ಆಪತ್ಕಾಲದಲ್ಲಿ ಕಠಿಣ ಪರಿಸ್ಥಿತಿಯನ್ನು ಯಾವಾಗ ಎದುರಿಸಬೇಕಾಗುವುದು, ಎಂಬುದನ್ನು ಯಾರೂ ಹೇಳಲು ಆಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಹಾಯಕ್ಕಾಗಿ ಲಭ್ಯವಿರುವ ಎಲ್ಲ ಮಾರ್ಗಗಳ ಉಪಯೋಗವನ್ನು ಅವಶ್ಯಮಾಡಬೇಕು. ಅದರ ಜೊತೆಗೆ ‘ಹೆಲ್ಪಲೈನ್’ ಕ್ರಮಾಂಕಗಳನ್ನು ಕೂಡ ಅವಶ್ಯ ಉಪಯೋಗಿಸಬೇಕು. ‘ಹೆಲ್ಪಲೈನ್’ ಕ್ರಮಾಂಕಗಳು ಶಾಶ್ವತ ಪರ್ಯಾಯವಾಗಿರದಿದ್ದರೂ; ಪ್ರಾಧಾನ್ಯತೆಯಿಂದ ಉಪಯೋಗಿಸುವ ಪರ್ಯಾಯವಾಗಿವೆ. ಯಾವಾಗ ನಮಗೆ ವೈದ್ಯಕೀಯ, ಹಿಂಸಾತ್ಮಕ, ತುರ್ತುಪರಿಸ್ಥಿತಿ, ಕಾನೂನು ಮಾರ್ಗದಲ್ಲಿ ಅಥವಾ ಆಡಳಿತಸ್ತರದ ಅಡಚಣೆಗಳನ್ನು ಎದುರಿಸುವ ಪ್ರಸಂಗ ಬರುತ್ತದೆಯೋ, ಆಗ ಕಾಲದ ಹೆಜ್ಜೆಗಳನ್ನು ಗುರುತಿಸಿ ಆ ಸಂಕಟವನ್ನು ಗೆಲ್ಲುವುದು ಆವಶ್ಯಕವಾಗಿರುತ್ತದೆ. ಈ ಲೇಖನದಲ್ಲಿ ಈ ವಿಷಯದ ಬಗ್ಗೆ ವಿಚಾರವಿಮರ್ಶೆ ಮಾಡಲಾಗಿದೆ.
೧. ಹೆಲ್ಪಲೈನ್ ಕ್ರಮಾಂಕಗಳನ್ನು ಉಪಯೋಗಿಸುವುದರ ಆವಶ್ಯಕತೆ
ನಾವು ಇಂದಿನ ‘ಹೈಟೆಕ್’ ಯುಗದಲ್ಲಿದ್ದೇವೆ. ಆದುದರಿಂದ ಪಾರಂಪರಿಕ ಪದ್ಧತಿಗಳನ್ನು ಉಪಯೋಗಿಸುವುದು ಅಷ್ಟೊಂದು ಯೋಗ್ಯವಾಗಿಲ್ಲ. ಅದಕ್ಕಾಗಿ ಸಾಧಕರು ಸುಧಾರಿತ ತಂತ್ರಜ್ಞಾನವನ್ನು ಉಪಯೋಗಿಸಬೇಕು. ಪೊಲೀಸರು, ರೋಗಿವಾಹಕ (ಒಂದು ಅಂಬ್ಯುಲೆನ್ಸ್), ಮಹಾಮಾರಿ, ಬೆಂಕಿ ತಗಲುವುದು ಹಾಗೂ ವಿಷಭಾಧೆ ಇವುಗಳಿಗೆ ಸಂಬಂಧಿಸಿದ, ಹಾಗೆಯೇ ಹಿರಿಯ ನಾಗರಿಕರ ಸಹಾಯಕ್ಕಾಗಿ ಹೆಲ್ಪಲೈನ್ ಕ್ರಮಾಂಕಗಳನ್ನು ನೀಡಲಾಗಿದೆ. ಅವುಗಳನ್ನು ಆವಶ್ಯಕತೆಗನುಸಾರ ಬರೆದಿಟ್ಟುಕೊಂಡು ಉಪಯೋಗಿಸಬೇಕು.
೨. ಹೆಲ್ಪಲೈನ್ ಕ್ರಮಾಂಕಗಳನ್ನು ಉಪಯೋಗಿಸುವುದರ ಲಾಭ ಮತ್ತು ಕಾರಣಗಳು
೨ ಅ. ಶೀಘ್ರ ಮತ್ತು ಸಕ್ಷಮ ಸಹಾಯ ಸಿಗುವ ಸಾಧ್ಯತೆಯಿರುತ್ತದೆ : ಯಾವುದಾದರೊಬ್ಬ ವ್ಯಕ್ತಿಗೆ ತುರ್ತಾಗಿ ವೈದ್ಯಕೀಯ ಸಹಾಯ ಬೇಕಾಗಿದ್ದರೆ ಜನ ಸಾಮಾನ್ಯನ ಸಹಾಯವನ್ನು ಪಡೆಯುವ ಬದಲು ಹೆಲ್ಪಲೈನ್‌ನ ಸಹಾಯ ಪಡೆಯಬೇಕು. ಹೆಲ್ಪಲೈನ್‌ನ ಮೂಲಕ ರೋಗಿವಾಹಕ (ಅಂಬ್ಯುಲೆನ್ಸ್) ಉಪಲಬ್ಧವಾದರೆ ವೈದ್ಯಕೀಯ ಚಿಕಿತ್ಸೆ ತಕ್ಷಣ ಪ್ರಾರಂಭವಾಗುತ್ತದೆ, ಹಾಗೆಯೇ ತಜ್ಞರ ಸಹಾಯ ಕೂಡ ಸಿಗುತ್ತದೆ.
೨ ಆ. ಹೆಲ್ಪಲೈನ್ ಕ್ರಮಾಂಕವನ್ನು ಉಪಯೋಗಿಸಿದರೆ ಸರಕಾರಿ ಅಧಿಕಾರಿಗಳಿಗೆ ತಮ್ಮ ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ : ಹೆಲ್ಪಲೈನ್ ಕ್ರಮಾಂಕದ ಸಂಪರ್ಕವು ಧ್ವನಿಮುದ್ರಣವಾಗುತ್ತದೆ. ಆದ್ದರಿಂದ ಸರಕಾರಿ ಸಿಬ್ಬಂದಿಗಳಿಗೆ ಕರ್ತವ್ಯವನ್ನು ಮಾಡುವುದು ಕಡ್ಡಾಯವಾಗುತ್ತದೆ. ಉದಾಹರಣೆಗೆ ಒಂದು ವೇಳೆ ನಾವು ಸಾರಿಗೆ ವಿಭಾಗದ ಹೆಲ್ಪಲೈನ್ ಕ್ರಮಾಂಕ ವನ್ನು ಸಂಪರ್ಕಿಸಿ ದೂರು ದಾಖಲಿಸಿದರೆ, ‘ಸಂಬಂಧಪಟ್ಟ ಅಧಿಕಾರಿಗಳಿಗೆ ನಮ್ಮ ದೂರು ದಾಖಲಾಗಿಲ್ಲ’, ಎಂದು ಹೇಳಲು ಬರುವುದಿಲ್ಲ, ಏಕೆಂದರೆ ಅದು ಧ್ವನಿಮುದ್ರಣ (ರಿಕಾರ್ಡಿಂಗ) ಆಗಿರುತ್ತದೆ, ಅದೇ ರೀತಿ ಯೋಗ್ಯ ಸ್ಥಳದಲ್ಲಿ ದೂರು ದಾಖಲಿಸಿದ ಪುರಾವೆ ಕೂಡ ನಮ್ಮಲ್ಲಿ ಉಳಿಯುತ್ತದೆ.
೩. ಹೆಲ್ಪಲೈನ್ ಕ್ರಮಾಂಕಗಳನ್ನು ಉಪಯೋಗಿಸುವಾಗ ಯಾವ ಕಾಳಜಿಯನ್ನು ವಹಿಸಬೇಕು ?
ಅ. ಹೆಲ್ಪಲೈನ್ ಕ್ರಮಾಂಕವನ್ನು ಉಪಯೋಗಿಸುವಾಗ ಮೊದಲು ನೀವು ಯಾರಿಗೆ ದೂರವಾಣಿ ಕರೆಧ್ವನಿ ಮಾಡಿದ್ದೀರೋ, ಅವರಿಗೆ ನಿಮ್ಮ ಹೆಸರು, ದೂರವಾಣಿ ಸಂಖ್ಯೆ ಮತ್ತು ನೀವು ಯಾವ ಸ್ಥಳದಿಂದ ದೂರವಾಣಿ ಕರೆ ಮಾಡುತ್ತಿದ್ದೀರಿ ಎಂಬುದನ್ನು ಹೇಳಬೇಕು. ಅವರಿಗೆ ಹೇಳಬೇಕಾದ ಎಲ್ಲ ಮಾಹಿತಿಯನ್ನು ಅವರಿಗೆ ತಿಳಿಯುವಂತೆ ಸ್ಪಷ್ಟವಾಗಿ ಶಬ್ದಗಳಲ್ಲಿ ಹೇಳಬೇಕು.
ಅ ೧. ಹೆಲ್ಪಲೈನ್ ಕ್ರಮಾಂಕಗಳನ್ನು ಉಪಯೋಗಿಸುವಾಗ ನಾವು ಹೇಳುವ ಮಾಹಿತಿಯಲ್ಲಿ ತಪ್ಪಾಗಬಾರದು ಏಕೆಂದರೆ ಅದರ ಧ್ವನಿಮುದ್ರಣವಾಗುತ್ತಿರುತ್ತದೆ. ಆದುದರಿಂದ ಜಾಗರೂಕತೆಯಿಂದ ಮಾಹಿತಿಯನ್ನು ನೀಡಬೇಕು
ಆ. ಹೆಲ್ಪಲೈನ್‌ನ ಸಹಾಯವನ್ನು ಪಡೆಯುವಾಗ ಆದಷ್ಟು ತಮ್ಮ ಸಂಚಾರಿವಾಣಿಯನ್ನೇ ಉಪಯೋಗಿಸಬೇಕು, ಅಂದರೆ ಕಾನೂನಿನ ದೃಷ್ಟಿಯಿಂದ ನಮಗೆ ಸಹಾಯವಾಗುತ್ತದೆ.
ಇ. ಯಾವ ಸಂಚಾರಿವಾಣಿಯನ್ನು ಉಪಯೋಗಿಸಿ ದೂರು (ಕಂಪ್ಲೆಂಟ್) ದಾಖಲಿಸಲಾಗಿದೆ ಅಥವಾ ಸಹಾಯವನ್ನು ಕೇಳಲಾಗಿದೆಯೊ, ಆ ಕ್ರಮಾಂಕವು (ಸಂಚಾರವಾಣಿಯು) ಘಟನಾಸ್ಥಳದಲ್ಲಿರಬೇಕು.
ಈ. ಸಹಾಯಕರು ಬಂದಾಗ ದೂರವಾಣಿ ಮಾಡಿರುವ ವ್ಯಕ್ತಿಯು ಮುಂದೆ ಹೋಗಿ ತನ್ನ ಪರಿಚಯವನ್ನು ಮಾಡಿಕೊಡುವುದು ಆವಶ್ಯಕವಾಗಿದೆ.
ಉ. ಘಟನೆಯ ಬಗ್ಗೆ ತಿಳಿದಿರುವ ಮಾಹಿತಿ, ಹಾಗೆಯೇ ಏನು ಸಹಾಯ ಬೇಕಾಗಿದೆ, ಎಂಬುದನ್ನು ಕೂಡ ಪೊಲೀಸ್ ಅಥವಾ ಸಂಬಂಧಪಟ್ಟ ಆಡಳಿತ ಸಿಬ್ಬಂದಿಗೆ ಸ್ಪಷ್ಟವಾಗಿ ಹೇಳಬೇಕು.
ಊ. ಸಂಚಾರಿವಾಣಿಯನ್ನು ‘ರಿಕಾರ್ಡ್’ ಮೋಡ್ ನಲ್ಲಿ ಇಡಬೇಕು. ಅದರಿಂದ ಸಂಬಂಧಪಟ್ಟ ಅಧಿಕಾರಿ ಅಥವಾ ಸಿಬ್ಬಂದಿಯ ಸೂಚನೆಗಳನ್ನು ನೆನಪಿನಲ್ಲಿಡಲು ಸಹಾಯವಾಗುವುದು. ಅದೇ ರೀತಿ ನಮ್ಮಲ್ಲಿಯೂ ದೂರವಾಣಿ ಕರೆ ಮಾಡಿರುವ ಪುರಾವೆ ಇರುತ್ತದೆ.
(ಟಿಪ್ಪಣಿ : ಸಾಧಕರು ಹೆಲ್ಪಲೈನ್ ಕ್ರಮಾಂಕಗಳ ಸುಧಾರಿತ ಪಟ್ಟಿಯನ್ನು ಜೊತೆಯಲ್ಲಿಟ್ಟುಕೊಳ್ಳಬೇಕು. ಅದೇ ರೀತಿ ಅದನ್ನು ಪದೇ ಪದೇ ಸುಧಾರಿತ ಪಟ್ಟಿ ಇಟ್ಟುಕೊಳ್ಳಬೇಕು (ಅಪ್‌ಡೇಟ್). ಆಪತ್ಕಾಲೀನ ನಿರ್ವಹಣೆಗಾಗಿ ಅದು ಉಪಯೋಗವಾಗಬಹುದು. – ಸಂಕಲನಕಾರರು)
೪. ಪೊಲೀಸರಲ್ಲಿ ದೂರು ನೀಡುವ ಸಾಮಾನ್ಯ ಪದ್ಧತಿಯ ಜೊತೆಗೆ ಹೆಲ್ಪಲೈನ್ ಕ್ರಮಾಂಕವನ್ನು ಅವಶ್ಯ ಉಪಯೋಗಿಸಬೇಕು !
ಪೊಲೀಸರಿಗೆ ಯಾವುದೇ ರೀತಿಯ ದೂರನ್ನು ಪ್ರತ್ಯಕ್ಷ ನೀಡುವ ಮೊದಲು ‘೧೦೦’ ಈ ಹೆಲ್ಪ್‌ಲೈನ್‌ಗೆ ದೂರವಾಣಿ ಕರೆ ಮಾಡಿ ದೂರು ನೀಡಬೇಕು. ಅನಂತರವೇ ಮುಂದಿನ ಪ್ರಕ್ರಿಯೆಯನ್ನು ಆರಂಭಿಸಬೇಕು, ಉದಾ. ವಾಹನಕ್ಕೆ ಚಿಕ್ಕಪುಟ್ಟ ಅಪಘಾತ ವಾಗಿರಬಹುದು ಅಥವಾ ಯಾರಾದರೂ ಅಪ್ರಾಪ್ತ ವಯಸ್ಸಿನ ಮಕ್ಕಳು ತಿರುಗಾಡುತ್ತಿರುವುದು ಕಾಣಿಸಿದರೆ ಅಥವಾ ಇಂತಹ ಯಾವುದೇ ಘಟನೆಯ ಬಗ್ಗೆ ಕ್ರಿಮಿನಲ್ ದೂರು ನೀಡಬೇಕಾಗಿದ್ದರೆ, ಅದರ ಮಾಹಿತಿಯನ್ನು ಕ್ರಮಾಂಕ ೧೦೦ ಕ್ಕೆ ಕರೆ ಮಾಡಿ ನೀಡಬೇಕು.
೫. ಸರಕಾರಿ ಕೆಲಸದಲ್ಲಿ ಹೆಲ್ಪಲೈನ್ ಕ್ರಮಾಂಕವನ್ನು ಉಪಯೋಗಿಸುವುದು
ಮೊದಲು ಕಾರ್ಯಾಲಯಕ್ಕೆ ಹೋದ ನಂತರವೇ ಸರಕಾರಿ ಕೆಲಸಗಳು ಪ್ರಾರಂಭವಾಗುತ್ತಿದ್ದವು; ಆದರೆ ಈಗ ಹೆಲ್ಪಲೈನ್ ಕ್ರಮಾಂಕವನ್ನು ಉಪಯೋಗಿಸಿ ನಾವು ನಮ್ಮ ಕಾರ್ಯಕ್ಕೆ ವೇಗವನ್ನು ನೀಡಬಹುದು. ಕಾರ್ಯಾಲಯಕ್ಕೆ ಹೋಗುವ ಮೊದಲೆ ಈ ಕ್ರಮಾಂಕವನ್ನು ಸಂಪರ್ಕಿಸಿ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬೇಕು. ‘ಆನ್‌ಲೈನ್’ ಅಥವಾ ‘ವಿ-ಅಂಚೆಯ (ಇ-ಮೇಲ್)’ಮೂಲಕ ಅರ್ಜಿ ಕಳುಹಿಸುವುದರ ಬಗೆಗಿನ ಮಾಹಿತಿಯನ್ನು ಪಡೆದುಕೊಳ್ಳಬೇಕು ಮತ್ತು ಅದಕ್ಕನುಸಾರ ಕೃತಿ ಮಾಡಬೇಕು. ಅದರಿಂದ ನಮ್ಮ ಸರಕಾರಿ ಕೆಲಸಗಳ ವೇಗ ಹೆಚ್ಚಾಗುವುದು.
೬. ಪೊಲೀಸ್ ಹೆಲ್ಪಲೈನ್ ಕ್ರಮಾಂಕದ ಸಹಾಯಕೇಂದ್ರಕ್ಕೆ ದೂರವಾಣಿ ಕರೆ ಮಾಡಿದರೆ ಆಗುವ ಲಾಭ
೬ ಅ. ತಮ್ಮ ರಕ್ಷಣೆಗಾಗಿ ಹೆಲ್ಪಲೈನ್ ಕ್ರಮಾಂಕವನ್ನು ಉಪಯೋಗಿಸಬೇಕು ! : ಇದರಿಂದ ನಮ್ಮ ಯಾಚಿಕೆಯು ಕೂಡಲೇ ನೋಂದಣಿಯಾಗುತ್ತದೆ. ಯಾವುದಾದರೊಂದು ಪ್ರಸಂಗದಲ್ಲಿ ಯಾವುದೇ ಅನಿಷ್ಟ ಸಂಭವಿಸಬಾರದೆಂದು ನಾವು ಜಾಗರೂಕರಾಗುತ್ತೇವೆ; ಆದರೆ ಅದರೊಂದಿಗೆ ಪ್ರಸಂಗವನ್ನು ಎದುರಿಸ ಬೇಕಾದಾಗ ಹೆಲ್ಪಲೈನ್ ಕ್ರಮಾಂಕಕ್ಕೆ ದೂರವಾಣಿ ಕರೆ ಮಾಡಿದರೆ ನಾವು ಸುರಕ್ಷಿತವಾಗುತ್ತೇವೆ.
೬ ಆ. ಹೆಲ್ಪಲೈನ್ ಕ್ರಮಾಂಕಕ್ಕೆ ದೂರವಾಣಿ ಕರೆ ಮಾಡಿದರೆ ಪುರಾವೆ ಮತ್ತು ಬಂಧನಗಳು ನಿರ್ಮಾಣವಾಗುತ್ತವೆ ! : ತುರ್ತುಪರಿಸ್ಥಿತಿಯ ಪ್ರಸಂಗದ ವಿಷಯದ ನಮ್ಮ ದೂರು ಅಥವಾ ನಮ್ಮ ಪಕ್ಷವು ಸರಕಾರದ ಗಮನಕ್ಕೆ ಮೊದಲು ತಲುಪುವುದರಿಂದ ನಮಗೆ ಆಧಾರ ಸಿಗುತ್ತದೆ. ಅಂತಹ ಪುರಾವೆಯೂ ನಿರ್ಮಾಣವಾಗುತ್ತದೆ.
೬ ಇ. ಕೆಲವು ಸರಕಾರಿ ಅಧಿಕಾರಿಗಳು ತಮ್ಮ ಹೊಣೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅದರಿಂದ ನಮ್ಮ ಅರ್ಜಿ ಅಥವಾ ಯಾಚಿಕೆಗಾಗಿ ಕಾಯಬೇಕಾಗುತ್ತದೆ ಅಥವಾ ನಾವು ಅದರ ವಿಚಾರವನ್ನು ಬಿಟ್ಟುಬಿಡುತ್ತೇವೆ; ಆದರೆ ಹೆಲ್ಪಲೈನ್ ಕ್ರಮಾಂಕದಲ್ಲಿ ಯೋಗ್ಯ ಜಾಗರೂಕತೆಯನ್ನು ವಹಿಸಿ ಸಂಪರ್ಕ ಅಥವಾ ದೂರು ನೀಡಿದರೆ, ನಮಗೆ ಅದರಿಂದ ಲಾಭವಾಗುವುದು.
೬ ಈ. ಘಟನೆಯ ಅಥವಾ ಪ್ರಸಂಗದ ಸಂಬಂಧವು ಮುಂದೆ ಬಂದರೆ ಅದರ ಪುರಾವೆಯೆಂದು ಅದನ್ನು ಉಪಯೋಗಿಸಬಹುದು : ಯಾವುದಾದರೊಂದು ಪ್ರಸಂಗದಲ್ಲಿ ಕೆಲವೊಮ್ಮೆ ಭವಿಷ್ಯದಲ್ಲಿ ದೊಡ್ಡ ಪ್ರಸಂಗ ನಿರ್ಮಾಣವಾಗುವುದಿರುತ್ತದೆ. ಆದುದರಿಂದ ನಾವು ‘೧೦೦’ ಕ್ರಮಾಂಕಕ್ಕೆ ದೂರು ನೀಡಿದ್ದರೆ, ನಮ್ಮ ರಕ್ಷಣೆಗಾಗಿ ಅದು ಯೋಗ್ಯ ಸಮಯದಲ್ಲಿ ಉಪಯೋಗವಾಗುತ್ತದೆ.
೭. ಹೆಲ್ಪಲೈನ್ ಕ್ರಮಾಂಕವನ್ನು ಉಪಯೋಗಿಸದೆ ಕೃತಿ ಮಾಡಿದರೆ ಆಗುವ ನಷ್ಟ
ಅ. ಅನೇಕ ಬಾರಿ ಹಿಂಸಾತ್ಮಕ ಅಥವಾ ವಾದ ವಿವಾದದ ಪ್ರಸಂಗ ನಿರ್ಮಾಣವಾದಾಗ ನಾವು ಪೊಲೀಸರಲ್ಲಿ ದೂರು ದಾಖಲಿಸುತ್ತೇವೆ; ಆದರೆ ಪೊಲೀಸರು ದೂರನ್ನು ದಾಖಲಿಸಿಕೊಳ್ಳದೆ ತಿರುಗಿ ನಮ್ಮನ್ನೇ ಗದರಿಸುತ್ತಾರೆ. ಹೆಚ್ಚಿನಂಶ ಪೊಲೀಸರು ವ್ಯಕ್ತಿಯನ್ನು ನೋಡಿ ನಿರ್ಣಯ ತೆಗೆದುಕೊಳ್ಳುತ್ತಾರೆ.
ಆ. ಒಂದು ವೇಳೆ ನಮಗಿಂತ ಎದುರಾಳಿ ಸಕ್ಷಮವಾಗಿದ್ದರೆ, ನಮ್ಮನ್ನು ಅವರು ಸುಳ್ಳು ಖಟ್ಲೆಯಲ್ಲಿ ಸಿಲುಕಿಸಬಹುದು, ಉದಾ. ಗೋವಂಶಗಳನ್ನು ಸಾಗಿಸುವ ವಾಹನಗಳ ವಿರುದ್ಧ ದೂರು ನೀಡಲು ಕೆಲವು ಗೋರಕ್ಷಕರು ಪೊಲೀಸ್ ಠಾಣೆಗೆ ಹೋಗಿದ್ದರು. ಆಗ ಪೊಲೀಸರು ಗೋರಕ್ಷರ ಮೇಲೆಯೇ ಶಾಂತಿ ಭಂಗ ಮಾಡಿದ ಅಪರಾಧವನ್ನು ದಾಖಲಿಸಿದರು. ಇಂತಹ ಪ್ರಕರಣಗಳಲ್ಲಿ ನಮ್ಮ ಪಕ್ಷವನ್ನು ಸುರಕ್ಷಿತ ಹಾಗೂ ಸದೃಢ ಮಾಡಲು ಹೆಲ್ಪಲೈನ್ ಕ್ರಮಾಂಕದಲ್ಲಿ ದೂರು ನೀಡುವುದು ಉಪಯುಕ್ತವಾಗಿರುತ್ತದೆ.
ಇ. ಕೆಲವು ಪ್ರಸಂಗಗಳಲ್ಲಿ ವಿರೋಧಿಗಳು ಹೆಲ್ಪಲೈನ್ ಕ್ರಮಾಂಕಕ್ಕೆ ದೂರು ನೀಡಿರುವುದರಿಂದ ಪೊಲೀಸರು ಅವರ ಪಕ್ಷಕ್ಕೆ ಪ್ರಾಧಾನ್ಯತೆಯನ್ನು ನೀಡಿರುವುದು ಕಂಡುಬಂದಿದೆ. ಹೆಲ್ಪಲೈನ್ ಕ್ರಮಾಂಕಕ್ಕೆ ನಾವು ಯಾವುದೇ ಘಟನೆಯ ವಿಷಯದಲ್ಲಿ ದೂರು ನೀಡಿದರೆ ಘಟಿಸಿರುವ ಪ್ರಕರಣವನ್ನು ಮುಂದುವರಿಬೇಕೋ ಅಥವಾ ಬೇಡವೆನ್ನುವುದರ ಅಧಿಕಾರ ನಮ್ಮಲ್ಲಿರುತ್ತದೆ. ಪೊಲೀಸ್ ಹೆಲ್ಪಲೈನ್ ಕ್ರಮಾಂಕಗಳು ೨೪ ಗಂಟೆ ಕಾರ್ಯನಿರತವಾಗಿರುತ್ತವೆ. (ಎಲ್ಲ ಹೆಲ್ಪಲೈನ್ ಕ್ರಮಾಂಕಗಳು ೨೪ ಗಂಟೆ ಕಾರ್ಯನಿರತವಾಗಿರುವುದಿಲ್ಲ.) ಆದ್ದರಿಂದ ಪ್ರತ್ಯಕ್ಷ ಪೊಲೀಸ್ ಠಾಣೆಗೆ ಹೋಗದೆಯೆ ಕೆಲವು ಪ್ರಸಂಗಗಳ ನಿರ್ಣಯ ಅಥವಾ ಅಡಚಣೆಗಳು ನಿವಾರಣೆಯಾಗಬಹುದು; ಏಕೆಂದರೆ ಕೆಲವೊಮ್ಮೆ ಸಮೀಪದಲ್ಲಿಯೆ ಕಾವಲು ಮಾಡುವ ಪೊಲೀಸರ ವಾಹನ ಘಟನೆಯ ಸ್ಥಳಕ್ಕೆ ಬರುತ್ತದೆ ಹಾಗೂ ಪೊಲೀಸ್‌ರು ಬಂದನಂತರ ಸಾಮಾನ್ಯವಾಗಿ ಹಿಂಸೆಯಂತಹ ಘಟನೆಯು ನಿಲ್ಲುತ್ತದೆ.
೮. ಧ್ವನಿಪ್ರದೂಷಣೆಯ ದೂರಿಗಾಗಿ ಹೆಲ್ಪಲೈನ್ ಕ್ರಮಾಂಕವನ್ನು ಉಪಯೋಗಿಸಬೇಕು !
ಧ್ವನಿಮಾಲಿನ್ಯದ ದೂರಿಗಾಗಿಯೂ ಹೆಲ್ಪಲೈನ್ ಕ್ರಮಾಂಕಗಳು ಉಪಲಬ್ಧವಿವೆ. ಈ ಕ್ರಮಾಂಕಗಳನ್ನು ಆಯಾಯ ಪ್ರಾಂತಗಳಲ್ಲಿ ಖಚಿತಪಡಿಸಿಕೊಳ್ಳ ಬೇಕಾಗುತ್ತದೆ. ನಮ್ಮ ಮನೆಯಲ್ಲಿ ಯಾರಿಗಾದರು ಕಾಯಿಲೆಯಿದ್ದರೆ ಅಥವಾ ಇತರ ಯಾವುದೇ ಕಾರಣದಿಂದ ಧ್ವನಿಯಿಂದ ತೊಂದರೆಯಾಗುತ್ತಿದ್ದರೆ ಹಾಗೂ ನಮಗೆ ಅದರಿಂದ ಹಾನಿಯಾಗುವುದಿದ್ದರೆ, ಈ ಹೆಲ್ಪಲೈನ್ ಕ್ರಮಾಂಕದಲ್ಲಿ ದೂರು ನೀಡಬಹುದು. ಹೆಚ್ಚಾಗಿ ಈ ಕ್ರಮಾಂಕದಲ್ಲಿ ರಾತ್ರಿ ೧೦ ಗಂಟೆಯ ನಂತರ ನಡೆಯುವ ಕಾರ್ಯಕ್ರಮಗಳ ವಿರುದ್ಧದ ದೂರನ್ನು ಸ್ವೀಕರಿಸಲಾಗುತ್ತದೆ.
೯. ಮಹಿಳೆಯರು ಪ್ರತ್ಯೇಕವಾದ ಹೆಲ್ಪಲೈನ್ ಕ್ರಮಾಂಕವನ್ನು ಉಪಯೋಗಿಸಬೇಕು !
ಭಾರತದಲ್ಲಿ ಕೇವಲ ಮಹಿಳೆಯರಿಗಾಗಿಯೇ ವಿವಿಧ ಹೆಲ್ಪಲೈನ್ ಕ್ರಮಾಂಕಗಳು ಸಕ್ರಿಯ ಇವೆ. ಕೌಟುಂಬಿಕ ಕಲಹ, ಕಾರ್ಯಾಲಯದಲ್ಲಿ ನಡೆಯುವ ಶೋಷಣೆ, ಹಿಂಸಾತ್ಮಕ ಘಟನೆಗಳು ಇತ್ಯಾದಿ ಪ್ರಸಂಗಗಳಲ್ಲಿ ಆ ಹೆಲ್ಪಲೈನ್ ಕ್ರಮಾಂಕಗಳನ್ನು ಉಪಯೋಗಿಸಬಹುದು. ಯಾವುದಾದರೊಬ್ಬ ಮಹಿಳೆಗೆ ಇಂತಹ ಪ್ರಸಂಗ ಎದುರಾದರೆ ಅವಳು ಮಹಿಳಾ ಸಹಾಯ ಕೇಂದ್ರದ ಹೆಲ್ಪಲೈನ್ ಕ್ರಮಾಂಕವನ್ನು ಉಪಯೋಗಿಸಬೇಕು. ಅದು ಸಿಗದಿದ್ದರೆ, ‘೧೦೦’ ಈ ಕ್ರಮಾಂಕವನ್ನು ಸಂಪರ್ಕಿಸಬೇಕು.
೧೦. ಹೆಲ್ಪಲೈನ್‌ಗಳಿಗೆ ಸಂಬಂಧಿಸಿದ ಸಮಸ್ಯೆಗಳು :
ಹೆಲ್ಪಲೈನ್ ಕ್ರಮಾಂಕಗಳು ಕೆಲವೊಮ್ಮೆ ಸತತ ಕಾರ್ಯನಿರತವಿರುತ್ತದೆ ಅಥವಾ ಕೆಲವೊಮ್ಮೆ ಸಂಪರ್ಕವಾಗುವುದಿಲ್ಲ. ಇಂತಹ ಸಮಯದಲ್ಲಿ ಪುನಃ ಪುನಃ ದೂರವಾಣಿ ಕರೆ ಮಾಡಿ ನೋಡಬೇಕು. ಹಾಗೆಯೇ ಬೇರೆ ಕಂಪನಿಗಳ ಸಂಚಾರಿವಾಣಿಗಳನ್ನು ಉಪಯೋಗಿಸಿ ಸಂಪರ್ಕ ಮಾಡಲು ಪ್ರಯತ್ನಿಸಬೇಕು.
ಟಪ್ಪಣಿ : ಎಲ್ಲ ಸಾಧಕರು, ಹಿತಚಿಂತಕರು ಮತ್ತು ಹಿಂದುತ್ವನಿಷ್ಠರು ತಮ್ಮ ಸಮೀಪದ ಚಿಕ್ಕ ಪೊಲೀಸ್ ಠಾಣೆ/ ಔಟ್‌ಪೋಸ್ಟ್/ ಪೊಲೀಸ್ ಠಾಣೆ/ ಪೊಲೀಸ್ ಮುಖ್ಯಾಲಯ/ ಅಧೀಕ್ಷಕರು/ ಪೊಲೀಸ್ ಆಯುಕ್ತರ ಸಂಪರ್ಕ ಕ್ರಮಾಂಕಗಳನ್ನು ತಮ್ಮಲ್ಲಿಟ್ಟುಕೊಳ್ಳಬೇಕು. ಇತರ ಯಾವುದೇ ಮಾಧ್ಯಮಗಳಿಂದ ನಮಗೆ ಪೊಲೀಸರೊಂದಿಗೆ ಸಂಪರ್ಕವಾದರೂ ಹೆಲ್ಪಲೈನ್‌ಗೆ ತಿಳಿಸಬೇಕು; ಏಕೆಂದರೆ ಅದರ ನೋಂದಣಿ ಪುಸ್ತಕದಲ್ಲಿರುತ್ತದೆ. ಆದರಿಂದ ನಮಗೆ ಮುಂದಿನ ನ್ಯಾಯಾಂಗ ಪ್ರಕ್ರಿಯೆ ಅಥವಾ ಬೆಂಬತ್ತುವಿಕೆಗಾಗಿ ಸಹಾಯವಾಗುವುದು. – ನ್ಯಾಯವಾದಿ ನಾಗೇಶ ಜೋಶಿ (ತಾಕಬಾತೆ), ಸದಸ್ಯ, ಹಿಂದೂ ವಿಧಿಜ್ಞ ಪರಿಷತ್ತು. (೨೫.೫.೨೦೨೦)
ಕೆಲವು ಹೆಲ್ಪಲೈನ್ ಕ್ರಮಾಂಕಗಳು
ಇದರಲ್ಲಿನ ಕೆಲವು ಕ್ರಮಾಂಕಗಳು ಕೇಂದ್ರ ಸರಕಾರ ಮತ್ತು ಕೆಲವು ರಾಜ್ಯಸರಕಾರ ಪ್ರಸಿದ್ದ ಪಡಿಸಿವೆ, ಎಲ್ಲರೂ ಸ್ಥಳೀಯ ಕ್ರಮಾಂಕಗಳನ್ನು ಒಮ್ಮೆ ಖಚಿತಪಡಿಸಿಕೊಂಡು ತಮ್ಮಲ್ಲಿ ಬರೆದಿಟ್ಟುಕೊಳ್ಳಬೇಕು.
ವಿಷಬಾಧೆ ವಿರೋಧಿ ಕ್ರಮಾಂಕ – 1066
ಅಗ್ನಿಶಾಮಕ ದಳ – 101
ಇಂಡಿಯನ್ ರೆಡ್ ಕ್ರಾಸ್ ಸೋಸೈಟಿ – (011) 23711551
ದೂರವಾಣಿ ಕ್ರಮಾಂಕಗಳ ವಿಚಾರಣೆ – 197
ಕೇಂದ್ರ ಸರಕಾರದ ಆರೋಗ್ಯ ಯೋಜನೆ (ಸಿ.ಜಿ.ಎಚ್.ಎಸ್) ಹೆಲ್ಪಲೈನ್, ಆರೋಗ್ಯ ಸೇವಾ ಮಹಾಸಂಚನಾಲಯ – 155224
ಸರಕಾರಿ ಡಿಜಾಸ್ಟರ್ ಮ್ಯಾನೇಜಮೆಂಟ್ ಆಫ್ ಎನ್‌ಸಿಟಿ ಆಫ್ ದೆಹಲಿ – 1077
ಪೊಲೀಸ್ ಉಪ ಆಯುಕ್ತರು (ಕಳೆದು ಹೋದ ಮಹಿಳೆಯರು ಮತ್ತು ಮಕ್ಕಳು) – 1094
ಸಾರಿಗೆ ಪೊಲೀಸ್ ಹೆಲ್ಪಲೈನ್ – 1095
ದೆಹಲಿ ಪೊಲೀಸ್ ಹೆಲ್ಪಲೈನ್ – 1090
ಎನ್.ಡಿ.ಎಮ್.ಸಿ. ನಿಯಂತ್ರಣ ಕಕ್ಷೆ – 1267
ರೋಗಿವಾಹಕ (ಒಂದು ಅಂಬ್ಯುಲೆನ್ಸ್) – 1066
ಮಹಿಳೆಯರಿಗಾಗಿ ಹೆಲ್ಪಲೈನ್ ಕ್ರಮಾಂಕ –1092
ಒಆರ್ಬಿಒ ಸಿ.ಎನ್. ಸೆಂಟರ್, ಎ.ಐ.ಐ. ಎಮ್.ಎಸ್ (ಡೋನೇಶನ್ ಆಫ್ ಆರ್ಗನ್) – 1060
ಪೊಲೀಸ್ ಸಹಾಯವಾಣಿ – 100