ಶಿಯಾ ಸೆಂಟ್ರಲ್ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಮ್ ರಿಜ್ವಿ ಇವರಿಂದ ಪ್ರಧಾನಿ ಮೋದಿಗೆ ಪತ್ರ

‘ದ ಪ್ಲೇಸಸ್ ಆಫ್ ವರ್ಶಿಪ್ ಕಾಯ್ದೆ ೧೯೯೧’ ರದ್ದುಪಡಿಸಿ !

ಓರ್ವ ಮುಸಲ್ಮಾನ ವ್ಯಕ್ತಿಯು ಈ ರೀತಿಯಲ್ಲಿ ಬೇಡಿಕೆಯನ್ನು ಮಾಡುತ್ತಾರೆ; ಆದರೆ ದೇಶದ ಯಾವುದೇ ಹಿಂದೂ ಜನಪ್ರತಿನಿಧಿ ಅಥವಾ ಕೇಂದ್ರ ಮತ್ತು ರಾಜ್ಯ ಸರಕಾರಗಳಲ್ಲಿನ ಯಾವುದೇ ಹಿಂದೂ ಸಚಿವರು ಇಂತಹ ಬೇಡಿಕೆ ಮಾಡಿದ್ದಾರೆಯೇ ? ಹಿಂದೂಗಳ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮರಳಿ ಪಡೆಯಲು ಏನೂ ಮಾಡದ ಇಂತಹ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವುದು ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿಯಾಗಿದೆ !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಶಿಯಾ ಸೆಂಟ್ರಲ್ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಮ್ ರಿಜ್ವಿಯವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರವನ್ನು ಬರೆದು ‘ದ ಪ್ಲೇಸಸ್ ಆಫ್ ವರ್ಶಿಪ್ ಕಾಯ್ದೆ ೧೯೯೧’ ಅನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಅದೇರೀತಿ ಅವರು ‘ಮೊಘಲರಿಂದ ನೆಲಸಮಗೊಳಿಸಿದ ದೇವಸ್ಥಾನಗಳ ಸ್ಥಳದಲ್ಲಿ ನಿರ್ಮಿಸಲಾದ ಮಸೀದಿಗಳನ್ನು ನೆಲಸಮ ಮಾಡಬೇಕು ಮತ್ತು ಅಲ್ಲಿನ ದೇವಸ್ಥಾನಗಳನ್ನು ಮುಂಚಿನ ಸ್ಥಿತಿಗೆ ತರಲು ಪ್ರಯತ್ನಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.


ಈ ಪತ್ರದಲ್ಲಿ ರಿಜ್ವಿಯವರು, ‘ದ ಪ್ಲೇಸಸ್ ಆಫ್ ವರ್ಶಿಪ್ ಆಕ್ಟ್ ೧೯೯೧’ ಅನ್ನು ಕಾಂಗ್ರೆಸ್‌ನ ಕಾಲಾವಧಿಯಲ್ಲಿ ಉದ್ದೇಶಪೂರ್ವಕವಾಗಿ ಜಾರಿಗೆ ತರಲಾಗಿತ್ತು; ಇದರಿಂದಾಗಿ, ದೇವಸ್ಥಾನಗಳು ಮತ್ತು ಮಸೀದಿಗಳ ನಡುವಿನ ವಿವಾದ ದೇಶದಲ್ಲಿ ಸತತವಾಗಿ ಮುಂದುವರಿಯಬೇಕು ಎನ್ನುವ ಉದ್ದೇಶವಿತ್ತು. ಆದ್ದರಿಂದಲೇ ಈ ಕಾನೂನನ್ನು ಶಾಶ್ವತವಾಗಿ ರದ್ದುಗೊಳಿಸಿದರೆ ದೇವಸ್ಥಾನ ಮತ್ತು ಮಸೀದಿ ವಿವಾದವೂ ಕೊನೆಗೊಳ್ಳುತ್ತದೆ ಎಂದು ಹೇಳಿದ್ದಾರೆ.

೯ ದೇವಸ್ಥಾನಗಳನ್ನು ನೆಲಸಮಗೊಳಿಸಿದ ನಂತರ ಮೊಘಲರು ಮಸೀದಿಗಳನ್ನು ನಿರ್ಮಿಸಿದರು

ರಿಜ್ವಿಯವರು ಈ ಪತ್ರದಲ್ಲಿ, ಮೊಘಲರಿಂದ ಯಾವ ದೇವಸ್ಥಾನಗಳನ್ನು ಕೆಡವಿ ಮಸೀದಿಗಳನ್ನು ನಿರ್ಮಿಸಿದ್ದಾರೆ ಆ ೯ ದೇವಸ್ಥಾನಗಳ ಮಾಹಿತಿ ನೀಡಿದ್ದಾರೆ. ಅದರಲ್ಲಿ ಕೇಶವ ದೇವ ದೇವಸ್ಥಾನ, ಮಥುರಾ; ಅಟಾಲಾ ದೇವ್ ದೇವಸ್ಥಾನ, ಜೌನ್‌ಪುರ; ಕಾಶಿ ವಿಶ್ವನಾಥ ದೇವಸ್ಥಾನ, ವಾರಣಾಸಿ; ರುದ್ರ ಮಹಾಲಯ ದೇವಸ್ಥಾನ, ಗುಜರಾತ್; ಭದ್ರಾಕಾಳಿ ದೇವಸ್ಥಾನ, ಗುಜರಾತ್; ದೇವಸ್ಥಾನಗಳನ್ನು ನೆಲಸಮಗೊಳಿಸಿ ಅಲ್ಲಿ ಆದಿನಾ ಮಸೀದಿ, ಬಂಗಾಲ; ವಿಜಯಾ ದೇವಸ್ಥಾನ, ವಿದಿಶಾ, ಮಧ್ಯಪ್ರದೇಶ ಮತ್ತು ದೇವಸ್ಥಾನ ಕೆಡವಿ ಕಟ್ಟಿದ ಮಸ್ಜಿದ್ ಕವಾತುಲ್ ಇಸ್ಲಾಂ ಕುತುಬ್ ಮಿನಾರ್ ಸಮಾವೇಶವಿದೆ.