೊಲೀಸ್ ಅಧಿಕಾರಿ ಗಳಿಗೆ ಹಣ(ಲಂಚ) ನೀಡುತ್ತಾರೆ ಮತ್ತು ಬೇಕಾದ ಸ್ಥಳಕ್ಕೆ ನಿಯುಕ್ತಿಗೊಳಿಸಿಕೊಳ್ಳುತ್ತಾರೆ. ಕೆಲವು ಪೊಲೀಸ್ ಸಿಬ್ಬಂದಿಗಳು ಆಯುಷ್ಯ ವಿಡೀ ನೌಕರಿಯನ್ನು ಮಂತ್ರಿಗಳು ಮತ್ತು ಶಾಸಕರ ಭದ್ರತಾ ಪಡೆಯೆಂದು ಕೆಲಸ ಮಾಡುವುದರಲ್ಲಿಯೇ ಮುಗಿದಿದೆ. ಮಂತ್ರಿಗಳ ಪರಿಚಯವಾದ ನಂತರ ಅವರು ತಮ್ಮ ಮತ್ತು ಇತರರ ಕೆಲಸವನ್ನು ಮಾಡಿಸಿಕೊಳ್ಳುತ್ತಾರೆ.
೭. ಪೊಲೀಸರು ಚಟುವಟಿಕೆಯಿಲ್ಲದಿರುವ ವಿಭಾಗದ ಸ್ಥಳದಲ್ಲಿ ಆಗುವ ನಿಷ್ಕಾಳಜಿ ಮತ್ತು ಸಮಯ ವ್ಯರ್ಥಗೊಳಿಸುವುದು
ಯಾವಾಗ ಪೊಲೀಸ್ ಠಾಣೆಯಿಂದ ಕೆಲವು ಅಧಿಕಾರಿ ಮತ್ತು ಸಿಬ್ಬಂದಿಗಳು ಚಟುವಟಿಕೆಯಿಲ್ಲದಿರುವ ವಿಭಾಗ ಉದಾಹರಣೆಗೆ ಸಿಐಡಿ ಶಾಖೆ(ವಿ.ಶಾ.೧) ಭದ್ರತಾ ವಿಭಾಗ, ಅಪರಾಧ ವಿಭಾಗ ಕೆಲವು ಉಪವಿಭಾಗಗಳು, ಸಶಸ್ತ್ರ ಪೊಲೀಸ್ ಪಡೆ ಮತ್ತು ನಗರ ಸಂರಕ್ಷಣೆ ವಿಭಾಗ ಸ್ಥಳಾಂತರವಾಗುತ್ತದೆ. ಆಗ ಅದನ್ನು ‘ಸೈಡ್ ಪೋಸ್ಟಿಂಗ್ ಎಂದು ಹೇಳುತ್ತಾರೆ. ‘ಈ ಸ್ಥಳದಲ್ಲಿ ನಿಯುಕ್ತಿ ಯಾದರೆ ‘ಶಿಕ್ಷೆ ವಿಧಿಸಲಾಗಿದೆ ಎಂದು ಕೆಲವರಿಗೆ ಅನಿಸುತ್ತದೆ. ಇಲ್ಲಿ ನಿಯುಕ್ತಿಗೊಳಿಸುವ ಪೊಲೀಸರು ಪರಿಣಾಮಕಾರಿಯಾಗಿ ಕರ್ತವ್ಯವನ್ನು ನಿರ್ವಹಿಸುವುದಿಲ್ಲ. ಇಲಾಖೆಯಲ್ಲಿ ಅವರಿಗೆ ‘ದಿನ ಕಳೆಯುವುದು ಎಂದು ಹೇಳುತ್ತಾರೆ ‘ನನಗೆ ಎಲ್ಲಿ ನಿಯುಕ್ತಿಯಾದರೂ ಅಲ್ಲಿ ಕರ್ತವ್ಯಭಾವನೆಯಿಂದ ಕೆಲಸ ಮಾಡುವುದು ನನ್ನ ಕರ್ತವ್ಯವಾಗಿದೆ ಎಂದು ಕೆಲವರಿಗೆ ಅನಿಸುವುದಿಲ್ಲ. ‘ಸೈಡ್ ಬ್ರ್ಯಾಂಚ್ ನಿಯುಕ್ತಿಯಾಗಿರುವುದರಿಂದ ಅವರ ಹಣದ ಮೂಲ ಕುಂಠಿತವಾಗುತ್ತದೆಯೆಂದು ಅವರ ಕೆಲಸ ಮಾಡುವ ಉತ್ಸಾಹ ಕಡಿಮೆಯಾಗಿರುತ್ತದೆ ಮತ್ತು ಅವರು ಕೆಲಸದ ಬಗ್ಗೆ ನಿರ್ಲಕ್ಷ ಮಾಡುತ್ತಿರುತ್ತಾರೆ. ನಿರಾಸಕ್ತಿಯಿಂದ ಅವರು ಕೆಲಸ ಮಾಡುತ್ತಿರುತ್ತಾರೆ. ಇವರಲ್ಲಿಯೂ ಅಪವಾದವೆನ್ನುವಂತೆ ಕೆಲವು ಅಧಿಕಾರಿಗಳು ಮತ್ತು ನೌಕರರು ಇದ್ದಾರೆ. ‘ಸೈಡ್ ಪೋಸ್ಟಿಂಗ್ ಸಿಕ್ಕರೂ, ತಮ್ಮ ವೇತನವಂತೂ ಕಡಿಮೆ ಯಾಗುವುದಿಲ್ಲವಷ್ಟೇ ?, ಎನ್ನುವ ವಿಚಾರವಿರುವ ಕೆಲವು ಪೊಲೀಸ್ ಕಾನ್ಸ್‌ಟೇಬಲ್‌ಗಳೂ ಇದ್ದಾರೆ. ಕೆಲವು ಅಧಿಕಾರಿಗಳು ಮತ್ತು ನೌಕರರು ಚಟುವಟಿಕೆಯಿಲ್ಲದಿರುವ ವಿಭಾಗಕ್ಕೆ ಎಂದಿಗೂ ಸ್ಥಳಾಂತರಗೊಳ್ಳುವುದಿಲ್ಲ. ಪ್ರತಿಯೊಂದು ಸ್ಥಳಾಂತರದ ಸಮಯದಲ್ಲಿ ಅವರು ವಶೀಲಿಯನ್ನು ಹಚ್ಚಿ ಮತ್ತು ಹಣಕೊಟ್ಟು ಯಾವಾಗಲೂ ಪೊಲೀಸ್ ಠಾಣೆಗೆ ಸ್ಥಳಾಂತರಗೊಳ್ಳುತ್ತಿರುತ್ತಾರೆ.
– ಓರ್ವ ನಿವೃತ್ತ ಪೊಲೀಸ್ (ಮುಂದುವರಿಯುವುದು)
ಸಾಧಕರಿಗೆ ಸೂಚನೆ ಮತ್ತು ಓದುಗರಿಗೆ ಹಾಗೂ ಹಿತಚಿಂತಕರಿಗೆ ವಿನಂತಿ.ಪೊಲೀಸರು ಮತ್ತು ಆಡಳಿತಗಳ ಸಂದರ್ಭದಲ್ಲಿ ಬಂದಿರುವ ಕಟು ಅನುಭವವನ್ನು ತಿಳಿಸಿರಿ ! ನ್ಯಾಯಾಂಗ, ಪತ್ರಿಕಾರಂಗ, ಕಾರ್ಯಾಂಗ ಹಾಗೂ ಶಾಸಕಾಂಗ ಇವು ಪ್ರಜಾಪ್ರಭುತ್ವದ ನಾಲ್ಕು ಆಧಾರಸ್ತಂಭಗಳಾಗಿವೆ. ಪ್ರತ್ಯಕ್ಷದಲ್ಲಿ ಸಮಾಜಕ್ಕೆ ಈ ಆಧಾರಸ್ತಂಭಗಳಿಂದ ಆಧಾರವೆನಿಸುವುದಕ್ಕಿಂತ ತೊಂದರೆಯೇ ಅಧಿಕವೆನಿಸುತ್ತಿರುವ ಅನುಭವ ಆಗುತ್ತಿದೆ. ನಮಗೆ ರಾಮರಾಜ್ಯದಂತಹ ಆದರ್ಶವಾಗಿರುವ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಬೇಕಾಗಿರುವುದರಿಂದ ಎಲ್ಲ ಕ್ಷೇತ್ರಗಳಲ್ಲಿಯೂ ಆಗುತ್ತಿರುವ ಅನೈತಿಕತೆ ಮತ್ತು ಭ್ರಷ್ಟಾಚಾರದ ವಿಷಯಗಳ ಕುರಿತು ಸಮಾಜದಲ್ಲಿ ಜಾಗೃತಿಯನ್ನು ಮೂಡಿಸಿ, ಅದನ್ನು ತಡೆಗಟ್ಟಲು ಪ್ರಯತ್ನಿಸಬೇಕಾಗಿದೆ. ಈ ದೃಷ್ಟಿಯಿಂದ ಇಲ್ಲಿನ ಲೇಖನದಲ್ಲಿ ನೀಡಿರುವಂತೆ ಅಥವಾ ಪೊಲೀಸ್-ಇಲಾಖೆಯಲ್ಲಿರುವ ನೌಕರರು ಅಥವಾ ಅಧಿಕಾರಿಗಳು ನಾಗರಿಕರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುವುದು-ಮಾತನಾಡುವುದು, ನಾಗರಿಕರನ್ನು ಹಿಂಸಿಸುವುದು, ಕರ್ತವ್ಯಲೋಪ, ಅವ್ಯವಹಾರ, ಭ್ರಷ್ಟಾಚಾರ ಮಾಡುವುದು; ಕೆಲಸದ ಸಮಯದಲ್ಲಿ ವೈಯಕ್ತಿಕ ಕೆಲಸಗಳನ್ನು ಮಾಡುವುದು, ಅನಾವಶ್ಯಕ ಅಥವಾ ಅಶ್ಲೀಲ ಹರಟೆ ಹೊಡೆಯವುದು, ಮೊಬೈಲ್‌ನಲ್ಲಿ ಸಮಯ ವ್ಯರ್ಥಗೊಳಿಸುವುದು ಇತ್ಯಾದಿ ಕೃತ್ಯಗಳ ಮೂಲಕ ಸಮಯವನ್ನು ವ್ಯರ್ಥಗೊಳಿಸುವುದು; ಕಚೇರಿಯಲ್ಲಿ ಅಥವಾ ಕಚೇರಿಯ ಸಮಯದಲ್ಲಿ ದುರ್ನಡತೆ ಇತ್ಯಾದಿ ಸ್ವರೂಪದ ಕಟು ಅನುಭವ ಬಂದಿದ್ದರೆ, ಅದನ್ನು ಮುಂದೆ ನೀಡಿರುವ ವಿಳಾಸಕ್ಕೆ ಕಳುಹಿಸಬೇಕು. ಈ ಲೇಖನದ ಉದ್ದೇಶ ‘ಪೊಲೀಸ್ ಮತ್ತು ಆಡಳಿತ ವರ್ಗ ಹೇಗೆ ಇರಬಾರದು ಎನ್ನುವುದು ಅರಿವಾಗಬೇಕೆಂದು, ಸಂಬಂಧಪಟ್ಟ ನೌಕರರು/ಅಧಿಕಾರಿಗಳಿಗೆ ಅವರ ದುರ್ನಡತೆಯ ಅರಿವಾಗಿ, ಅವರು ಅದರಲ್ಲಿ ಸುಧಾರಣೆಯನ್ನು ಮಾಡಿಕೊಳ್ಳಬೇಕು ಮತ್ತು ನಾಗರಿಕರಿಗೆ ತಮ್ಮ ರಾಷ್ಟ್ರೀಯ ಕರ್ತವ್ಯವೆಂದು ಇಂತಹ ವಿಷಯಗಳನ್ನು ನಿರ್ಲಕ್ಷಿಸದೇ ಅದನ್ನು ಸುಧಾರಿಸಲು ಪ್ರಯತ್ನಿಸಬೇಕು, ಹಾಗೂ ಆಯಾ ಸಮಯಕ್ಕೆ ಇದರ ವಿರುದ್ಧ ದೂರು ದಾಖಲಿಸಬೇಕು ಎನ್ನುವುದಾಗಿದೆ. ವಿಳಾಸ : ನೀಲೇಶ ಸಾಂಗೋಲಕರ, ನ್ಯಾಯವಾದಿಗಳು. C/o ಸನಾತನ ಆಶ್ರಮ, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ ಸಂಪರ್ಕ ಕ್ರಮಾಂಕ : 9595984844 ವಿ-ಅಂಚೆ : [email protected] |