ಸಾಧಕರು, ಓದುಗರು, ಹಿತೈಷಿಗಳು, ಧರ್ಮಪ್ರೇಮಿಗಳು ಮತ್ತು ಜಾಹೀರಾತುದಾರರಿಗೆ ಸೂಚನೆ !
ಕಳೆದ ಕೆಲವು ತಿಂಗಳುಗಳಿಂದ, ‘ಆನ್‌ಲೈನ್’ ಅಥವಾ ಮೊಬೈಲ್ ಮೂಲಕ ನಡೆಯುವ ವಂಚನೆಯ ಘಟನೆಗಳಲ್ಲಿ ಹೆಚ್ಚಳವಾಗುತ್ತಿವೆ. ಈ ವಿಷಯದಲ್ಲಿ ‘ಸನಾತನ ಪ್ರಭಾತ’ ನಿಯತಕಾಲಿಕೆಗಳ ಮೂಲಕ ಕಾಲಕಾಲಕ್ಕೆ ಸೂಚನೆಯನ್ನು ನೀಡಿದ್ದರೂ ಸಾಧಕರು ಮತ್ತು ಧರ್ಮಪ್ರೇಮಿಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಕಂಡು ಬರುತ್ತದೆ. ಇಂತಹ ಘಟನೆಗಳ ಬಗ್ಗೆ ಎಲ್ಲರಲ್ಲಿ ಗಾಂಭೀರ್ಯ ಮೂಡಬೇಕು ಎನ್ನುವ ಉದ್ದೇಶದಿಂದ ಓರ್ವ ಧರ್ಮಪ್ರೇಮಿ ಮಹಿಳೆಯೊಂದಿಗೆ ಇತ್ತೀಚೆಗೆ ನಡೆದ ಘಟನೆಯನ್ನು ಇಲ್ಲಿ ನೀಡುತ್ತಿದ್ದೇವೆ. ಈ ಧರ್ಮಪ್ರೇಮಿ ಮಹಿಳೆಯು ಲೆಕ್ಕಪತ್ರ ಸಂಬಂಧಿತ(ಅಕೌಂಟ) ಕೆಲಸವನ್ನು ಮಾಡುತ್ತಾರೆ. ಹೀಗಿದ್ದರೂ ಅವರಿಗೆ ಈ ಫೇಕ್ (ನಕಲಿ) ಕಾಲ್ ಹಗರಣ ಅವರ ಗಮನಕ್ಕೆ ಬಂದಿಲ್ಲ. ಇದರಿಂದ ಯಾವುದೇ ನಕಲಿ ಹಗರಣಗಳ ವಿಷಯದ ಸಂಪರ್ಕಗಳಲ್ಲಿ ಮೋಸ ಹೋಗಬಾರದು.
೨೯ ನೇ ಜುಲೈ ೨೦೨೪ ರಂದು ಮಧ್ಯಾಹ್ನ ನನಗೆ ಮೊಬೈಲ್‌ನಲ್ಲಿ ಕರೆ ಬಂದಿತು. ಆ ಸಮಯದಲ್ಲಿ ಮುಂದಿನಂತೆ ಮಾತುಕತೆಗಳು ನಡೆದವು. “ಭಾಬೀಜಿ…………ನೀವು ಇವರ ಪತ್ನಿಯಲ್ಲವೇ ?’’ ಎಂದು ಕೇಳಿದರು. ಆಗ ನಾನು “ಹೌದು” ಎಂದೆನು. ನಂತರ ಅವರು ಹೇಳಿದರು ನಿಮ್ಮ ಮನೆಯವರ ‘ಗೂಗಲ್ ಪೇ’ (ಆನ್‌ಲೈನ್ ಖಾತೆ) ನಲ್ಲಿ ಕೆಲವು ಸಮಸ್ಯೆ ಎದುರಾಗಿದೆ. ಆದುದರಿಂದ ಅವರು ನನಗೆ ನಿಮ್ಮ ಮೊಬೈಲ್ ನಂಬರ್ ಕೊಟ್ಟಿದ್ದಾರೆ’ ಎಂದು ಹೇಳಿದಾಗ, ನಾವು ‘ಹೌದ’ ಎಂದು ಹೇಳಿ ಮೊಬೈಲ್ ಸ್ಥಗಿತಗೊಳಿಸಿದೆನು.
ತದನಂತರ ಅವರು ಮರಳಿ ಕರೆ ಮಾಡಿ, ‘೧೦ ಸಾವಿರ ರೂಪಾಯಿ ಕಳುಹಿಸಿದ್ದೇನೆ. ಮೆಸೇಜ್(ಸಂದೇಶ) ಬಂದಿದೆಯೇ ನೋಡಿರಿ ? ಮೊಬೈಲ ಆನ್ ಇಡಿರಿ’ ಎಂದು ಹೇಳಿದರು. ಆ ಸಂದೇಶವನ್ನು ನೋಡಿ ನಾನು ಅವರಿಗೆ ‘ಹೌದು’ ಎಂದು ಹೇಳಿದೆನು. ”ಮುಂದಿನ ೨ ಸಾವಿರ ರೂಪಾಯಿಗಳನ್ನು ಕಳುಹಿಸುತ್ತೇನೆ. ಮೊಬೈಲ್ ಆನ್ ಇಡುವಂತೆ ಹೇಳಿದರು. ನಾನು ನಿಮಗೆ ೨ ಸಾವಿರ ರೂಪಾಯಿಗಳನ್ನು ಕಳುಹಿಸುವ ಬದಲು ೨೦ ಸಾವಿರ ರೂಪಾಯಿಗಳನ್ನು ಕಳುಹಿಸಿದ್ದೇನೆ. ಆ ಸಂದೇಶ ಬಂದಿದೆಯೇ ? ಸ್ವಲ್ಪ ನೋಡಿರಿ’ ಎಂದು ಹೇಳಿ ಮೊಬೈಲ್ ಬಂದ್ ಮಾಡಿದರು. ಅವರು ಮರಳಿ ಕರೆ ಮಾಡಿ, ”ಸಂದೇಶ ಬಂದಿದೆಯೇ ಸ್ವಲ್ಪ ನೋಡಿರಿ ? ಮೊಬೈಲ್ ಆನ್ ಮಾಡಿ ಇಡಿ. ಏಕೆ ಮೇಲಿಂದ ಮೇಲೆ ಕರೆಯನ್ನು ಕಟ್ (ಸ್ಥಗಿತಗೊಳಿಸುತ್ತೀರಿ) ಮಾಡುತ್ತೀರಿ’’ ಎಂದು ಕೇಳಿದರು. ನಾನು ಅವರಿಗೆ ”ನನಗೆ ರೇಂಜ’ ಇಲ್ಲ ಎಂದು ಹೇಳಿದೆನು. ನಾನು ನಂತರ ‘ಹಣವನ್ನು ವರ್ಗಾವಣೆ ಮಾಡುತ್ತೇನೆ. (ಹಣ ಕಳುಹಿಸುತ್ತೇನೆ)’ ಎಂದು ಹೇಳಿದೆನು. ಅದಕ್ಕೆ ಅವರು ‘ಇಲ್ಲ’ ಎಂದು ಹೇಳಿದನು ಮತ್ತು ‘ಹೀಗೆ ಮಾಡಿರಿ, ಮೊಬೈಲ್ ಆನ್ ಮಾಡಿ ಇಡಿ, ಸ್ಥಗಿತಗೊಳಿಸಬೇಡಿ’ ಎಂದು ಹೇಳಿದರು. ತದನಂತರ ನಾನು ‘ಎರಡನೇಯ ಸಂದೇಶ ಬಂದಿದೆಯೇ ಎಂದು ನೋಡಿದೆನು ಮತ್ತು ೨೦ ಸಾವಿರ ರೂಪಾಯಿಗಳು ಬಂದಿರುವ ಸಂದೇಶವನ್ನು ನೋಡಿ, ನನ್ನ ‘ಗೂಗಲ ಪೇ’ ಮೂಲಕ ೧೮ ಸಾವಿರ ರೂಪಾಯಿಗಳನ್ನು ಆ ವ್ಯಕ್ತಿಯ ಕ್ರಮಾಂಕವನ್ನು ತೆಗೆದುಕೊಂಡು ‘ಹಣವನ್ನು ವರ್ಗಾವಣೆ ಮಾಡಿದೆನು. ತದನಂತರ ಅವನು ‘ಸ್ಕ್ರೀನ್ ಶಾಟ್’ ಗಾಗಿ (ಮೊಬೈಲ್ ಪರದೆಯ ಮೇಲೆ ಕಾಣಿಸುವ ಚಿತ್ರದ ಛಾಯಾಚಿತ್ರ) ‘ವಾಟ್ಸ ಆಪ್’ ಸಂಖ್ಯೆಯನ್ನು ನೀಡಿ ಅದಕ್ಕೆ ಅದನ್ನು ಕಳುಹಿಸುವಂತೆ ಹೇಳಿದೆನು. ನಾನು ಆ ವಾಟ್ಸ ಆಪ್ ಸಂಖ್ಯೆಯ ಮೇಲೆ ‘ಸ್ಕ್ರೀನ್ ಶಾಟ್’ ಕಳುಹಿಸಿದೆನು ಮತ್ತು ಮೊಬೈಲ್ ಸ್ಥಗಿತಗೊಳಿಸಿದೆನು. (ಸ್ವಿಚ್ ಆಫ್ ಮಾಡಿದೆ.) (ಈ ಇಡೀ ಪ್ರಕರಣದಲ್ಲಿ ಆ ವ್ಯಕ್ತಿಯು ೩ ಬೇರೆ ಬೇರೆ ಮೊಬೈಲ್ ಬಳಸಿದ್ದರು)
ಮೇಲಿನ ಸಂದೇಶವನ್ನು ಕಳುಹಿಸಿದ ನಂತರ, ಸಂದೇಶವು ನಕಲಿ ಎಂದು ನಾನು ಅರಿತುಕೊಂಡೆ. ‘ಗೂಗಲ ಪೇ’ ನಲ್ಲಿನ ನನ್ನ ಖಾತೆಯಲ್ಲಿ ಆ ವ್ಯಕ್ತಿಯು ಯಾವುದೇ ವ್ಯವಹಾರವನ್ನು ಮಾಡಿರಲಿಲ್ಲ’ ಎನ್ನುವುದು ಗಮನಕ್ಕೆ ಬಂದಿತು. ತದನಂತರ ನಾನು ಹತ್ತಿರದ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲು ಹೋದೆನು. ಆ ಸಮಯದಲ್ಲಿ ಪೊಲೀಸರು ‘ಸೈಬರ್ ಕ್ರೈಮ್’ ಇಲಾಖೆಯ ವೆಬ್‌ಸೈಟ್‌ನಲ್ಲಿ ‘ಆನ್‌ಲೈನ್’ ಅಥವಾ ಸಂಖ್ಯೆ ೧೯೩೦ ಅಥವಾ ‘೧೯೩೦’ ಸಂಖ್ಯೆಗೆ ದೂರು ಸಲ್ಲಿಸಲು ಹೇಳಿದರು. ಹಾಗೆಯೇ ಸಂಬಂಧಪಟ್ಟ ಬ್ಯಾಂಕ್‌ಗೆ ಹೋಗಿ ವ್ಯವಹಾರವನ್ನು ನಿಲ್ಲಿಸುವ ಬಗ್ಗೆ ತಿಳಿಸಲು ಹೇಳಿದರು. ಬ್ಯಾಂಕ ವ್ಯವಹಾರವನ್ನು ನಿಲ್ಲಿಸಿದ್ದರಿಂದ ಆ ವ್ಯಕ್ತಿಗೆ ನನ್ನ ಖಾತೆಯಿಂದ ಹಣವನ್ನು ತೆಗೆಯಲು ಸಾಧ್ಯವಾಗಲಿಲ್ಲ.
– ಓರ್ವ ಧರ್ಮಪ್ರೇಮಿ ಮಹಿಳೆ
ಜಾಗರೂಕರಾಗಿರಿ ಮತ್ತು ನಿಮ್ಮನ್ನು ಮೋಸಗೊಳಿಸಲು ಬಿಡದಿರಿ !ಆಡಳಿತ ಮತ್ತು ಪ್ರಸಾರ ಮಾಧ್ಯಮಗಳ ಮೂಲಕ ಸಮಾಜವನ್ನು ಜಾಗೃತಗೊಳಿಸುತ್ತಿರುವಾಗಲೂ ಈ ರೀತಿಯ ಮೋಸಗೊಳಿಸುವ ಪ್ರಕರಣಗಳು ಹೆಚ್ಚಾಗುತ್ತಿರುವುದು ಕಂಡು ಬರುತ್ತಿದೆ. ಇದರಿಂದ ಈ ವಿμÀಯದ ಬಗ್ಗೆ ಜಾಗರೂಕರಾಗಿರುವುದು ಆವಶ್ಯಕವಾಗಿದೆ. ದಿನಪತ್ರಿಕೆ ‘ಸನಾತನ ಪ್ರಭಾತ’ದಲ್ಲಿ. ‘ಫೆಡ್ಕ್ಸ್ ಹಗರಣ’ ಹೇಗೆ ನಡೆಯು ತ್ತದೆ ಮತ್ತು ಅದರ ಮೂಲಕ ಸಮಾಜದ ಜನರು ಹೇಗೆ ಮೋಸ ಹೋಗುತ್ತಾರೆ ಎಂಬ ವಿವರವಾದ ಮಾಹಿತಿಯನ್ನು ಪ್ರಕಟಿಸಲಾಗಿದೆ. ಇದು ಈ ಕೆಳಗಿನ ಲಿಂಕ್ ಇಲ್ಲಿ ಲಭ್ಯವಿದೆ. ಪ್ರಸ್ತುತ ‘ಫೆಡೆಕ್ಸ ಕಾಲರ್’ ಮೂಲಕ ಮಾಡಲಾಗಿರುವ ಹಗರಣ |