ಭಾರತದಲ್ಲಿ ಅನೇಕ ಹಿಂದೂ ಸಂಘಟನೆಗಳಿವೆ. ಅವರಲ್ಲಿ ಭಿನ್ನಾಭಿಪ್ರಾಯವಿರಬಹುದು; ಆದರೆ ಅದರ ಲಾಭವನ್ನು ಶತ್ರುಗಳು ತೆಗೆದುಕೊಳ್ಳಬಾರದು, ಎಂಬುದರ ಕಡೆಗೆ ಗಮನವಿರಬೇಕು, ಹಾಗೆಯೇ ಎಲ್ಲರಿಗೂ ಹಿಂದೂ ರಾಷ್ಟ್ರದ ಸ್ಥಾಪನೆ ಬೇಕಾಗಿದೆ. ಆದ್ದರಿಂದ ಎಲ್ಲರೂ ಸಂಘಟಿತರಾಗುವುದು ಆವಶ್ಯಕವಾಗಿದೆ.
ಹಿಂದೂಗಳ ಪ್ರತಿಯೊಂದು ದೇವತೆಯ ಕೈಯಲ್ಲಿ ಶಸ್ತ್ರಗಳಿವೆ. ಸಿಕ್ಖ್ರ ಸೊಂಟದಲ್ಲಿ ಶಸ್ತ್ರವಿರುತ್ತದೆ, ಪೊಲೀಸರ ಮತ್ತು ಸೈನಿಕರ ಬಳಿಯೂ ಶಸ್ತ್ರಗಳಿರುತ್ತವೆ; ಆದರೆ ಬ್ರಿಟಿಷರು ‘ಭಾರತೀಯ ಶಸ್ತ್ರಾಸ್ತ್ರ ಕಾಯಿದೆ ೧೮೭೮’ ಅನ್ನು ಜಾರಿಗೆ ತರುವ ಮೂಲಕ ಹಿಂದೂಗಳನ್ನು ನಿಶ್ಯಸ್ತ್ರಗೊಳಿಸಿದರು. ಅಂದಿನಿಂದ ಹಿಂದೂಗಳ ಸ್ಥಿತಿ ದಯನೀಯವಾಗಿದೆ. ವಿವಿಧ ಗಲಭೆಗಳಲ್ಲಿ ಮತಾಂಧರು ಹಿಂದೂಗಳ ಮೇಲೆ ಆಧುನಿಕ ಶಸ್ತ್ರಗಳೊಂದಿಗೆ ದಾಳಿ ಮಾಡುತ್ತಾರೆ. ಅಂತಹ ಸಮಯದಲ್ಲಿ ಅನೇಕ ಹಿಂದೂಗಳು ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ. ಹೀಗಿರುವಾಗ ಹಬ್ಬ-ಉತ್ಸವಗಳ ಸಮಯದಲ್ಲಿ ಹಿಂದೂಗಳು ಮೆರವಣಿಗೆ ಮಾಡುತ್ತಾರೆ; ಆದರೆ ಅವರ ಬಳಿ ಹಿಂದೂ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿ ಸೂಕ್ತ ಯೋಜನೆಗಳು ಇರುವುದಿಲ್ಲ. ಇದರ ಬಗ್ಗೆಯೂ ವಿಚಾರ ಮಾಡುವುದು ಆವಶ್ಯಕವಾಗಿದೆ.
– ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ.