ಸಾಧಕರಿಗೆ ಸೂಚನೆ
‘ಸನಾತನದ ರಾಷ್ಟ್ರ ಮತ್ತು ಧರ್ಮ ಜಾಗೃತಿಯ ಕಾರ್ಯ ಹೆಚ್ಚುತ್ತಾ ಹೋಗುತ್ತಿದೆ, ಜೊತೆಗೆ ಈ ಕಾರ್ಯದಲ್ಲಿ ಅಡಚಣೆಯನ್ನುಂಟು ಮಾಡಲು ಕೆಟ್ಟ ಶಕ್ತಿಗಳು ಸಹ ದೊಡ್ಡ ಪ್ರಮಾಣದಲ್ಲಿ ಕಾರ್ಯನಿರತವಾಗಿವೆ. ಈ ಕೆಟ್ಟ ಶಕ್ತಿಗಳು ಸಾಧನೆ ಮತ್ತು ಸಮಷ್ಟಿ ಸೇವೆ ಮಾಡುವ ಸಾಧಕರಿಗೆ ಶಾರೀರಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಈ ಮೂರೂ ಸ್ತರಗಳಲ್ಲಿ ತೊಂದರೆ ಕೊಡಲು ಪ್ರಯತ್ನಿಸುತ್ತಿವೆ. ಈ ತೊಂದರೆಗಳಲ್ಲಿನ ಒಂದು ವಿಧಾನವೆಂದರೆ, ಕಳೆದ ಕೆಲವು ದಿನಗಳಿಂದ ಸಾಧಕರಿಗೆ ಅಪಘಾತವಾಗುವ ಪ್ರಮಾಣದಲ್ಲಾಗುತ್ತಿರುವ ಹೆಚ್ಚಳ, ಉದಾ. ವಾಹನ ನಡೆಸುವಾಗ ಜಾರಿ ಬೀಳುವುದರಿಂದ ಪೆಟ್ಟಾಗುವುದು, ಪಾಯಖಾನೆಯಲ್ಲಿ ಅಥವಾ ಇತರ ಕಡೆಗಳಲ್ಲಿ ಕಾಲು ಜಾರಿ ಬಿದ್ದು ಅಸ್ಥಿಭಂಗವಾಗುವುದು ಅಥವಾ ಗಾಯಗೊಳ್ಳುವುದು ಇತ್ಯಾದಿ ತೊಂದರೆಗಳಿಂದ ಸಾಧಕರಿಗೆ ಅನೇಕ ದಿನಗಳ ವರೆಗೆ ವಿಶ್ರಾಂತಿ ತೆಗೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಅವರಿಗೆ ಗುರುಕಾರ್ಯ ಮಾಡಲು ಅಡಚಣೆಗಳು ಬರುತ್ತಿವೆ. ಕೆಟ್ಟಶಕ್ತಿಗಳು ಸಾಧಕರಿಗೆ ಎಷ್ಟೇ ತೊಂದರೆ ಕೊಡಲು ಪ್ರಯತ್ನಿಸಿದರೂ ಕೆಟ್ಟ ಶಕ್ತಿಗಳಿಗಿಂತ ಈಶ್ವರನು ಅನಂತ ಪಟ್ಟು ಹೆಚ್ಚು ಶಕ್ತಿಶಾಲಿಯಾಗಿರುವುದರಿಂದ ಅವನು ಸಾಧಕರನ್ನು ರಕ್ಷಣೆ ಮಾಡಿಯೇ ಮಾಡುತ್ತಾನೆ. ಸಾಧಕರು ಮಾತ್ರ ಕೆಟ್ಟ ಶಕ್ತಿಗಳ ಆಕ್ರಮಣಗಳಿಂದ ರಕ್ಷಿಸಿಕೊಳ್ಳಲು ಸಾಧನೆ ಮತ್ತು ಆಧ್ಯಾತ್ಮಿಕ ಉಪಾಯಗಳನ್ನು ಹೆಚ್ಚಿಸುವ ಅವಶ್ಯಕತೆಯಿದೆ.
ವಿವಿಧ ಪ್ರಕಾರದ ಅಪಘಾತಗಳಿಂದ ರಕ್ಷಿಸಿಕೊಳ್ಳಲು ಸಾಧಕರು ಉಪಾಸ್ಯ ದೇವತೆಯಲ್ಲಿ ಪ್ರಾರ್ಥನೆ ಮಾಡಬೇಕು ಹಾಗೂ ವೈಯಕ್ತಿಕ ನಾಮಜಪದ ಜೊತೆಗೆ ಈ ಮುಂದಿನ ನಾಮಜಪವನ್ನೂ ಮಾಡಬೇಕು.
೧. ನಾಮಜಪ : ಮಹಾಶೂನ್ಯ
೨. ನ್ಯಾಸ : ತುಟಿಯ ಎದುರಿಗೆ ೧-೨ ಸೆಂ.ಮೀ. ಅಂತರದಲ್ಲಿ ಬಲಗೈಯ ಅಂಗೈಯನ್ನು ಹಿಡಿಯುವುದು
೩. ಅವಧಿ : ೧ ತಿಂಗಳು ಪ್ರತಿದಿನ ೧ ಗಂಟೆ
ಎಲ್ಲ ಸಾಧಕರು ಈ ಮೇಲಿನ ನಾಮಜಪವನ್ನು ೧ ತಿಂಗಳು ಪ್ರತಿದಿನ ೧ ಗಂಟೆ ಮಾಡಿದ ನಂತರ ಅದರ ಪರಿಣಾಮದ ವರದಿಯನ್ನು ತೆಗೆದುಕೊಳ್ಳಲಾಗುವುದು ಹಾಗೂ ‘ನಂತರ ಅದನ್ನೇ ಮುಂದುವರಿಸಬೇಕೇ ಅಥವಾ ಬದಲಾಯಿಸಬೇಕೇ ?’, ಎಂಬುದನ್ನು ನಿರ್ಧರಿಸಿ ಪುನಃ ಸಾಧಕರಿಗೆ ಸೂಚನೆ ನೀಡಲಾಗುವುದು.’
– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿ.ಎಚ್.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨.೮.೨೦೨೪)
*ಕೆಟ್ಟ ಶಕ್ತಿ: ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. |