ಆಪತ್ಕಾಲವು ಸಹನೀಯವಾಗಲು ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರಗಳಲ್ಲಿ ಸಿದ್ಧತೆಯನ್ನು ಮಾಡಿರಿ ! (ಸ್ವಯಂಸೂಚನೆ-ಉಪಾಯ, ಸಾಧನೆಯ ಮಹತ್ವ ಇತ್ಯಾದಿ)

ಆಪತ್ಕಾಲದಲ್ಲಿ ಜೀವಂತವಾಗಿರಲು ಮಾರ್ಗದರ್ಶನ ಮಾಡುವ ಸನಾತನ ಸಂಸ್ಥೆ !

ಅಖಿಲ ಮನುಕುಲವು ಆಪತ್ಕಾಲದಲ್ಲಿ ಜೀವಂತವಾಗಿರಲು ಸಿದ್ಧತೆ ಮಾಡಿಕೊಳ್ಳುವ ಕುರಿತು ಮಾರ್ಗದರ್ಶನ ಮಾಡುವ ಏಕೈಕ ಪರಾತ್ಪರ ಗುರು ಡಾ. ಜಯಂತ ಆಠವಲೆ !

ಪರಾತ್ಪರ ಗುರು ಡಾ. ಆಠವಲೆ

ಸನಾತನದ ‘ಆಪತ್ಕಾಲದಲ್ಲಿ ಜೀವರಕ್ಷಣೆ’ ಈ ಗ್ರಂಥಮಾಲಿಕೆಯ ೨ ಹೊಸ ಗ್ರಂಥಗಳು ಪ್ರಕಾಶಿತ !

ಸನಾತನದ ‘ಆಪತ್ಕಾಲದಲ್ಲಿ ಜೀವರಕ್ಷಣೆ ಈ ಗ್ರಂಥಮಾಲಿಕೆಯ ಕಿರುಪರಿಚಯವನ್ನು ಈ ಎರಡು ಲೇಖನಗಳಿಂದ ಮಾಡಿಕೊಡುತ್ತಿದ್ದೇವೆ. ನೆರೆ, ಭೂಕಂಪ, ಮಹಾಯುದ್ಧ ಮುಂತಾದ ಸ್ವರೂಪದ  ಆಪತ್ಕಾಲದಲ್ಲಿ ಜೀವನ ನಡೆಸಲು ಬೇಕಾಗಿರುವ ಆಹಾರ, ನೀರು, ವಿದ್ಯುತ್, ನಿತ್ಯೋಪಯೋಗಿ ವಸ್ತು ಇತ್ಯಾದಿಗಳ ಬಗ್ಗೆ ಪೂರ್ವಸಿದ್ಧತೆಯನ್ನು ಈ ಗ್ರಂಥ ಮಾಲಿಕೆಯ ಮೊದಲ ಖಂಡದಲ್ಲಿ ಹೇಳಲಾಗಿದೆ. ‘ಈ ಭೀಕರ ಆಪತ್ಕಾಲವನ್ನು ಎದುರಿಸಲು ಮಾನಸಿಕ, ಕೌಟುಂಬಿಕ, ಆರ್ಥಿಕ ಇತ್ಯಾದಿ ಸ್ತರಗಳಲ್ಲಿ ಹೇಗೆ ಪೂರ್ವತಯಾರಿ ಮಾಡಬೇಕು, ಎಂಬುದನ್ನು ಎರಡನೇ ಖಂಡದಲ್ಲಿ ಹೇಳಲಾಗಿದೆ. ‘ಆಧ್ಯಾತ್ಮಿಕ ಪೂರ್ವತಯಾರಿಗಳ ಪೈಕಿ ಸಾಧನೆ ಮಾಡುವುದಕ್ಕೆ ಅಸಾಧಾರಣ ಮಹತ್ವ ಏಕಿದೆ, ಎಂಬುದು ಈ ಖಂಡದಲ್ಲಿ ಸ್ಪಷ್ಟವಾಗುವುದು. ಈ ಎರಡನೇ ಖಂಡದ ಕಿರುಪರಿಚಯವಾಗಲು ಅದರಲ್ಲಿನ ಕೆಲವು ಮಾಹಿತಿಯನ್ನು ಈ ವಾರದ ಲೇಖನದಲ್ಲಿ ನೀಡಲಾಗಿದೆ.

ಗ್ರಂಥದ ಸಂಕಲಕರು : ಪರಾತ್ಪರಗುರು ಡಾ. ಆಠವಲೆ ಮತ್ತು ಪೂ. ಸಂದೀಪ ಆಳಶಿ

ಲೇಖನ ೨

೧.  ಆಪತ್ಕಾಲದ ದೃಷ್ಟಿಯಿಂದ ಮಾನಸಿಕ ಸ್ತರದಲ್ಲಿ ಮಾಡಬೇಕಾದ ಸಿದ್ಧತೆ

ನೆರೆ, ಭೂಕಂಪ, ಗಲಭೆ, ಮಹಾಯುದ್ಧ ಇತ್ಯಾದಿ ವಿಪತ್ತುಗಳ ಸಮಯದಲ್ಲಿ ಅತ್ಯಂತ ಪ್ರತಿಕೂಲ ಪರಿಸ್ಥಿತಿ ಉದ್ಭವಿಸುತ್ತದೆ. ಇಂತಹ ಸಂದರ್ಭಗಳಲ್ಲಿ ಎಲ್ಲೆಡೆ ವಿಧ್ವಂಸಗಳಾಗುವುದು, ಬೆಂಕಿ ತಗಲುವುದು, ಬೀದಿ ಬೀದಿಗಳಲ್ಲಿ ಮೃತದೇಹಗಳು ಬಿದ್ದಿರುವುದು ಮುಂತಾದ ಘಟನೆಗಳು ಘಟಿಸುತ್ತವೆ. ಇಂತಹ ಘಟನೆಗಳನ್ನು ನೋಡಿ ಅಥವಾ ಕೇಳಿ ಅನೇಕರಿಗೆ ಮನಸ್ಸು ಅಸ್ಥಿರವಾಗುವುದು, ಮನಸ್ಸಿನ ಮೇಲೆ ಒತ್ತಡ ಬರುವುದು, ಚಿಂತೆಯಾಗುವುದು, ಹೆದರಿಕೆಯಾಗುವುದು, ಪರಿಸ್ಥಿತಿಯನ್ನು ಸ್ವೀಕರಿಸಲು ಆಗದಿರುವುದು ಇತ್ಯಾದಿ ತೊಂದರೆಗಳಾಗುತ್ತವೆ. ಹೆಚ್ಚಿನ ಜನರಿಗೆ ಭವಿಷ್ಯತ್ಕಾಲದಲ್ಲಿ ಬರಬಹುದಾದ ಇಂತಹ ವಿಪತ್ತುಗಳ ಕಲ್ಪನೆಯಿಂದಲೇ ಮೇಲಿನಂತಹ ತೊಂದರೆಗಳಾಗುತ್ತವೆ, ಹಾಗೆಯೇ ಸಂಬಂಧಿಕರಲ್ಲೂ ಭಾವನಾತ್ಮಕವಾಗಿ ಸಿಲುಕುತ್ತಾರೆ. ಇಂತಹ ತೊಂದರೆಗಳಾಗಬಾರದೆಂದು, ಅಂದರೆ ಮನಸ್ಸಿನ ಸಮತೋಲನ ಹಾಳಾಗಬಾರದೆಂದು ಮತ್ತು ಪ್ರತಿಕೂಲ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಲು ಸಾಧ್ಯವಾಗಬೇಕೆಂದು ಮಾಡುವ ಪರಿಹಾರೋಪಾಯಗಳನ್ನು ಮುಂದೆ ನೀಡಲಾಗಿದೆ.

೧ ಅ. ಆಪತ್ಕಾಲದಲ್ಲಿನ ಭೀಕರ ಪರಿಸ್ಥಿತಿಯನ್ನು ಎದುರಿಸಲು ಮನೋಬಲ ಬರಬೇಕೆಂದು ಬೇಕೆಂದು ಸ್ವಯಂಸೂಚನಾ ಪದ್ಧತಿಯನ್ನು ಉಪಯೋಗಿಸಬೇಕು!

೧ ಅ ೧.  ‘ಸ್ವಯಂಸೂಚನೆ ಎಂದರೇನು ? : ನಮ್ಮಿಂದಾದ ಅಯೋಗ್ಯ ಕೃತಿ, ಮನಸ್ಸಿನಲ್ಲಿ ಉಂಟಾದ ಅಯೋಗ್ಯ ವಿಚಾರ ಅಥವಾ ಭಾವನೆ ಮತ್ತು ವ್ಯಕ್ತವಾದ ಅಥವಾ ಮನಸ್ಸಿನಲ್ಲಿ ಮೂಡಿದ ಅಯೋಗ್ಯ ಪ್ರತಿಕ್ರಿಯೆಯ ಸಂದರ್ಭದಲ್ಲಿ ಯೋಗ್ಯ ಕೃತಿಯಾಗಲು ಅಥವಾ ಮನಸ್ಸಿನಲ್ಲಿ ಯೋಗ್ಯ ಪ್ರತಿಕ್ರಿಯೆ ಮೂಡಲು ನಾವೇ ನಮ್ಮ ಅಂತರ್ಮನಸ್ಸಿಗೆ (ಚಿತ್ತಕ್ಕೆ) ಯೋಗ್ಯ ಸೂಚನೆಗಳನ್ನು ಕೊಡುವುದು ಆವಶ್ಯಕವಾಗಿರುತ್ತದೆ. ಅದಕ್ಕೆ ‘ಸ್ವಯಂಸೂಚನೆ ಎನ್ನುತ್ತಾರೆ. (ಸ್ವಯಂ ಸೂಚನೆ ನೀಡುವುದರ ಮಹತ್ವ, ಸ್ವಭಾವದೋಷ-ನಿರ್ಮೂಲನೆಗಾಗಿ ಉಪಯುಕ್ತವಾಗಿರುವ ವಿವಿಧ ಸೂಚನೆ ಪದ್ದತಿ ಹಾಗೂ ‘ಸ್ವಯಂ ಸೂಚನೆ ನೀಡುವುದು ಇವುಗಳ ಬಗ್ಗೆ ಗ್ರಂಥದಲ್ಲಿ ನೀಡಲಾಗಿದೆ. ‘ಸ್ವಭಾವದೋಷ-ನಿರ್ಮೂಲನೆ ಪ್ರಕ್ರಿಯೆ ವಿಸ್ತಾರವಾಗಿ ತಿಳಿದುಕೊಳ್ಳಲು ಸನಾತನದ ಗ್ರಂಥ ಮಾಲಿಕೆಯನ್ನು ಓದಿರಿ ಅಥವಾ ಸನಾತನ ಸಂಸ್ಥೆಯ ಈ ಮುಂದಿನ ಜಾಲತಾಣದಲ್ಲಿ ಭೇಟಿ ನೀಡಿ – www.sanatan.org/kannada/personality-development )

೧ ಅ ೨. ಭವಿಷ್ಯದಲ್ಲಿನ ಪ್ರವಾಹ ಮತ್ತು ಮಹಾಯುದ್ಧ ಇವುಗಳ ಸಂದರ್ಭದಲ್ಲಿ ನೀಡಬೇಕಾದ ಸ್ವಯಂಸೂಚನೆಗಳ ಉದಾಹರಣೆಗಳು

೧ ಅ ೨ ಅ.  ಪ್ರವಾಹ : ಪ್ರವಾಹದ ವಿಚಾರದಿಂದ ಉಂಟಾಗಿರುವ ಹೆದರಿಕೆಯು ಹೋಗಲು ಕೊಡಬೇಕಾದ ಸೂಚನೆ

ಉದಾಹರಣೆ ೧ : ಸೌ. ಸಾರಿಕಾ ಇವರಿಗೆ, ‘ಮುಂದಿನ ಮಳೆಗಾಲದಲ್ಲಿ ನನ್ನ ಊರಿನ ಸಮೀಪ ಹರಿಯುವ ನದಿಗೆ ಪ್ರವಾಹ ಬರುವುದು ಮತ್ತು ನನ್ನ ಹಾಗೂ ನನ್ನ ಕುಟುಂಬದವರ ಪ್ರಾಣ ಸಂಕಟದಲ್ಲಿ ಸಿಲುಕುವುದು ಎಂದು ಭಯವಾಗುತ್ತದೆ.

೧ ಅ. ಸ್ವಯಂಸೂಚನೆ (‘ಅ ೨ ಪದ್ಧತಿಗನುಸಾರ) : ಯಾವಾಗ ನನ್ನ ಮನಸ್ಸಿನಲ್ಲಿ ‘ಮುಂದಿನ ಮಳೆಗಾಲದಲ್ಲಿ ನದಿಗೆ ಪ್ರವಾಹ ಬರುವುದು ಮತ್ತು ನನ್ನ ಹಾಗೂ ನನ್ನ ಕುಟುಂಬದವರ ಪ್ರಾಣ ಸಂಕಟದಲ್ಲಿ ಸಿಲುಕುವುದು ಎಂಬ ಹೆದರಿಕೆಯ ವಿಚಾರಗಳು ಬರುವವೋ, ಆಗ ‘ಆಹಾರ, ಔಷಧ ಇತ್ಯಾದಿಗಳ ಸಾಕಷ್ಟು ಸಂಗ್ರಹವನ್ನು ನಾನು ಮನೆಯಲ್ಲಿ ಮೊದಲೇ ಮಾಡಿಟ್ಟಿದ್ದೇನೆ. ಪ್ರವಾಹದಲ್ಲಿ ಸುರಕ್ಷಿತವಾಗಿರಲು ಮಾಡಬೇಕಾದ ಆಪತ್ಕಾಲದ ಪರಿಹಾರೋಪಾಯಗಳನ್ನು ನಾನು ಮೊದಲೇ ತಿಳಿದುಕೊಂಡಿದ್ದೇನೆ. ದೇವರೂ ನನ್ನ ಜೊತೆಗಿದ್ದಾರೆ. ಆದ್ದರಿಂದ ನಾನು ಪ್ರವಾಹದ ಸಂಕಟವನ್ನು ದೃಢವಾಗಿ ಎದುರಿಸಬಲ್ಲೆನು, ಎಂಬುದರ ಅರಿವಾಗುವುದು ಮತ್ತು ನಾನು ಶಾಂತವಾಗಿ ನಾಮಜಪಮಾಡುತ್ತಾ ನನ್ನ ಕೆಲಸಗಳನ್ನು ಮಾಡುವೆನು.

೧ ಆ. ಸ್ವಯಂಸೂಚನೆ (‘ಅ ೩ ಪದ್ಧತಿಗನುಸಾರ)

೧. ದಿನವಿಡೀ ಧಾರಾಕಾರವಾಗಿ ಮಳೆ ಬೀಳುತ್ತಿದೆ. ಊರಿನ ಬಳಿ ಹರಿಯುವ ನದಿಗೆ ಪ್ರವಾಹ ಬಂದಿರುವುದರಿಂದ ನಾನು ಮತ್ತು ನನ್ನ ಕುಟುಂಬದವರು ಮನೆಯಲ್ಲಿ ಸಿಲುಕಿಕೊಂಡಿದ್ದೇವೆ.

೨. ನಾನು ದೇವರಿಗೆ, ‘ಹೇ ದೇವರೇ, ನಾನು ನಿನಗೆ ಸಂಪೂರ್ಣ ಶರಣಾಗಿದ್ದೇನೆ. ಈ ಸಂಕಟದಿಂದ ನೀನೇ ನಮ್ಮನ್ನು ರಕ್ಷಿಸು ಎಂದು ಪ್ರಾರ್ಥನೆ ಮಾಡುತ್ತಿದ್ದೇನೆ.

೩. ನಾನು ಮನೆಯಲ್ಲಿ ಆಹಾರ, ಔಷಧ ಇತ್ಯಾದಿಗಳ ಸಾಕಷ್ಟು ಸಂಗ್ರಹವನ್ನು ಮಾಡಿಟ್ಟಿದ್ದೇನೆ. ಇದರಿಂದ ನನಗೆ ಮತ್ತು ಕುಟುಂಬದವರಿಗೆ ಮನೆಯಿಂದ ಹೊರಬರುವ ಅಥವಾ ಇತರ ಯಾವುದೇ ಚಿಂತೆ ಮಾಡುವ ಆವಶ್ಯಕತೆಯಿಲ್ಲ.

೪. ಪ್ರವಾಹದ ಸಮಯದಲ್ಲಿ ಸುರಕ್ಷಿತವಾಗಿರಲು ಮಾಡಬೇಕಾದ ಪರಿಹಾರೋಪಾಯಗಳನ್ನೂ ನಾನು ಮೊದಲೇ ತಿಳಿದುಕೊಂಡಿದ್ದೇನೆ.

೫. ದೇವರೂ ನನ್ನೊಂದಿಗಿದ್ದಾರೆ. ಆದ್ದರಿಂದ ನಾನು ಈ ಪ್ರಸಂಗವನ್ನು ಆತ್ಮವಿಶ್ವಾಸದಿಂದ ಎದುರಿಸುತ್ತಿದ್ದೇನೆ.

೬. ಕೆಲವು ಗಂಟೆಗಳ ನಂತರ ದೂರದರ್ಶನದಲ್ಲಿ ಪ್ರವಾಹವು ಕಡಿಮೆಯಾಗುತ್ತಿರುವುದನ್ನು ತೋರಿಸುತ್ತಿದ್ದಾರೆ.

೭. ನಮಗೆ ಈ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಸಾಮರ್ಥ್ಯವನ್ನು ನೀಡಿದ್ದಕ್ಕಾಗಿ ನಾನು ದೇವರ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದೇನೆ.

೧ ಅ ೨ ಆ. ಮಹಾಯುದ್ಧ : ‘ಮಹಾಯುದ್ಧದ ಕಾಲದಲ್ಲಿ ನಾನು ಸುರಕ್ಷಿತವಾಗಿರಬಹುದಾ ? ಎಂಬ ವಿಚಾರಗಳಿಂದ ಆಗುತ್ತಿದ್ದ ಹೆದರಿಕೆಯನ್ನು ದೂರಗೊಳಿಸಲು ಕೊಡಬೇಕಾದ ಸ್ವಯಂಸೂಚನೆ

ಉದಾಹರಣೆ ೧ : ಶ್ರೀ. ಶಶಿಕಾಂತರಿಗೆ, ‘ಮಹಾಯುದ್ಧದ ಕಾಲದಲ್ಲಾಗುವ ಆಹಾರ ಧಾನ್ಯಗಳು ಮತ್ತು ಔಷಧಗಳ ಕೊರತೆ, ನೀರಿನ ಕೊರತೆ, ವಿದ್ಯುತ್‌ಪೂರೈಕೆ ಇಲ್ಲದಿರುವುದು ಇತ್ಯಾದಿ ಕಷ್ಟಕರ ಪರಿಸ್ಥಿತಿಯಿಂದ ನಾನು ಸುರಕ್ಷಿತವಾಗಿರುವುದು ಕಠಿಣವಾಗಿದೆ ಎಂದು ಹೆದರಿಕೆಯಾಗುತ್ತದೆ.

೧ ಅ. ಸ್ವಯಂಸೂಚನೆ (‘ಅ ೨ ಪದ್ಧತಿಗನುಸಾರ) : ಯಾವಾಗ ನನ್ನ ಮನಸ್ಸಿನಲ್ಲಿ ‘ಭಾವೀ ಮಹಾಯುದ್ಧದ ಕಾಲದಲ್ಲಾಗುವ ಆಹಾರ ಧಾನ್ಯ ಮತ್ತು ಔಷಧಗಳ ಕೊರತೆ, ನೀರಿನ ಕೊರತೆ, ವಿದ್ಯುತ್‌ಪೂರೈಕೆ ಇಲ್ಲದಿರುವುದು ಇತ್ಯಾದಿ ಪರಿಸ್ಥಿತಿಗಳಿಂದ ನಾನು ಸುರಕ್ಷಿತವಾಗಿರುವೆನೇ ? ಎಂಬ ವಿಚಾರಗಳು ಬರುವುದೋ, ಆಗ ‘ಮಹಾಯುದ್ಧದ ಕಾಲದಲ್ಲಿ ಆವಶ್ಯಕವಾಗಿರುವ ಆಹಾರಧಾನ್ಯಗಳು, ಔಷಧ ಇತ್ಯಾದಿಗಳನ್ನು ನಾನು ಸಂಗ್ರಹಿಸಿಡುತ್ತಿದ್ದೇನೆ. ವಿದ್ಯುತ್‌ಗಾಗಿ ಸೌರಶಕ್ತಿ ಯಂತ್ರ, ನೀರಿಗಾಗಿ ಟ್ಯಾಂಕಿಗಳು ಇತ್ಯಾದಿ ಪೂರ್ವಸಿದ್ಧತೆಯನ್ನೂ ನಾನು ಮಾಡುತ್ತಿದ್ದೇನೆ ಎಂಬುದು ನನಗೆ ಅರಿವಾಗುವುದು. ‘ನಾನು ಸಾಧನೆ ಮಾಡುತ್ತಿರುವುದರಿಂದ ದೇವರೂ ನನ್ನ ಜೊತೆಗಿದ್ದಾರೆ ಎಂದು ಗಮನದಲ್ಲಿಟ್ಟುಕೊಂಡು ನಾನು ಸಾಧನೆಯ ಪ್ರಯತ್ನವನ್ನು ಇನ್ನೂ ಹೆಚ್ಚಿಸುವೆನು.

೧ ಆ. ಸ್ವಯಂಸೂಚನೆ (‘ಅ ೩ ಪದ್ಧತಿಗನುಸಾರ)

೧. ‘ಕೆಲವು ದೇಶಗಳು ಇಡೀ ಜಗತ್ತಿನ ಮೇಲೆ ಅಧಿಕಾರ ಚಲಾಯಿಸುವ ವೃತ್ತಿಯನ್ನು ನೋಡಿದರೆ ಮಹಾಯುದ್ಧವು ಯಾವಾಗ ಬೇಕಾದರೂ ಪ್ರಾರಂಭವಾಗಬಹುದು ಎಂಬುದು ನನ್ನ ಗಮನಕ್ಕೆ ಬರುತ್ತಿದೆ.

೨. ಕಳೆದ ಕೆಲವು ತಿಂಗಳುಗಳಿಂದ ನಾನು ಆಪತ್ಕಾಲವನ್ನು ಎದುರಿಸುವ ದೃಷ್ಟಿಯಿಂದ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ಸಿದ್ಧತೆಯನ್ನು ಮಾಡುತ್ತಿದ್ದೆನು; ಆದ್ದರಿಂದ ನನ್ನಲ್ಲಿ ದೃಢತೆ ಬಂದಿದೆ.

೩. ‘ಆಯುಷ್ಯವಿಡೀ ದೇವರೇ ನನಗೆ ಆವಶ್ಯಕವಾಗಿರುವುದನ್ನು ತಿನ್ನಲು-ಕುಡಿಯಲು ಕೊಟ್ಟಿದ್ದಾನೆ. ಆದ್ದರಿಂದ ಮಹಾಯುದ್ಧದ ಕಾಲದಲ್ಲೂ ಅವನು ನನಗೆ ಸಾಕಷ್ಟು ಆಹಾರ-ನೀರನ್ನು ಖಂಡಿತವಾಗಿ ಪೂರೈಸುವವನೇ ಇದ್ದಾನೆ ಎಂಬುದು ನನಗೆ ಅರಿವಾಗುತ್ತಿದೆ.

೪. ಮಹಾಯುದ್ಧದ ಕಾಲದಲ್ಲಿ ಆವಶ್ಯಕವಾಗಿರುವ ಆಹಾರ ಧಾನ್ಯ, ಔಷಧ ಇತ್ಯಾದಿಗಳನ್ನು ನಾನು ಸಂಗ್ರಹಿಸಿಯೂ ಇಡುತ್ತಿದ್ದೇನೆ. ವಿದ್ಯುತ್‌ಗಾಗಿ ಸೌರಶಕ್ತಿ ಯಂತ್ರ, ನೀರಿಗಾಗಿ ಟ್ಯಾಂಕ್ ಇತ್ಯಾದಿ ಪೂರ್ವಸಿದ್ಧತೆಯನ್ನೂ ನಾನು ಮಾಡುತ್ತಿದ್ದೇನೆ.

೫. ಪ್ರಕೃತಿ ಆರೋಗ್ಯವಾಗಿರಲು ನಾನು ಯೋಗಾಸನಗಳನ್ನು ಮತ್ತು ಪ್ರಾಣಾಯಾಮವನ್ನು ಕಲಿತಿದ್ದೇನೆ ಹಾಗೂ ಅವುಗಳನ್ನು ನಿಯಮಿತವಾಗಿ ಮಾಡುತ್ತಿದ್ದೇನೆ. ಬಿಂದುಒತ್ತಡ, ನಾಮಜಪದ ಉಪಾಯ ಇತ್ಯಾದಿ ಔಷಧರಹಿತ ಉಪಚಾರಪದ್ಧತಿಗಳನ್ನೂ ಕಲಿಯುತ್ತಿದ್ದೇನೆ.

೬. ‘ನಾನು ಸಾಧನೆ ಮಾಡುತ್ತಿರುವುದರಿಂದ ದೇವರೂ ನನ್ನ ಜೊತೆಗಿದ್ದಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ನಾನು ಸಾಧನೆಯ ಪ್ರಯತ್ನವನ್ನು ಹೆಚ್ಚಿಸುತ್ತಿದ್ದೇನೆ.

೭. ‘ಮಹಾಯುದ್ಧದ ಕಾಲದಲ್ಲಿ ದೇವರು ಮಾಡಿದ ಸಹಾಯದಿಂದ ನಾನು ಸುರಕ್ಷಿತವಾಗಿದ್ದೇನೆ ಎಂಬುದು ನನಗೆ ಅರಿವಾಗಿ ನಾನು ದೇವರ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದೇನೆ.

(ಭವಿಷ್ಯದಲ್ಲಿ ಭೂಕಂಪ ಹಾಗೂ ಗಲಭೆಯ ಸಂದರ್ಭಗಳಿಗೆ ನೀಡಬೇಕಾಗಿರುವ ಸ್ವಯಂಸೂಚನೆಯ ಉದಾಹರಣೆಗಳು, ವಿಪತ್ತಿನ ಕಾಲದಲ್ಲಿ ಭಾವನೆಯಲ್ಲಿ ಸಿಲುಕಿಕೊಳ್ಳದಂತೆ ಇರಲು ನೀಡಬೇಕಿರುವ ಸ್ವಯಂ ಸೂಚನೆಯ ಉದಾಹರಣೆ, ಅದೇರೀತಿ ವಿಪತ್ತಿನ ವಿಚಾರದಿಂದಾಗಿ ಮನಸ್ಸಿನಲ್ಲಿ ಕಸಿವಿಸಿ ಉಂಟಾಗುತ್ತಿದ್ದರೆ ಮನಸ್ಸಿಗೆ ವಿಪತ್ತಿನ ಸಂದರ್ಭದಲ್ಲಿ ಸ್ವಯಂಸೂಚನೆ ಸ್ವೀಕರಿಸಲು ಸಕಾರಾತ್ಮಕ ಸ್ಥಿತಿಯನ್ನು ತರಲು ಮಾಡಬೇಕಾದ ಉಪಾಯದ ಬಗ್ಗೆಯೂ ಗ್ರಂಥದಲ್ಲಿ ನೀಡಲಾಗಿದೆ.)

೨. ಆಪತ್ಕಾಲದ ದೃಷ್ಟಿಯಿಂದ ಆಧ್ಯಾತ್ಮಿಕ ಸ್ತರದಲ್ಲಿ ಮಾಡಬೇಕಾದ ಸಿದ್ಧತೆ

೨ ಅ. ನಮ್ಮ ಮೇಲೆ ದೇವರ ಕೃಪಾದೃಷ್ಟಿಯಿರಲು ಮತ್ತು ನಮ್ಮ ಸುತ್ತಲೂ ರಕ್ಷಾಕವಚ ನಿರ್ಮಾಣವಾಗಲು ಪ್ರತಿದಿನ ಮಾಡಬೇಕಾದ ಕೆಲವು ಕೃತಿಗಳು

೨ ಅ ೧. ದೇವರ ಕೃಪೆಯಾಗಿ ನಮ್ಮ ಮನೆಯ ರಕ್ಷಣೆಯಾಗಲು ಪ್ರತಿದಿನ ಮನೆಯಲ್ಲಿ ದೇವರ ಪೂಜೆಯನ್ನು ಮಾಡಬೇಕು.

೨ ಅ ೨. ಮನೆಯ ಸುತ್ತಲೂ ದೇವತೆಗಳ ಸಾತ್ತ್ವಿಕ ಲಹರಿಗಳ ರಕ್ಷಾಕವಚ ನಿರ್ಮಾಣವಾಗಲು ಬೆಳಗ್ಗೆ ಮತ್ತು ಸಾಯಂಕಾಲ ದೇವರ ಬಳಿ ಮತ್ತು ತುಳಸಿಯ ಬಳಿ ದೀಪವನ್ನು ಹಚ್ಚಿ ದೇವರು ಮತ್ತು ದೀಪಕ್ಕೆ ನಮಸ್ಕಾರ ಮಾಡಬೇಕು !

೨ ಅ ೩. ಆರೋಗ್ಯ ಹಾಗೂ ರಕ್ಷಾಕವಚವನ್ನು ಪ್ರದಾನಿಸುವ ಶ್ಲೋಕ ಮತ್ತು ಸ್ತೋತ್ರಗಳನ್ನು ಪಠಿಸಬೇಕು !

೨ ಆ. ಮೂರನೇ ಮಹಾಯುದ್ಧದಲ್ಲಿ ಬಳಸಲಾಗುವ ಅಣ್ವಸ್ತ್ರಗಳಿಂದ ನಿರ್ಮಾಣವಾಗುವ ವಿಕಿರಣಗಳಿಂದ ಉಂಟಾಗುವ ಪ್ರಾಣ ಘಾತಕ ಪರಿಣಾಮಗಳಿಂದ ರಕ್ಷಣೆಯಾಗಲು ಪ್ರತಿದಿನ ಅಗ್ನಿಹೋತ್ರವನ್ನು ಮಾಡುವುದು ಆವಶ್ಯಕವಾಗಿದೆ : ಅಣ್ವಸ್ತ್ರಗಳಿಂದ ನಿರ್ಮಾಣವಾಗುವ ವಿಕಿರಣಗಳಿಂದ ಪ್ರಾಣ ಘಾತಕ ಪರಿಣಾಮಗಳನ್ನು ನಾಶಗೊಳಿಸುವ ಉಪಾಯವು ಆಧುನಿಕ ವಿಜ್ಞಾನದಲ್ಲಿಲ್ಲ. ವಾತಾವರಣದಲ್ಲಿನ ವಿಕಿರಣಗಳ ಮಾಲಿನ್ಯವನ್ನು ನಾಶ ಮಾಡಲು ‘ಅಗ್ನಿಹೋತ್ರವನ್ನು ಮಾಡುವುದು ಒಂದು ಆಧ್ಯಾತ್ಮಿಕ ಉಪಾಯವಾಗಿದೆ. ಅಗ್ನಿಹೋತ್ರವು ಅತ್ಯಂತ ಸುಲಭ ಮತ್ತು ಕಡಿಮೆ ಸಮಯದಲ್ಲಿ ಆಗುವ ಪ್ರಭಾವಿ ಯಜ್ಞವಾಗಿದೆ. ಈ ಯಜ್ಞದಿಂದ ವಾತಾವರಣವು ಚೈತನ್ಯಮಯವಾಗುತ್ತದೆ ಮತ್ತು ಯಜ್ಞವನ್ನು ಮಾಡುವವರ ಸುತ್ತಲೂ ರಕ್ಷಾಕವಚವು ನಿರ್ಮಾಣವಾಗುತ್ತದೆ.

೨ ಇ. ಮುಂಬರುವ ಕಾಲದಲ್ಲಿ ಉದ್ಭವಿಸುವ ಭೀಕರ ಆಪತ್ತುಗಳಿಂದ ರಕ್ಷಣೆಯಾಗಲು ಸಾಧನೆಯನ್ನು ಚೆನ್ನಾಗಿ ಮಾಡುವುದು ಮತ್ತು ಭಗವಂತನ ಭಕ್ತರಾಗುವುದು ಅನಿವಾರ್ಯವಾಗಿದೆ ! : ಆಪತ್ಕಾಲದ ಪರಿಸ್ಥಿತಿಯು ಯಾವುದೇ ಕ್ಷಣದಲ್ಲೂ ಉದ್ಭವಿಸಬಹುದು. ಇಂತಹ ಸ್ಥಿತಿಯಲ್ಲಿ ‘ಯಾವ ಯೋಗ್ಯ ಕೃತಿಯನ್ನು ಮಾಡಬೇಕು ? ಎಂಬುದರ ಬಗ್ಗೆ ತಿಳಿಯದಿರುವುದರಿಂದ ಸಾಮಾನ್ಯ ವ್ಯಕ್ತಿಯು ಗೊಂದಲಕ್ಕೀಡಾಗುತ್ತಾನೆ ಹಾಗೂ ಅವನ ಮನೋಧೈರ್ಯವೂ ಕುಸಿಯುತ್ತದೆ. ಇಂತಹ ವ್ಯಕ್ತಿಗಳು ಕೆಲವು ಪ್ರಸಂಗಗಳಲ್ಲಿ ಅಯೋಗ್ಯ ಕೃತಿಗಳನ್ನು ಮಾಡುವ ಹಾಗೂ ಅಯೋಗ್ಯ ನಿರ್ಣಯಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿರುತ್ತದೆ. ಇದಕ್ಕೆ ಬದಲಾಗಿ ಆತ್ಮಬಲವಿರುವ ವ್ಯಕ್ತಿಯು ಕಠಿಣ ಪ್ರಸಂಗಗಳನ್ನು ಧೈರ್ಯದಿಂದ ಎದುರಿಸಿ ಯೋಗ್ಯ ನಿರ್ಣಯಗಳನ್ನು ತೆಗೆದುಕೊಳ್ಳಬಲ್ಲನು; ಏಕೆಂದರೆ ದೇವರು ಅಥವಾ ಗುರುಗಳು ಅವನಿಗೆ ಯೋಗ್ಯ ವಿಚಾರಗಳನ್ನು ಮತ್ತು ಆತ್ಮಬಲವನ್ನು ನೀಡುತ್ತಾರೆ. ಆತ್ಮಬಲ ನಿರ್ಮಾಣವಾಗಲು ನಾಮಜಪಾದಿ ಸಾಧನೆಯ ಪ್ರಯತ್ನಗಳನ್ನು ಮಾಡುವುದು ಆವಶ್ಯಕವಾಗಿದೆ. ಸಾಧನೆಯನ್ನು ಗಾಂಭಿರ್ಯದಿಂದ, ತಳಮಳದಿಂದ, ನಿಯಮಿತವಾಗಿ, ಭಾವಪೂರ್ಣ ಹಾಗೂ ಕಾಲಾನುಸಾರ ಯೋಗ್ಯವಾದುದು ಮಾಡಿದಾಗಲೇ ಬೇಗನೆ ಈಶ್ವರ ಅಥವಾ ಗುರುಗಳ ಕೃಪೆಯಾಗುತ್ತದೆ. ಕಾಲಾನುಸಾರ ಯೋಗ್ಯವಾದ ಸಾಧನೆಯನ್ನು ಹೇಗೆ ಮಾಡಬೇಕು, ಎಂಬುದನ್ನು ‘ಸನಾತನ ಸಂಸ್ಥೆ ಹೇಳುತ್ತದೆ. (ಮುಕ್ತಾಯ)

(ಸವಿಸ್ತಾರ ಮಾಹಿತಿಗಾಗಿ ಓದಿ :  ಆಪತ್ಕಾಲವು ಸಹನೀಯವಾಗಲು ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರಗಳಲ್ಲಿ ಸಿದ್ಧತೆಯನ್ನು ಮಾಡಿರಿ !)

 [ಪ್ರಸ್ತುತ ಲೇಖನದ ಕೃತಿಸ್ವಾಮ್ಯವು (ಕಾಪಿರೈಟ್) ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆಯ ಕಡೆಗೆ ಸುರಕ್ಷಿತವಾಗಿದೆ.]

ವಾಚಕರಲ್ಲಿ ವಿನಂತಿ !

ವಿಪತ್ತಿನ ಬಗೆಗಿನ ಲೇಖನವನ್ನು ಈ ಹಿಂದೆ ‘ಸಾಪ್ತಾಹಿಕ ಸನಾತನ ಪ್ರಭಾತದ ಆಯಾ ಸಮಯದಲ್ಲಿ ಪ್ರಕಾಶಿಸಲಾಗಿತ್ತು. ಆ ಲೇಖನಗಳನ್ನು ಹಾಗೂ ಈ ಮಾಹಿತಿಯನ್ನು ವಾಚಕರು ಸಂಗ್ರಹಿಸಿಡಬೇಕು.) 

ವಿಪತ್ತಿನ ಬಗೆಗಿನ ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರ ಸವಿಸ್ತಾರವಾದ ಲೇಖನಗಳನ್ನು ಓದಲು ಜಾಲತಾಣ sಚಿಟಿಚಿಣಚಿಟಿ.oಡಿg ಭೇಟಿ ನೀಡಿ ಅದೇರೀತಿ ಇದರ ಮಾಹಿತಿಯನ್ನು ಸಂಬಂಧಿಕರಿಗೂ ಕಳುಹಿಸಿರಿ.

‘ಆಪತ್ಕಾಲದಲ್ಲಿ ಜೀವರಕ್ಷಣೆ’ ಈ ಸನಾತನ ಗ್ರಂಥಮಾಲಿಕೆಯಲ್ಲಿ ೨ ಹೊಸ ಗ್ರಂಥಗಳು ಪ್ರಕಾಶಿತ !

ಖಂಡ ೧ : ಆಪತ್ಕಾಲದಲ್ಲಿ ಜೀವಂತವಾಗಿರಲು ದೈನಂದಿನ ಸ್ತರದಲ್ಲಿ ಸಿದ್ಧತೆ ಮಾಡಿ ! (ಅನ್ನ, ನೀರು ವಿದ್ಯುತ್ ಇತ್ಯಾದಿಗಳ ಬಗೆಗಿನ ಸಿದ್ಧತೆ)

ಆಪತ್ಕಾಲದಲ್ಲಿ ಆಹಾರಧಾನ್ಯ, ಕಾಯಿಪಲ್ಲೆ, ಅಡುಗೆ ಅನಿಲ, ನೀರು, ವಿದ್ಯುತ್, ಪೆಟ್ರೋಲ್ ನಂತಹ ಇಂಧನಗಳು, ನಿತ್ಯೋಪಯೋಗಿ ವಸ್ತುಗಳು, ಮನೆಯಲ್ಲಿನ ವಿವಿಧ ವಸ್ತುಗಳ ಬಿಡಿ ಭಾಗಗಳು ಮುಂತಾದವುಗಳ ಪ್ರಚಂಡ ಕೊರತೆಯು ಉಂಟಾಗಲಿದೆ. ಒಟ್ಟಾರೆ ‘ಜೀವನ ನಡೆಸುವುದು’, ಇದು ದೊಡ್ಡ ಸವಾಲಾಗುತ್ತದೆ. ‘ನೀರಡಿಕೆಯಾದಾಗ ಬಾವಿ ತೋಡುವುದಲ್ಲ’, ಎಂಬ ವಚನಕ್ಕನುಸಾರ ಆಪತ್ಕಾಲದಲ್ಲಿ ನಮ್ಮೊಂದಿಗೆ ಕುಟುಂಬದವರ ಜೀವವನ್ನು ಕಾಪಾಡಲು ಇಂದಿನಿಂದಲೇ ‘ದೈನಂದಿನ ಸ್ತರದಲ್ಲಿ ಯಾವ ಸಿದ್ಧತೆ ಮಾಡಬೇಕು ?’. ಎಂದು ಈ ಗ್ರಂಥದಿಂದ ತಿಳಿದುಕೊಳ್ಳಿ !

ಖಂಡ ೨ : ಆಪತ್ಕಾಲವು ಸಹನೀಯವಾಗಲು ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರಗಳಲ್ಲಿ ಸಿದ್ಧತೆಯನ್ನು ಮಾಡಿರಿ ! (ಸ್ವಯಂಸೂಚನೆ – ಉಪಾಯ, ಸಾಧನೆಯ ಮಹತ್ವ ಇತ್ಯಾದಿ)

ಆಪತ್ಕಾಲದ ವಿಚಾರದಿಂದ ಹೆಚ್ಚಿನವರಿಗೆ ಮನಸ್ಸು ಅಸ್ಥಿರವಾಗುವುದು, ಭಯವಾಗುವುದು ಮುಂತಾದ ತೊಂದರೆಗಳಾಗುತ್ತವೆ. ಅದನ್ನು ದೂರಮಾಡಲು, ಅಂದರೆ ಪ್ರತಿಕೂಲ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಲು ‘ಮನಸ್ಸಿಗೆ ಯಾವ ಸ್ವಯಂಸೂಚನೆಯನ್ನು ಕೊಡಬೇಕು ?’, ಎಂಬ ಮಾರ್ಗದರ್ಶನವನ್ನು ಗ್ರಂಥದಲ್ಲಿ ಮಾಡಲಾಗಿದೆ. ಕೌಟುಂಬಿಕ ಮತ್ತು ಆರ್ಥಿಕ ಸ್ತರಗಳಲ್ಲಿ ಮಾಡಬೇಕಾದ ಸಿದ್ಧತೆಯ ಬಗ್ಗೆಯೂ ಗ್ರಂಥದಲ್ಲಿ ಹೇಳಲಾಗಿದೆ. ವ್ಯಕ್ತಿಯು ಸಾಧನೆಯನ್ನು ಮಾಡಿ ದೇವರ ಕೃಪೆಯನ್ನು ಸಂಪಾದಿಸಿದರೆ, ದೇವರು ವ್ಯಕ್ತಿಯ ರಕ್ಷಣೆ ಮಾಡುತ್ತಾನೆ. ಇದಕ್ಕಾಗಿ ಸಾಧನೆ ಮಾಡುವ ಮಹತ್ವವನ್ನೂ ಹೇಳಲಾಗಿದೆ.

ಸನಾತನ ಗ್ರಂಥ ಮತ್ತು ಉತ್ಪಾದನೆ ಇವುಗಳ ಆನ್‌ಲೈನ್ ಖರೀದಿಗಾಗಿ SanatanShop.com

ಸಂಪರ್ಕ ಕ್ರ. (0832) 2312664

ವಾಚಕರಿಗೆ ವಿನಂತಿ ! : ಆಪತ್ಕಾಲದ ಬಗೆಗಿನ ಲೇಖನವನ್ನು ಈ ಮೊದಲು ‘ಸನಾತನ ಪ್ರಭಾತ’ದಲ್ಲಿ ಆಗಾಗ ಪ್ರಕಟಪಡಿಸಲಾಗಿದೆ. ವಾಚಕರು ಇವೆಲ್ಲವನ್ನು ಸಂಗ್ರಹದಲ್ಲಿಟ್ಟುಕೊಳ್ಳಬೇಕು. ಆಪತ್ಕಾಲದ ಬಗೆಗಿನ ಲೇಖನವನ್ನು ವಿಸ್ತಾರವಾಗಿ ಓದಲು Sanatan.org ಈ ಜಾಲತಾಣಕ್ಕೆ ಭೇಟಿ ನೀಡಿ ಇತರರಿಗೂ ತಿಳಿಸಿ