ಕೇವಲ ೨೦೨೦ ಈ ಒಂದೇ ವರ್ಷದಲ್ಲಿ ದೇಶದಾದ್ಯಂತ ವಿವಿಧ ಸ್ಥಳಗಳಲ್ಲಿ ಸಾಧು-ಸಂತರ ಮೇಲೆ ಹಲ್ಲೆಗಳಾದವು. ಪ್ರಸಾರ ಮಾಧ್ಯಮಗಳು ಪ್ರಮುಖವಾಗಿ ಪಾಲಘರದಲ್ಲಿ ನಡೆದ ಒಂದು ಘಟನೆಯ ಸುದ್ದಿಯನ್ನು ಮಾತ್ರ ತೋರಿಸಿದವು ಮತ್ತು ಇಂತಹ ಅನೇಕ ಹಲ್ಲೆಗಳನ್ನು ಮುಚ್ಚಿಟ್ಟವು.
೧. ಚಿತ್ರಕೂಟ(ಉತ್ತರಪ್ರದೇಶ)ದ ಬಾಲಾಜಿ ದೇವಸ್ಥಾನದ ಮಹಂತ ಅರ್ಜುನದಾಸರ ಹತ್ಯೆ
ಕೆಲವು ಸಮಾಜ ಕಂಟಕರು ಜನವರಿ ೧೬ ರಂದು ಚಿತ್ರಕೂಟದ ಬಾಲಾಜಿ ಮಂದಿರದ ಮಹಂತರಾದ ಅರ್ಜುನದಾಸರನ್ನು ಗುಂಡಿಕ್ಕಿ ಹತ್ಯೆ ಮಾಡಿದರು. ಈ ಪ್ರಕರಣದಲ್ಲಿ ಪೊಲೀಸರು ೫ ಜನರ ವಿರುದ್ಧ ದೂರನ್ನು ದಾಖಲಿಸಿದ್ದಾರೆ.
೨. ಪಾಲಘರ(ಮಹಾರಾಷ್ಟ್ರ)ದಲ್ಲಿ ಇಬ್ಬರು ಸಾಧುಗಳ ಬರ್ಬರ ಹತ್ಯೆ
ಎಪ್ರಿಲ್ ೧೬ ರಂದು ಮಹಾರಾಷ್ಟ್ರದ ಠಾಣೆ ಜಿಲ್ಲೆಯ ಪಾಲಘರದಲ್ಲಿ ಜುನಾ ಆಖಾಡಾದ ಸಂತರಾದ ಕಲ್ಪವೃಕ್ಷ ಗಿರಿ ಮಹಾರಾಜರು (ವಯಸ್ಸು ೭೦ ವರ್ಷ) ಹಾಗೂ ಸುಶೀಲ ಗಿರಿ ಮಹಾರಾಜರು (ವಯಸ್ಸು ೩೫ ವರ್ಷ) ಹಾಗೂ ಅವರ ವಾಹನ ಚಾಲಕನನ್ನು ಹಿಂದೂದ್ವೇಷಿ ಗುಂಪೊಂದು ಅತ್ಯಂತ ಬರ್ಬರವಾಗಿ ಹತ್ಯೆ ಮಾಡಿತು. ಪೊಲೀಸರ ಉಪಸ್ಥಿತಿಯಲ್ಲಿಯೇ ಸಂತರನ್ನು ಹತ್ಯೆ ಮಾಡಿದ್ದರಿಂದ ದೇಶದಲ್ಲಿ ಆಕ್ರೋಶದ ಅಲೆಯೆದ್ದಿತ್ತು.
೩.ಬುಲಂದಶಹರ (ಉತ್ತರಪ್ರದೇಶ)ದಲ್ಲಿ ಇಬ್ಬರು ಅರ್ಚಕರ ಹತ್ಯೆ
ಎಪ್ರಿಲ್ ೨೮ ರಂದು ಉತ್ತರಪ್ರದೇಶದ ಬುಲಂದಶಹರದಲ್ಲಿ ಜಗದೀಶ ಊರ್ಫ ರಂಗಿದಾಸ ಮತ್ತು ಶೇರಸಿಂಹ ಊರ್ಫ ಸೇವಾದಾಸ ಈ ಇಬ್ಬರು ಅರ್ಚಕರನ್ನು ಕೊಲ್ಲಲಾಯಿತು. ಅವರ ಮೃತದೇಹಗಳು ಅತ್ಯಂತ ಕೆಟ್ಟಸ್ಥಿತಿಯಲ್ಲಿ ದೇವಸ್ಥಾನದ ಪರಿಸರದಲ್ಲಿ ಸಿಕ್ಕಿದವು. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
೪. ನಾಂದೇಡದಲ್ಲಿ ಸಂತರ ಮತ್ತು ಅವರ ಸಹಚರರ ಹತ್ಯೆ
ಮೇ ೩ ರಂದು ನಾಂದೇಡ(ಮಹಾರಾಷ್ಟ್ರ)ದಲ್ಲಿ ಬಾಲಬ್ರಹ್ಮಚಾರಿ ಶಿವಾಚಾರ್ಯ ಮಹಾರಾಜ ಗುರು ಮತ್ತು ಭಗವಾನ ಶಿಂದೆಯವರನ್ನು ಕೊಲೆಗಡುಕರು ಕುತ್ತಿಗೆ ಹಿಸುಕಿ ಹತ್ಯೆ ಮಾಡಿದರು. ಹಾಗೆಯೇ ಒಂದೂವರೆ ಲಕ್ಷ ರೂಪಾಯಿಗಳನ್ನು ದೋಚಿದರು. ಈ ಪ್ರಕರಣದಲ್ಲಿ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
೫. ಅಬ್ದುಲ್ಲಾಪುರ(ಉತ್ತರಪ್ರದೇಶ)ದಲ್ಲಿ ಮತಾಂಧರಿಂದ ಶಿವಮಂದಿರದ ಕ್ರಾಂತಿ ಪ್ರಸಾದರ ಹತ್ಯೆ
ಅಬ್ದುಲ್ಲಾಪುರ(ಉತ್ತರಪ್ರದೇಶ)ದಲ್ಲಿ ಶಿವಮಂದಿರದ ವ್ಯವಸ್ಥೆಯನ್ನು ನೋಡಿಕೊಳ್ಳುವ ಕ್ರಾಂತಿ ಪ್ರಸಾದರು ಸದಾ ಕೇಸರಿ ಬಟ್ಟೆಗಳನ್ನು ಧರಿಸುತ್ತಿದ್ದರು. ಈ ಕಾರಣಕ್ಕಾಗಿ ಅನಸ್ ಕುರೈಶಿ ಎಂಬ ವ್ಯಕ್ತಿಯು ಅವರನ್ನು ಆಕ್ಷೇಪಾರ್ಹವಾಗಿ ಟೀಕಿಸುತ್ತಿದ್ದನು. ಜುಲೈ ೧೩ ರಂದು ಕುರೈಶಿಯು ಕ್ರಾಂತಿ ಪ್ರಸಾದರ ಮೇಲೆ ಹಲ್ಲೆ ಮಾಡಿದನು. ಮರುದಿನ ಪ್ರಸಾದರು ಮೃತಪಟ್ಟರು.
೬. ಛತೌನಾ (ಉತ್ತರಪ್ರದೇಶ) ದಲ್ಲಿ ಓರ್ವ ಸಾಧುವಿನ ಸಂದೇಹಾಸ್ಪದ ಮೃತ್ಯು
ಛತೌನಾ (ಉತ್ತರಪ್ರದೇಶ) ದಲ್ಲಿ ಜುಲೈ ೨೩ ರಂದು ೨೨ ವರ್ಷದ ಬಾಲಯೋಗಿ ಸತ್ಯೇಂದ್ರ ಆನಂದ ಸರಸ್ವತಿ ಸಾಧುವಿನ ಶವವು ಮರದ ಮೇಲೆ ನೇತಾಡುತ್ತಿದ್ದ ಸ್ಥಿತಿಯಲ್ಲಿ ಸಿಕ್ಕಿತು. ಅವರು ಅಲ್ಲಿಯ ವೀರಬಾಬಾ ದೇವಸ್ಥಾನದಲ್ಲಿ ವಾಸಿಸುತ್ತಿದ್ದರು. ‘ಇದು ಆತ್ಮಹತ್ಯೆಯಲ್ಲ, ಅವರನ್ನು ಹತ್ಯೆ ಮಾಡಲಾಗಿದೆ, ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
೭. ಲಖಿಸರಾಯ(ಬಿಹಾರ)ದಲ್ಲಿ ನಕ್ಸಲವಾದಿಗಳಿಂದ ಅರ್ಚಕರ ಕ್ರೂರ ಹತ್ಯೆ
ಬಿಹಾರದ ಲಖಿಸರಾಯದಲ್ಲಿ ಆಗಸ್ಟ್ ೨೩ರಂದು ನಕ್ಸಲ ವಾದಿಗಳು ನೀರಜ ಝಾ ಎಂಬ ಅರ್ಚಕನನ್ನು ಅಪಹರಿಸಿದರು. ಬಳಿಕ ಅವರನ್ನು ಬರ್ಬರವಾಗಿ ಕೊಲೆ ಮಾಡಿದರು. ನಕ್ಸಲವಾದಿಗಳು ಅವರಲ್ಲಿ ೧ ಕೋಟಿ ರೂಪಾಯಿಗಳ ಬೇಡಿಕೆಯನ್ನಿಟ್ಟಿದ್ದರು.
೮. ಮಂಡ್ಯ(ಕರ್ನಾಟಕ)ದಲ್ಲಿ ಕಲ್ಲಿನಿಂದ ಜಜ್ಜಿ ಮೂವರು ಅರ್ಚಕರ ಹತ್ಯೆ
ಸಪ್ಟೆಂಬರ್ ೧೧ ರಂದು ಕರ್ನಾಟಕದ ಮಂಡ್ಯ ನಗರದ ಹೊರಭಾಗದಲ್ಲಿರುವ ಆರ್ಕೇಶ್ವರ ದೇವಸ್ಥಾನದ ಗಣೇಶ, ಪ್ರಕಾಶ ಮತ್ತು ಆನಂದ ಈ ಮೂರು ಅರ್ಚಕರನ್ನು ಕೊಲೆಗಾರರು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದರು. ಈ ಪ್ರಕರಣದಲ್ಲಿ ೫ ಜನ ಆರೋಪಿಗಳನ್ನು ಬಂಧಿಸಲಾಗಿದೆ.
೯. ಕರೌಲಿ(ರಾಜಸ್ಥಾನ)ಯಲ್ಲಿ ಅರ್ಚಕರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆ
ರಾಜಸ್ಥಾನದ ಕರೌಲಿ ಜಿಲ್ಲೆಯ ಬೋಕನಾದಲ್ಲಿ ಅಕ್ಟೋಬರ್ ೮ ರಂದು ದೇವಸ್ಥಾನದ ಭೂಮಿಯ ಅತಿಕ್ರಮಣವನ್ನು ವಿರೋಧಿಸಿದ ೫೦ ವರ್ಷದ ಅರ್ಚಕ ಬಾಬೂಲಾಲ ವೈಷ್ಣವರನ್ನು ಕೊಲೆಗಾರರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಿದರು.
೧೦. ತಿರ್ರೆ ಮನೋರಮಾ (ಉತ್ತರಪ್ರದೇಶ)ದಲ್ಲಿ ಅರ್ಚಕರ ಮೇಲೆ ಗೋಲಿಬಾರ್
ಅಕ್ಟೋಬರ್ ೧೦ ರಂದು ತಿರ್ರೆ ಮನೋರಮಾ(ಉತ್ತರಪ್ರದೇಶ)ದ ರಾಮಜಾನಕಿ ದೇವಸ್ಥಾನದ ಅರ್ಚಕ ಸಾಮ್ರಾಟ ದಾಸರ ಮೇಲೆ ಅಜ್ಞಾತರು ಗುಂಡು ಹಾರಿಸಿದರು. ಈಗ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಭೂ-ಮಾಫಿಯಾಗಳು ಅವರ ಭೂಮಿಯ ಮೇಲೆ ಕಣ್ಣಿಟ್ಟಿದ್ದಾರೆಂದು ಹೇಳಲಾಗುತ್ತಿದೆ.
ಹಿಂದೂಬಹುಸಂಖ್ಯಾತ ಭಾರತದಲ್ಲಿ ಸಾಧು-ಸಂತರ ಮೇಲೆ ಇಂತಹ ಹಲ್ಲೆಗಳಾಗಲು, ಈ ದೇಶವೇನು ಪಾಕಿಸ್ತಾನವೇ ? ದೇಶದಾದ್ಯಂತ ಸಾಧು ಸಂತರು ಮತ್ತು ಅರ್ಚಕರ ಮೇಲೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಮತಾಂಧರಿಂದ ಹಲ್ಲೆಗಳಾಗುತ್ತವೆ ಮತ್ತು ಅವರ ಹತ್ಯೆಯಾಗುತ್ತಿದೆ; ಆದರೆ ಇಂತಹ ಸುದ್ದಿಗಳು ಜಾತ್ಯತೀತ ಮಾಧ್ಯಮಗಳಲ್ಲಿ ಪ್ರಸಾರವಾಗುವುದಿಲ್ಲ. ಈ ವಿಷಯದಲ್ಲಿ ಪ್ರಗತಿ (ಅಧೋಗತಿ) ಪರರು ಏನಾದರೂ ಮಾತನಾಡುವರೇ? ಸಾಧುಸಂತರ ಮೇಲೆ ಇಂತಹ ಹಲ್ಲೆ ಗಳಾಗುವುದು, ಆಡಳಿತ ಮತ್ತು ಸರಕಾರಕ್ಕೆ ನಾಚಿಕೆಗೇಡು ! ಸಾಧುಸಂತರ ಮೇಲಿನ ಹಲ್ಲೆಗಳನ್ನು ತಡೆಯಲು ಹಿಂದೂ ರಾಷ್ಟ್ರವೇ(ಈಶ್ವರೀ ರಾಜ್ಯ) ಬೇಕು ! – ಸಂಪಾದಕರು