ಶ್ರೀ ಗಣೇಶಮೂರ್ತಿ ವಿಸರ್ಜನೆಯ ಬಗ್ಗೆ ಶಾಸ್ತ್ರೋಕ್ತ ಮಾಹಿತಿ 

ಗಣೇಶೋತ್ಸವದ ನಂತರ ಉತ್ತರಪೂಜೆಯ ನಂತರ ಮೂರ್ತಿಯನ್ನು ಜಲಾಶಯಗಳಲ್ಲಿ ಅಥವಾ ಹರಿಯುವ ನೀರಿನಲ್ಲಿ ವಿಸರ್ಜಿಸುತ್ತಾರೆ. ವಿಸರ್ಜನೆಗೆ ಹೋಗುವಾಗ ಗಣಪತಿಯ ಜೊತೆಗೆ ಮೊಸರು, ತೆಂಗಿನಕಾಯಿ, ಮೋದಕ, ಅವಲಕ್ಕಿ ಇತ್ಯಾದಿ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಾರೆ. ಮೂರ್ತಿಯನ್ನು ನೀರಿನಲ್ಲಿ ವಿಸರ್ಜನೆ ಮಾಡುವಾಗ ಮತ್ತೊಮ್ಮೆ ಆರತಿ ಮಾಡಿ ತಮ್ಮ ಜೊತೆಗೆ ತಂದಿರುವ ಮೇಲಿನ ವಸ್ತುಗಳೊಂದಿಗೆ ಮೂರ್ತಿಯನ್ನು ನೀರಿನಲ್ಲಿ ಮುಳುಗಿಸುತ್ತಾರೆ. ವಿಸರ್ಜನೆ ಮಾಡಿದ ಸ್ಥಳದಲ್ಲಿನ ಮಣ್ಣನ್ನು ಮನೆಗೆ ತಂದು ಅದನ್ನು ಎಲ್ಲೆಡೆಗೂ ಸಿಂಪಡಿಸುವ ಪದ್ಧತಿಯಿದೆ.

ಉತ್ತರಪೂಜೆ ಮಾಡಿದ ನಂತರ ಅದೇ ದಿನ ಅಥವಾ ಮರುದಿನ ಮೂರ್ತಿಯ ವಿಸರ್ಜನೆ ಮಾಡುವುದು ಅತ್ಯಂತ ಯೋಗ್ಯ ಪದ್ಧತಿ

ಶ್ರೀ ಗಣಪತಿಯ ವಿಸರ್ಜನೆಗೆ ಸಂಬಂಧಿಸಿದ ಒಂದು ಮಹತ್ವದ ವಿಷಯವೆಂದರೆ, ಮಣ್ಣಿನ ಮೂರ್ತಿಯಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡಿ ತಂದಿರುವ ದೇವತ್ವವು ಒಂದು ದಿನಕ್ಕಿಂತಲೂ ಹೆಚ್ಚು ಸಮಯ ಉಳಿಯುವುದೇ ಇಲ್ಲ. ಅಂದರೆ ಗಣಪತಿಯ ವಿಸರ್ಜನೆಯನ್ನು ಯಾವ ದಿನ ಮಾಡಿದರೂ ಅದರಲ್ಲಿನ ದೇವತ್ವವು ಎರಡನೆಯ ದಿನವೇ ಕ್ಷೀಣವಾಗಿರುತ್ತದೆ; ಆದುದರಿಂದ ಯಾವುದೇ ದೇವತೆಯ ಉತ್ತರ ಪೂಜೆಯನ್ನು ಮಾಡಿದ ನಂತರ ಆ ದಿನ ಅಥವಾ ಮರುದಿನವೇ ಅದರ ವಿಸರ್ಜನೆ ಮಾಡುವುದು ಸರ್ವತಃ ಯೋಗ್ಯವಾಗಿದೆ. ಮನೆಯಲ್ಲಿ ಸೂತಕಗಳಿದ್ದರೂ ಪುರೋಹಿತರಿಂದ ಶ್ರೀ ಗಣೇಶವ್ರತ ಮಾಡಿಸಿಕೊಳ್ಳುವುದು ಯೋಗ್ಯವಾಗಿದೆ. ಹಾಗೆಯೇ ಮನೆಯಲ್ಲಿ ಪ್ರಸೂತಿ ಇತ್ಯಾದಿಗಳು ಇದ್ದರೆ ಅವುಗಳ ದಾರಿಕಾಯದೇ ನಿರ್ಧರಿಸಿದ ಸಮಯದಲ್ಲಿ ಮೂರ್ತಿಯ ವಿಸರ್ಜನೆ ಮಾಡುವುದು ಶಾಸ್ತ್ರಕ್ಕನುಸಾರ ಯೋಗ್ಯವಾಗಿದೆ.

ಮೂರ್ತಿಯಲ್ಲಿ ಬಂದಿರುವ ದೇವತ್ವದ ಪರಿಣಾಮದಿಂದ ಮೂರ್ತಿಯಲ್ಲಿ ೨೧ ದಿನಗಳವರೆಗೆ ಚೈತನ್ಯವು ಉಳಿದಿರುವುದು

‘ಮೂರ್ತಿಯಲ್ಲಿ ಪ್ರಾಣಪ್ರತಿಷ್ಠೆ ಮಾಡಿ ತಂದಿರುವ ದೇವತ್ವವು ಒಂದು ದಿನಕ್ಕಿಂತ ಹೆಚ್ಚು ಸಮಯ ಉಳಿಯುವುದೇ ಇಲ್ಲ, ಎಂದು ಮೇಲೆ ಹೇಳಲಾಗಿದೆ. ಹೀಗಿರುವಾಗ ಗಣೇಶೋತ್ಸವದ ಸಮಯದಲ್ಲಿ ಗಣೇಶಮೂರ್ತಿಯನ್ನು ೨೧ ದಿನಗಳವರೆಗೆ ಪೂಜಿಸಿದರೆ, ಆ ಉಪಾಸನೆಯಿಂದ ಭಕ್ತರಿಗೆ ಹೇಗೆ ಲಾಭವಾಗುತ್ತದೆ ಎಂದು ಯಾರಿಗಾದರೂ ಪ್ರಶ್ನೆ ಬರಬಹುದು. ಇದರ ಉತ್ತರ ಹೀಗಿದೆ – ಮೂರ್ತಿಯಲ್ಲಿನ ದೇವತ್ವವು ನಾಶವಾದರೂ, ಆ ದೇವತ್ವದ ಪರಿಣಾಮದಿಂದ ಮೂರ್ತಿಯಲ್ಲಿ ೨೧ ದಿನಗಳವರೆಗೆ ಚೈತನ್ಯವು ಉಳಿದಿರುತ್ತದೆ. ಹಾಗೆಯೇ ಗಣೇಶೋತ್ಸವದ ಸಮಯದಲ್ಲಿ ಮೂರ್ತಿಯ ಪೂಜಾರ್ಚನೆ ನಡೆಯುವುದರಿಂದ ಭಾವಕ್ಕನುಸಾರ ಮೂರ್ತಿಯಲ್ಲಿನ ಚೈತನ್ಯದಲ್ಲಿ ಹೆಚ್ಚಳವಾಗುತ್ತದೆ. ೨೧ ದಿನಗಳ ನಂತರ ಮೂರ್ತಿಯಲ್ಲಿನ ಚೈತನ್ಯ ನಿಧಾನವಾಗಿ ಕಡಿಮೆಯಾಗಲಾರಂಭಿಸುತ್ತದೆ.

ಮೂರ್ತಿ ಮತ್ತು ಪೂಜೆಯಲ್ಲಿನ ನೈರ್ಮಾಲ್ಯವನ್ನು ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡುವುದರ ಹಿಂದಿನ ಶಾಸ್ತ್ರ

ಹರಿಯುವ ನೀರಿನಿಂದಾಗಿ ಈ ಪವಿತ್ರಕಗಳು ದೂರದವರೆಗೆ ಹೋಗುತ್ತವೆ ಮತ್ತು ಅನೇಕರಿಗೆ ಅದರ ಲಾಭವಾಗುತ್ತದೆ. ಈ ನೀರಿನ ಬಾಷ್ಪೀಭವನ ವಾಗುವುದರಿಂದ ವಾತಾವರಣವು ಸಾತ್ತ್ವಿಕವಾಗಲು ಸಹಾಯವಾಗುತ್ತದೆ.

ಪೂಜೆಯಲ್ಲಿನ ನೈರ್ಮಾಲ್ಯದಲ್ಲಿಯೂ ಚೈತನ್ಯ ಬಂದಿರುವುದರಿಂದ ನೈರ್ಮಾಲ್ಯವನ್ನು ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಬೇಕು. ಎಲೆ-ಹೂವುಗಳಂತಹ ನೈಸರ್ಗಿಕ ಘಟಕಗಳಿರುವ ನೈರ್ಮಾಲ್ಯದಿಂದ ಜಲಪ್ರದೂಷಣೆಯಾಗುವ ಪ್ರಶ್ನೆಯೇ ಬರುವುದಿಲ್ಲ. ತದ್ವಿರುದ್ಧ ರಾಸಾಯನಿಕ ಘಟಕಗಳಂತಹ ವಸ್ತುಗಳಿಂದ ಜಲಪ್ರದೂಷಣೆಯಾಗುತ್ತದೆ. – ಶ್ರೀ. ದಾಮೋದರ ವಿಷ್ಣು ವಝೆ ಗುರೂಜಿ, ಸನಾತನ ಪುರೋಹಿತ ಪಾಠಶಾಲೆಯ ಸಂಚಾಲಕರು, ರಾಮನಾಥಿ, ಗೋವಾ.