ಎಲ್ಲಾ ಭಯೋತ್ಪಾದಕರು ಮದರಸಾಗಳಲ್ಲಿ ಬೆಳೆದ ಕಾರಣ ಮದರಸಾಗಳನ್ನು ಮುಚ್ಚಬೇಕು ! – ಮಧ್ಯಪ್ರದೇಶದ ಸಂಸ್ಕೃತಿ ಸಚಿವೆ ಉಷಾ ಠಾಕೂರ್

ಅಸ್ಸಾಂನಲ್ಲಿ ಬಿಜೆಪಿ ಸರ್ಕಾರ ಸರಕಾರಿ ಮದರಸಾಗಳನ್ನು ಮುಚ್ಚಿದೆ. ಇನ್ನು ಮಧ್ಯಪ್ರದೇಶ ಸೇರಿ ಬಿಜೆಪಿ ಆಳ್ವಿಕೆಯ ರಾಜ್ಯಗಳು, ಹಾಗೆಯೇ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರವು ತನ್ನ ವ್ಯಾಪ್ತಿಯಲ್ಲಿರುವ ಸರಕಾರಿ ಮದರಸಾಗಳನ್ನು ಮುಚ್ಚಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !

ಮಧ್ಯಪ್ರದೇಶದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವೆ ಉಷಾ ಠಾಕೂರ್

ಇಂದೋರ್ (ಮಧ್ಯಪ್ರದೇಶ) – ಎಲ್ಲ ಜಿಹಾದಿ ಭಯೋತ್ಪಾದಕರು ಮದರಸಾಗಳಲ್ಲಿ ಬೆಳೆದಿದ್ದಾರೆ. ಆದ್ದರಿಂದ ಅವುಗಳನ್ನು ಮುಚ್ಚಬೇಕು ಎಂದು ಮಧ್ಯಪ್ರದೇಶದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವೆ ಉಷಾ ಠಾಕೂರ್ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಉಷಾ ಠಾಕೂರ್ ತಮ್ಮ ಮಾತನ್ನು ಮುಂದುವರೆಸುತ್ತಾ,

೧. ವಿದ್ಯಾರ್ಥಿಗಳು ಒಂದೇಸಮಾನ ಆಗಿರುತ್ತಾರೆ, ಧರ್ಮದ ಆಧಾರದಲ್ಲಿ ನೀಡುವ ಶಿಕ್ಷಣದಿಂದ ಕಟ್ಟರತೆ ಹೆಚ್ಚಾಗುತ್ತಿದ್ದು ದ್ವೇಷಭಾವನೆ ಹರಡುತ್ತಿದೆ.

೨. ಎಲ್ಲ ಕಟ್ಟರವಾದಿಗಳು ಹಾಗೂ ಎಲ್ಲ ಭಯೋತ್ಪಾದಕರು ಮದರಸಾಗಳಲ್ಲಿ ಕಲಿತರು ಹಾಗೂ ಬೆಳೆದರು. ಜಮ್ಮು – ಕಾಶ್ಮೀರವನ್ನು ಭಯೋತ್ಪಾದನೆಯ ಕಾರ್ಖಾನೆಯನ್ನಾಗಿ ಮಾಡಲಾಗಿತ್ತು.

೩. ಸಮಾಜದ ಮುಖ್ಯವಾಹಿನಿಯೊಂದಿಗೆ, ರಾಷ್ಟ್ರೀಯತೆಯೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗದ ಮದರಸಾಗಳನ್ನು ನಾವು ಯೋಗ್ಯ ಶಿಕ್ಷಣದೊಂದಿಗೆ ಜೋಡಿಸುವ ಮೂಲಕ ಸಮಾಜದ ಅಭಿವೃದ್ಧಿಗಾಗಿ ಅವುಗಳನ್ನು ಮುಂದೆ ತರಬೇಕು.

೪. ಅಸ್ಸಾಂ ಇದನ್ನು ಮಾಡಿ ತೋರಿಸಿದೆ. ಅಸ್ಸಾಂನಲ್ಲಿ ಮದರಸಾಗಳನ್ನು ಮುಚ್ಚಲಾಗಿದೆ. ರಾಷ್ಟ್ರೀಯತೆಯಲ್ಲಿ ಅಡಚಣೆಗಳನ್ನು ನಿರ್ಮಿಸುತ್ತಿದ್ದಲ್ಲಿ, ಅಂತಹ ಎಲ್ಲ ಅಂಶಗಳನ್ನು ರಾಷ್ಟ್ರೀಯ ಹಿತದೃಷ್ಟಿಯಿಂದ ಮುಚ್ಚಬೇಕು. ಅವುಗಳಿಗೆ ಸಿಗುವ ಸರ್ಕಾರದ ಸಹಾಯ ನಿಲ್ಲಬೇಕು. ವಕ್ಫ ಬೋರ್ಡ್ ಸ್ವತಃ ಬಹಳ ಸಮರ್ಥ ಸಂಸ್ಥೆಯಾಗಿದೆ.

೫. ಯಾರಾದರು ಖಾಸಗಿಯಾಗಿ ಧಾರ್ಮಿಕ ಸಂಸ್ಕಾರಗಳನ್ನು ನೀಡಲು ಬಯಸಿದರೆ, ಭಾರತದ ಸಂವಿಧಾನವು ಅದಕ್ಕೆ ಅನುಮತಿ ನೀಡಿದೆ.