ಶ್ರಾವಣ ಮಾಸದಲ್ಲಿ ಅಧ್ಯಾತ್ಮ ಪ್ರಸಾರದ ದೃಷ್ಟಿಯಿಂದ ಮುಂದಿನ ಪ್ರಯತ್ನಗಳನ್ನು ಮಾಡಿ ಗುರುಕೃಪೆಗೆ ಪಾತ್ರರಾಗಿರಿ !

ಸಾಧಕರಿಗೆ ಸೂಚನೆ

ದಿ. ‘೫.೮.೨೦೨೪ ರಿಂದ ಶ್ರಾವಣಮಾಸ ಆರಂಭವಾಗಿದೆ. ಈ ಅವಧಿಯಲ್ಲಿ ನಾಗರಪಂಚಮಿ, ಶ್ರಾವಣ ಹುಣ್ಣಿಮೆ, ರಕ್ಷಾಬಂಧನ, ಶ್ರೀಕೃಷ್ಣಜಯಂತಿ, ಮೊಸರು ಕುಡಿಕೆ ªಈ ಹಬ್ಬಗಳು ಬರುತ್ತವೆ. ಈ ಸಮಯದಲ್ಲಿ ಅಧ್ಯಾತ್ಮಪ್ರಸಾರದ ದೃಷ್ಟಿಯಿಂದ ಮುಂದಿನ ಪ್ರಯತ್ನಗಳನ್ನು ಮಾಡಬಹುದು.

೧. ದೇವಸ್ಥಾನಗಳಲ್ಲಿ ಗ್ರಂಥ ಪ್ರದರ್ಶನಗಳ ಆಯೋಜನೆ ಮಾಡುವುದು

ಅ. ಸೋಮವಾರ, ಮಂಗಳವಾರ ಮುಂತಾದ ವಾರಗಳಂದು ಆಯಾ ದೇವತೆಗಳ ದೇವಸ್ಥಾನಗಳಲ್ಲಿ ಸನಾತನದಿಂದ ಪ್ರಕಾಶಿಸಲ್ಪಟ್ಟ ಗ್ರಂಥ, ಕಿರುಗ್ರಂಥ ಮತ್ತು ಸಾತ್ತ್ವಿಕ ಉತ್ಪಾದನೆಗಳ ಪ್ರದರ್ಶನಗಳನ್ನು ಏರ್ಪಡಿಸಬೇಕು. ಈ ಸಮಯದಲ್ಲಿ ಆಯಾ ದೇವತೆಯ ಅಧ್ಯಾತ್ಮಶಾಸ್ತ್ರಕ್ಕೆ ಸಂಬಂಧಿಸಿದ ಮಾಹಿತಿ ನೀಡುವ ಫಲಕಗಳನ್ನು ಸಹ ಹಾಕಬಹುದು. ಸೋಮವಾರ ಶಿವನ ದೇವಸ್ಥಾನದಲ್ಲಿ ತುಂಬಾ ಜನಸಂದಣಿ ಇರುತ್ತದೆ. ಅಲ್ಲಲ್ಲಿ ಶಿವಮಂದಿರಗಳಲ್ಲಿ ಗ್ರಂಥಪ್ರದರ್ಶನ ಏರ್ಪಡಿಸಲು ಆದ್ಯತೆಯಿಂದ ಆಯೋಜನೆ ಮಾಡಬೇಕು.

ಆ. ದೇವತೆಗಳ ನಾಮಪಟ್ಟಿಗಳು, ಚಿತ್ರಗಳು, ಗ್ರಂಥ, ಕಿರುಗ್ರಂಥ ಮತ್ತು ಪದಕ(ಲಾಕೇಟ್) ಇವುಗಳ ವಿವಿಧ ಆಕರ್ಷಕ ಸೆಟ್‌ಗಳನ್ನು ತಯಾರಿಸಿ ಗ್ರಂಥಪ್ರದರ್ಶನದಲ್ಲಿ ಅವುಗಳ ಮಾರಾಟ ಮಾಡಬಹುದು.

ಇ. ಗ್ರಂಥಪ್ರದರ್ಶನಕ್ಕೆ ಭೇಟಿ ನೀಡುವ ಜಿಜ್ಞಾಸುಗಳಿಗೆ ‘ಸನಾತನ ಪಂಚಾಂಗ’ದ ಮಹತ್ವವನ್ನು ಹೇಳಿ ೨೦೨೫ ರ ಪಂಚಾಂಗದ ಬೇಡಿಕೆ ಪಡೆಯಬಹುದು.

೨. ಸಾರ್ವಜನಿಕ ಸ್ಥಳಗಳಲ್ಲಿ ಪ್ರವಚನಗಳ ಆಯೋಜನೆ

ದೇವಸ್ಥಾನಗಳು, ಶಾಲೆ, ಮಹಾವಿದ್ಯಾಲಯಗಳು, ಹಿರಿಯ ನಾಗರಿಕರ ಸಂಘ, ಮಹಿಳಾ ಮಂಡಲಿಗಳು, ವಸತಿ ಸಂಸ್ಥೆಗಳು ಮುಂತಾದ ಸ್ಥಳಗಳಲ್ಲಿ ‘ಶ್ರಾವಣ ಮಾಸದ ಮಹತ್ವ’ದ ಕುರಿತು, ಹಾಗೆಯೇ ದೇವತೆ ಗಳ ಅಧ್ಯಾತ್ಮಶಾಸ್ತ್ರದ ಬಗ್ಗೆ ಮಾಹಿತಿ ನೀಡುವ ಪ್ರವಚನಗಳನ್ನು ಆಯೋಜಿಸಬಹುದು. ‘ಆದರ್ಶ ಗಣೇಶೋತ್ಸವ ಹೇಗೆ ಆಚರಿಸಬೇಕು ?’ ಈ ಕುರಿತು ಸಹ ಉಪಸ್ಥಿತರಿಗೆ ಪರಿಚಯ ಮಾಡಿಕೊಡುವುದು.

೩. ವಿವಿಧ ಕಾರ್ಯಕ್ರಮಗಳ ಮೂಲಕ ಅಧ್ಯಾತ್ಮಪ್ರಸಾರ

ಅ. ಚಾತುರ್ಮಾಸದ ಪ್ರಯುಕ್ತವಾಗಿ ವಿವಿಧ ದೇವಸ್ಥಾನಗಳಲ್ಲಿ ಕೀರ್ತನೆ, ಪ್ರವಚನ ಇತ್ಯಾದಿಗಳನ್ನು ಬಹುದೊಡ್ಡ ಮಟ್ಟದಲ್ಲಿ ಆಯೋಜಿಸಲಾಗುತ್ತದೆ. ಅಂತಹ ಸ್ಥಳಗಳಲ್ಲಿ ಗ್ರಂಥ ಪ್ರದರ್ಶನವನ್ನು ಏರ್ಪಡಿಸಬಹುದು, ಹಾಗೆಯೇ ಆಯೋಜಕರ ಅನುಮತಿ ಪಡೆದು ‘ಚಾತುರ್ಮಾಸದ ಮಹತ್ವ’ ಮುಂತಾದ ವಿಷಯಗಳ ಬಗ್ಗೆ ಪ್ರವಚನ ತೆಗೆದುಕೊಳ್ಳಬಹುದು.

ಆ. ಶ್ರಾವಣಮಾಸದಲ್ಲಿ ಮುತ್ತೈದೆಯರು ಮಂಗಳಾಗೌರಿಯ ನಿಮಿತ್ತದಿಂದ ಒಟ್ಟಿಗೆ ಸೇರುತ್ತಾರೆ. ಅವರ ಸಲುವಾಗಿ ಪ್ರವಚನ, ಹಾಗೆಯೇ ಗ್ರಂಥ ಪ್ರದರ್ಶನಗಳ ಆಯೋಜನೆ ಮಾಡಬಹುದು, ಹಾಗೆಯೇ ಅಲ್ಲಿ ಬರುವ ಮಹಿಳೆಯರಿಗೆ ಕಿರುಗ್ರಂಥ ಅಥವಾ ಸಾತ್ತ್ವಿಕ ಉತ್ಪಾದನೆಗಳನ್ನು ಉಡುಗೊರೆಯಾಗಿ ಕೊಡಬಹುದು.

ಇ. ಈ ಮಾಸದಲ್ಲಿ ಕೆಲವರು ಮನೆಯಲ್ಲಿ ಪೂಜೆ ಮಾಡುತ್ತಾರೆ. ಈ ನಿಮಿತ್ತ ಧಾರ್ಮಿಕ ಕೃತಿಗಳ ಶಾಸ್ತ್ರವನ್ನು ಹೇಳುವ ಗ್ರಂಥಗಳನ್ನು ಸಮಾಜಕ್ಕೆ ತಲುಪಿಸಬಹುದು.

೪. ಮನೆಮನೆಗೆ ತೆರಳಿ ಪ್ರಸಾರ

ಹಬ್ಬ-ಉತ್ಸವಗಳ ಕುರಿತು, ಹಾಗೆಯೇ ವಿವಿಧ ದೇವತೆಗಳ ಮಾಹಿತಿ ನೀಡುವ ಗ್ರಂಥ ಮತ್ತು ಕಿರುಗ್ರಂಥಗಳನ್ನು ಮನೆ ಮನೆಗೆ ತೆರಳಿ ವಿತರಣೆ ಮಾಡಬಹುದು.

೫. ಫಲಕ ಪ್ರಸಿದ್ಧಿಗಾಗಿ

ಶ್ರಾವಣ ಮಾಸದ ಬಗೆಗಿನ, ಹಾಗೆಯೇ ದೇವತೆಗಳ ಸಂದರ್ಭದಲ್ಲಿನ ಮಾಹಿತಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಫಲಕದಲ್ಲಿ ಬರೆದು ಫಲಕಪ್ರಸಿದ್ಧಿ ಮಾಡಬಹುದು.’ (೩೦.೭.೨೦೨೪)

ರಕ್ಷಾಬಂಧನದ ಪ್ರಯುಕ್ತವಾಗಿ ‘ಲವ್‌ ಜಿಹಾದ್’ ಈ ಗ್ರಂಥವನ್ನು ಸಮಾಜದಲ್ಲಿ ಹೆಚ್ಚು ಹೆಚ್ಚು ಪ್ರಮಾಣದಲ್ಲಿ ವಿತರಿಸÀಲು ಪ್ರಯತ್ನಿಸಿರಿ !

‘ಲವ್‌ ಜಿಹಾದ್’ ವಿಷಯದ ಬಗ್ಗೆ ಯುವತಿಯರು ಮತ್ತು ಹೆಣ್ಣುಮಕ್ಕಳಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಮಹಿಳಾ ಸಂಘಟನೆ ಮತ್ತು ಮಹಿಳಾ ಮಂಡಳಿಗಳಲ್ಲಿ ರಕ್ಷಾಬಂಧನದ ಪ್ರಯುಕ್ತ ಪ್ರವಚನಗಳನ್ನು ಆಯೋಜಿಸಿ ‘ಲವ್‌ ಜಿಹಾದ್’ ಈ ಗ್ರಂಥದÀ ವಿತರಣೆ ಮಾಡಬಹುದು, ಹಾಗೆಯೇ ಹಿಂದುತ್ವನಿಷ್ಠ ಸಂಘಟನೆ ಮತ್ತು ಹಿಂದುತ್ವನಿಷ್ಠರನ್ನು ಭೇಟಿಯಾಗಿ ‘ಅವರು ಈ ಗ್ರಂಥ ವಿತರಣೆ ಮಾಡಬಹುದೇ ?’, ಎಂದು ವಿಚಾರಿಸಬಹುದು. ಈ ಗ್ರಂಥಕ್ಕೆ ಪ್ರಾಯೋಜಕತ್ವ ಪಡೆದು ಮಹಾವಿದ್ಯಾಲಯ ಗಳು ಮತ್ತು ಮಹಿಳಾ ಸಂಘಟನೆಗಳಂತಹ ಸ್ಥಳಗಳಲ್ಲಿ ಉಚಿತ ವಿತರಣೆ ಮಾಡಬಹುದು. ರಕ್ಷಾಬಂಧನದ ಪ್ರಯುಕ್ತ ಸಹೋದರರು ತಮ್ಮ ಸಹೋದರಿಗೆ ‘ಲವ್‌ ಜಿಹಾದ್’ ಗ್ರಂಥವನ್ನು ಉಡುಗೊರೆ ಎಂದು ಕೊಡಬಹುದು.’ (೩೦.೭.೨೦೨೪)