ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

ಧರ್ಮ ಎಂಬ ಪದದ ಅರ್ಥ ಜಗತ್ತನ್ನು ಅನಿಷ್ಟಗಳಿಂದ ರಕ್ಷಿಸುವ, ಹಾಗೆಯೇ ಮಾನವನಿಗೆ ಐಹಿಕ ಮತ್ತು ಪಾರಮಾರ್ಥಿಕ ಉನ್ನತಿಯೊಂದಿಗೆ ಮೋಕ್ಷವನ್ನು ನೀಡುವ ತತ್ತ್ವವೆಂದರೆ ಧರ್ಮ. ಹೆಚ್ಚಿನ ವಿದೇಶಿ ಭಾಷೆಗಳಲ್ಲಿ, ಧರ್ಮ ಎಂಬ ಪದಕ್ಕೆ ಸಮಾನಾರ್ಥಕ ಪದವೇ ಇಲ್ಲ ! ಆದುದರಿಂದ ಅವರಿಗೆ ತಮ್ಮ ಧರ್ಮಾಚರಣೆಯನ್ನು ಮಾಡಲು ಕಷ್ಟವಾಗುತ್ತದೆ.

‘ವಿಜ್ಞಾನವನ್ನು ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿಗಳಿಂದ ತಿಳಿದುಕೊಳ್ಳಬಹುದು; ಆದ್ದರಿಂದ ಅದಕ್ಕೆ  ಮಿತಿಗಳಿವೆ. ತದ್ವಿರುದ್ಧ ಅಧ್ಯಾತ್ಮವು ಪಂಚಜ್ಞಾನೇಂದ್ರಿಯ, ಮನಸ್ಸು ಮತ್ತು ಬುದ್ಧಿಗೆ ಮೀರಿರುವುದರಿಂದ ಅದು ಸೀಮಾತೀತವಾಗಿದೆ !

ಅನಕ್ಷರಸ್ಥನು ಎಲ್ಲ ಭಾಷೆಗಳಲ್ಲಿನ ಅಕ್ಷರಗಳು ಒಂದೇ ರೀತಿ ಇದೆ ಎಂದು ಹೇಳುವುದು, ಹೇಳುವವರ ಅಜ್ಞಾನವನ್ನು ತೋರಿಸುತ್ತದೆ, ಅದರಂತೆ ಸರ್ವಧರ್ಮಸಮಭಾವ ಎಂದು ಹೇಳುವವರ ಅಜ್ಞಾನ ತೋರಿಸುತ್ತದೆ. ಎಲ್ಲ ಔಷಧಿಗಳು, ಎಲ್ಲ ಕಾನೂನುಗಳು ಒಂದೇ ರೀತಿ ಇದೆ ಎಂದು ಹೇಳಿದಂತೆ ‘ಸರ್ವಧರ್ಮಸಮಭಾವ ಎಂದು ಹೇಳಲಾಗಿದೆ.

ಕೆಲಸದಲ್ಲಿ ಸ್ವಲ್ಪ ಸಂಬಳ ಸಿಗಲೆಂದು ೭-೮ ಗಂಟೆ ಕೆಲಸ ಮಾಡಬೇಕಾಗುತ್ತದೆ ಆದರೆ ಸರ್ವಜ್ಞ, ಸರ್ವವ್ಯಾಪಿ ಮತ್ತು ಸರ್ವಸಾಮರ್ಥ್ಯವಿರುವ ಈಶ್ವರನ ಪ್ರಾಪ್ತಿಗಾಗಿ ಆಯುಷ್ಯವನ್ನು ನೀಡಲು ಬೇಡವೇ ?

ಧರ್ಮವು ತ್ಯಾಗವನ್ನು ಕಲಿಸುತ್ತದೆ. ಆದರೆ ರಾಜಕಾರಣವು ಸ್ವಾರ್ಥವನ್ನು ಕಲಿಸುತ್ತದೆ ಎಂದು ಮೀಸಲಾತಿ ಮುಂತಾದವುಗಳು ಹೆಚ್ಚುತ್ತಿದೆ. ಇದಕ್ಕೆ ಏಕೈಕ ಉಪಾಯವೆಂದರೆ ಎಲ್ಲರೂ ಸರ್ವಸ್ವದ ತ್ಯಾಗವನ್ನು ಕಲಿಸುವ ಸಾಧನೆಯನ್ನು ಕಲಿಸುವುದು.

ನಿಜವಾದ ಸುಖ ಕೇವಲ ಸಾಧನೆಯಿಂದ ಸಿಗುತ್ತದೆ, ಭ್ರಷ್ಟಾಚಾರದಿಂದ ಮಾಡಿದ ಹಣದಿಂದಲ್ಲ.

– (ಪರಾತ್ಪರ ಗುರು) ಡಾ. ಆಠವಲೆ