Supreme Court Stay : ಕಾನೂನು ಉಲ್ಲಂಘಿಸುವ ಮದರಸಾಗಳನ್ನು ಮುಚ್ಚಲು ಮಾಡಿರುವ ಶಿಫಾರಸ್ಸಿಗೆ ಸರ್ವೋಚ್ಚ ನ್ಯಾಯಾಲಯದಿಂದ ತಡೆ

ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗದಿಂದ ಮಾಡಿದ್ದ ಶಿಫಾರಸ್ಸು

ನವ ದೆಹಲಿ – ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗವು ಶಿಕ್ಷಣ ಹಕ್ಕು ಕಾಯಿದೆಯನ್ನು ಪಾಲಿಸದಿರುವ ಸರಕಾರಿ ಅನುದಾನಿತ ಮದರಸಾಗಳನ್ನು ಮುಚ್ಚಲು ಶಿಫಾರಸು ಮಾಡಿತ್ತು. ಈ ಶಿಫಾರಸ್ಸಿಗೆ ಸರ್ವೋಚ್ಚ ನ್ಯಾಯಾಲಯವು ತಡೆಯಾಜ್ಞೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ಧನಂಜಯ ಚಂದ್ರಚೂಡ, ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಮನೋಜ ಮಿಶ್ರಾ ಅವರ ಖಂಡಪೀಠವು ಈ ಬಗ್ಗೆ ವಿಚಾರಣೆ ನಡೆಸಿದೆ. ಈ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ಜಾರಿ ಮಾಡಿದೆ. 4 ವಾರಗಳ ನಂತರ ಮತ್ತೆ ವಿಚಾರಣೆ ನಡೆಯಲಿದೆ. ಸರ್ವೋಚ್ಚ ನ್ಯಾಯಾಲಯವು ಈ ಸಮಯದಲ್ಲಿ ಮಾನ್ಯತೆ ಇಲ್ಲದ ಮದರಸಾಗಳ ವಿದ್ಯಾರ್ಥಿಗಳನ್ನು ಸರಕಾರಿ ಶಾಲೆಗಳಿಗೆ ವರ್ಗಾಯಿಸುವ ಉತ್ತರ ಪ್ರದೇಶ ಸರಕಾರದ ನಿರ್ಧಾರಕ್ಕೂ ತಡೆಯಾಜ್ಞೆ ನೀಡಿದೆ.

ಆಯೋಗದ ಅಧ್ಯಕ್ಷರಾದ ಶ್ರೀ. ಪ್ರಿಯಾಂಕ ಕನುನಗೊ ಮಾತನಾಡಿ, “ನಾನು ಎಂದಿಗೂ ಮದರಸಾವನ್ನು ಮುಚ್ಚುವಂತೆ ಹೇಳಿಲ್ಲ, ಬದಲಾಗಿ ಈ ಸಂಸ್ಥೆಗಳಿಗೆ ಸರಕಾರ ನೀಡುತ್ತಿರುವ ಅನುದಾನವನ್ನು ಸ್ಥಗಿತಗೊಳಿಸುವಂತೆ ಶಿಫಾರಸ್ಸು ಮಾಡಿದ್ದೇನೆ; ಕಾರಣ ಈ ಸಂಸ್ಥೆಗಳು ಬಡ ಮುಸಲ್ಮಾನ ಮಕ್ಕಳಿಗೆ ಶಿಕ್ಷಣದಿಂದ ವಂಚಿಸುತ್ತಿದೆ. ನಾವು ಮಕ್ಕಳಿಗೆ ಮದರಸಾ ಬದಲಾಗಿ ಸಾಮಾನ್ಯ ಶಾಲೆಗಳಿಗೆ ಸೇರಿಸಬೇಕೆಂದು ಶಿಫಾರಸು ಮಾಡಿದ್ದೇವೆ.” ಎಂದು ಹೇಳಿದರು.

ಶಿಫಾರಸ್ಸಿನಲ್ಲಿ ಏನಿತ್ತು ?

ಆಯೋಗವು ಇತ್ತೀಚೆಗೆ ನೀಡಿರುವ ವರದಿಯಲ್ಲಿ ಮದರಸಾಗಳ ಕಾರ್ಯನಿರ್ವಹಣೆಯ ಬಗ್ಗೆ ಗಂಭೀರ ಚಿಂತೆಯನ್ನು ವ್ಯಕ್ತಪಡಿಸಿದ್ದರು ಮತ್ತು ಅವರು ಶಿಕ್ಷಣ ಹಕ್ಕು ಕಾಯಿದೆಯನ್ನು ಅನುಸರಿಸದೇ ಇದ್ದರೆ ಸರಕಾರದಿಂದ ಅವರಿಗೆ ಒದಗಿಸುವ ಅನುದಾನವನ್ನು ನಿಲ್ಲಿಸುವಂತೆ ಕರೆ ನೀಡಿತ್ತು. ಆಯೋಗವು, ಬಡ ಮುಸ್ಲಿಂ ಮಕ್ಕಳ ಮೇಲೆ ಜಾತ್ಯತೀತ ಶಿಕ್ಷಣದ ಬದಲಿಗೆ ಧಾರ್ಮಿಕ ಶಿಕ್ಷಣ ನೀಡುವಂತೆ ಒತ್ತಡ ಹೇರುತ್ತಾರೆ. ಶ್ರೀಮಂತ ಕುಟುಂಬಗಳು ಧಾರ್ಮಿಕ ಮತ್ತು ನಿಯಮಿತ ಶಿಕ್ಷಣದಲ್ಲಿ ಹೂಡಿಕೆ ಮಾಡುತ್ತಾರೆಯೋ, ಅದೇ ರೀತಿ ಬಡ ಮಕ್ಕಳಿಗೂ ಈ ಶಿಕ್ಷಣ ನೀಡಬೇಕು. ಎಲ್ಲರಿಗೂ ಸಮಾನ ಶೈಕ್ಷಣಿಕ ಅವಕಾಶ ನೀಡಬೇಕು. ಎಲ್ಲರಿಗೂ ಸಮಾನವಾದ ಶಿಕ್ಷಣದ ಅವಕಾಶಗಳನ್ನು ಒದಗಿಸುವುದು ನಮ್ಮ ಆಶಯವಾಗಿದೆ.