ಭಾಜಪ ಮತ್ತು ರಾ.ಸ್ವ. ಸಂಘದ್ವೇಷಿ ಪತ್ರಕರ್ತೆ ಗೌರಿ ಲಂಕೇಶ !

ನ್ಯಾಯವಾದಿ ವೀರೇಂದ್ರ ಇಚಲಕರಂಜಿಕರ್

ಪತ್ರಕರ್ತೆ ಗೌರಿ ಲಂಕೇಶರನ್ನು ೫ ಸಪ್ಟೆಂಬರ್ ೨೦೧೭ ರಂದು ಕೊಲೆ ಮಾಡಲಾಯಿತು. ಯಾವುದೇ ಕೊಲೆಯಾದರೂ ಅದು ಖಂಡಿತವಾಗಿಯೂ ಅಪರಾಧವೇ ಆಗಿದೆ. ಆದ್ದರಿಂದ ಯಾವುದೇ ಕೊಲೆಯನ್ನು ಬೆಂಬಲಿಸಲು ಸಾಧ್ಯವಿಲ್ಲ. ಜೊತೆಗೆ ಗೌರಿ ಲಂಕೇಶರ ಕೊಲೆಯ ದೊಡ್ಡ ಪ್ರಮಾಣದಲ್ಲಿ ಕ್ರಮಬದ್ಧವಾಗಿ ಕೋಲಾಹಲವೆಬ್ಬಿಸಲಾಯಿತು ಹಾಗೂ ಈ ಕೊಲೆ ಸುದ್ದಿಯಲ್ಲಿ ಹೇಗಿರಬಹುದು ಎಂಬುದಕ್ಕಾಗಿ ಕ್ರಮಬದ್ಧವಾಗಿ ಪ್ರಸಾರದ ಆಯೋಜನೆಯನ್ನು ಮಾಡಲಾಯಿತು. ಈ ಘಟನೆಯೇನು ಹೊಸತಲ್ಲ, ಕೆಲವು ಸಮಯದ ಹಿಂದೆ ಇದೇ ರೀತಿ ‘ಕಟುವಾ ಬಲಾತ್ಕಾರ’ ಪ್ರಕರಣದಲ್ಲಿ ಪ್ರಸಾರವನ್ನು ಮಾಡಲಾಗಿತ್ತು ಹಾಗೂ ಬಹುಶಃ ಭವಿಷ್ಯದಲ್ಲಿಯೂ ಈ ರೀತಿಯ ಘಟನೆಗಳು ನಡೆಯಬಹುದು…

ಈ ಆಯೋಜನಾಬದ್ದ ಪ್ರಚಾರದಿಂದ ‘ದೇಶದಲ್ಲೇನೋ ನಾಲ್ಕೇ ಕೊಲೆಗಳಾಗಿವೆ ಎಂಬಂತೆ ಚಿತ್ರಣವನ್ನು ನಿರ್ಮಿಸಲಾಯಿತು ಮತ್ತು ‘ಈ ಕೊಲೆಗಳು ಬೇರೆಬೇರೆಯಾಗಿರದೆ ಒಂದು ಸರಣಿಯ ಸಂಚಿನ ಭಾಗವಾಗಿದೆ, ಎಂದು ತೋರಿಸಲು ಪ್ರಯತ್ನಿಸಲಾಗುತ್ತಿದೆ. ‘ಈ ಸರಣಿಯು ೧೯೪೯ ರಲ್ಲಿ ಮೋಹನದಾಸ ಕರಮಚಂದ ಗಾಂಧಿಯವರ ಹತ್ಯೆಯಿಂದ ಪ್ರಾರಂಭವಾಯಿತು. ಅಂದಿನಿಂದ ೨೦೧೩ ನೇ ಇಸವಿಯವರೆಗೂ ದೇಶದಲ್ಲಿ ಶಾಂತಿಯಿತ್ತು. ಒಂದು ವೇಳೆ ಶಾಂತಿಯಿಲ್ಲದಿದ್ದರೂ ಆ ಸಮಯದಲ್ಲಿ ಬಲಪಂಥೀಯ (ಹಿಂದುತ್ವವಾದಿಗಳಿಗೆ) ಶಕ್ತಿಗಳಿಗೆ ಏನೂ ಮಾಡಲು ಆಗಲಿಲ್ಲ. ನಂತರ ಬಲಪಂಥೀಯ ಗುಂಪಿನ ಜನರು ಸ್ವಲ್ಪ ಧೈರ್ಯ ಮಾಡಿ ನಾಥುರಾಮ್ ಗೋಡಸೆಯವರು ಒಂದು ಕಾಲದಲ್ಲಿ ವಾಸಿಸುತ್ತಿದ್ದ ಪುಣೆಯಲ್ಲಿ ಮುಂದಿನ ಕೊಲೆ ಮಾಡಿದರು. ಆಗಸ್ಟ್ ೨೦೧೩ ರಲ್ಲಿ ಡಾ. ನರೇಂದ್ರ ದಾಭೋಳಕರ, ಫೆಬ್ರವರಿ ೨೦೧೫ ರಲ್ಲಿ ಕಾ. ಗೋವಿಂದ ಪಾನಸರೆ, ಆಗಸ್ಟ್ ೨೦೧೫ ರಲ್ಲಿ ಪ್ರಾ. ಎಮ್.ಎಮ್. ಕಲಬುರ್ಗಿ ಹಾಗೂ ಕೊನೆಗೆ ಸಪ್ಟೆಂಬರ್ ೨೦೧೭ ರಲ್ಲಿ ಗೌರಿ ಲಂಕೇಶರನ್ನು ಹತ್ಯೆ ಮಾಡಲಾಯಿತು, ಎಂಬಂತೆ ಚಿತ್ರಣ ಮೂಡಿಸಲಾಗಿದೆ. ಈ ಇಡೀ ಕಾಲಾವಧಿಯಲ್ಲಿ ದೇಶದಲ್ಲಿ ಜಿಹಾದಿ ಉಗ್ರವಾದಕ್ಕೆ ಬಲಿಯಾದ, ನಕ್ಸಲರ ದಾಳಿಯಲ್ಲಿ ಸಾವನ್ನಪ್ಪಿದ, ಸಿಕ್ಖ್‌ರ ವಿರುದ್ಧ ನಡೆದ ಗಲಭೆಯಲ್ಲಿ ಕೊಲೆಯಾದವರು, ಕಾಶ್ಮೀರಿ ಹಿಂದೂಗಳನ್ನು ಓಡಿಸಲು ನಡೆಸಿ ಸಾಮೂಹಿಕವಾಗಿ ಹತ್ಯೆಯಾದವರು, ಕೇರಳ, ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಹೆಕ್ಕಿಹೆಕ್ಕಿ ಕೊಲ್ಲಲ್ಪಟ್ಟ ಹಿಂದೂಗಳು ಯಾರ ಲೆಕ್ಕಕ್ಕೂ ಇಲ್ಲ ! ಪ್ರಸಕ್ತ ಲೇಖನವನ್ನು ಹೊಸ ಅಂಶಗಳನ್ನು  ಸೇರಿಸಿ ಜನಪ್ರಬೋಧನೆಗಾಗಿ ಪುನರ್ ಮುದ್ರಿಸುತ್ತಿದ್ದೇವೆ.

೧. ಐಸಿಸ್‌ನ ಉಗ್ರವಾದಿಗಳಿಗಿಂತ ಹಿಂದುತ್ವವಾದಿಗಳು ಹೆಚ್ಚು ಅಪಾಯಕಾರಿಯಾಗಿದ್ದಾರೆ’, ಎಂದು ಉದ್ದೇಶಪೂರ್ವಕವಾಗಿ ಪ್ರಚಾರ !

‘ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವುದು’, ಇದುವೇ ಈ ಕೊಲೆಗಳ ಹಿಂದಿನ ಏಕೈಕ ಕಾರಣವಾಗಿತ್ತು ಹಾಗೂ ‘ಹಿಂದುತ್ವನಿಷ್ಠ ಕಾರ್ಯಕರ್ತರು ಕೊಲೆಗಡುಕ ಹಾಗೂ ಐಸಿಸ್‌ನ ಉಗ್ರವಾದಿಗಳಿಗಿಂತ ಹೆಚ್ಚು ಅಪಾಯಕಾರಿಯಾಗಿದ್ದಾರೆ’, ಅದೇ ರೀತಿ ‘ಪ್ರಧಾನಿ ನರೇಂದ್ರ ಮೋದಿಯವರಿಂದ ಈ ಹಿಂದೂ ಉಗ್ರವಾದಿಗಳಿಗೆ ಪಾಠ ನೀಡಲಾಗುತ್ತಿದೆ ಎಂಬ ತಪ್ಪುಕಲ್ಪನೆಯನ್ನು ಬಿತ್ತರಿಸಲಾಗುತ್ತಿದೆ. ಈ ರೀತಿಯಲ್ಲಿ ಸಮಾಜದಲ್ಲಿ ಒಂದು ರೀತಿಯಲ್ಲಿ ಮೌಢ್ಯತೆಯನ್ನು ಹಬ್ಬಿಸಲಾಗುತ್ತಿದೆ. ದುರ್ದೈವದಿಂದ ದಾಭೋಲಕರರ ಒಬ್ಬ ಬೆಂಬಲಿಗನೂ ಇದನ್ನು ಒಪ್ಪಿಕೊಳ್ಳುವ ಧೈರ್ಯ ಮಾಡುವುದಿಲ್ಲ. ‘ಇತರ ವಿಚಾರಧಾರೆಯಿರುವವರನ್ನೂ ಆಯೋಜನಾಬದ್ಧವಾಗಿ ಕೊಲೆ ಮಾಡಲಾಗುತ್ತಿದೆ, ಎಂಬುದನ್ನು ಯಾವ ಒಬ್ಬ ಸಾಮ್ಯವಾದಿ ಕೂಡ ಒಪ್ಪಿಕೊಳ್ಳುವುದಿಲ್ಲ. ಮೊದಲಿನಿಂದಲೂ ‘ವಿಚಾರಗಳಿಗೆ ಪೂರಕವಿಲ್ಲದಿರುವ ಯಾವುದೇ ವಿಷಯವನ್ನು ಕೂಡ ಒಪ್ಪಿಕೊಳ್ಳದಿರುವುದು’ ಇದು ಸಾಮ್ಯವಾದಿಗಳ ಧೋರಣೆಯಾಗಿದೆ.

೨. ಹಿಂದೂದ್ವೇಷಿ ಗೌರಿ ಲಂಕೇಶರನ್ನು ‘ಕ್ಷಮಾಶೀಲರೆಂದು ಬಣ್ಣಿಸಲು ಪ್ರಯತ್ನ !

ಗೌರಿ ಲಂಕೇಶರು ಬೆಂಗಳೂರು ನಗರ ಅಥವಾ ಕರ್ನಾಟಕ ರಾಜ್ಯದ ಹೊರಗೆ ಯಾರಿಗೂ ಪರಿಚಿತರಲ್ಲ;  ಆದರೆ ಈಗ ಅವರನ್ನು ‘ಶಾಂತಿಯ ಮೂರ್ತಿ, ‘ಭಾರತದ ಎಲ್ಲರಿಗಿಂತ ಹಿರಿಯ ಪತ್ರಕರ್ತೆ ಎಂದು ದೊಡ್ಡದಾಗಿಸಿ ಬಿಂಬಿಸಲಾಗುತ್ತಿದೆ. ಅದರಲ್ಲಿ ಕೂಡ “ಗಾಂಧಿಯವರು ನಾಥುರಾಮ ಗೋಡಸೆಯವರನ್ನು ಕ್ಷಮಿಸುತ್ತಿದ್ದರು. ಗೌರಿ ಲಂಕೇಶರು ಗಾಂಧಿಯ ಅವತಾರ ! ಅವರು ಕೂಡ ಪರಶುರಾಮ ವಾಘಮರೆಯವರನ್ನು (ಪೊಲೀಸರ ಮತ್ತೊಂದು ಕಥೆಯಂತೆ ಗೌರಿ ಲಂಕೇಶರ ತಥಾಕಥಿತ ಹಂತಕ) ಕಾಫಿಗೆ ಕರೆಯುತ್ತಿದ್ದರು ಹಾಗೂ ಅವನ ಸಿಟ್ಟು ಶಾಂತ ಮಾಡುತ್ತಿದ್ದರು. ಅವಳು ಕ್ಷಮಾಶೀಲರಾಗಿದ್ದರು, ಎಂದು ಗೌರಿ ಲಂಕೇಶರ ಸಹೋದರಿಯಾದ ಕವಿತಾ ಲಂಕೇಶರು ಒಂದು ಸಂದರ್ಶನದಲ್ಲಿ ಹೇಳಿದ್ದರು. ಸಹೋದರಿಯ ಕೊಲೆಯ ದುಃಖವನ್ನು ನಾವು ಒಂದು ವೇಳೆ ಅರ್ಥ ಮಾಡಿಕೊಳ್ಳಬಹುದು; ಆದರೆ ದುಃಖದ ಆವೇಶದಲ್ಲಿ ಸಾಮ್ಯವಾದಿ ಪದ್ಧತಿಯಿಂದ ಬುದ್ಧಿಭೇದ ಮಾಡಿ ಇತಿಹಾಸ ಮತ್ತು ವ್ಯಕ್ತಿಗೆ ಬೇರೆ ಆಯಾಮವನ್ನು ಜೋಡಿಸಲಾಗುತ್ತಿದೆ, ಎಂಬುದು ಹಾಸ್ಯಾಸ್ಪದ ಹಾಗೂ ಅಷ್ಟೇ ಅಪಾಯ ಕಾರಿಯಾಗಿದೆ.

೩. ‘ಹಿಂದೂ ಹಾಗೂ ‘ಹಿಂದುತ್ವದ ವಿಷಯದಲ್ಲಿ ಬುದ್ಧಿಭೇದ ಮಾಡುವ ಪ್ರಯತ್ನ !

ಈಗ ಗೌರಿ ಲಂಕೇಶರ ವಿಷಯದಲ್ಲಿ ಅವರ ಸಹೋದರಿಯು (ಕವಿತಾ ಲಂಕೇಶ) ಮತ್ತೊಂದು ಹೇಳುತ್ತಿದ್ದಾರೆ, ಅವಳು ಹಿಂದೂ ವಿರೋಧಿಯಾಗಿರಲಿಲ್ಲ, ಅವಳಂತು ಹಿಂದುತ್ವದ ವಿರುದ್ಧವಾಗಿದ್ದಳು. ಇದರ ಅರ್ಥವೇನು ? ನೀವು ಹೆಸರಿಗೆ ಮಾತ್ರ, ಶಾಲೆ ಅಥವಾ ನೌಕರಿಯ ಫಾರ್ಮ್‌ದಲ್ಲಿ ಬರೆಯುವುದಕ್ಕಷ್ಟೇ, ವಿವಾಹದಂತಹ ಸಮಾರಂಭಗಳಿಗಷ್ಟೇ ಹಿಂದೂ ಆಗಿದ್ದರೆ ಸರಿ; ಆದರೆ ಹಿಂದೂ ಧರ್ಮದಲ್ಲಿರುವ ತತ್ತ್ವಗಳನ್ನು ಬೆಂಬಲಿಸಿದರೆ ಅದಕ್ಕೆ ನಾವು ವಿರೋಧಿಸುತ್ತೇವೆ ? ಇದೇ ಅದರ ಅರ್ಥವಲ್ಲವೇ ? ನೀವು ‘ಕಮ್ಯೂನಿಸ್ಟ್ ಹಿಂದೂ’ ಅಥವಾ ‘ಜಾತ್ಯತೀತ ಹಿಂದೂ’, ‘ಆಂಗ್ಲೀಕೃತ ಹಿಂದೂ’ ಗಳಾಗಿ ಹಿಂದೂ ಹೆಸರನ್ನಿಟ್ಟುಕೊಂಡು ಹಿಂದೂ ಧರ್ಮ, ಸಂಸ್ಕೃತಿಗಳನ್ನು ಟೀಕಿಸಬಹುದು ಹಾಗೂ ಅದಕ್ಕೆ ಗೌರಿ ಹಾಗೂ ಕವಿತಾ ಲಂಕೇಶರ ಬೆಂಬಲಿಗರು ವಿರೋಧಿಸುವುದಿಲ್ಲ ! ಆದರೆ ಒಂದು ವೇಳೆ ನೀವೇನಾದರೂ ಹಿಂದೂ ಪದ್ಧತಿಯಿಂದ ಜೀವನ ನಡೆಸಲು ಪ್ರಯತ್ನಿಸುತ್ತಿದ್ದರೆ ಮಾತ್ರ ಅದು ಮಾತ್ರ ಏನೋ ಖಂಡನೀಯ ? ಅದರಂತೆ ಈ ಕಮ್ಯುನಿಸ್ಟ್ ಹಿಂದೂಗಳು ತಮ್ಮ ಇಷ್ಟವಾದ ಸರ್ವಧರ್ಮಸಮಭಾವದ ಸಿದ್ಧಾಂತದಂತೆ ಜೀವನ ನಡೆಸಿ ಕ್ರೈಸ್ತ ಅಥವಾ ಮುಸಲ್ಮಾನ ಪಂಥದವರ ಅಯೋಗ್ಯ ರೂಢಿ ಪದ್ಧತಿ, ಕೃತಿಗಳ ವಿಷಯದಲ್ಲಿ ಏನೂ ಮಾತನಾಡುವುದಿಲ್ಲ.

೪. ಗೌರಿ ಲಂಕೇಶರ ಹಿಂದೂದ್ವೇಷಿ ಮುಖವಾಡ

‘ಡೆಕ್ಕನ್ ಕ್ರಾನಿಕಲ್’ನ ೨೧ ಜೂನ್ ೨೦೧೮ ರ ಸಂಚಿಕೆಯಲ್ಲಿ ಪ್ರಕಟಿಸಲಾದ ಸಂದರ್ಶನಲ್ಲಿ ಕವಿತಾ ಲಂಕೇಶರವರು ಹೀಗೆಂದಿದ್ದಾರೆ, ‘ಗೌರಿ ಅತ್ಯಂತ ಕ್ಷಮಾಶೀಲ ವ್ಯಕ್ತಿಯಾಗಿದ್ದಳು !’ ಆದರೆ ‘ವಿಕೀಪೀಡಿಯಾ’ದಲ್ಲಿನ ನೋಂದಣಿ ಮಾತ್ರ ಅದಕ್ಕೆ ವಿರುದ್ಧವಾಗಿದೆ.

೪ ಅ. ಭಾಜಪದ ಮೇಲಿನ ದ್ವೇಷದಿಂದ ೩೫ ವರ್ಷಗಳ ಹಳೆಯ ಮೈತ್ರಿಯನ್ನು ಮುರಿಯುವ ಗೌರಿ ಲಂಕೇಶ ! : ಗೌರಿ ಲಂಕೇಶರವರು ಭಾಜಪದ ತೀವ್ರವಿರೋಧಿಯಾಗಿದ್ದರು. ಅವರ ಸ್ನೇಹಿತರಾದ ಪ್ರಕಾಶ ಬೆಲವಾಡಿಯವರು ೨೦೧೪ ರ ಚುನಾವಣೆಯ ಸಮಯದಲ್ಲಿ ಭಾಜಪದ ಪ್ರಸಿದ್ಧಿ ಸಲಹೆಗಾರರಾದರು; ಈ ಕಾರಣದಿಂದ ಗೌರಿ ಲಂಕೇಶರು ಅವರೊಂದಿಗಿದ್ದ ೩೫ ವರ್ಷ ಹಳೆಯ ಮೈತ್ರಿಯನ್ನು ಒಂದು ಕ್ಷಣದಲ್ಲಿ ಮುರಿದರು. ಈ ವಿಷಯದಲ್ಲಿ ‘ಬೆಂಗಳೂರು ಮಿರರ್’ ನೀಡಿರುವ ಸುದ್ಧಿಯಂತೆ ಗೌರಿ ಲಂಕೇಶರು ಹೀಗೆಂದಿದ್ದರು, ‘ನೀನು (ಪ್ರಕಾಶ ಬೆಲವಾಡಿ) ಭಾಜಪಗೆ ಸಲಹೆ ನೀಡುವ ಉಸಾಬರಿಗೆ ಏಕೆ ಹೋಗುತ್ತೀಯಾ ?, ಎಂದು ಕೇಳಿದಾಗ ಅವರು (ಪ್ರಕಾಶ ಬೆಲವಾಡಿ)ಯವರು ತನಗೆ ಕಾಂಗ್ರೆಸ್ಸನ್ನು ವಿರೋಧಿಸಬೇಕಾಗಿತ್ತು’, ಎಂದರು. ಅದಕ್ಕೆ ಗೌರಿ ಲಂಕೇಶರು, “ಇದು ಮೋದಿಯವರಿಗೆ ಬೆಂಬಲ ನೀಡಲು ಸರಿಯಾದ ಕಾರಣವೆಂದು ಅನಿಸುವುದಿಲ್ಲ. ಮನಸ್ಸಿನಲ್ಲಿ ಅವಿತುಕೊಂಡಿದ್ದ ಬ್ರಾಹ್ಮಣವಾದ ಹೊರಗೆ ಬಂದಾಗ ಹೀಗಾಗುತ್ತದೆ”, ಎಂದರು. ಇದರ ಅರ್ಥ ಯಾವಾಗ ನೀವು ಇತರ ಪಕ್ಷ ಅಥವಾ ಇತರ ವಿಚಾರಧಾರೆಗೆ ಸಂಬಂಧಿಸಿರುತ್ತೀರಿ ಆಗ ಬ್ರಾಹ್ಮಣವಾದವು ಉಮ್ಮಳಿಸಿ ಬರುವುದಿಲ್ಲ. ಭಾಜಪಗೆ ಸಂಬಂಧಿಸಿರುವಾಗ ಬ್ರಾಹ್ಮಣವಾದ ಉಮ್ಮಳಿಸಿ ಬರುತ್ತದೆ, ಎಂದೇ ಗೌರಿ ಲಂಕೇಶರಂತಹವರಿಗೆ ಹೇಳಲಿಕ್ಕಿದೆಯೇ ? (ಬೆಂಗಳೂರು ಮಿರರ್‌ನಲ್ಲಿ ಪ್ರಕಟಿಸಲಾದ ಲೇಖನದ ‘ಲಿಂಕ್ : bit.ly/2khjmoG) ಇದರಲ್ಲಿ ಕೆಲವು ಅಕ್ಷರಗಳು ಕ್ಯಾಪಿಟಲ್ ಇದೆ ಎಂಬುದನ್ನು ವಾಚಕರು ಗಮನಿಸಬೇಕು.)

೫. ಓರ್ವ ಹಠಿಮಾರಿ ಹಾಗೂ ಅಪರಾಧ ದಾಖಲಾಗಿರುವ ವ್ಯಕ್ತಿಯ ವೈಭವೀಕರಣವಾಗುತ್ತಿದೆ !

ಹಿಂದೆ ಹೇಳಿದಂತೆ ನಾನು ಗೌರಿ ಲಂಕೇಶರ ಕೊಲೆಯನ್ನು ಬೆಂಬಲಿಸುತ್ತಿಲ್ಲ; ಆದರೆ ‘ಓರ್ವ ಸರ್ವಸಾಮಾನ್ಯ ವ್ಯಕ್ತಿ, ಯಾರು ಕೇವಲ ಒಂದು ವಿಚಾರಧಾರೆಗೆ ವಿರೋಧಿಸುತ್ತಿದ್ದರೋ,  ಹಠಮಾರಿಯಾಗಿದ್ದರು,  ಯಾರ ಮೇಲೆ ಅಪರಾಧ ದಾಖಲಾಗಿತ್ತೋ, ಅವಳ ವೈಭವೀಕರಣ ಹೇಗೆ ನಡೆಯುತ್ತಿದೆ ಎಂಬ ಬಗ್ಗೆ ಇದು ವಿಮರ್ಶೆಯಾಗಿದೆ. ಗೌರಿ ಲಂಕೇಶರವರ ಬಹಳಷ್ಟು ಸಾಹಿತ್ಯ ಕೇವಲ ಕನ್ನಡ ಭಾಷೆಯಲ್ಲಿದೆ ಹಾಗೂ ಅದರ ವಾಚಕವರ್ಗ ಕೂಡ ಸೀಮಿತವಾಗಿದೆ. ಅವರ ಲೇಖನಗಳು ಯಾವ ವಿಷಯದಲ್ಲಿತ್ತು ಹಾಗೂ ಆ ಲೇಖನದ ಪರಿಣಾಮ ಏನಿದೆ ಎಂಬುದನ್ನು ತಿಳಿಯದೆ ಇತರ  ರಾಜ್ಯದ ಓದುಗರು ಅವಳಿಗೆ ಶ್ರದ್ಧಾಂಜಲಿ ಅರ್ಪಿಸಲು ದೊಡ್ಡ ಸಂಖ್ಯೆಯಲ್ಲಿ ಹೇಗೆ ಸಿದ್ಧರಾದರು ?, ಎಂಬುದು ಪ್ರಶ್ನೆಯಾಗಿದೆ.

೬. ಗೌರಿ ಲಂಕೇಶರ ಭಾಜಪದ್ವೇಷಿ ಪತ್ರಿಕೋದ್ಯಮದ ನಮೂನೆ !

ಗೌರಿ ಲಂಕೇಶರು ೨೦೦೮ ರಲ್ಲಿ ಭಾಜಪದ ಅಂದಿನ ಸಂಸದ ಮತ್ತು ಇತರ ಕೆಲವರ ವಿರುದ್ಧ ಲೇಖನ ಬರೆದಿದ್ದರು. ಅವರು ಮಾಡಿದ ಆರೋಪಗಳ ಉಲ್ಲೇಖವು ‘ವಿಕಿಪೀಡಿಯಾ ಜಾಲತಾಣದಲ್ಲಿದೆ.

೬ ಅ. ಭಾಜಪದ ನಾಯಕರನ್ನು ಕಳ್ಳರೆನ್ನುವ ಪ್ರಯತ್ನ ! : ೨೩ ಜನವರಿ ೨೦೦೮ ರಲ್ಲಿ ಗೌರಿ ಲಂಕೇಶರು ‘ದರೋಡೆಗಿಳಿದ ಬಿಜೆಪಿಗಳು ಎಂಬ ಲೇಖನವನ್ನು ಪ್ರಕಟಿಸಿದರು. ಈ ಲೇಖನದಲ್ಲಿ ಅವರು ಭಾಜಪದ ಸಂಸದ ಪ್ರಹ್ಲಾದ ಜೋಶಿ, ಉಮೇಶ ದೋಶಿ, ಶಿವಾನಂದ ಭಟ್ ಮತ್ತು ವೆಂಕಟೇಶ ಮೇಸ್ತ್ರಿಯವರನ್ನು ಟೀಕಿಸಿದ್ದರು. ‘ಭಾಜಪದ ಕಾರ್ಯಕರ್ತರು ಒಬ್ಬ ಅಕ್ಕಸಾಲಿಗನ ಸುಮಾರು ೧ ಕೋಟಿ ರೂಪಾಯಿಗಳ ಚಿನ್ನವನ್ನು ಅಪಹರಿಸಿದ್ದಾರೆ ಎಂದು ಈ ಲೇಖನದಲ್ಲಿ ಆರೋಪಿಸಿದ್ದರು. ‘ಅಕ್ಕಸಾಲಿಗನು ತನಗೆ ನ್ಯಾಯ ಸಿಗಬೇಕೆಂದು ಸಂಸದರಲ್ಲಿ ವಿನಂತಿಸಿದ್ದರು ಹಾಗೂ ಪೊಲೀಸರಲ್ಲಿಗೆ ಹೋಗುವುದಾಗಿ ಬೆದರಿಕೆ ಹಾಕಿದನು ಎಂದು ಈ ಲೇಖನದಲ್ಲಿ ಬರೆಯಲಾಗಿತ್ತು. ‘ಭಾಜಪದ ಆಂತರಿಕ ಮೂಲಗಳಿಂದ ದೊರೆತ ಮಾಹಿತಿಯ ಆಧಾರದಲ್ಲಿ ಈ ವಾರ್ತೆಯನ್ನು ಪ್ರಕಟಿಸಲಾಗಿದೆ, ಎಂದು ಗೌರಿ ಲಂಕೇಶರು ಅನಂತರ ಹೇಳಿದ್ದರು.

೬ ಆ. ಭಾಜಪದ ನಾಯಕರು ಇದರ ವಿರುದ್ಧ ನೀಡಿದ ನ್ಯಾಯಾಂಗ ಹೋರಾಟ ! :  ಈ ಪ್ರಕರಣದಲ್ಲಿ ಗೌರಿ ಲಂಕೇಶರ ಅಪೇಕ್ಷಾಭಂಗವಾಯಿತು ! ಅವರ ಅಪೇಕ್ಷೆಗನುಸಾರ ಪ್ರಹ್ಲಾದ ಜೋಶಿಯವರು ಈ ವಿಷಯದಲ್ಲಿ ರಸ್ತೆಗಿಳಿದು ವಿರೋಧಿಸಲಿಲ್ಲ, ಬದಲಾಗಿ ಕಾನೂನುಮಾರ್ಗದಲ್ಲಿ ಅವರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದರು. ನ್ಯಾಯಾಲಯದಲ್ಲಿ ಉಪಸ್ಥಿತರಿರಲು ಪದೇ ಪದೇ ನೊಟೀಸ್ ಕಳುಹಿಸಿದರೂ ಗೌರಿ ಲಂಕೇಶ ನ್ಯಾಯಾಲಯದಲ್ಲಿ ಉಪಸ್ಥಿತರಿರಲಿಲ್ಲ. ಆದ್ದರಿಂದ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ತರಬೇಕಾಯಿತು, ಎನ್ನುವ ವಾರ್ತೆಯೂ ಪ್ರಕಟವಾಗಿತ್ತು. ಇದರಿಂದ ಗೌರಿಯವರಿಗೆ ದೇಶದ ಸಂವಿಧಾನ ಮತ್ತು ಅದಕ್ಕನುಸಾರ ನಡೆಯುವ ನ್ಯಾಯವ್ಯವಸ್ಥೆಯ ವಿಷಯದಲ್ಲಿ ಎಷ್ಟು ಗೌರವವಿತ್ತು, ಎಂಬುದು ಈ ಉದಾಹರಣೆಯಿಂದ ಕಂಡು ಬರುತ್ತದೆ.

೬ ಇ. ಭಾಜಪ ಮತ್ತು ಸಂಘದ್ವೇಷವು ಗೌರಿ ಲಂಕೇಶರನ್ನು ಆವರಿಸಿತ್ತೇ ? : ಗೌರಿ ಲಂಕೇಶರವರು ಬರೆದಿರುವ ವಿಷಯ ಸತ್ಯವೆಂದು ಸಿದ್ಧಪಡಿಸಲು ಅವರಿಗೆ ಸಾಧ್ಯವಾಗಲಿಲ್ಲ. ಅದನ್ನು ಸಿದ್ಧಪಡಿಸುವ ಪ್ರಯತ್ನವನ್ನು ಸಹ ಮಾಡದೆ ‘ಪ್ರಹ್ಲಾದ ಜೋಶಿ ಯವರು ಪುನಃ ಆರಿಸಿ ಬಂದರು, ಅಂದರೆ ನನ್ನ ಲೇಖನದಿಂದ ಪ್ರಹ್ಲಾದ ಜೋಶಿಯವರ ತೇಜೋವಧೆಯಾಗಲಿಲ್ಲ, ಎಂಬ ಹೇಳಿಕೆಯನ್ನು ಗೌರಿ ಲಂಕೇಶರು ನ್ಯಾಯಾಲಯದಲ್ಲಿ ಮಂಡಿಸಿದರು. ಇದರ ಅರ್ಥ ‘ತಾನು ಬರೆದಿರುವುದರಲ್ಲಿ ಯಾವುದೇ ಸತ್ಯ ಇರಲಿಲ್ಲ ಎಂಬುದು ಅವರಿಗೂ ತಿಳಿದಿತ್ತು ಎಂದಾಗುವುದೇ ? ಭಾಜಪದ ಒಬ್ಬ ವ್ಯಕ್ತಿಗೆ, ಸಂಘದ ವಿಚಾರಧಾರೆಗೆ ವಿರೋಧಿಸುವ ಅವರ ನಿತ್ಯದ ಅಭ್ಯಾಸಕ್ಕನುಸಾರ ಇದು ಕೂಡ ಒಂದು ಪ್ರಯತ್ನವಾಗಿತ್ತೇ ? ಗೌರಿ ಲಂಕೇಶರು ತನ್ನ ಪರಾಭವವನ್ನು ಸ್ವೀಕರಿಸಿದ್ದರೇ ?

೬ ಈ. ಮೃತ್ಯುವಿನ ಸಮಯದಲ್ಲಿ ಗೌರಿ ಲಂಕೇಶರು ನ್ಯಾಯಾಲಯದ ದೃಷ್ಟಿಯಲ್ಲಿ ದೋಷಿ ! : ನ್ಯಾಯಾಲಯದ ದೃಷ್ಟಿಯಲ್ಲಿ ಅವರು ಓರ್ವ ದೋಷಿ ವ್ಯಕ್ತಿಯಾಗಿದ್ದರು. ಈ ಪ್ರಕರಣದಲ್ಲಿ ಅವರು ಸತ್ರ ನ್ಯಾಯಾಲಯದಲ್ಲಿ ಮಾಡಿದ ಅರ್ಜಿಯ ವಿಷಯದ ಆಲಿಕೆ ಸದ್ಯ ನಡೆಯುತ್ತಿತ್ತು. ಗೌರಿ ಲಂಕೇಶ ಇವರ ಹತ್ಯೆಯ ನಂತರ ಈ ಆಲಿಕೆ ನಿಂತಿತು. ಗೌರಿ ಲಂಕೇಶ ಇವರ ಮರಣದ ಸಮಯದಲ್ಲಿ ‘ಬೇಜವಾಬ್ದಾರಿಯುತ ಲೇಖನ ಬರೆದ ಪ್ರಕರಣದಲ್ಲಿನ ದೋಷಿಯಾಗಿದ್ದ ವ್ಯಕ್ತಿ ಎಂದೆ ಅವರನ್ನು ಗುರುತಿಸಲಾಗುತಿತ್ತು. ಒಂದು ವೇಳೆ ‘ಗೌರಿ ಲಂಕೇಶ ಇವರು ಸತ್ಯ ಹಾಗೂ ನಿರ್ಭೀತದ ಧ್ವನಿಯಾಗಿದ್ದರು ಎಂದು ಅವರ ಬೆಂಬಲಿಗರು ಹಾಗೂ ಕರ್ನಾಟಕ ಕಾಂಗ್ರೆಸ್ ಹೇಳುತ್ತಿದ್ದರೆ, ಸರಕಾರ ಅದನ್ನು ಸಿದ್ಧ ಪಡಿಸಲು ಏಕೆ ಪ್ರಯತ್ನಿಸಲಿಲ್ಲ ?

೭. ಗೌರಿ ಲಂಕೇಶರು ಭಾಜಪದವರ ವಿರುದ್ಧ ನ್ಯಾಯಾಂಗ ಹೋರಾಟವನ್ನು ಏಕೆ ಮಾಡಲಿಲ್ಲ ?

೭ ಅ. ಭಾಜಪ ನಾಯಕರ ವಿಷಯದಲ್ಲಿ ಬಿತ್ತರವಾದ ಸುಳ್ಳು ವಾರ್ತೆಗಳನ್ನು ನ್ಯಾಯಾಲಯ ದಾಖಲಿಸಿಕೊಂಡಿರುವುದು : ಗೌರಿ ಲಂಕೇಶರು ೨೦೦೮ ರಲ್ಲಿ ಮುದ್ರಿಸಿದ ವಾರ್ತೆ ಈ ಮುಂದಿನಂತೆ ಇದೆ. (ನ್ಯಾಯಾಧೀಶರು ಗೌರಿ ಲಂಕೇಶ ಇವರನ್ನು ದೋಷಿಯೆಂದು ನಿರ್ಧರಿಸುವಾಗ ಇದನ್ನು ದಾಖಲಿಸಿದ್ದರು.) ‘ಪ್ರಹ್ಲಾದ ಜೋಶಿಯವರು ಅವಲಂಬಿಸಿದ ಮಾರ್ಗ ಸಂಪೂರ್ಣ ತಪ್ಪಾಗಿದೆ. ಜನರನ್ನು ಮೋಸಗೊಳಿಸುವುದು ಹಾಗೂ ಲಕ್ಷಗಟ್ಟಲೆ ರೂಪಾಯಿಗಳನ್ನು ನುಂಗುವುದು, ಅವರ ಮುಖ್ಯ ವ್ಯವಸಾಯವಾಗಿದೆ. ಒಬ್ಬ ಚಿನ್ನದ ವ್ಯಾಪಾರಿಗೆ ಮೋಸ ಮಾಡಲು ಅವರು ಪ್ರಯತ್ನಿಸಿದರು ಹಾಗೂ ಇದರಲ್ಲಿ ಸಿಕ್ಕಿಹಾಕಿಕೊಂಡಾಗ ಹುಬ್ಬಳ್ಳಿ, ಧಾರವಾಡದ ಜನರು ಅವರನ್ನು ಅವಮಾನಿಸಿದರು.

ಈ ಮೋಸ ಮಾಡಿದ ತ್ರಿಮೂರ್ತಿಗಳೆಂದರೆ, ಶಿವಾನಂದ ಭಟ್, ವೆಂಕಟೇಶ ಮೇಸ್ತ್ರಿ ಮತ್ತು ಪ್ರಹ್ಲಾದ ಜೋಶಿ ಇವರ ಸಮೀಪದ ಸಚಿವ ಉಮೇಶ ದೋಶಿ ಆಗಿದ್ದಾರೆ. ಗೋಕುಲ ರೋಡ್‌ನಲ್ಲಿ ಆಭರಣಗಳ ಅಂಗಡಿ ಇರುವ ಶಿವಾನಂದ ಭಟ್ ಇವರು ಪ್ರಹ್ಲಾದ ಜೋಶಿಯವರ ಬೆಂಬಲಿಗರಾಗಿದ್ದಾರೆ. ಶಿವಾನಂದ ಭಟ್ ಇವರು ಮಹಾನಗರಪಾಲಿಕೆಯ ಚುನಾವಣೆಯ ಕಣಕ್ಕಿಳಿದರು ಹಾಗೂ ಅವರು ಸೋತು ಹೋದರು. ಪಾಲಿಕೆಯ ಚುನಾವಣೆಯಲ್ಲಿ ಕಳೆದುಕೊಂಡಿರುವ ನಿಧಿಯನ್ನು ಪುನಃ ಸಂಪಾದಿಸಲು ಅವರು ಹೀಗೆ ಮೋಸಗಾರಿಕೆಯ ವ್ಯವಹಾರವನ್ನು ಆರಂಭಿಸಿದ್ದಾರೆ. ಉಮೇಶ ದೋಶಿ, ಶಿವಾನಂದ ಭಟ್ ಮತ್ತು ವೆಂಕಟೇಶ ಮೇಸ್ತ್ರಿ ಈ ಮೂವರು ಸೇರಿ ‘ಗುರುದತ್ತ ಫೈನಾನ್ಸ್ ಹೆಸರಿನಲ್ಲಿ ಚಿನ್ನ-ಬೆಳ್ಳಿಯ ಆಭರಣಗಳಿಗೆ ಲೇಪನ ಕೊಡುವ ವ್ಯವಸಾಯ ಆರಂಭಿಸಿದರು. ಅವರು ಮಹಾರಾಷ್ಟ್ರದ ಸೋಮನಾಥ ನಿಕಮ್ ಎಂಬ ವ್ಯಕ್ತಿಗೆ ಹಣದ ಎರಡುಪಟ್ಟು ಚಿನ್ನ ಕೊಡುವುದಾಗಿ ಒಪ್ಪಿಕೊಂಡರು. ನಿರ್ಧರಿಸಿದಂತೆ ನಿಕಮ್ ಚಿನ್ನ ಖರೀದಿಗಾಗಿ ಗೋಕುಲ ರೋಡ್‌ನಲ್ಲಿರುವ ಅಂಗಡಿಗೆ ೧ ಲಕ್ಷದ ೫೦ ಸಾವಿರ ರೂಪಾಯಿ ತೆಗೆದುಕೊಂಡು ಬಂದರು. ಅವರನ್ನು ಮೋಸಗೊಳಿಸಲು ಈ ಮೂವರು ಅವನಿಗೆ ೪ ಚಿನ್ನದ ಬಿಸ್ಕಿಟ್‌ಗಳನ್ನು ತೋರಿಸಿದರು ಹಾಗೂ ಅವರಿಂದ ಅವಸರದಲ್ಲಿ ಹಣ ಕೀಳುವ ಪ್ರಯತ್ನ ಮಾಡಿದರು. ಅವರ ವರ್ತನೆಯಲ್ಲಿ ಸಂದೇಹ ಬಂದಿರುವುದರಿಂದ ‘ಅಣ್ಣನೊಂದಿಗೆ ಚರ್ಚಿಸಿ ನಿರ್ಣಯ ತೆಗೆದುಕೊಳ್ಳುವೆನು, ಎಂದು ಹೇಳಿ ನಿಕಮ್ ಅಲ್ಲಿಂದ ಹೋಗಲು ಪ್ರಯತ್ನಿಸಿದರು. ಆಗ ಆ ಮೂವರು ನಿಕಮ್‌ನನ್ನು ತಮ್ಮ ವಾಹನದಲ್ಲಿ ನಿರ್ಜನಸ್ಥಳಕ್ಕೆ ಕರೆದುಕೊಂಡು ಹೋಗಿ ಬೆದರಿಸಿ ಅವರಿಂದ ಹಣವನ್ನು ಕಿತ್ತುಕೊಂಡರು. ಇದು ಕಳ್ಳತನವಾಗಿತ್ತೋ ಮೋಸ ಆಗಿತ್ತೋ ಎಂಬುದನ್ನು ಪ್ರಹ್ಲಾದ ಜೋಶಿ ಹೇಳಬೇಕು. ‘ಅವರ ಮತ್ತು ಪಕ್ಷದ ಹೆಸರು ಕೆಡುವುದು ಎಂದು ಅರಿವಾದಾಗ ಪ್ರಹ್ಲಾದ ಜೋಶಿಯವರು ಹಣವನ್ನು ಹಿಂತಿರುಗಿಸುವುದಾಗಿ ಆಶ್ವಾಸನೆ ನೀಡಿದರು. ಭಾಜಪ ಈ ಕಳ್ಳತನವನ್ನು ಅಡಗಿಸಲು ಎಷ್ಟು ಪ್ರಯತ್ನಿಸಿದರೂ ಅದು ಜನರಿಗೆ ತಿಳಿದಿದೆ.

೭ ಆ. ಗೌರಿ ಲಂಕೇಶರಿಗೆ ಬೆಂಬಲ, ಇದು ಸಾಮ್ಯವಾದಿಗಳ ಅಜೆಂಡಾ ! : ಒಂದು ವೇಳೆ ಗೌರಿ ಲಂಕೇಶರೇನಾದರೂ ಬರೆದಿರುವುದು ಸತ್ಯವಾಗಿದಿದ್ದರೆ, ಅದು ಸತ್ಯವಾಗಿತ್ತು ಹಾಗೂ ಅವರೊಬ್ಬ ನಿರ್ಭೀತ ಪತ್ರಕರ್ತೆಯಾಗಿದಿದ್ದರೆ ಅವರಿಗೊಂದು ನೇರ ಪ್ರಶ್ನೆ ಕೇಳುಬಯಸುತ್ತೇನೆ. ಅವರು ಒಂದು ವಂಚನೆಯ ಅಪರಾಧದ ವಿಷಯದಲ್ಲಿ ಸುದ್ದಿ ಬರೆದಿದ್ದರು. ಆದ್ದರಿಂದ ಅವರು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕಾಗಿತ್ತು. ಅವರು ಅದನ್ನೇಕೆ ಮಾಡಲಿಲ್ಲ ? ಅವರು ಮಾಡದಿದ್ದರೆ, ನಟ ಪ್ರಕಾಶ ರಾಜ್ ಹಾಗೂ ಕವಿತಾ ಲಂಕೇಶರವರು ಈಗಲಾದರೂ ಈ ವಂಚನೆಯ ಬಗ್ಗೆ ದೂರು ನೀಡಬೇಕು.

ಅಂದಿನ ರಾಜ್ಯದ ಮುಖ್ಯಮಂತ್ರಿ ಕುಮಾರಸ್ವಾಮಿಯವರಾದರೂ ಈ ಪ್ರಕರಣದಲ್ಲಿ ವಿಚಾರಣೆ ಮಾಡಲು ಆದೇಶ ನೀಡಬೇಕಾಗಿತ್ತು; ಆದರೆ ಗೌರಿ ಲಂಕೇಶ ಅಥವಾ ‘ನಾನು ಗೌರಿ, ಎಂದು ನುಡಿದು ಅವರನ್ನು ಬೆಂಬಲಿಸುವವರು ಎಂದಿಗೂ ದೂರು ನೀಡುವುದಿಲ್ಲ. ಇದರಿಂದ ಅವರೇನು ಮಾತನಾಡುತ್ತಿದ್ದಾರೆ, ಎಂಬ ಬಗ್ಗೆ ಅವರಿಗಾದರೂ ವಿಶ್ವಾಸವಿದೆಯೇ ? ಅವರೇನಾದರೂ ಅಂಧಶ್ರದ್ಧೆಯನ್ನಿಟ್ಟು ಜೀವಿಸುತ್ತಿದ್ದಾರೆಯೇ ? ಅವರಿಗೆ ಅವರ ಆರೋಪದಲ್ಲಿನ  ಹುಸಿತನ ತಿಳಿಯಿತೇ ? ಆದರೂ ಪ್ರಸಿದ್ಧಿ ಪಡೆಯಲು ಹಾಗೂ ಸಾಮ್ಯವಾದಿಗಳ ಅಜೆಂಡಾವನ್ನು ಮುನ್ನಡೆಸಲು ಆ ರೀತಿ ದೊಡ್ಡದಾಗಿ ಹುಯಿಲಿಡುತ್ತಿದ್ದಾರೆಯೇ ?

೮. ಹಿಂದೂ ಧರ್ಮ ಹಾಗೂ ಹಿಂದುತ್ವನಿಷ್ಠ ಸಂಘಟನೆಗಳ ವಿರುದ್ಧ ಹೇಯವಾಗಿ ಟೀಕಿಸುವ ಗೌರಿ ಲಂಕೇಶ !

೮ ಅ. ‘ಹಿಂದೂ ಎಂಬ ಹೆಸರಿನ ಧರ್ಮವೇ ಅಸ್ತಿತ್ವದಲ್ಲಿರಲಿಲ್ಲ, ಎಂಬ ಹೇಳಿಕೆ ನೀಡುವ ಗೌರಿ ಲಂಕೇಶ ! : ಗೌರಿ ಲಂಕೇಶರವರು ತಮ್ಮ ವಿರುದ್ಧದ ಪ್ರಥಮ ಮಾಹಿತಿ ವರದಿಯನ್ನು ರದ್ದು ಪಡಿಸಿ, ಎಂಬ ಅರ್ಜಿಯನ್ನು ೨೦೧೩ ನೇ ಇಸವಿಯಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಖಟ್ಲೆಯ ಆದೇಶದ ಸಮಯದಲ್ಲಿ ನ್ಯಾಯಾಲಯವು ಹೇಳಿದ್ದನ್ನು ನೀಡುವ ಉದ್ದೇಶ ಈ ಲೇಖನದಲ್ಲಿರಲಿಲ್ಲ.  ಗೌರಿ ಲಂಕೇಶರವರು ೪ ಆಗಸ್ಟ್ ೨೦೧೨ರಂದು ಒಂದು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ಸಭೆಯನ್ನು ಮತ್ತೊಂದು ಕಾರ್ಯಕ್ರಮವನ್ನು ವಿರೋಧಿಸಲು ಹಮ್ಮಿಕೊಳ್ಳಲಾಗಿತ್ತು. ಭಾಷಣದಲ್ಲಿ ಗೌರಿ ಲಂಕೇಶರವರು ಮಾಡಿದ ಆರೋಪ ಹಾಗೂ ಉಚ್ಚ ನ್ಯಾಯಾಲಯದ ಆದೇಶದಲ್ಲಿ ಏನಿತ್ತೋ ಅದನ್ನು ಯಥಾವತ್ತಾಗಿ ನೀಡಲಾಗಿದೆ. ಆ ಭಾಷಣದಲ್ಲಿ ಗೌರಿಯವರು ಹೇಳುತ್ತಾರೆ, ‘ಯಾವುದೀ ಹಿಂದೂ ಧರ್ಮ ?, ಆ ಧರ್ಮದ ಸ್ಥಾಪಕರು ಯಾರು ?, ನಮಗೆ ಕ್ರೈಸ್ತ ಧರ್ಮದ ಸ್ಥಾಪಕರು ಹಾಗೂ ಅವರು ನಂಬಿರುವ ಪವಿತ್ರ ಧರ್ಮಗ್ರಂಥ ಗೊತ್ತು. ಮುಸಲ್ಮಾನ, ಸಿಕ್ಖರು, ಬೌದ್ಧರು, ಜೈನ ಧರ್ಮದ ವಿಷಯದಲ್ಲಿ ಗೊತ್ತು.  ಆದರೆ ಹಿಂದೂ ಧರ್ಮದ ಸ್ಥಾಪಕರು ಯಾರು ? ಹಿಂದೂ ಧರ್ಮಕ್ಕೆ ಅಪ್ಪ ಇಲ್ಲ ಅಮ್ಮ ಇಲ್ಲದ ಧರ್ಮ. ಈ ಹೆಸರಿನ ಯಾವುದೇ ಧರ್ಮ ಹಿಂದೆ ಅಸ್ತಿತ್ವದಲ್ಲಿರಲಿಲ್ಲ. ಬ್ರಿಟೀಷರು ಭಾರತಕ್ಕೆ ಬಂದು ನಂತರ ಮೊದಲ ಬಾರಿ ಈ ಧರ್ಮಕ್ಕೆ ‘ಹಿಂದೂ ಎಂಬ ಹೆಸರು ನೀಡಿದರು.

೮ ಆ.  ಸಂಘ ಹಾಗೂ ಇತರ ಹಿಂದುತ್ವನಿಷ್ಠ ಸಂಘಟನೆಗಳಿಗೆ ಹಾವಿನ ಉಪಮೆ ! :  ಅವರು ತಮ್ಮ ಭಾಷಣದಲ್ಲಿ ಮುಂದೆ ಹೀಗೆಂದರು, “ರಾ.ಸ್ವ. ಸಂಘ ಒಂದು ವಿಷಕಾರಿ ಹಾವಾಗಿದೆ,  ಅದೇ ರೀತಿ ಶ್ರೀರಾಮ ಸೇನೆ, ಹಿಂದೂ ಜಾಗರಣ ವೇದಿಕೆ, ಬಜರಂಗದಳ ಇತ್ಯಾದಿಗಳು ಇದೇ ಶ್ರೇಣಿಗೆ ಸೇರಿದೆ. ಅವರು ಹೀಗೂ ಹೇಳಿದ್ದರು ಈ ಜನರು ಮೋಹನದಾಸ ಗಾಂಧಿಯವರ ಸಾವಿಗೆ ಹಾಗೂ ಬಾಬರೀ ಮಸೀದಿಯ ಧ್ವಂಸಕ್ಕೆ ಜವಾಬ್ದಾರರು. ಇದರ ಅರ್ಥ ಸಾಮ್ಯವಾದಿ ಹಾಗೂ ಉಗ್ರವಾದಿ ಸಂಘಟನೆಗಳು ಎಲ್ಲದ್ದಕ್ಕಿಂತ ಚೆನ್ನಾಗಿದೆ ಹಾಗೂ ಕೇವಲ ಹಿಂದೂ ಸಂಘಟನೆಗಳು ಹಾವಿನಂತೆ ವಿಷ ಕಕ್ಕುತ್ತಿವೆ ಎಂದೇ ? ಉಚ್ಚ ನ್ಯಾಯಾಲಯವು ಗೌರಿಯವರ ಹೇಳಿಕೆಯನ್ನು ಕೇಳಿಸಿಕೊಳ್ಳಲಿಲ್ಲ ಹಾಗೂ ಅವರನ್ನು ಖಟ್ಲೆ ಎದುರಿಸಲು ಹೇಳಿದರು. ಗೌರಿ ಲಂಕೇಶರವರ ವಿರುದ್ಧ ದೂರು ನೀಡಿದ ವ್ಯಕ್ತಿಗೆ ಈಗ ಆ ಬಗ್ಗೆ ದುಃಖವಾಗುತ್ತಿರಬಹುದು, ಏಕೆಂದರೆ ಯಾವ ವ್ಯಕ್ತಿ ಕಾರಾಗೃಹಕ್ಕೆ ಹೋಗಬೇಕಿತ್ತೋ, ಆ ವ್ಯಕ್ತಿಯು ಮರಣದ ಬಳಿಕ ದೊಡ್ಡ ‘ಸೆಲೆಬ್ರೆಟಿ ಆಗಿದ್ದಾರೆಂದು.

೯. ಹಿಂದೂದ್ವೇಷಿ ವಿಷಕಾರುವುದೇ ಗೌರಿ ಲಂಕೇಶರ ಹವ್ಯಾಸವಾಗಿರುವುದರ ಮತ್ತೊಂದು ಸಾಕ್ಷಿ !

೯ ಅ. ಹಿಂದೂ ಸಾಧುಗಳ ತೇಜೋವಧೆ ಮಾಡುವ ಲೇಖನ ! : ಗೌರಿ ಲಂಕೇಶರ ವಿರುದ್ಧ ಕೇವಲ ೧-೨ ಅಲ್ಲ, ಬದಲಾಗಿ ಅನೇಕ ದೂರುಗಳು ದಾಖಲಾಗಿದ್ದವು. ಗೌರಿ ಲಂಕೇಶರು ೨೭ ಮೇ ೨೦೦೯ ರಂದು ಓರ್ವ ಸ್ವಾಮೀಜಿಯವರ ವಿರುದ್ಧ ಬರೆದಿರುವ ಲೇಖನದ ಬಗ್ಗೆ ಗೌರಿಯ ವಿರುದ್ಧ ದೂರು ದಾಖಲಾಗಿದೆ. ಈ ದೂರಿನಲ್ಲಿ ಓರ್ವ ಆರೋಪಿಯು ಬಂಧನದಪೂರ್ವ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾನೆ. ಉಚ್ಚ ನ್ಯಾಯಾಲಯವು ಆಲಿಕೆಯ ಸಮಯದಲ್ಲಿ ಆ ಲೇಖನದ ವಿಷಯವಾಗಿ ನೋಂದಣಿ ಮಾಡಿಕೊಂಡಿದೆ. ಅದಕ್ಕನುಸಾರ ಈ ಲೇಖನದಲ್ಲಿ ಒಂದು ಪ್ರತಿಷ್ಠಿತ ಮಠದ ಶ್ರೀಶ್ರೀ ರಾಘವೇಶ್ವರ ಸ್ವಾಮೀಜಿಯವರ ವಿರುದ್ಧ ಗೌರಿ ಲಂಕೇಶರು ಟೀಕಿಸಿದ್ದರು. ಈ ಲೇಖನದ ಮೂಲಕ ಅವರು ಮಠದ ಹಾಗೂ ಸ್ವಾಮೀಜಿ ಯವರ ತೇಜೋವಧೆ ಮಾಡಿದ್ದರು. ಆ ಲೇಖನವು ಯಾವುದೇ ಸತ್ಯಾಂಶ ಮೇಲೆ ಆಧಾರವಾಗಿರಲಿಲ್ಲ ಹಾಗೂ ಅದು ಕೇವಲ ಪ್ರಸಿದ್ಧಿ ಪಡೆದುಕೊಳ್ಳಲು ಹಾಗೂ ಸಾಪ್ತಾಹಿಕದ ಮಾರಾಟವನ್ನು ಹೆಚ್ಚಿಸಲು ಬರೆಯಲಾಗಿತ್ತು. ಈ ಲೇಖನದಲ್ಲಿ ಸಾಧುಗಳ ವರ್ತನೆಯ ಬಗ್ಗೆ ಹಾಗೂ ಆಧ್ಯಾತ್ಮಿಕ ಬೋಧನೆಯ ಬಗ್ಗೆ ಆರೋಪಿಸಲಾಗಿದೆ.

೯ ಆ. ಹಿಂದೂ ದೇವತೆಗಳ ವಿಡಂಬನೆ ಮಾಡಿ ವಿಕೃತ ಆನಂದ ಪಡೆದುಕೊಳ್ಳುವುದು : ಗೌರಿ ಲಂಕೇಶರ  ಮೇಲೆ ಈ ರೀತಿ ಒಂದು ಆರೋಪವೂ ಇತ್ತು. ಅವರು ಭಗವಾನ್ ಹನುಮಂತನ ಚಿತ್ರದ ಮೇಲೆ ಈ ಸ್ವಾಮೀಜಿಯವರ ಮುಖವನ್ನು ಮುದ್ರಿಸಿ ಆ ಚಿತ್ರದ ಎದೆಯ ಮೇಲೆ ಚಿತ್ರನಟಿ ಮಲ್ಲಿಕಾ ಶೇರಾವತ್‌ರವರ ಚಿತ್ರವನ್ನು ಮುದ್ರಿಸಿದ್ದರು. ಇದರಿಂದ ಮಠಕ್ಕೆ ಅವಮಾನವಂತೂ ಆಯಿತು. ಅದರೊಂದಿಗೆ ಆರೋಪಿಯು ಹಿಂದೂ ದೇವತೆಯ ಅವಮಾನ ಮಾಡಿ ಹಿಂದೂಗಳ ಭಾವನೆಯನ್ನು ನೋಯಿಸಿದರು. ಈ ಲೇಖನದಲ್ಲಿ ಭಗವಾನ್ ಹನುಮಂತನ ಚಿತ್ರ, ಹನುಮಂತನ ಎದೆಯ  ಮೇಲೆ ನಟಿ ಮಲ್ಲಿಕಾ ಶೇರಾವತ್‌ನ ಛಾಯಾಚಿತ್ರವನ್ನು ತೋರಿಸುವ ಅಗತ್ಯವೇನಿತ್ತು ? ಹಿಂದೂಗಳಿಗೆ ಅವರ ಶ್ರದ್ಧಾಸ್ಥಾನವನ್ನು ಅವಮಾನಿಸಿಯೂ ನಾನು ಗೌರವಾನ್ವಿತಳಾಗಿದ್ದೇನೆ, ಎಂದು ತೋರಿಸಿ ವಿಕೃತ ಆನಂದವನ್ನು ಪಡೆಯುವ ಕೃತ್ಯಲ್ಲವೇ ? ಕವಿತಾ ಲಂಕೇಶರು ಇದಕ್ಕೆ ಸ್ಪಷ್ಟೀಕರಣ ನೀಡುವರೇ ? –  ನ್ಯಾಯವಾದಿ ವೀರೇಂದ್ರ ಇಚಲಕರಂಜೀಕರ, ರಾಷ್ಟ್ರೀಯ ಅಧ್ಯಕ್ಷರು, ಹಿಂದೂ ವಿಧಿಜ್ಞ ಪರಿಷತ್ತು.

ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಲಿಂಗಾಯತ ನಿಯಮಗಳನ್ನು ಪಾಲಿಸುವ ಬಗ್ಗೆ ಟೀಕಿಸಿದ ಗೌರಿ ಲಂಕೇಶರ ವಿರೋಧಭಾಸದ ವರ್ತನೆ !

ಮುಖ್ಯಮಂತ್ರಿ ಯಡಿಯೂರಪ್ಪನವರು ಲಿಂಗಾಯತರಾಗಿದ್ದಾರೆ ! ಗೌರಿ ಲಂಕೇಶರು ಸಹ ಹುಟ್ಟಿನಿಂದ ಲಿಂಗಾಯತರಾಗಿದ್ದಾರೆ. ಆದರೆ ಗೌರಿ ಲಂಕೇಶರು ‘ಯಡಿಯೂರಪ್ಪ ಲಿಂಗಾಯ ತರಲ್ಲ; ಏಕೆಂದರೆ ಅವರು ಲಿಂಗಾಯತ ಧರ್ಮದಂತೆ ವರ್ತಿಸುವುದಿಲ್ಲ, ಎಂದು ಆಕ್ಷೇಪಿಸಿದ್ದರು ! ಆದ್ದರಿಂದ ‘ಲಿಂಗಾಯತರು ಯಡಿಯೂರಪ್ಪರವರನ್ನು ಹೊರಗಿಡಬೇಕು, ಎಂಬುದು ಗೌರಿ ಲಂಕೇಶರ ಇಚ್ಛೆಯಾಗಿತ್ತು. ಅವರ ಆಕ್ಷೇಪವೆಂದರೆ ಯಡಿಯೂರಪ್ಪ ಹಣೆಯಲ್ಲಿ ವಿಭೂತಿಯನ್ನು ಹಚ್ಚಿಕೊಳ್ಳುವುದಿಲ್ಲ. ಹೋಮ-ಹವನಗಳನ್ನು ಲಿಂಗಾಯತರು ಒಪ್ಪುವುದಿಲ್ಲ, ಆದರೆ ಯಡಿಯೂರಪ್ಪ ನವರು ಇಂತಹ ಹೋಮ-ಹವನಗಳಲ್ಲಿ ಪಾಲ್ಗೊಳ್ಳುತ್ತಾರೆ ಗೌರಿ ಲಂಕೇಶರ ಪ್ರಕಾರ ‘ಬಸವೇಶ್ವರರ ಇಷ್ಟಲಿಂಗದ ಹೊರತು ಬೇರೆ ಯಾವುದನ್ನೂ ಪೂಜಿಸಬಾರದು, ಆದರೆ ಯಡಿಯೂರಪ್ಪ ಪ್ರಭು ಶ್ರೀ ರಾಮನನ್ನು ನಂಬುತ್ತಾರೆ. ಎಲ್ಲ ದೇವತೆಗಳ ಮುಂದೆ ತಲೆ ಬಾಗುತ್ತಾರೆ. ಸಾರಾಂಶವೆಂದರೆ, ಯಡಿಯೂರಪ್ಪ ಲಿಂಗಾಯತ ಧರ್ಮದ ಶತ್ರುಗಳಾಗಿದ್ದಾರೆ, ಯಡಿಯೂರಪ್ಪನವರು ಲಿಂಗಾಯತ ಧರ್ಮವನ್ನು ಪಾಲಿಸುವುದಿಲ್ಲ; ಆದ್ದರಿಂದ ಗೌರಿ ಲಂಕೇಶ ಇಷ್ಟು ಕೂಗಾಡುತ್ತಿದ್ದರು, ಆದರೆ ಅವರು ಸ್ವತಃ ಲಿಂಗಾಯತ ಧರ್ಮವನ್ನು ಎಷ್ಟರ ಮಟ್ಟಿಗೆ ಪಾಲಿಸುತ್ತಿದ್ದರು ? ಇಂಟರನೆಟ್‌ನಲ್ಲಿರುವ ಅವರ ಛಾಯಾಚಿತ್ರಗಳನ್ನು ನೋಡಿ, ಅವರ ಯಾವುದೇ ಛಾಯಾಚಿತ್ರದಲ್ಲಿ ವಿಭೂತಿ/ಭಸ್ಮವನ್ನು ಗೌರಿ ಲಂಕೇಶ ಇವರೂ ಹಚ್ಚಿಕೊಂಡಿಲ್ಲ. ಅವರ ಮಾನಸ ಪುತ್ರ-ಪುತ್ರಿಯರು ಯಾರು ? ಅವರು ‘ಜೆಎನ್‌ಯುನಲ್ಲಿ ದೇಶದ್ರೋಹಿಯ ಘೋಷಣೆಯನ್ನು ನೀಡುವ ಕನ್ಹಯ್ಯಾ, ಗುಜರಾತ್‌ನ ಶಾಸಕ ಜಿಗ್ನೇಶ ಮೇವಾನಿ. ಇವರು ಲಿಂಗಾಯತರೇ ? ಅಲ್ಲ. ನಕ್ಸಲ ನಾಯಕ ಸಾಕೇತ ರಾಜನ ! ಈತನನ್ನು ಪೊಲೀಸರು ಗುಂಡು ಹೊಡೆದು ಹತ್ಯೆ ಮಾಡಿದರು, ಆತ ಲಿಂಗಾಯತನೇ ? ಇರಲಿಕ್ಕಿಲ್ಲ. ಈ ಪ್ರಶ್ನೆಯನ್ನು ‘ನಾನು ಗೌರಿ, ‘ನಾನು ದಾಭೋಲಕರ ಎಂದು ಘೋಷಣೆ ಕೂಗುವ ಮೌಢ್ಯನಿರ್ಮೂಲನೆಯವರಿಗೆ ಹೇಳುವವರು ಯಾರೂ ಇಲ್ಲ ? – ನ್ಯಾಯವಾದಿ ವಿರೇಂದ್ರ ಇಚಲಕರಂಜಿಕರ