‘ನ್ಯುರಾಲಿಂಕ್’ ಕಂಪನಿಯ ಹೊಸ ಶೋಧ !
‘ಟೆಸ್ಲಾ’ ಕಂಪನಿಯ ಮಾಲೀಕರಾದ ಎಲಾನ್ ಮಸ್ಕ್ ಇವರು ‘ನ್ಯುರಾಲಿಂಕ್’ ಈ ಕಂಪನಿಯ ಮೂಲಕ ಮಾನವನ ಮೆದುಳಿನಲ್ಲಿ ಅಳವಡಿಸುವ ‘ಚಿಪ್’ನ ವಿಷಯವನ್ನು (ಚಿಪ್ ಅಂದರೆ ಚಿಕ್ಕ ವಿದ್ಯುನ್ಮಾನ ಸಾಧನ, ಅದರಲ್ಲಿ ವಿದ್ಯುತ್ ಪ್ರವಾಹ ಇರುತ್ತದೆ.) ೨೯ ಜನವರಿ ೨೦೨೪ ರಂದು ಘೋಷಿಸಿದರು. ‘ನ್ಯುರಾಲಿಂಕ್’ ಕಂಪನಿ ಹೇಳುವ ಪ್ರಕಾರ, ಈ ‘ಬ್ರೈನ್‌ಚಿಪ್’ನಿಂದ ಪಾರ್ಕಿನ್ಸನ್ (ಪಾರ್ಕಿನ್ಸನ್ ಕಾಯಿಲೆಯೆಂದರೆ ಕಂಪವಾತ, ಅದರಲ್ಲಿ ರೋಗಿಯ ಮೆದುಳಿನಲ್ಲಿ ಶರೀರದ ಚಲನೆಯನ್ನು ನಿಯಂತ್ರಿಸುವ ಭಾಗದ ಜೀವಕೋಶಗಳು ಕ್ರಮೇಣ ಸಾಯುತ್ತವೆ.), ಅಪಸ್ಮಾರ, ನಿರಾಶೆ, ಮೆದುಳಿಗೆ ಪೆಟ್ಟಾಗುವುದು (ಬ್ರೇನ ಇಂಜುರಿ), ತೀವ್ರ ವೇದನೆಗಳು, ಕುರುಡುತನ ಮತ್ತು ಕಿವುಡುತನ ಮುಂತಾದ ಕಾಯಿಲೆಗಳಿರುವ ರೋಗಿಗಳಿಗೆ ಉಪಯೋಗವಾಗುತ್ತದೆ; ಆದರೆ ಇದರಿಂದ ಭವಿಷ್ಯದಲ್ಲಿ ಬೇರೆಯೆ ಪರಿಣಾಮಗಳೂ ಕಾಣಿಸಬಹುದು ಅಥವಾ ಅಪಾಯವೂ ಉಂಟಾಗಬಹುದು.
೧. ‘ನ್ಯುರಾಲಿಂಕ್ ಚಿಪ್’ನ ಬಗ್ಗೆ ಘೋಷಣೆ !
೧ ಅ. ಪ್ರಾಣಿಗಳ ಮೇಲೆ ಚಿಪ್‌ನ ಪ್ರಯೋಗ ! : ‘ನ್ಯುರಾಲಿಂಕ್’ ಕಂಪನಿಯ ಮೂಲಕ ಮಸ್ಕ್ ಇವರು ಮೆದುಳು-ಗಣಕಯಂತ್ರ ಇಂಟರ್‌ಫೇಸ್‌ನಲ್ಲಿ (Brain Computer Interfaces (BCIs)) ಮಹತ್ವದ ಬದಲಾವಣೆಯನ್ನು ಮಾಡುವ ಬಗ್ಗೆ ವಿಶ್ವಾಸವನ್ನು ತೋರಿಸಿದ್ದಾರೆ. ಇದರಲ್ಲಿ ವ್ಯಕ್ತಿಯ ಮೆದುಳಿನಲ್ಲಿ ಮೆದುಳು-ವಾಚನ ಉಪಕರಣವನ್ನು ಅಳವಡಿಸಿದ್ದಾರೆ. ಕಂಪನಿ ಹೇಳುವುದೇನೆಂದರೆ, ಈ ಉಪಕರಣ ಗಂಭೀರ ಅರ್ಧಾಂಗವಾಯು ಆಗಿರುವ ವ್ಯಕ್ತಿಗೆ ಗಣಕಯಂತ್ರ, ರೋಬೋಟಿಕ್ ಕೈ, ವೀಲ್‌ಚೇರ್ ಅಥವಾ ಇತರ ಉಪಕರಣಗಳಲ್ಲಿ ಕೇವಲ ವಿಚಾರ ಮಾಡಿ ನಿಯಂತ್ರಣ ಮಾಡಲು ಸಾಧ್ಯವಾಗಬೇಕೆಂಬ ಉದ್ದೇಶದಿಂದ ಸಿದ್ಧಪಡಿಸಲಾಗಿದೆ. ಈ ಉಪಕರಣದಿಂದ ಪ್ರಾಣಿಗಳ ಮೇಲೆ ಮಾಡಿದ ಪ್ರಯೋಗ ಯಶಸ್ವಿಯಾಗಿದೆ; ಆದರೆ ಮಾನವನ ಮೇಲಿನ ಪರಿಶೀಲನೆಯ ಮಾಹಿತಿ ಗುಪ್ತವಾಗಿದೆ.
೧ ಆ. ಕೊರೋನಾ ಮಹಾಮಾರಿಯ ಸಮಯದಲ್ಲಿ ‘ಚಿಪ್’ನ ನಿರ್ಮಾಣ ! : ೨೦೨೦-೨೧ ರಲ್ಲಿ ಜಗತ್ತು ಕೊರೋನಾ ಮಹಾಮಾರಿಯಿಂದಾಗಿ ಒಂದು ರೀತಿಯಲ್ಲಿ ಸ್ತಬ್ಧವಾಗಿತ್ತು ಹಾಗೂ ವಿಜ್ಞಾನಿಗಳು, ವಿದ್ಯಾಪೀಠಗಳು ಮತ್ತು ಔಷಧ ಕಂಪನಿಗಳು ಕೊರೋನಾ ನಿರ್ಬಂಧದ ಲಸಿಕೆಯ ಶೋಧದಲ್ಲಿದ್ದವು, ಆ ಸಮಯದಲ್ಲಿ ನ್ಯುರಾಲಿಂಕ್ ಮಾನವನ ಮೆದುಳಿನಲ್ಲಿ ಅಳವಡಿಸುವ ಚಿಪ್ ತಯಾರಿಸುತ್ತಿತ್ತು ಹಾಗೂ ಪ್ರಾಣಿಗಳ ಮೇಲೆ ಪ್ರಯೋಗ ಮಾಡುತ್ತಿತ್ತು. ಆ ಸಮಯದಲ್ಲಿ ಅವರು ಇದನ್ನು ಘೋಷಣೆ ಮಾಡಿದ್ದರು; ಆದರೆ ಜಗತ್ತಿನ ಕೋಟಿಗಟ್ಟಲೆ ಜನರು ಅದನ್ನು ದುರ್ಲಕ್ಷ ಮಾಡಿದ್ದರು. ೨೯ ಜನವರಿ ೨೦೨೪ ರಂದು ಮಸ್ಕ್ ಇವರು ಸ್ವತಃ ಇದರ ಬಗ್ಗೆ ಘೋಷಣೆ ಮಾಡಿದರು. ಆಗ ಜಾಗತಿಕ ಪ್ರಸಾರಮಾಧ್ಯಮಗಳು, ವಿಜ್ಞಾನಿಗಳು ಮತ್ತು ಇತರರ ಗಮನ ಇದರ ಕಡೆಗೆ ಹೋಯಿತು.
೧ ಇ. ನ್ಯುರಾಲಿಂಕ್‌ನ ತಂತ್ರಜ್ಞಾನ ಮತ್ತು ಪ್ರಕ್ರಿಯೆ : ನ್ಯುರಾಲಿಂಕ್ ಚಿಪ್‌ನಲ್ಲಿ ೬೪ ಮೃದುವಾದ ‘ಪಾಲಿಮರ್ ಇಲೆಕ್ಟ್ರೋಡ್ಸ್’ಗಳಿವೆ, ಅವು ಮೆದುಳಿನ ೧ ಸಾವಿರದ ೬೪ ಸ್ಥಳಗಳಿಂದ ಮೆದುಳಿನ ವಿವಿಧ ಕ್ರಿಯೆಗಳ ಧ್ವನಿಮುದ್ರಣ ಮಾಡಲಿಕ್ಕಿವೆ. ಆ ಮಾಹಿತಿಯನ್ನು ಅದೇ ಚಿಪ್‌ನಲ್ಲಿ ಸಂಗ್ರಹಿಸಲಾಗುವುದು, ಅಲ್ಲಿಯೆ ಅದರ ಮೇಲೆ ಪ್ರಕ್ರಿಯೆ ಮಾಡಲಾಗುವುದು. ಇದೇ ಮಾಹಿತಿಯ ಆಧಾರದಲ್ಲಿ ಯಾವುದೇ ವ್ಯಕ್ತಿ ತನ್ನ ಎದುರಿಗಿರುವ ವಸ್ತುವನ್ನು ನಿಯಂತ್ರಣ ಮಾಡಬಹುದು. ಸುಲಭ ಭಾಷೆಯಲ್ಲಿ ಹೇಳುವುದಾದರೆ, ಗಂಭೀರ ಪಾರ್ಶ್ವವಾಯು ಆಗಿರುವ ರೋಗಿ ಹಾಸಿಗೆಯಲ್ಲಿರುತ್ತಾನೆ, ಅವನಿಗೆ ಎದುರಿನಲ್ಲಿ ಏನೇನು ನಡೆಯುತ್ತದೋ ಅದು ಕಾಣಿಸುತ್ತದೆ, ತಿಳಿಯುತ್ತದೆ ಕೂಡ; ಆದರೆ ಚಲನವಲನ ಮಾಡಲು ಸಾಧ್ಯವಾಗುವುದಿಲ್ಲ, ಸ್ಪಷ್ಟ ಮಾತನಾಡಲು ಬರುವುದಿಲ್ಲ. ನ್ಯುರಾಲಿಂಕ್ ಚಿಪ್ ಅಳವಡಿಸಿದ ನಂತರ ಆ ವ್ಯಕ್ತಿ ಕೇವಲ, ಎದುರಿನ ದೂರಚಿತ್ರವಾಹಿನಿಯಲ್ಲಿನ ಚಾನಲ್ ಬದಲಾಗಬೇಕು ಎಂದು ವಿಚಾರ ಮಾಡಿದರೂ ಅದು ತಕ್ಷಣ ಬದಲಾಗುತ್ತದೆ.
ಲೇಖಕರು : ಡಾ. ನಾನಾಸಾಹೇಬ ಥೊರಾತ, ವೈಜ್ಞಾನಿಕ ಸಂಶೋಧಕರು, ಸಾತಾರಾ ನ್ಯುರಾಲಿಂಕ್
ಚಿಪ್ ಮೆದುಳಿನಲ್ಲಿ ಅಳವಡಿಸಿದಾಗ ಆಗುವ ಲಾಭ ಮತ್ತು ಹಾನಿನ್ಯುರಾಲಿಂಕ್ ಚಿಪ್ ಮೆದುಳಿನಲ್ಲಿ ಅಳವಡಿಸುವುದರಿಂದ ಮನಸ್ಸಿನಲ್ಲಿನ ವಿಚಾರಕ್ಕನುಸಾರ ಘಟನೆಗಳು ಘಟಿಸುವವು, ಲಾಭ ಹೇಗಾಗುವುದು ? ಎಂಬುದರ ಕೆಲವು ಉದಾಹರಣೆಗಳನ್ನು ನೋಡೋಣ. ಅ. ಮನಸ್ಸಿನಲ್ಲಿ ವಿಚಾರ ಬಂದ ತಕ್ಷಣ ದೂರಚಿತ್ರವಾಹಿನಿಯ ಚಾನಲ್ ಬದಲಾಗುವುದು : ಉದಾ. ನೀವು ದೂರದರ್ಶನದ ಮುಂದೆ ಕುಳಿತು ವಾರ್ತೆಗಳನ್ನು ನೋಡುತ್ತಿದ್ದೀರಿ. ನಿಮಗೆ ಚಾನಲ್ ಬದಲಾಯಿಸಲಿಕ್ಕಿದೆ; ಆದರೆ ರಿಮೋಟ್ ನಿಮ್ಮ ಸಮೀಪವಿಲ್ಲ. ನೀವು ಹಾಗೆ ವಿಚಾರ ಮಾಡುತ್ತಿರುವಾಗಲೆ ನಿಮಗೆ ಬೇಕಾದ ಚಾನಲ್ ಎದುರಿಗೆ ಕಾಣಿಸುವುದು, ಅದು ಕೂಡ ರಿಮೋಟ್ ಇಲ್ಲದೆ ಇದು ಸಾಧ್ಯವಾಗಲಿಕ್ಕಿದೆ. ಆ. ‘ಪವರ್‌ಪಾಯಿಂಟ್’ ಮೂಲಕ ಏನಾದರೂ ಪ್ರಸ್ತುತಪಡಿಸುವಾಗ ಮನಸ್ಸಿನಲ್ಲಿ ವಿಚಾರ ಮಾಡಿದ ತಕ್ಷಣ ‘ಸ್ಲೈಡ್’ (ಚಿತ್ರ) ಬದಲಾಗುವುದು : ಒಂದು ಸಭೆಯಲ್ಲಿ ಅಥವಾ ಸಾವಿರಾರು ಜನರ ಮುಂದೆ ನೀವು ‘ಪವರ್‌ಪಾಯಿಂಟ್’ನ ಮೂಲಕ (ಪವರ್‌ಪಾಯಿಂಟ್‌ನಲ್ಲಿ ಪ್ರಸ್ತುತೀಕರಣವೆಂದರೆ ಗಣಕಯಂತ್ರದ ಸಾಫ್ಟವೇರ್, ಅದರಲ್ಲಿ ಯಾವುದೇ ಛಾಯಾಚಿತ್ರ, ವಿಡಿಯೋ ಗಳನ್ನು ಉಪಯೋಗಿಸಿ ವಿಷಯವನ್ನು ವಿವರಿಸಿ ಹೇಳಲು ಸುಲಭವಾಗುತ್ತದೆ.) ಪ್ರಸ್ತುತಪಡಿಸುತ್ತಿದ್ದೀರಿ. ಅದರಲ್ಲಿ ಪ್ರತಿಯೊಂದು ‘ಸ್ಲೈಡ್’ ಪದೇ ಪದೇ ಬದಲಾಯಿಸಬೇಕಾಗುತ್ತದೆ, ಆಗ ಮಾತನಾಡುವ ಲಯ ತಪ್ಪುತ್ತದೆ ಹಾಗೂ ಎದುರಿನ ಜನರು ಬೇಸರ ವ್ಯಕ್ತಪಡಿಸುತ್ತಾರೆ; ಆದರೆ ಈಗ ಹಾಗಾಗುವುದಿಲ್ಲ. ನೀವು ವಿಚಾರ ಮಾಡುವಷ್ಟರಲ್ಲಿ ಪವರ್‌ಪಾಯಿಂಟ್‌ನ ಸ್ಲೈಡ್ ಬದಲಾಗಿರುತ್ತದೆ. ಇ. ವಸ್ತುಗಳ ವಿಷಯದಲ್ಲಿ ನೀವು ವಿಚಾರ ಮಾಡುತ್ತಿದ್ದೀರಿ, ಅಷ್ಟರಲ್ಲಿ ನಿಮ್ಮ ವಾಹನ ಸ್ಟಾರ್ಟ್ ಆಗಿರುತ್ತದೆ, ಮನೆಯ ಬಾಗಿಲು ತೆರೆದಿರುತ್ತದೆ. ಚಿಪ್ ಮೆದುಳಿನಲ್ಲಿ ಅಳವಡಿಸುವುದರಿಂದಾಗುವ ಸಂಭಾವ್ಯ ಅಪಾಯಗಳುಅ. ಬೇರೆಯವರ ಮೆದುಳನ್ನು ನಿಯಂತ್ರಿಸಲು ಸಾಧ್ಯವಿದೆ : ಯಾವ ವ್ಯಕ್ತಿಯ ಮೆದುಳಿನಲ್ಲಿ ನ್ಯುರಾಲಿಂಕ್ ಚಿಪ್ ಅಳವಡಿಸಲಾಗುವುದೊ, ಆ ವ್ಯಕ್ತಿಗೆ ಎದುರಿನ ವ್ಯಕ್ತಿಗೆ ಹೇಳದೆಯೇ ಅವನಿಂದ ಕೆಲಸಗಳನ್ನು ಮಾಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಸಂಕ್ಷಿಪ್ತದಲ್ಲಿ ಹೇಳುವುದಾದರೆ ಇನ್ನೊಬ್ಬ ವ್ಯಕ್ತಿಯ ಮೆದುಳನ್ನೂ ನಿಯಂತ್ರಿಸಬಹುದು. ಅಂದರೆ ನಮ್ಮ-ನಿಮ್ಮ ಮೆದುಳನ್ನು ಬೇರೆ ಯಾವುದಾದರು ವ್ಯಕ್ತಿ ನಿಯಂತ್ರಿಸಬಹುದು. ವಿಜ್ಞಾನಿಗಳು ಅಥವಾ ಬೇರೆ ಕ್ಷೇತ್ರದ ತಜ್ಞರು ಈ ಅಪಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಆ. ಚಿಪ್‌ನ ಮೂಲಕ ಬೇರೆ ಯಾರಾದರು ನಿಯಂತ್ರಣ ಮಾಡುವ ಭಯವಿದೆ : ಜುಲೈ ೨೦೨೩ ರಲ್ಲಿ ಸ್ವಿಝರ್ಲೇಂಡ್‌ನಲ್ಲಿನ ವಿದ್ಯಾಪೀಠದ ವಿಜ್ಞಾನಿಗಳು ಒಂದು ಉಪಕರಣವನ್ನು ತಯಾರಿಸಿದರು, ಅದರಿಂದ ಅರ್ಧಾಂಗವಾಯು (ಪ್ಯಾರಾಲಿಸಿಸ) ಆಗಿರುವ ವ್ಯಕ್ತಿಯನ್ನು ಕೇವಲ ವಿಚಾರದ ಮೂಲಕ ನಡೆಯಲು ಸಕ್ಷಮಗೊಳಿಸಿದರು. ನ್ಯುರಾಲಿಂಕ್ ಚಿಪ್‌ನ ಅಪಾಯವೆಂದರೆ, ಈ ಉಪಕರಣ ಬ್ಲೂಟೂಥ್ ಅಥವಾ ಮನೆಯಲ್ಲಿನ ಇಂಟರ್‌ನೆಟ್ ಅಥವಾ ‘ವೈಫೈ’ಗೆ ಕೂಡ ಜೋಡಿಸಬಹುದು. ಭವಿಷ್ಯದಲ್ಲಿ ಅದನ್ನು ನಮ್ಮ ಸಂಚಾರಿವಾಣಿಯ ನೆಟ್ವರ್ಕ್‌ಗೆ ಕೂಡ ಜೋಡಿಸಬಹುದು. ಇದರಿಂದ ಭಯವೆನಿಸುತ್ತದೆ. ಭವಿಷ್ಯದಲ್ಲಿ ರೋಗಿಗಳ ಮೆದುಳಿಗೆ ಅಳವಡಿಸಿರುವ ಚಿಪ್‌ನ ಮೂಲಕ ‘ಬ್ಲೂಟೂಥ್’ ಅಥವಾ ‘ವೈಫೈ’ ಮೂಲಕ ಬೇರೆ ಯಾರಾದರೂ ವ್ಯಕ್ತಿ ನಿಯಂತ್ರಣ ಪಡೆಯಬಹುದು ಹಾಗೂ ಅವನೇ ಆ ರೋಗಿಗೆ ತನ್ನ ಇಚ್ಛೆಯಂತೆ ವರ್ತಿಸಲು ಆಜ್ಞೆ ನೀಡಬಹುದು. ಇ. ಉದ್ಯಮಿಗಳು, ರಾಜಕಾರಣಿಗಳು ಅಥವಾ ಭಯೋತ್ಪಾದಕರಿಂದ ಆಗಬಹುದಾದ ವಿಪರೀತ ಕೃತ್ಯ ! : ವಿಜ್ಞಾನಿಗಳಿಗೆ ಭಯವಾಗುತ್ತಿರುವುದೇನೆಂದರೆ, ಈ ಚಿಪ್ ಇತರ ಜನರ ಕೈಗೆ ಸಿಕ್ಕರೆ ಉದಾ. ಉದ್ಯಮಿಗಳ, ರಾಜಕಾರಣಿಗಳ ಅಥವಾ ಭಯೋತ್ಪಾದಕರ ಕೈಗೆ ಸಿಕ್ಕಿದರೆ, ಅವರು ಸಾಮಾನ್ಯ ಜನರ ಮೆದುಳಿನಲ್ಲಿಯೂ ಇಂತಹ ಚಿಪ್ ಅಳವಡಿಸಿ ಅವರಿಂದ ತಮಗೆ ಬೇಕಾದ್ದನ್ನು ಮಾಡಿಸಿಕೊಳ್ಳಬಹುದು. ಲೇಖಕರು : ಡಾ. ನಾನಾಸಾಹೇಬ ಥೊರಾತ, ವೈಜ್ಞಾನಿಕ ಸಂಶೋಧಕರು, ಸಾತಾರಾ |