‘ಸಂತರಿಗೆ ಶಿಕ್ಷೆ, ದುಷ್ಟರಿಗೆ ರಕ್ಷೆ, ಇದು ಪೊಲೀಸ್ ದಳದ ಇಂದಿನ ಸ್ಥಿತಿಯಾಗಿದೆ !
‘ಭಾರತದಲ್ಲಿ ಮಹಾರಾಷ್ಟ್ರ ಪೊಲೀಸ್ ದಳವು ಮೂರನೇ ಕ್ರಮಾಂಕದಲ್ಲಿನ ಹಾಗೂ ಅತೀ ದೊಡ್ಡ ಪೊಲೀಸ್ ದಳವಿರುವ ರಾಜ್ಯವಾಗಿದೆ. ‘ಸದ್ರಕ್ಷಣಾಯ ಖಲನಿಗ್ರಹಣಾಯ (ಸಜ್ಜನರ ರಕ್ಷಣೆ ಮತ್ತು ದುಷ್ಟರ ನಿಗ್ರಹ) ಇದು ಮಹಾರಾಷ್ಟ್ರ ಪೊಲೀಸ್ ದಳದ ಧ್ಯೇಯವಾಕ್ಯವಾಗಿದೆ; ಆದರೆ ಈ ಧ್ಯೇಯವಾಕ್ಯದಂತೆ ಮಹಾರಾಷ್ಟ್ರದಲ್ಲಿ ಸಜ್ಜನರ ರಕ್ಷಣೆಯಾಗುತ್ತದೆಯೇ? ಕಳೆದ ಭೂತಕಾಲದ ಘಟನೆಗಳನ್ನು ಮೆಲುಕು ಹಾಕಿದರೆ, ಅರಿವಾಗುವುದೇನೆಂದರೆ, ‘ಸಂತರಿಗೆ ಶಿಕ್ಷೆ ಹಾಗೂ ದುಷ್ಟರಿಗೆ ರಕ್ಷೆ, ಇದು ಪೊಲೀಸ್ ದಳದ ಸ್ಥಿತಿಯಾಗಿದೆ. ಪಾಲಘರ್‌ನಲ್ಲಿ ಗೂಂಡಾಗಳ ಗುಂಪು ಸಾಧು-ಸಂತರಿಗೆ ಹೊಡೆಯುತ್ತಿರುವಾಗ ಪೊಲೀಸರು ಕೇವಲ ಮೂಕಪ್ರೇಕ್ಷಕವಾಗಿ ನಿಂತಿದ್ದರು. ಹಿಂದೂ ಧರ್ಮದ ಶ್ರೀ ಶಂಕರಾಚಾರ್ಯರನ್ನು ಬಂಧಿಸಲಾಗುತ್ತದೆ. ಹಿಂದುತ್ವದ ಕಾರ್ಯ ಮಾಡುವ ಸಾಧ್ವಿ ಪ್ರಜ್ಞಾಸಿಂಹ ಠಾಕೂರ್ ಇವರ ಮೇಲೆ ಸುಳ್ಳು ಅಪರಾಧವನ್ನು ದಾಖಲಿಸಿ ಪುರುಷ ಪೊಲೀಸರು ಅವರನ್ನು ಅಮಾನವೀಯವಾಗಿ ಥಳಿಸುತ್ತಾರೆ. ಉತ್ತರಪ್ರದೇಶದ ಕುಪ್ರಸಿದ್ಧ ಗೂಂಡಾ ವಿಕಾಸ ದುಬೆಯನ್ನು ಬಂಧಿಸಲು ಅಲ್ಲಿನ ಪೊಲೀಸರು ಬಲೆ ಬೀಸಿದಾಗ ಪೊಲೀಸ್ ದಳದ ಕೆಲವು ಪೊಲೀಸರೇ ದುಬೆಯ ವಿರುದ್ಧ ನಡೆಸಲಿಕ್ಕಿದ್ದ ಕಾರ್ಯಾಚರಣೆಯ ರಹಸ್ಯವನ್ನು ಅವನಿಗೆ ತಿಳಿಸಿದರು. ಇಂದು ಸಹ ಭ್ರಷ್ಟಾಚಾರದ ಆರೋಪವಿರುವ ವ್ಯಕ್ತಿ ಜಾಮೀನಿನಲ್ಲಿ ಹೊರಗೆ ಬಂದು ಅವನು ಮಂತ್ರಿಯಾಗುತ್ತಾನೆ. ೧೯೯೩ ನೇ ಇಸವಿಯಲ್ಲಿ ಮುಂಬಯಿಯ ಸರಣಿ ಬಾಂಬ್‌ಸ್ಫೋಟದ ತನಿಖೆ ನಡೆಯುವಾಗ ಚಿತ್ರ ನಟ ಸಂಜಯ ದತ್‌ನು ಅನಧಿಕೃತ ಬಂದೂಕುಗಳನ್ನು (ಎಕೆ-೫೬) ಇಟ್ಟುಕೊಂಡಿರುವುದು ಬೆಳಕಿಗೆ ಬಂದಿತ್ತು. ಅವನು ಅದನ್ನು ಸ್ಫೋಟದ ಒಬ್ಬ ಆರೋಪಿಯಿಂದ ತೆಗೆದುಕೊಂಡಿದ್ದನು. ಇಂತಹ ಗಂಭೀರ ಅಪರಾಧವಿರುವ ಆರೋಪಿಯನ್ನು ಪದೇ ಪದೇ ಪೇರೋಲ್‌ನಲ್ಲಿ ಬಿಡಲಾಯಿತು. ಅವನ ಶಿಕ್ಷೆ ಕಡಿಮೆಯಾಗಿತ್ತು; ಸಾಮಾನ್ಯ ಕೈದಿಗಳಿಗೆ ವರ್ಷದಲ್ಲಿ ಒಮ್ಮೆಯೂ ಪೇರೋಲ್‌ನಲ್ಲಿ ಬಿಡುವುದಿಲ್ಲ ಅಥವಾ ಅವರಿಗೆ ಸೌಲಭ್ಯಗಳೂ ಸಿಗುವುದಿಲ್ಲ. ರಾಜಕಾರಣಿಗಳ ಒತ್ತಡದಿಂದ ಇಂತಹ ಗೂಂಡಾಗಳಿಗೆ ಮತ್ತು ಮಾಫಿಯಾಗಳಿಗೆ ಶಿಕ್ಷೆಯಲ್ಲಿ ವಿನಾಯಿತಿ ಕೊಡುವಂತಹ ಅನೇಕ ಪ್ರಕರಣಗಳಿವೆ. ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಹೋಗುವ ಜನಸಾಮಾನ್ಯರಿಗೆ ಏನೆಲ್ಲ ತೊಂದರೆಯಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದ್ದರಿಂದಲೇ ‘ಪೊಲೀಸ್ ಠಾಣೆಯ ಹಾಗೂ ನ್ಯಾಯಾಲಯದ ಮೆಟ್ಟಿಲು ಹತ್ತಬಾರದು, ಎಂಬುದು ಜನಸಾಮಾನ್ಯರ ಅಭಿಪ್ರಾಯವಾಗಿದೆ. ಹಾಗಾದರೆ ‘ಪೊಲೀಸ್ ದಳದ ಧ್ಯೇಯವಾಕ್ಯವನ್ನು ಪೊಲೀಸ್ ದಳವು ಸಾರ್ಥಕ ಪಡಿಸುತ್ತದೆಯೇ ?, ಎಂಬುದನ್ನು ವಿಚಾರ ಮಾಡಬೇಕು. ಪೊಲೀಸ್ ದಳದಲ್ಲಿ ಅನೇಕ ವರ್ಷಗಳವರೆಗೆ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಓರ್ವ ಪೊಲೀಸ್ ಅಧಿಕಾರಿಯು ಪೊಲೀಸ್ ತರಬೇತಿಯಿಂದ ನಿವೃತ್ತಿಯವರೆಗೆ ಪೊಲೀಸ್ ದಳದ ವಿಷಯದಲ್ಲಿ ಏನೆಲ್ಲ ಅನುಭವಿಸಿದರು, ಎಂಬುದನ್ನು ಅವರ ಮಾತುಗಳಲ್ಲಿ ಕೊಡುತ್ತಿದ್ದೇವೆ.
೧. ಪೊಲೀಸರಿಗೆ ಕೊಡುವ ತರಬೇತಿ, ಅದರಲ್ಲಿ ಆಗುವ ಭ್ರಷ್ಟಾಚಾರ ಮತ್ತು ಅದರಿಂದಾಗುವ ಕುಸಂಸ್ಕಾರ !
ನಾನು ಪೊಲೀಸ್ ದಳದಲ್ಲಿ ಸೇರಿಕೊಂಡೆನು. ಭರ್ತಿ ಪ್ರಕ್ರಿಯೆ ಪೂರ್ಣವಾದ ನಂತರ ಒಂದು ಪೊಲೀಸ್ ತರಬೇತಿ ಕೇಂದ್ರದಲ್ಲಿ ತರಬೇತಿಗಾಗಿ ಆಯ್ಕೆ ಆಯಿತು. ನಮ್ಮ ಮತ್ತು ಇತರ ಜಿಲ್ಲೆಯ ೧ ಸಾವಿರಕ್ಕಿಂತಲೂ ಹೆಚ್ಚು ಹುಡುಗರು ಪೊಲೀಸ್ ತರಬೇತಿಯನ್ನು ಪಡೆಯುತ್ತಿದ್ದೆವು. ನಮ್ಮ ತರಬೇತಿಯ ಅವಧಿ ೯ ತಿಂಗಳದ್ದಾಗಿತ್ತು. ಪೊಲೀಸ್ ತರಬೇತಿ ವಿದ್ಯಾಲಯದಲ್ಲಿ ಆರಂಭದಲ್ಲಿ ತುಂಬಾ ಶಿಸ್ತು ಇರುತ್ತಿತ್ತು. ಬೇಸಿಗೆಯಲ್ಲಿ ತುಂಬಾ ಬಿಸಿ ಇದ್ದ ಕಾರಣ ಹವಾಮಾನ ಸಹಿಸಲು ಆಗುತ್ತಿರಲಿಲ್ಲ. ಕುಡಿಯುವ ನೀರು ಸಾಕಷ್ಟು ಇರಲಿಲ್ಲ, ಕೆಲವರಿಗೆ ಸ್ನಾನಕ್ಕೆ ನೀರು ಸಿಗುತ್ತಿರಲಿಲ್ಲ. (ಇದು ೩೦ ವರ್ಷಗಳ ಹಿಂದಿನ ಸ್ಥಿತಿ) ನಮಗೆ ಮುಂಜಾನೆ ೪.೩೦ ಕ್ಕೆ ಎದ್ದು ೫.೪೫ ಕ್ಕೆ ಪರೇಡ್ ಗ್ರೌಂಡ್‌ನಲ್ಲಿ ಸಿದ್ಧರಾಗಿರಬೇಕಾಗಿರುತ್ತಿತ್ತು. ತರಬೇತಿ ಚೆನ್ನಾಗಿ ನಡೆಯಬೇಕೆಂದು ೨೫ ರಿಂದ ೩೦ ಹುಡುಗರ ಒಂದು ತುಕಡಿ (ಸ್ಕಾಡ್) ಮತ್ತು ಆ ತುಕಡಿಗೆ ಒಬ್ಬ ಕವಾಯತು ಶಿಕ್ಷಕನನ್ನು ನೇಮಕ ಮಾಡಲಾಗುತ್ತದೆ. ಬೆಳಗ್ಗೆ ನಮಗೆ ೨ ಗಂಟೆ ಕವಾಯತು (ಪಿ.ಟಿ.) ಇರುತ್ತಿತ್ತು. ಇದರಲ್ಲಿ ೧೦ ಕಿ.ಮೀ. ಓಡುವುದು, ಶಾರೀರಿಕ ವ್ಯಾಯಾಮದ ವಿವಿಧ ಪ್ರಕಾರಗಳು ಮತ್ತು ಇತರ ವ್ಯಾಯಾಮಗಳಿರುತ್ತವೆ. ಅಲ್ಲಿನ ಶಿಕ್ಷಕರು (ಪೊಲೀಸ್ ಹವಾಲ್ದಾರರೆ ಆಗಿರುತ್ತಾರೆ.) ಹುಡುಗರಿಗೆ ತುಂಬಾ ಕಷ್ಟ ಕೊಡುತ್ತಿದ್ದರು ಹಾಗೂ ಕೆಲವೊಮ್ಮೆ ಹೊಡೆಯುವುದು ಅಥವಾ ಶಿಕ್ಷೆ ಕೊಡುವುದು ಕೂಡ ಇತ್ತು. ‘ಕೈಮೇಲೆ ಮಾಡಿ ಎರಡೂ ಕೈಗಳಲ್ಲಿ ಬಂದೂಕು ಹಿಡಿದು ಮೈದಾನಕ್ಕೆ ಸುತ್ತು ಬರುವುದು ಇಂತಹ ಶಿಕ್ಷೆಗಳನ್ನು ನೀಡಲಾಗುತ್ತಿತ್ತು. ಇಲ್ಲಿಯ ವರೆಗೆ ಸರಿಯಿತ್ತು. ಅದೆಲ್ಲವೂ ತರಬೇತಿಯ ಭಾಗವಾಗಿದ್ದವು; ಆದರೆ ೧ ತಿಂಗಳಾದ ನಂತರ ಅವರು ಪ್ರತಿಯೊಬ್ಬರಿಂದಲೂ ಹಪ್ತಾ (ಕಪ್ಪ-ಕಾಣಿಕೆ) ಕೇಳಲು ಆರಂಭಿಸಿದನು. ಆದ್ದರಿಂದ ಆ ಕಾಲದಲ್ಲಿ ೫೦ ರಿಂದ ೧೦೦ ರೂಪಾಯಿ ಪ್ರತಿ ತಿಂಗಳು ಮಾಸ್ತರರಿಗೆ ಹಪ್ತಾ ಕೊಡಬೇಕಾಗುತ್ತಿತ್ತು. ಕೊಡದಿದ್ದರೆ, ಅವರು ದ್ವೇಷ ಕಟ್ಟಿಕೊಂಡು ಉದ್ದೇಶಪೂರ್ವಕವಾಗಿ ಈ ಮೇಲಿನಂತೆ ಶಿಕ್ಷೆ ಕೊಡುತ್ತಿದ್ದರು. ಈ ತರಬೇತಿಯ ಅವಧಿಯಲ್ಲಿ ತೊಂದರೆಯನ್ನು ಸಹಿಸಲಾಗದೆ ಕೆಲವರು ಮನೆಗೆ ಓಡಿ ಹೋಗುತ್ತಿದ್ದರು. ಈ ರೀತಿಯಲ್ಲಿ ತರಬೇತಿಯಲ್ಲಿಯೇ ಪೊಲೀಸನಿಗೆ ಭ್ರಷ್ಟಾಚಾರದ ಮೊದಲ ಪಾಠ ಮೊದಲ ತಿಂಗಳಲ್ಲಿಯೇ ಕಲಿಯಲು ಸಿಗುತ್ತಿತ್ತು. ಹೊಸ ತರಬೇತುದಾರರಲ್ಲಿ ಕೆಲವು ಪೊಲೀಸರ ಮಕ್ಕಳು ಕೂಡ ಇರುತ್ತಿದ್ದರು. ‘ಅವರ ತಂದೆ ಪೊಲೀಸ್ ಠಾಣೆಯಲ್ಲಿ ಹಣ ಹೇಗೆ ಸಂಪಾದಿಸುತ್ತಾರೆ ?, ಎಂದು ಅವರು ಹೇಳುತ್ತಿದ್ದರು. ಆದ್ದರಿಂದ ‘ನಾವು ಕೂಡ ಮುಂದೆ ಪೊಲೀಸ್ ಖಾತೆಯಲ್ಲಿ ನೌಕರಿ ಮಾಡುವಾಗ ಹಣ ಸಂಪಾದನೆ ಮಾಡೋಣ, ಎನ್ನುವ ಸಂಸ್ಕಾರವು ಅವರ ಮೇಲೆ ದೃಢವಾಗಿರುತ್ತಿತ್ತು.
೨. ಪೊಲೀಸ್ ತರಬೇತಿ ವಿದ್ಯಾಲಯದಲ್ಲಿ ಬದಲಾವಣೆಯಾಗುವ ಆವಶ್ಯಕತೆಯಿದೆ !
ಪೊಲೀಸ್ ತರಬೇತಿಯನ್ನು ನೀಡುವ ಕವಾಯತು ಶಿಕ್ಷಕರು ಅಹಂಕಾರಿ ಆಗಿರುತ್ತಾರೆ. ಅವರಿಂದ ಪ್ರತಿದಿನ ತುಂಬಾ ಬೈಗುಳ ಕೇಳಬೇಕಾಗುತ್ತದೆ. ಆದ್ದರಿಂದ ಅದರ ಪರಿಣಾಮವು ತರಬೇತಿ ಪಡೆಯುವ ಹುಡುಗರ ಮೇಲಾಗುತ್ತದೆ. ತರಬೇತಿಯ ಅವಧಿಯಲ್ಲಿ ಇಂತಹ ಎಲ್ಲ ಕುಸಂಗತಿಯಿಂದಾಗಿ ಹೊಸದಾಗಿ ಬರುವ ತರಬೇತುದಾರ ಪೊಲೀಸನು ಇಂತಹ ಎಲ್ಲ ಕಷ್ಟಕಾರ್ಪಣ್ಯಗಳನ್ನು ಅನುಭವಿಸಿ ಹೊರಗೆ ಬರುತ್ತಾನೆ, ಅನಂತರ ಅವನು ಅದನ್ನು ಸಮಾಜದಲ್ಲಿ ಪ್ರತ್ಯಕ್ಷ ಕರ್ತವ್ಯ (ಡ್ಯೂಟಿ) ನಿರ್ವಹಿಸುವಾಗ ಅನುಕರಣೆ ಮಾಡಲು ಆರಂಭಿಸುತ್ತಾನೆ. ಆದ್ದರಿಂದ ‘ಭ್ರಷ್ಟಾಚಾರ ಮಾಡುವವನು ಮತ್ತು ಬೈಯ್ಯುವವನು, ಎನ್ನುವ ಪೊಲೀಸರ ಚಿತ್ರಣವು ಜನಸಾಮಾನ್ಯರಲ್ಲಿ ಮೂಡಿದೆ. ಆದರೆ ಕೆಲವು ಪೊಲೀಸರು ಇದಕ್ಕೆ ಅಪವಾದ ಕೂಡ ಇದ್ದಾರೆ. ತಾತ್ಪರ್ಯವೆಂದರೆ, ಪೊಲೀಸ್ ತರಬೇತಿ ವಿದ್ಯಾಲಯದಲ್ಲಿ ಕಲಿಸುವ ಪದ್ಧತಿಯನ್ನು ಬದಲಾಯಿಸುವ (ಸುಧಾರಿಸುವ) ಆವಶ್ಯಕತೆಯಿದೆ ಎಂದರಿವಾಗುತ್ತದೆ.
೩. ಪೊಲೀಸ್ ತರಬೇತಿ ವಿದ್ಯಾಲಯದಲ್ಲಿ ಪೂರೈಕೆದಾರರಿಗೆ ಸಿಗುವ ದಲಾಲಿ ಮತ್ತು ಅದರ ಸ್ವರೂಪ !
ತರಬೇತಿಯ ಕಾಲದಲ್ಲಿ ಹೊಸತಾಗಿ ಬಂದಿರುವ ತರಬೇತು ದಾರರಿಗೆ ಪೂರ್ಣ ವೇತನ ಕೊಡಲಾಗುತ್ತದೆ. ಆರಂಭದಲ್ಲಿ ನಮ್ಮ ವೇತನ ೬ ತಿಂಗಳು ತಡವಾಗಿ ಸಿಕ್ಕಿತು. ವೇತನ ನಿಯಮಿತವಾಗಿ ಸಿಗಲು ಆರಂಭವಾದಾಗ ಅಲ್ಲಿನ ಹಿರಿಯ ಪೊಲೀಸ್ ಅಧಿಕಾರಿ ಕಡ್ಡಾಯವಾಗಿ ಜೀವ ವಿಮೆ (ಎಲ್‌ಐಸಿ) ಮಾಡಲು ಮತ್ತು ಹೊಸ ಬಟ್ಟೆಗಳನ್ನು ಖರೀದಿಸಲು ಒತ್ತಡ ಹೇರುತ್ತಿದ್ದರು. ಭೋಜನ ಮತ್ತು ಅಲ್ಪಾಹಾರಕ್ಕಾಗಿ ಹೆಚ್ಚು ಹಣವನ್ನು ತೆಗೆದುಕೊಳ್ಳುತ್ತಾರೆ.
೪. ಪೊಲೀಸ್ ಮುಖ್ಯಾಲಯದಲ್ಲಿ ಕೆಲಸಗಳನ್ನು ಹಂಚುವುದರಲ್ಲಿ ಆಗುವ ಭ್ರಷ್ಟಾಚಾರ !
ಪೊಲೀಸ್ ತರಬೇತಿಯ ಅವಧಿ ಮುಗಿದ ನಂತರ ಹೊಸತಾಗಿ ದಾಖಲಾದ ಪೊಲೀಸ್ ಸಿಪಾಯಿಗಳನ್ನು ಪೊಲೀಸ್ ಮುಖ್ಯಾಲಯದಲ್ಲಿ ನೇಮಿಸಲಾಗುತ್ತದೆ. ಸಶಸ್ತ್ರ ಪೊಲೀಸ್ ಮುಖ್ಯಾಲಯದಲ್ಲಿ ನೇಮಕ ಆದ ನಂತರ ಅಲ್ಲಿಯೂ ಪೊಲೀಸರಿಗೆ ಕೆಲಸಗಳನ್ನು ಹಂಚುವಾಗ ಆರ್ಥಿಕ ಒರೆಗಲ್ಲು ಉಪಯೋಗಿಸ ಲಾಗುತ್ತದೆ. ಅಲ್ಲಿಯೂ ೧೫೦-೨೦೦ ಅಧಿಕಾರಿಗಳ ಒಂದು ‘ಕಂಪನಿ (ತುಕಡಿ) ಇರುತ್ತದೆ. ಮುಖ್ಯಾಲಯದಲ್ಲಿ ಪೊಲೀಸರ ಹುದ್ದೆಗಳು ಹೆಚ್ಚಿರುತ್ತದೆ ಮತ್ತು ಸ್ಥಳೀಯ ಪೊಲೀಸ್ ಠಾಣೆಗೆ ಆ ಮುಖ್ಯಾಲಯದಿಂದ ಭದ್ರತೆಗಾಗಿ ಹೆಚ್ಚುವರಿ ಪೊಲೀಸರ ಸಹಾಯವನ್ನು ಕಳುಹಿಸಲಾಗುತ್ತದೆ.
ಪ್ರತಿಯೊಂದು ‘ಕಂಪನಿಯ ಅಧಿಕಾರಿಗೆ ಕರ್ತವ್ಯವನ್ನು ಹಂಚಲು ಇನ್ಚಾರ್ಜ್ ಪೊಲೀಸ್ ಹವಾಲ್ದಾರ ಇರುತ್ತಾನೆ. ಅವನು ತನ್ನ ‘ಕಂಪನಿಯ ಪೊಲೀಸರಿಗೆ ಕೆಲಸವನ್ನು (ಡ್ಯೂಟಿಯನ್ನು) ಹಂಚುತ್ತಾನೆ. ಈ ಇನ್ಚಾರ್ಜ್ ಪೊಲೀಸ್ ಹವಾಲ್ದಾರನು ಕೆಲಸಗಳನ್ನು ಹಂಚುವಾಗ ಹಪ್ತಾ ಎಂದು (ಪ್ರತಿ ತಿಂಗಳಿಗೆ ನಿಶ್ಚಿತ ಮೊತ್ತ) ತಮ್ಮದೇ ಬಾಂಧವರಿಂದ ಹಣ ಪಡೆಯುತ್ತಾನೆ. ಹಣ ಕೊಡುವ ಈ ಅಧಿಕಾರಿಗೆ ಕಡಿಮೆ ಶ್ರಮದ ಮತ್ತು ಕಡಿಮೆ ಸಮಯದ ‘ಡ್ಯೂಟಿ ಕೊಡುತ್ತಾನೆ. ಇದರಲ್ಲಿ ಕೆಲವು ಅಧಿಕಾರಿಗಳು ಡ್ಯೂಟಿಗೆ ಬರದಿದ್ದರೂ ಅವರನ್ನು ಸಂಭಾಳಿಸುತ್ತಾರೆ.
೪ ಅ. ಅಪರಾಧಿಗಳಿಗೆ ‘ಎಸ್ಕಾರ್ಟ್ ಪೂರೈಸುವಾಗ ಪೊಲೀಸರು ಮಾಡುವ ಭ್ರಷ್ಟಾಚಾರ ! : ಖಟ್ಲೆಯ ಆಲಿಕೆಯು ನ್ಯಾಯಾಲಯದಲ್ಲಿ ನಡೆಯುತ್ತದೆ. ‘ಸಾಧ್ಯವಿದ್ದರೆ ಅದು ಆರೋಪಿಯ ಮುಂದೆಯೇ ನಡೆಯಬೇಕು, ಎನ್ನುವ ನಿಯಮವಿದೆ. ಆದ್ದರಿಂದ ಸೆರೆಮನೆ ಮತ್ತು ನ್ಯಾಯಾಲಯದ ನಡುವೆ ಆರೋಪಿಗಳ ಪ್ರವಾಸವಿರುತ್ತದೆ. ಇದರ ಹೊಣೆ ಸೆರೆಮನೆಯ ಪೊಲೀಸರದ್ದಾಗಿರುವುದಿಲ್ಲ. ಆದ್ದರಿಂದ ಅದಕ್ಕಾಗಿ ಪೊಲೀಸರನ್ನು ವಿವಿಧ ಠಾಣೆಗಳಿಂದ ಕಳುಹಿಸಲಾಗುತ್ತದೆ. ಅವರು ಕೈದಿಗಳನ್ನು ಎಣಿಕೆ ಮಾಡಿ ಹೇಳಿರುವ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗುವುದು ಮತ್ತು ವಾಪಾಸು ಕರೆದುಕೊಂಡು ಬರುವುದು ಹೀಗಿರುತ್ತದೆ. ಈ ಪ್ರವಾಸದಲ್ಲಿ ‘ಸಂಘಟಿತ ಅಪರಾಧಿ ಕಾನೂನಿನ ಪ್ರಕರಣದ ಅಪರಾಧಿ, ಗುಂಪಿನ ಅಪರಾಧಿ ಮತ್ತು ಆರ್ಥಿಕ ಅಪರಾಧ ಮಾಡಿರುವ ಅಪರಾಧಿ, ಇವರನ್ನೆಲ್ಲ ಸೆರೆಮನೆಯಿಂದ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಿ ಹಿಂದಕ್ಕೆ ಕರೆತರಲು ‘ಎಸ್ಕಾರ್ಟ್ (ರಕ್ಷಣೆಗಾಗಿ ಕರೆಸಿದ ಪೊಲೀಸರು) ಕೇಳಲಾಗುತ್ತದೆ. ಆ ‘ಎಸ್ಕಾರ್ಟ್ನಲ್ಲಿ ನಿರ್ದಿಷ್ಟ ಪೊಲೀಸ್ ಅಧಿಕಾರಿ, ಶಿಪಾಯಿ ಮತ್ತು ಹವಾಲದಾರ ಇರುತ್ತಾರೆ. ಅಪರಾಧಿಗಳು ಕೆಲವು ಲೋಭಿ ಪೊಲೀಸರಿಗೆ ಲಂಚ ಕೊಟ್ಟು ತಮ್ಮ ಕಾರ್ಯವನ್ನು ಮಾಡಿಸಿಕೊಳ್ಳುತ್ತಾರೆ. ಹವ್ಯಾಸದಿಂದಾಗಿ ಈ ‘ಎಸ್ಕಾರ್ಟ್ನಲ್ಲಿ ಪೊಲೀಸರಿಗೆ ಮುಂದಿನ ಗಂಭೀರ ಪರಿಣಾಮಗಳ ಚಿಂತೆ ಇರುವುದಿಲ್ಲ. ಈ ಹಿಂದೆ ಅಪರಾಧಿಗಳು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಓಡಿ ಹೋಗಿದ್ದಾರೆ. ಈ ಅಪರಾಧಿಗಳನ್ನು ನ್ಯಾಯಾಲಯದಲ್ಲಿ ನಿರ್ಧಿಷ್ಟ ದಿನದಂದು ಹಾಜರುಪಡಿಸಲಾಗುತ್ತದೆ. ಈ ತಂಡದ ಪೊಲೀಸರು ಈ ಅಪರಾಧಿಗಳಿಗೆ ಊಟಕ್ಕೆ ಮತ್ತು ಇತರರನ್ನು ಭೇಟಿಯಾಗಲು ರಿಯಾಯಿತಿಯನ್ನು ನೀಡುತ್ತಾರೆ. ಅದರ ಬದಲಿಗೆ ಈ ಅಪರಾಧಿಗಳು ಪೊಲೀಸರಿಗೆ ಲಂಚದ ರೂಪದಲ್ಲಿ ಹಣ ಕೊಡುತ್ತಾರೆ. ಈ ‘ಎಸ್ಕಾರ್ಟ್ನ ಪೊಲೀಸರು ಮುಖ್ಯಾಲಯದ ಗುಮಾಸ್ತನಿಂದ ಹಿಡಿದು ಅಧಿಕಾರಿಗಳವರೆಗೆ ಹಪ್ತಾ ಕೊಡುತ್ತಾರೆ. ಇಲ್ಲಿಯೂ ಪೊಲೀಸನು ಪೊಲೀಸರಿಗೆ ಲಂಚ ಕೊಡುತ್ತಾನೆ ಮತ್ತು ಅಪರಾಧಿ ಕ್ಷೇತ್ರಕ್ಕೆ ಜೊತೆ ನೀಡುತ್ತಾನೆ.
೪ ಆ. ಆಡಳಿತದವರ ನೇಮಕದ ಸಮಯದಲ್ಲಿ ನಡೆಯುವ ಭ್ರಷ್ಟಾಚಾರ ! : ಆಡಳಿತದ ಕಾರ್ಯದ ವಿಷಯದಲ್ಲಿ ಪೊಲೀಸ್ ಮುಖ್ಯಾಲಯದಿಂದ ಪೊಲೀಸ್ ಮಹಾಸಂಚಾಲಕ ಕಾರ್ಯಾಲಯದ ಶಾಖೆ, ವಿಶೇಷ ಭದ್ರತೆಯ ವಿಭಾಗ, ಗೂಢಚಾರ ವಿಭಾಗ, ಪೊಲೀಸ್ ಆಯುಕ್ತ ಕಾರ್ಯಾಲಯದ ಶಾಖೆ ಇತ್ಯಾದಿ ಸ್ಥಳದಲ್ಲಿ ಪೊಲೀಸ್ ಅಧಿಕಾರಿಯನ್ನು ಕಳುಹಿಸಲಾಗುತ್ತದೆ. ಅಲ್ಲಿ ನೇಮಕವಾಗಲು ಮುಖ್ಯಾಲಯದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನಿರ್ದಿಷ್ಟವಾದ ಮೊತ್ತವನ್ನು ಲಂಚದ ರೂಪದಲ್ಲಿ ಕೊಡಲಾಗುತ್ತದೆ. ಯಾರು ಕೊಡುತ್ತಾನೋ, ಅವನನ್ನೇ ಅಲ್ಲಿಗೆ ಕಳುಹಿಸಲಾಗುತ್ತದೆ ಆಥವಾ ಅಲ್ಲಿ ವಶೀಲಿಯಿಂದ (ಹಿರಿಯರ ಅಥವಾ ರಾಜಕಾರಣಿಗಳ ಶಿಫಾರಸು ಇದ್ದವರನ್ನು) ನೇಮಕ ಮಾಡಲಾಗುತ್ತದೆ. ಅಲ್ಲಿಯೂ ಅಧಿಕಾರಿಗಳ ದೋಷ ಇರುವುದಿಲ್ಲ. ಈ ಪೊಲೀಸ್ ಸಿಬ್ಬಂದಿಯೇ ಪೊಲೀಸ್ ಅಧಿಕಾರಿಗಳಿಗೆ ಹಣ ಕೊಡುವ ಅಭ್ಯಾಸ ಮಾಡಿರುತ್ತಾರೆ ಮತ್ತು ಹಿರಿಯ ಅಧಿಕಾರಿಗಳಿಗೆ ಏನೂ ಮಾಡದೆ ಬೇಕಾದಷ್ಟು ಹಣ ಸಿಗುತ್ತದೆ; ಏಕೆಂದರೆ ಇಲ್ಲಿ ಪೊಲೀಸ್ ಅಧಿಕಾರಿಗೆ ವನ್ ಸ್ಟೆಪ್ ಪ್ರಮೋಶನ್ (ಒಂದು ಮೆಟ್ಟಿಲಿನ ಪ್ರಮೋಶನ) ಸಿಗುತ್ತದೆ ಮತ್ತು ಒಂದುವರೆ ಪಟ್ಟು ವೇತನ ಸಿಗುತ್ತದೆ. ಅದೇ ರೀತಿ ಪೊಲೀಸ್ ಅಧಿಕಾರಿಗೆ ಸಚಿವಾಲಯದ ಸಿಬ್ಬಂದಿ ಜೊತೆಗೆ ‘ಸಹಾಯಕರೆಂದು ಕಾರ್ಯಾಲಯದ ಕರ್ತವ್ಯವನ್ನು ನೀಡಲಾಗುತ್ತದೆ. ಅವರ ಕರ್ತವ್ಯ ದಿನದ ೮ ಗಂಟೆ ಮಾತ್ರ ಇರುತ್ತದೆ. ಆದ್ದರಿಂದ ಅವರು ಪೊಲೀಸ್ ಅಧಿಕಾರಿಗಳಿಗೆ ಹಣ ಕೊಡುತ್ತಾರೆ.
೪ ಇ. ಹಕ್ಕಿನ ರಜೆಯನ್ನು ಸಮ್ಮತಿಸಿಕೊಳ್ಳಲು ಕೂಡ ಹಣ ತೆಗೆದು ಕೊಳ್ಳಲಾಗುತ್ತದೆ. ಕೆಲವರು ಕಾನೂನುಬಾಹಿರವಾಗಿ ತಮ್ಮ ಊರಿನ ಮನೆಗಳಿಗೆ ಹೋಗಿ ೧ ತಿಂಗಳು ಇದ್ದು ಬರುತ್ತಾರೆ. ಆದರೂ ಅಲ್ಲಿ ಅವರ ಹಾಜರಿ ಪುಸ್ತಕದಲ್ಲಿ ಹಾಜರಿಯನ್ನು ಹಾಕಿರುತ್ತದೆ. ಇದಕ್ಕಾಗಿ ಹೆಚ್ಚು ಪ್ರಮಾಣದಲ್ಲಿ ಹಣ ಕೊಡಲಾಗುತ್ತದೆ. ಹಿಂದೆ ಕೆಲವು ಸಿಬ್ಬಂದಿಗಳು ಅರ್ಧ ವೇತನವನ್ನು ಕೊಟ್ಟು ಶಾಶ್ವತವಾಗಿ ಮನೆಯಲ್ಲಿರುತ್ತಿದ್ದರು. ಅವರ ಹಾಜರಿ ಪುಸ್ತಕದಲ್ಲಿ ಹಾಜರಿ ಇರುತ್ತಿತ್ತು. ಅದರ ಹಿಂದೆ ಕೆಳಗಿಂದ ಮೇಲಿನವರೆಗೆ ದೊಡ್ಡ ಅರ್ಥಕಾರಣವಿರುತ್ತದೆ. ಮುಖ್ಯಾಲಯದಲ್ಲಿ ಮನುಷ್ಯಬಲ ಹೆಚ್ಚು ಪ್ರಮಾಣದಲ್ಲಿರುತ್ತದೆ. ಆದ್ದರಿಂದ ಇಂತಹ ಅರ್ಥಪೂರೈಕೆ ಮಾಡುವ ಸಿಬ್ಬಂದಿಗಳನ್ನು ಅಡಗಿಸಲಾಗುತ್ತದೆ. ಕಾಗದಪತ್ರದಲ್ಲಿ ಅವರು ‘ಡ್ಯೂಟಿಯಲ್ಲಿದ್ದಾರೆ, ಎಂದು ತೋರಿಸಲಾಗುತ್ತದೆ ಪೊಲೀಸರು ಕಾಯಿಲೆ ಬಿದ್ದಾಗ ಔಷಧೋಪಚಾರಕ್ಕಾಗಿ ಆಸ್ಪತ್ರೆಗೆ ಹೋಗುತ್ತಾರೆ. ಅಲ್ಲಿ ‘ಮೆಡಿಕಲ್ ರಜೆ ಬೇಕಿದ್ದರೆ, ಅಲ್ಲಿನ ಪೊಲೀಸ್ ವೈದ್ಯಕೀಯ ಅಧಿಕಾರಿಗಳಿಗೆ ೨೦೦-೩೦೦ ರೂಪಾಯಿಗಳನ್ನು ನೀಡಬೇಕಾಗುತ್ತದೆ.
೪ ಇ ೧. ವಿಶೇಷ ಪ್ರಸಂಗಗಳಲ್ಲಿ ರಜೆ ಸಿಗದಿರುವುದರಿಂದ ಸುಳ್ಳು ಕಾರಣ ಹೇಳಿ, ಲಂಚ ಕೊಟ್ಟು ರಜೆ ತೆಗೆದುಕೊಳ್ಳುವ ಪೊಲೀಸರು : ಕೆಲವು ಪ್ರಸಂಗಗಳಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ತಕ್ಷಣ ರಜೆ ಬೇಕಾಗುತ್ತದೆ. ಗಣೇಶೋತ್ಸವ, ದಸರಾ, ದೀಪಾವಳಿ, ನವರಾತ್ರೋತ್ಸವ ಇತ್ಯಾದಿ ಹಬ್ಬಗಳ ಸಮಯದಲ್ಲಿ ಹಾಗೂ ಶಾಲೆಗಳಿಗೆ ರಜೆ ಇರುವ ಮೇ ತಿಂಗಳಲ್ಲಿ ರಜೆಯನ್ನು ಕೊಡುವುದಿಲ್ಲ. ಆಗ ಕೆಲವು ಪೊಲೀಸ್ ಅಧಿಕಾರಿಗಳು ಕಾಯಿಲೆ ಇದೆಯೆಂದು ಸುಳ್ಳು ಹೇಳಿ ಪೊಲೀಸ್ ಆಸ್ಪತ್ರೆಯ ಆಧುನಿಕ ವೈದ್ಯರಿಂದ ವೈದ್ಯಕೀಯ ರಜೆಯನ್ನು ಸಮ್ಮತಿಸಿಕೊಳ್ಳುತ್ತಾರೆ. ಈ ಅವಧಿಯಲ್ಲಿ ಅವರು ತಮ್ಮ ಊರಿಗೆ ಹೋಗಿ ಬರುತ್ತಾರೆ. ಇಂತಹ ಪೊಲೀಸ್ ಸಿಬ್ಬಂದಿಗಳು ತಮ್ಮ ವೈದ್ಯಕೀಯ ರಜೆಯನ್ನು ಶಿಫಾರಸ್ಸು ಮಾಡಿ ಅದರ ಬದಲಿಗೆ ಹಣ ತೆಗೆದುಕೊಳ್ಳುವ ಪೊಲೀಸ್ ಆಸ್ಪತ್ರೆಯ ಕೆಲವು ಆಧುನಿಕ ವೈದ್ಯರೂ ಇದ್ದಾರೆ. ಕೆಲವೊಮ್ಮೆ ಹೀಗೆ ಸುಳ್ಳು ಕಾಯಿಲೆ ಬಿದ್ದ ಪೊಲೀಸರು ನೀಡಿರುವ ವೈದ್ಯಕೀಯ ರಜೆಯನ್ನು ಮುಗಿಸಿ (೩-೪ ವಾರವೆಂದು ಪೊಲೀಸ್ ಆಸ್ಪತ್ರೆಯ ಆಧುನಿಕ ವೈದ್ಯರ ಶಿಫಾರಸ್ಸು ಪಡೆದಿರುವ) ೪ ರಿಂದ ೫ ತಿಂಗಳಲ್ಲಿ ಮುಖ್ಯಾಲಯದಲ್ಲಿ ಹಾಜರಾಗಬೇಕಾಗುತ್ತದೆ. ಆಗ ಮುಖ್ಯಾಲಯದ ಪ್ರಾಮಾಣಿಕ ಶಿಸ್ತಿನ ಪ್ರಭಾರಿ ಪೊಲೀಸ್ ಅಧಿಕಾರಿ ಅವರಿಗೆ ಪೊಲೀಸ್ ಆಸ್ಪತ್ರೆಯ ಮೂಲಕ ಈ ಪೊಲೀಸರ ಶಾರೀರಿಕ ಹಾಗೂ ವೈದ್ಯಕೀಯ ತಪಾಸಣೆ ಮಾಡಲು ಮತ್ತು ಕರ್ತವ್ಯಕ್ಕೆ ಪಾತ್ರರಾಗಿದ್ದಾರೆಯೇ, ಎಂದು ತಿಳಿದುಕೊಳ್ಳಲು ಪೊಲೀಸ್ ಆಸ್ಪತ್ರೆಯ ಮೂಲಕ ರಾಜ್ಯ ಸರಕಾರಿ ಆಸ್ಪತ್ರೆಗೆ ಕಳುಹಿಸುತ್ತಾರೆ. ಅದರಲ್ಲಿ ಆ ಪೊಲೀಸ್ ಸಿಬ್ಬಂದಿಗೆ ವೈದ್ಯಕೀಯ ತಪಾಸಣೆಗಾಗಿ ಪದೇ ಪದೇ ಅಲೆದಾಡಬೇಕಾಗುತ್ತದೆ. ಎಲ್ಲ ವೈದ್ಯಕೀಯ ತಪಾಸಣೆ ಮಾಡಬೇಕಾಗುತ್ತದೆ. ಅಲ್ಲಿ ಅವರಿಗೆ ‘ಅರ್ಹರಾಗಿದ್ದಾರೆ ಎಂದು ಪ್ರಮಾಣಪತ್ರ ಪಡೆಯಲು ಕೆಲವೊಮ್ಮೆ ವೈದ್ಯಕೀಯ ಮೇಲಧಿಕಾರಿಗೆ ಹಣ (ಲಂಚ) ಕೊಡಬೇಕಾಗುತ್ತದೆ.
೪ ಇ ೨. ರಜೆ, ವೇತನ ಇತ್ಯಾದಿಗಳ ಕೆಲಸ ಮಾಡುವ ಲಿಪಿಕನಿಗೆ ಲಂಚ ಕೊಡಬೇಕಾಗುತ್ತದೆ : ಕೆಲವೊಮ್ಮೆ ಪೊಲೀಸ್ ಸಿಬ್ಬಂದಿಗೆ ಪೊಲೀಸರಿಗೆ ಸಂಬಂಧಿಸಿದ ಸರಕಾರಿ ಕೆಲಸವನ್ನು ನೋಡುವ ಲಿಪಿಕ, ಪ್ರಮುಖ ಲಿಪಿಕ, ಕಾರ್ಯಾಲಯದ ಅಧೀಕ್ಷಕರಿಗೆ ಹಣ (ಲಂಚ) ಕೊಡಬೇಕಾಗುತ್ತದೆ; ಏಕೆಂದರೆ ಈ ಬಾಬೂಗಳು ಪೊಲೀಸ್ ಸಿಬ್ಬಂದಿಗಳ ರಜೆ, ವೇತನ, ಭತ್ತೆ, ಉಡುಗೊರೆ ಇತ್ಯಾದಿಗಳ ಕೆಲಸ ನೋಡಿಕೊಳ್ಳುತ್ತಾರೆ. ಕೆಲವೊಮ್ಮೆ ಪೊಲೀಸ್ ಸಿಬ್ಬಂದಿಗಳ ವೇತನ ಬಾಕಿಯಾದರೆ, ಉಡುಗೊರೆಗಳ ದಾಖಲೆ, ಪೊಲೀಸ್ ಸಿಬ್ಬಂದಿಗಳ ಪ್ರತಿನಿಯುಕ್ತಿ, ವರ್ಗಾವಣೆ ಇತ್ಯಾದಿಗಾಗಿ ಪೊಲೀಸರಿಂದ ಲಂಚ ತೆಗೆದುಕೊಳ್ಳಲಾಗುತ್ತದೆ. ಈ ಬಾಬೂಗಳಿಗೆ ಹಣ ಕೊಡದಿದ್ದರೆ ಅವರ ಕೆಲಸದಲ್ಲಿ ಕಾಲಹರಣ ಮಾಡುತ್ತಾರೆ. ಉದ್ದೇಶಪೂರ್ವಕ ತಡ ಮಾಡುತ್ತಾರೆ. ಆದ್ದರಿಂದ ಪೊಲೀಸರ ಕೆಲವು ಪ್ರಕರಣಗಳಲ್ಲಿ ಆರ್ಥಿಕ ಹಾನಿಯಾಗುತ್ತದೆ. ಪೊಲೀಸ್ ಸಿಬ್ಬಂದಿಗಳಿಗೆ ಶಿಕ್ಷೆಯಾದರೆ ಅದರ ದಾಖಲೆಯನ್ನು ಸೇವಾ ಪುಸ್ತಕದಲ್ಲಿ ತಕ್ಷಣ ದಾಖಲಿಸಲಾಗುತ್ತದೆ.
೧೯೯೫-೯೬ ರಲ್ಲಿ ಪೊಲೀಸರ ಅಡಚಣೆ, ಪೊಲೀಸರ ನೆನೆಗುದಿಯಲ್ಲಿರುವ ಕೆಲಸಗಳನ್ನು ಪೂರ್ಣಗೊಳಿಸಲಿಲ್ಲವೆಂದು ಮುಂಬಯಿಯ ಪರಿಮಂಡಳ-೮ ರ ಅಂದಿನ ಪೊಲೀಸ್ ಉಪಾಯುಕ್ತ ಶ್ರೀ. ಸಂಜಯ ಪಾಂಡೆ ಇವರು ಅವರ ಆಧೀನದಲ್ಲಿರುವ ೬ ಲಿಪಿಕ (ಸಚಿವಾಲಯದಲ್ಲಿನ ಕಾರ್ಮಿಕರು) ರನ್ನು ಒಂದೇ ಬಾರಿಗೆ ವಜಾಗೊಳಿಸಿದ್ದರು.
– ಓರ್ವ ನಿವೃತ್ತ ಪೊಲೀಸ್ (ಮುಂದುವರಿಯುವುದು)
ಸಾಧಕರಿಗೆ ಸೂಚನೆ ಮತ್ತು ವಾಚಕರಿಗೆ ಮತ್ತು ಹಿತಚಿಂತಕರಿಗೆ ವಿನಂತಿ !ಪೊಲೀಸರು ಮತ್ತು ಆಡಳಿತದವರ ವಿಷಯದಲ್ಲಿ ಬರುವ ಕಹಿ ಅನುಭವವನ್ನು ತಿಳಿಸಿರಿ ! ನ್ಯಾಯಾಲಯ, ಪ್ರಸಾರಮಾಧ್ಯಮಗಳು, ಸರಕಾರ ಮತ್ತು ಆಡಳಿತ ಇವು ಪ್ರಜಾಪ್ರಭುತ್ವದ ಪ್ರಮುಖ ನಾಲ್ಕು ಆಧಾರಸ್ತಂಭಗಳಾಗಿವೆ. ನಿಜವಾಗಿ ನೋಡಿದರೆ ಸಮಾಜಕ್ಕೆ ಈ ಆಧಾರಸ್ತಂಭಗಳ ಆಧಾರವೆನಿಸುವ ಬದಲು ತೊಂದರೆಯೇ ಹೆಚ್ಚಾಗುತ್ತಿರುವ ಅನುಭವ ಸಾಮಾನ್ಯ ಜನರಿಗೆ ಆಗುತ್ತಿದೆ. ನಮಗೆ ರಾಮರಾಜ್ಯದಂತಹ ಆದರ್ಶವಾದ ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರವನ್ನು ಸ್ಥಾಪನೆ ಮಾಡಲಿಕ್ಕಿರುವುದರಿಂದ ಎಲ್ಲ ಕ್ಷೇತ್ರಗಳಲ್ಲಿಯೂ ನಡೆಯುತ್ತಿರುವ ಅನಾಚಾರ ಹಾಗೂ ಭ್ರಷ್ಟಾಚಾರದ ವಿಷಯದಲ್ಲಿ ಸಮಾಜದಲ್ಲಿ ಜಾಗೃತಿ ಮೂಡಿಸಿ ಅದನ್ನು ತಡೆಗಟ್ಟಲು ಪ್ರಯತ್ನಿಸಲಿಕ್ಕಿದೆ. ಈ ದೃಷ್ಟಿಯಿಂದ ಈ ಮೇಲಿನ ಲೇಖನದಲ್ಲಿ ನೀಡಿರುವ ಹಾಗೆ ಅಥವಾ ಪೊಲೀಸ್-ಆಡಳಿತದಲ್ಲಿನ ಸಿಬ್ಬಂದಿಗಳು ಅಥವಾ ಅಧಿಕಾರಿಗಳ ನಾಗರಿಕರೊಂದಿಗಿನ ಅಯೋಗ್ಯ ವರ್ತನೆ-ಮಾತನಾಡುವುದು, ನಾಗರಿಕರನ್ನು ಸುಲಿಗೆ ಮಾಡುವುದು, ಕರ್ತವ್ಯಲೋಪ, ಅವ್ಯವಹಾರ, ಭ್ರಷ್ಟಾಚಾರ ಮಾಡುವುದು, ಕೆಲಸದ ವೇಳೆಯಲ್ಲಿ ವೈಯಕ್ತಿಕ ಕೆಲಸ ಮಾಡುವುದು, ಅನಾವಶ್ಯಕ ಹಾಗೂ ಅಶ್ಲೀಲ ಹರಟೆ ಹೊಡೆಯುವುದು, ಮೊಬೈಲ್‌ನಲ್ಲಿ ಸಮಯ ಕಳೆಯುವುದು ಇತ್ಯಾದಿ ಕೃತ್ಯಗಳಿಂದ ಸಮಯ ವ್ಯರ್ಥ ಮಾಡುವುದು; ಕಾರ್ಯಾಲಯದಲ್ಲಿ ಅಥವಾ ಕಾರ್ಯಾಲಯ ವೇಳೆಯಲ್ಲಿ ವ್ಯಸನ ಮಾಡುವುದು ಇತ್ಯಾದಿ ಸ್ವರೂಪದ ಕಹಿಅನುಭವ ಆಗಿದ್ದರೆ, ಅದನ್ನು ಮುಂದೆ ನೀಡಿರುವ ವಿಳಾಸಕ್ಕೆ ಕಳುಹಿಸಬೇಕು. ಈ ಲೇಖನದ ಉದ್ದೇಶ ‘ಪೊಲಿಸ್ ಮತ್ತು ಆಡಳಿತ ಹೇಗಿರಬಾರದು ಎಂದು ತಿಳಿಯಬೇಕೆಂದು, ಸಂಬಂಧಪಟ್ಟ ಸಿಬ್ಬಂದಿಗಳು/ಅಧಿಕಾರಿಗಳಿಗೆ ಅವರ ಅಯೋಗ್ಯ ಕೃತಿಗಳ ಅರಿವಾಗಿ ಅವರು ಅದರಲ್ಲಿ ಸುಧಾರಣೆ ಮಾಡಿಕೊಳ್ಳಬೇಕು ಹಾಗೂ ನಾಗರಿಕರು ತಮ್ಮ ರಾಷ್ಟ್ರಕರ್ತವ್ಯವೆಂದು ಇಂತಹ ವಿಷಯಗಳತ್ತ ದುರ್ಲಕ್ಷ ಮಾಡದೆ ಅದನ್ನು ಸುಧಾರಿಸಲು ಪ್ರಯತ್ನಿಸಬೇಕು, ಪ್ರಸಂಗಾನುಸಾರ ಇದರ ವಿರುದ್ಧ ದೂರು ನೀಡಬೇಕು, ಎಂಬುದಾಗಿದೆ. ವಿಳಾಸ : ನ್ಯಾಯವಾದಿ ನೀಲೇಶ ಸಾಂಗೋಲ್ಕರ್, ಸನಾತನ ಆಶ್ರಮ, 24/B, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಸಂಪರ್ಕ ಕ್ರಮಾಂಕ : 9595984844 ವಿ-ಅಂಚೆ : [email protected] |