ಐಸಿಸ್, ಆಂತರಿಕ ಭದ್ರತೆ ಮತ್ತು ನಮ್ಮ ಅಸ್ತಿತ್ವಕ್ಕಾಗಿ ಸ್ವರಕ್ಷಣೆಯ ಪಾತ್ರ !

ಶ್ರೀ. ರಮೇಶ ಪತಂಗೆ

ರಾಷ್ಟ್ರೀಯ ತನಿಖಾ ದಳವು (‘ಎನ್.ಐ.ಎ’ಯು) ಕಳೆದ ಕೆಲವು ತಿಂಗಳುಗಳಲ್ಲಿ ದೇಶದ ವಿವಿಧ ಭಾಗಗಳಿಂದ ‘ಐಸಿಸ್’ನ (‘ಇಸ್ಲಾಮಿಕ್ ಸ್ಟೇಟ್’ನ) ಕೆಲವು ಉಗ್ರರನ್ನು ಬಂಧಿಸಿರುವ ವಾರ್ತೆಗಳು ಪ್ರಸಿದ್ಧವಾದವು. ಈ ಉಗ್ರರಿಂದ ಸ್ಫೋಟಕಗಳು, ಆತ್ಮಘಾತಕ ಪಟ್ಟಿ ಜಾಕೇಟ್ಗಳನ್ನು ವಶಪಡಿಸಿಕೊಳ್ಳಲಾಯಿತು. ಈ ಉಗ್ರರಲ್ಲಿ ದೆಹಲಿಯಲ್ಲಿ ಬಂಧಿಸಲ್ಪಟ್ಟ ಅಬು ಯುಸೂಫನು ದೇಶದಿಂದ ಪರಾರಿಯಾದ ಡಾ. ಝಾಕೀರ ನಾಯಿಕ್‌ನ ಪ್ರವಚನದದಿಂದ ಪ್ರಭಾವಿತನಾಗಿದ್ದಾನೆ ಮತ್ತು ಅವನು ಐಸಿಸ್‌ಗೆ ಸೇರಿಕೊಂಡಿದ್ದಾನೆ, ಎಂದು ತಿಳಿದುಬಂದಿದೆ. ‘ಎನ್.ಐ.ಎ’ ಬಂಧಿಸಿರುವ ಈ ಎಲ್ಲ ಉಗ್ರರ ವಿರುದ್ಧ ೧೧ ಸಪ್ಟೆಂಬರ್ ೨೦೨೦ ರಂದು ಖಟ್ಲೆಗಳನ್ನು ದಾಖಲಿಸಲಾಗಿದೆ.

ಸಪ್ಟೆಂಬರ್ ೧೮ ರಂದು ಲೋಕಸಭೆಯಲ್ಲಿ ಎನ್.ಐ.ಎ ಯ ಕಾರ್ಯಾಚರಣೆಯ ಮಾಹಿತಿಯನ್ನು ನೀಡಲಾಯಿತು. ಕೇಂದ್ರೀಯ ಗೃಹ ಇಲಾಖೆಯು ಈ ಮಾಹಿತಿಯನ್ನು ನೀಡುವಾಗ, “ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಮತ್ತು ಕರ್ನಾಟಕ ಈ ರಾಜ್ಯಗಳಲ್ಲಿ ಐಸಿಸ್‌ನ ಉಗ್ರರ ಗುಂಪುಗಳು ನಿರ್ಮಾಣವಾಗಿವೆ ಎಂದು ಹೇಳಿತು. ೧೨೨ ಉಗ್ರರನ್ನು ವಶಪಡಿಸಿಕೊಳ್ಳಲಾಗಿದೆ”, ಎಂದಿತು. ತಮಿಳುನಾಡು ಮತ್ತು ಕೇರಳದಲ್ಲಿ ಇಸ್ಲಾಮೀ ಉಗ್ರರ ಗುಂಪುಗಳ ವಿಷಯವು ಬಹಳ ಗಂಭೀರವಾಗಿದೆ. ಮತಾಂಧ ಯುವಕರಿಗೆ ಪ್ರಚೋದನೆಗೊಳಪಡಿಸುವಂತಹ ಭಾಷಣಗಳನ್ನು ಕೇಳಿಸಿ ಅವರನ್ನು ಉಗ್ರರನ್ನಾಗಿಸುವ ಕೃತ್ಯವು ಇಲ್ಲಿ ಅನೇಕ ವರ್ಷಗಳಿಂದ ನಡೆಯುತ್ತಿದೆ. ಗುಪ್ತಚರ ಇಲಾಖೆಗಳಿಗೆ ಇದರ ಮಾಹಿತಿ ಇರುತ್ತದೆ; ಆದರೆ ತಮಿಳುನಾಡು ಮತ್ತು ಕೇರಳದ ಆಡಳಿತದವರು ಅಲ್ಪಸಂಖ್ಯಾತರನ್ನು ಓಲೈಸುವುದರಿಂದ ಅವರು ಈ ಸೂಚನೆಗಳತ್ತ ಗಮನ ಕೊಡುವುದಿಲ್ಲ.

vಇಸ್ಲಾಮಿ ಬೋಧನೆಯಿಂದ ಮತಾಂಧರು ಉಗ್ರರಾಗುವುದು

 ಅಝರ್ ಫಕ್ರುದ್ದೀನ ಎಂಬ ಮತಾಂಧನು ಐಸಿಸ್‌ಗೆ ಸೇರಲು ೨೦೧೪ ರಲ್ಲಿ ತಮಿಳುನಾಡಿನಿಂದ ಸಿರಿಯಾಗೆ ಹೋದನು. ಅವನಿಂದ ಪ್ರೇರಣೆ ಪಡೆದು ಇತರ ಮತಾಂಧರು ಧ್ವಜಗಳನ್ನು ಹಿಡಿದುಕೊಂಡು ಮಸೀದಿಯ ಮುಂದೆ ನಿಂತ ತಮ್ಮ ಛಾಯಾಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಿದರು. ಅನಂತರ ಅನೇಕ ಮತಾಂಧರು ಛಾಯಾಚಿತ್ರ ಗಳೊಂದಿಗೆ ಸೋಶಿಯಲ್ ಮೀಡಿಯಾಗೆ ದಾಖಲಾದರು. ಎನ್.ಐ.ಎ. ಮಾಡಿದ ದಾಳಿಯಲ್ಲಿ ಉಗ್ರವಾದಕ್ಕೆ ಕುಮ್ಮಕ್ಕು ನೀಡುವ ಸಾಮಗ್ರಿಗಳು ಸಿಕ್ಕಿದವು. ಈ ಸಾಮಗ್ರಿಗಳಲ್ಲಿ ಮೌಲ್ವಿಗಳ ಭಾಷಣದ ಸಿ.ಡಿ.ಗಳು (ಧ್ವನಿಮುದ್ರಿಕೆಗಳು) ಸಿಕ್ಕಿವೆ. ತಮಿಳುನಾಡಿನ ಗಣಕಯಂತ್ರ ಅಭಿಯಂತ ಮಹಮ್ಮದ ನಾಸೀರನನ್ನು ಬಂಧಿಸ ಲಾಗಿದೆ. ಅವನು ಚೆನ್ನೈಯ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿದ್ದಾನೆ. ಅವನ ಮೇಲೆ ‘ತೌಹಿದ ಜಮಾತ್’ನ ಬೋಧನೆಯ ಪರಿಣಾಮವಾಯಿತು ಮತ್ತು ಅವನು ಉಗ್ರವಾದದ ಕಡೆಗೆ ಹೊರಳಿದನು. ಕೇರಳದಲ್ಲಿ ದೊಡ್ಡ ಪ್ರಮಾಣದಲ್ಲಿ ವಹಾಬಿ ಇಸ್ಲಾಮ್‌ನ ಪ್ರಚಾರವಾಗಿದೆ. ವಹಾಬಿಯು ಸುನ್ನಿ ಪಂಥೀಯರಲ್ಲಿ ಅತ್ಯಂತ ಕಠೋರ ವಿಚಾರ ಶೈಲಿಯದ್ದಾಗಿದೆ.

ಐಸಿಸ್‌ನ ಹೆಚ್ಚುತ್ತಿರುವ ಪ್ರಭಾವದ ಬಗ್ಗೆ ಜನಪ್ರಬೋಧನೆ ಆಗಬೇಕೆಂದು ಯಾರಿಗೂ ಅನಿಸುವುದಿಲ್ಲ

ಇವೆಲ್ಲ ಘಟನೆಗಳು ಆಂತರಿಕ ಭದ್ರತೆಯ ದೃಷ್ಟಿಯಿಂದ ಅತ್ಯಂತ ಚಿಂತಾಜನಕವಾಗಿವೆ. ನಮ್ಮ ದೇಶದಲ್ಲಿ ಬಾಂಬ್‌ಸ್ಫೋಟಗಳಾದ ನಂತರ ಆಂತರಿಕ ಭದ್ರತೆಯ ಬಗ್ಗೆ ಅಲ್ಪಸ್ವಲ್ಪ ಚರ್ಚೆಯಾಗುತ್ತದೆ. ಈ ‘ಮಾನವತಾವಾದಿ’(?) ಸೆಕ್ಯುಲರಿಸ್ಟ್ (ಜಾತ್ಯತೀತವಾದಿ), ಎಡ ಪಂಥೀಯರು ಬಹಳ ಕೌಶಲ್ಯದಿಂದ ಉಗ್ರವಾದಿಗಳ ಪಕ್ಷವನ್ನುವಹಿಸಿ ಯುಕ್ತಿವಾದವನ್ನು ಮಾಡುತ್ತಾರೆ. ‘ಉಗ್ರರಿಗೆ ಮತ್ತು ಇಸ್ಲಾಮ್‌ನ ಯಾವುದೇ ಸಂಬಂಧವಿಲ್ಲ’, ‘ಉಗ್ರರಿಗೆ ಧರ್ಮ ಇರುವುದಿಲ್ಲ’, ‘ಮುಸಲ್ಮಾನ ಸಮಾಜವನ್ನು ಸಂಶಯದಿಂದ ನೋಡುವುದು ತಪ್ಪಾಗಿದೆ’, ‘ಇದಕ್ಕೆ ಧರ್ಮದ ಬಣ್ಣವನ್ನು ಬಳಿಯಬಾರದು’ ಇತ್ಯಾದಿ ಯುಕ್ತಿವಾದವನ್ನು ಮಾಡುತ್ತಾರೆ. ಇತರ ಸಮಯದಲ್ಲಿ ಮಾತ್ರ ಪ್ರಸಾರ ಮಾಧ್ಯಮಗಳು ಮಲಗಿರುತ್ತವೆ. ರಾಜಕೀಯ ಪಕ್ಷಗಳು ಅಧಿಕಾರದ ರಾಜಕಾರಣದಲ್ಲಿ ಸಿಲುಕಿರುತ್ತವೆ. ನಮ್ಮಲ್ಲಿ ಆಂದೋಲನಕ್ಕಾಗಿ ಈರುಳ್ಳಿ, ಹಾಲು, ಮೀಸಲಾತಿ, ವಿಕಾಸದ ವಿವಿಧ ಯೋಜನೆಗಳಿಗೆ ವಿರೋಧ ಮಾಡುವಂತಹ ವಿಷಯಗಳಿಗೇನು ಕಡಿಮೆಯಿಲ್ಲ; ಆದರೆ ಆಂತರಿಕ ಭದ್ರತೆ, ಐಸಿಸ್‌ನ ಹೆಚ್ಚುತ್ತಿರುವ ಪ್ರಭಾವ, ‘ಅಲ್ ಕಾಯದಾ’ ಇವುಗಳ ಬಗ್ಗೆ ಜನಪ್ರಬೋಧನೆ ಮಾಡುವ ಅವಶ್ಯಕತೆ ಇದೆ ಎಂದು ಯಾವುದೇ ರಾಜಕೀಯ ಪಕ್ಷಕ್ಕೆ ಅನಿಸುವುದಿಲ್ಲ. ಒಂದು ವೇಳೆ ಯಾರಿಗಾದರೂ ‘ಐಸಿಸ್’ ಎಂದರೇನು ?’, ಎಂದು ಕೇಳಿದರೆ, ಅದಕ್ಕೆ ಎಷ್ಟು ಜನರು ಸರಿ ಉತ್ತರ ನೀಡಬಹುದು ಎಂದು ಊಹಿಸುವುದು ಕಠಿಣವಾಗಿದೆ.

ಜಗತ್ತಿನಲ್ಲಿ ಇಸ್ಲಾಮೀ ಖಿಲಾಫತ ತರಬಯಸುವ ಐಸಿಸ್ !

ಅಲ್ ಕಾಯದಾ ಸಂಘಟನೆಯ ಮಾಧ್ಯಮದಿಂದ ಇರಾಕ್‌ನಲ್ಲಿ ಐಸಿಸ್ ಹುಟ್ಟಿಕೊಂಡಿತು. ಇಂದು ಈ ಸಂಘಟನೆಯು ಅಲ್ ಕಾಯದಾಗಿಂತಲೂ ಹೆಚ್ಚು ಕಠೋರ ಮತ್ತು ಅಪಾಯಕಾರಿ ಸಂಘಟನೆ ಯಾಗಿದೆ ಎಂದು ಹೇಳಲಾಗುತ್ತದೆ. ಈ ಸಂಘಟನೆಯ ಸದಸ್ಯರು ‘ಇಸ್ಲಾಮಿಕ್ ಖಿಲಾಫತ’ ನಿರ್ಮಾಣ ಮಾಡಲು ಜಿಹಾದ್ ನಡೆಸುತ್ತಿದ್ದಾರೆ. ಇಂದು ಸಿರಿಯಾ ಮತ್ತು ಇರಾಕ್ ಇವು ಅವರ ರಣಾಂಗಣದ ಕ್ಷೇತ್ರವಾಗಿದೆ. ಅಬು ಬಕರ್ ಅಲ್ ಬಗದಾದಿ ಇವನು ಈ ಸಂಘಟನೆಯ ಪ್ರಮುಖನಾಗಿದ್ದನು. ೨೦೧೦ ರಲ್ಲಿ ಈ ಸಂಘಟನೆಯು ಹುಟ್ಟಿ ಕೊಂಡಿತು ಮತ್ತು ೨೦೧೪ ರ ವರೆಗೆ ಇರಾಕ್ ಮತ್ತು ಸಿರಿಯಾದ ದೊಡ್ಡ ಭೂಪ್ರದೇಶವು ಈ ಸಂಘಟನೆಯ ವಶವಾಯಿತು. ಅಲ್ ಕಾಯದಾ ಎಂದರೆ ಬುನಾದಿ ! ಅಲ್ ಕಾಯದಾ ತನ್ನನ್ನು ‘ಸಾರ್ವಭೌಮ ರಾಜ್ಯ’ವೆಂದು ಎಂದಿಗೂ ಹೇಳಿಲ್ಲ ಮತ್ತು ಆ ರೀತಿ ಘೋಷಣೆಯನ್ನೂ ಮಾಡಿಲ್ಲ. ಅಲ್ ಕಾಯದಾದಿಂದ ಹುಟ್ಟಿಕೊಂಡ ಐಸಿಸ್ ಮಾತ್ರ ನಾವು ಕೇವಲ ಉಗ್ರವಾದಿ ಸಂಘಟನೆ  ಯಾಗಿಲ್ಲ, ‘ನಮ್ಮದು ಇಸ್ಲಾಮ್‌ವನ್ನು ಆಧಾರವಾಗಿಟ್ಟುಕೊಂಡ ರಾಜ್ಯಗಳಾಗಿವೆ. ನಮ್ಮ ಸ್ವಂತದ ಸಾರ್ವಭೌಮ ರಾಜ್ಯವಿದೆ. ಇಡೀ ಜಗತ್ತನ್ನು ನಮ್ಮ ಇಸ್ಲಾಮೀ ಖಿಲಾಫತದಲ್ಲಿ ತರುವುದು ನಮ್ಮ ಗುರಿಯಾಗಿದೆ’, ಎಂದು ಘೋಷಿಸಿತು. ಐಸಿಸ್ ಮತ್ತು ಅರಬಸ್ತಾನದ ಇಸ್ಲಾಮಿಕ್ ದೇಶಗಳಲ್ಲಿ ಮೈತ್ರಿಯಿಲ್ಲ. ಐಸಿಸ್ ಸಂಪೂರ್ಣ ಇಸ್ಲಾಮ್‌ಗೆ ಸಂಬಂಧಿಸಿದೆ ಎಂದು ಅಲ್ ಕಾಯದಾ ಪೂರ್ಣ ರೂಪದಲ್ಲಿ ಒಪ್ಪಿಕೊಳ್ಳುವುದಿಲ್ಲ. ಐಸಿಸ್ ಇಷ್ಟು ರಭಸದಿಂದ ಪ್ರಭಾವ ಬೀರಲು ಕೆಲವು ಕಾರಣಗಳಿವೆ. ಐಸಿಸ್‌ಗೆ ಇರಾಕ್‌ನಲ್ಲಿ ತರಬೇತಿ ಪಡೆದ ಸೈನಿಕರು ಶಸ್ತ್ರ ಸಹಿತ ಸಿಕ್ಕಿದರು. ಸೈನ್ಯವನ್ನು ಸಿದ್ಧಪಡಿಸಲು ಅಲ್ ಬಗದಾದಿಗೆ ತರಬೇತಿ ನೀಡುವ ಅವಶ್ಯಕತೆ ಬೀಳಲಿಲ್ಲ. ಸಿರಿಯಾದ ತೈಲಬಾವಿಗಳು ಐಸಿಸ್‌ನ ವಶವಾಗಿರುವುದರಿಂದ ಅವರಿಗೆ ಹಣದ ಕೊರತೆಯಾಗಲಿಲ್ಲ. ಕುವೈತ್ ಅವರಿಗೆ ತುಂಬಾ ಹಣವನ್ನು ಕೊಟ್ಟಿದೆ. ಕಟ್ಟರ ಪಂಥೀಯ ಮುಲ್ಲಾ- ಮೌಲ್ವಿಗಳು ಅವರಿಗೆ ಆತ್ಮಾಹುತಿ ಜಿಹಾದಿಗಳನ್ನು ಕೊಟ್ಟರು.

ಇಡೀ ಜಗತ್ತು ಇಸ್ಲಾಮ್‌ಮಯವಾಗುವವರೆಗೆ ಅಲ್‌ಕಾಯದಾ ಮತ್ತು ಐಸಿಸ್ ಹೋರಾಡುವುದು!

ಇಂದು ಅಲ್ ಬಗದಾದಿ ಬದುಕಿಲ್ಲ, ಇದರ ಅರ್ಥ ಐಸಿಸ್ ಮುಗಿಯಿತು, ಎಂದಾಗುವುದಿಲ್ಲ. ಒಸಾಮಾ ಬಿನ್ ಲಾಡೆನ ಸತ್ತನು, ಇದರ ಅರ್ಥ ಅಲ್‌ಕಾಯದಾ ಮುಗಿಯಿತು ಎಂದು ಆಗುವುದಿಲ್ಲ. ಲಾಡೆನ್, ಬಗದಾದೀ ಎಂಬುದು ಒಂದು ಕುವಿಚಾರವಾಗಿದೆ. ನಮ್ಮ ಪುರಾಣಗಳಲ್ಲಿ ಅಸುರರ ಅನೇಕ ಕಥೆಗಳಿವೆ. ಒಬ್ಬ ಅಸುರ ಸತ್ತರೆ, ಇನ್ನೊಬ್ಬ ಅಸುರ ತಯಾರಾಗುತ್ತಾನೆ. ಎಲ್ಲಿಯವರೆಗೆ ಜಗತ್ತನ್ನು ಇಸ್ಲಾಮ್‌ಮಯ ಮಾಡುವ ಹುಚ್ಚು ತಲೆಯಲ್ಲಿರುವುದೋ, ಅಲ್ಲಿಯವರೆಗೆ ಹೊಸ ರೂಪದಲ್ಲಿ ಅಲ್ ಕಾಯದಾ, ಐಸಿಸ್ ತಯಾರಾಗುವುದು, ಹೊಸ ಲಾಡೆನ್ ಮತ್ತು ಬಗದಾದೀ ತಯಾರಾಗುವರು. ಇದರ ಒಂದು ಇತಿಹಾಸವೇ ಇದೆ.

ಇಸ್ಲಾಮಿಕ್ ಖಿಲಾಫತ ಭಾರತದ ದೃಷ್ಟಿಯಲ್ಲಿ ಅಪಾಯಕಾರಿ

‘ಇಸ್ಲಾಮಿಕ್ ಖಿಲಾಫತ’ ಮುಸ್ಲಿಮ್ ಮತ್ತು ಪಾಶ್ಚಾತ್ಯ ದೇಶಗಳಿಗೆ ಬೇಡವಾಗಿದೆ, ಭಾರತದ ವಿಚಾರ ಮಾಡಿದರೆ, ದೇಶದ ದೃಷ್ಟಿಯಲ್ಲಿ ಅದು ಅತ್ಯಂತ ಅಪಾಯಕಾರಿ ಭಯಾನಕ ಸಂಕಲ್ಪನೆ ಯಾಗಿದೆ. ಭಾರತದ ಮೇಲಾಗಿರುವ ಪರಕೀಯ ಆಕ್ರಮಣಗಳು ಇಸ್ಲಾಮೀ ಖಿಲಾಫತನ ಕಾಲದಲ್ಲಿ ಆಗಿವೆ. ಭಾರತ ಅವುಗಳ ಭೀಕರ ಪರಿಣಾಮವನ್ನು ಅನುಭವಿಸಿದೆ; ಆದರೆ ಈ ವಿಷಯದಲ್ಲಿ ಭಾರತದ ನಿಲುವು ಎಷ್ಟು ಕಟ್ಟರವಾಗಿರಬೇಕಿತ್ತು, ಅಷ್ಟು ಮೋದಿ ಯವರು ಪ್ರಧಾನಮಂತ್ರಿ ಆಗುವ ಮೊದಲು ಆಗಿರಲಿಲ್ಲ. ಅಮೇರಿಕಾ ಅಲ್ ಬಗದಾದಿಯನ್ನು ಹತ್ಯೆ ಮಾಡಲು ೨೫ ದಶಲಕ್ಷ ಡಾಲರ್ಸ್ ಬಹುಮಾನವನ್ನು ಘೋಷಿಸಿತ್ತು. ಕೊನೆಗೆ ಅಮೇರಿಕಾ ಅವನನ್ನು ಮತ್ತು ಒಸಾಮಾ ಬಿನ್ ಲಾಡೇನನನ್ನು ಹತ್ಯೆಗೈದಿತು.

ಐಸಿಸ್ ಸಮರ್ಥಕರು ವಿನಾಶದ ಸಮಾಧಿ ಕಟ್ಟುವರು !

ನಮ್ಮ ದೇಶದ ವಿಚಾರ ಮಾಡಿದರೆ ಐಸಿಸ್‌ನ ಸಂಕಟದ ವಿಷಯದಲ್ಲಿ ಬಹಳಷ್ಟು ಜನಜಾಗೃತಿ ಮಾಡಬೇಕು; ಏಕೆಂದರೆ, ಐಸಿಸ್‌ನ ತತ್ತ್ವಜ್ಞಾನವು ಮುಸ್ಲಿಮೇತರರಿಗೆ ಬದುಕುವ ಅಧಿಕಾರವನ್ನು ನಿರಾಕರಿಸುತ್ತದೆ. ಇಲ್ಲಿ ಮಾನವೀ ಸ್ವಾತಂತ್ರ್ಯಕ್ಕೆ ಯಾವುದೇ ಬೆಲೆ ಇಲ್ಲ. ಮಹಿಳಾ ಸ್ವಾತಂತ್ರ್ಯಕ್ಕೆ ಏನೂ ಅರ್ಥವಿಲ್ಲ. ಮೂರ್ತಿ ಪೂಜೆ ಅವರಿಗೆ ಒಪ್ಪಿಗೆಯಿಲ್ಲ, ಸ್ವಪಂಥದ ಗ್ರಂಥದ ಹೊರತು ಇತರ ಧರ್ಮಗ್ರಂಥಗಳು ಅವರಿಗೆ ಒಪ್ಪಿಗೆ ಇಲ್ಲ, ಅನೇಕತೆ, ವೈವಿಧ್ಯತೆ ಅವರಿಗೆ ಒಪ್ಪಿಗೆಯಿಲ್ಲ. ‘ಪ್ರವಾದಿ ಕಾಲದ ಶುದ್ಧ ಇಸ್ಲಾಮನ್ನು ಜಗತ್ತಿನಲ್ಲಿ ತರಬೇಕು. ಎಲ್ಲೆಲ್ಲಿ ಮುಸಲ್ಮಾನರಿದ್ದಾರೆ, ಅವರು ಶುದ್ಧ ಇಸ್ಲಾಮ್‌ನ ರಾಜ್ಯವನ್ನು ತರುವ ಪ್ರಯತ್ನ ಮಾಡಬೇಕು’, ಎಂಬುದು ಅವರ ಬೋಧನೆಯಾಗಿದೆ. ಭಾರತದಲ್ಲಿಯೂ ಈ ಬೋಧನೆಯ ಪ್ರಚಾರ ಆಗುತ್ತಿರುತ್ತದೆ. ಜನಸಾಮಾನ್ಯರು ಒಂದು ವಿಷಯವನ್ನು ಗಮನದಲ್ಲಿಡಬೇಕು, ಯಾರು ಐಸಿಸ್‌ನ ಸಮರ್ಥಕರನ್ನು ಬೆಂಬಲಿಸುತ್ತಾರೆಯೋ, ಅವರು ನಮ್ಮ ಮಿತ್ರರಲ್ಲ, ನಮ್ಮ ಹಿತೈಷಿಗಳಲ್ಲ, ಅವರು ನಮ್ಮ ವಿನಾಶದ ಸಮಾಧಿಯನ್ನು ಕಟ್ಟುವವರಾಗಿದ್ದಾರೆ. ಯಾವಾಗ ನಮ್ಮ ಅಸ್ತಿತ್ವದ ರಕ್ಷಣೆಯ ಸಮಸ್ಯೆ ಎದುರಾಗುತ್ತದೋ, ಆಗ ಸ್ವರಕ್ಷಣೆಯ ಪಾತ್ರ ಮಹತ್ವದ್ದಾಗುತ್ತದೆ. ಆತ್ಮಘಾತಕತನವು ನಮ್ಮೆಲ್ಲರನ್ನೂ ಅಗ್ನಿಕುಂಡಕ್ಕೆ ಒಯ್ಯುವುದಾಗಬಹುದು.

ಲೇಖಕ : ಶ್ರೀ. ರಮೇಶ ಪತಂಗೆ, ಹಿರಿಯ ವಿಚಾರವಾದಿ ಸಾಪ್ತಾಹಿಕ ‘ವಿವೇಕ’ದ ಮಾಜಿ ಸಂಪಾದಕರು (ಆಧಾರ : ದೈನಿಕ ‘ತರುಣ ಭಾರತ, ೨೪.೯.೨೦೨೦)