ಇಸ್ರೇಲ್ ಮತ್ತು ಭಾರತದ ನಡುವಿನ ವ್ಯತ್ಯಾಸ

೧. ಇಂದಿನವರೆಗಿನ ಎಲ್ಲ ಪಕ್ಷಗಳ ರಾಜಕಾರಣಿಗಳು ಭಾರತೀಯರಿಗೆ ರಾಷ್ಟ್ರೀಯ ಸ್ವಾರ್ಥವನ್ನು ಕಲಿಸಲೇ ಇಲ್ಲ !

‘ಪಾನ್ ಇಸ್ಲಾಮ್’ನಿಂದ ಅತೀ ಹೆಚ್ಚು ಅಪಾಯವಿರುವ ೨ ದೇಶಗಳೆಂದರೆ ಒಂದು ಇಸ್ರೇಲ್ ಮತ್ತು ಇನ್ನೊಂದು ಭಾರತ. ಮುಂಬಯಿಗಿಂತಲೂ ಚಿಕ್ಕದಾದ ಇಸ್ರೇಲ್ ದೇಶವನ್ನು ನಾಲ್ಕೂ ಬದಿಗಳಿಂದ ಇಸ್ಲಾಮೀ ದೇಶಗಳು ಸುತ್ತುವರಿದಿವೆ. ಭಾರತದ ಎರಡು ಬದಿಗಳಲ್ಲಿಯೂ ಇಸ್ಲಾಮ್ ದೇಶಗಳಿವೆ. ಕೆಳಗೆ ಬೌದ್ಧ ಶ್ರೀಲಂಕ ಮತ್ತು ಮೇಲೆ ಸಾಮ್ಯವಾದಿ ಚೀನಾ ಇದೆ. ಈ ಎರಡೂ ದೇಶಗಳಲ್ಲಿ ಪ್ರಜಾಪ್ರಭುತ್ವವಿದೆ. ಎರಡೂ ದೇಶಗಳ ನಿವಾಸಿಗಳು ದೊಡ್ಡ ಪ್ರಮಾಣದಲ್ಲಿ ಅಮೇರಿಕಾದಲ್ಲಿ ನೆಲೆಸಿದ್ದಾರೆ ಹಾಗೂ ಅವರು ಸಂಪನ್ನರಾಗಿದ್ದಾರೆ. ಭಾರತದಲ್ಲಿ ಗುಲಾಮಗಿರಿಯಿಂದಾಗಿ ಅವರಿಗೆ ತಮ್ಮ ಸ್ವಾರ್ಥ ಹಾಗೂ ಹಿತದ ಬಗ್ಗೆ ತಿಳಿದಿಲ್ಲ. ‘ದೇಶದ ಸ್ವಾರ್ಥ ಮೊದಲು ನಂತರ ತಮ್ಮ ಸ್ವಾರ್ಥ’, ಹೀಗೆ ಸಂಪೂರ್ಣ ಜಗತ್ತಿನ ಧೋರಣೆಯಿದೆ. ಅದನ್ನು ಒಳ್ಳೆಯ ರೀತಿಯಲ್ಲಿ ಜೋಪಾನ ಮಾಡಲಾಗಿದೆ. ನಮ್ಮಲ್ಲಿ ಮಾತ್ರ ಇದುವರೆಗೆ ಜನರಿಗೆ ರಾಷ್ಟ್ರೀಯ ಸ್ವಾರ್ಥವನ್ನು ಕಲಿಸಲು ಯಾವುದೇ ನೇತಾರನಿಗೆ ಸಮಯ ಸಿಕ್ಕಿಲ್ಲ.

೨. ಜನಪ್ರತಿನಿಧಿಗಳ ವೈಚಾರಿಕ ಮಾನಸಿಕತೆ

ಸಮಾಜವಾದಿ ಮತ್ತು ಸಾಮ್ಯವಾದಿಗಳ ಮನಸ್ಸಿನಲ್ಲಿ ಭಾಜಪ ರಾಷ್ಟ್ರವಾದಿ ಪಕ್ಷವಾಗಿರುವುದರಿಂದ ಅದು ನಮ್ಮ ಅಸ್ತಿತ್ವಕ್ಕೆ ಅಪಾಯವಾಗಿದೆ, ಅದು ನಮ್ಮ ಪಕ್ಷವನ್ನು ನಾಶ ಮಾಡಬಹುದು, ಎನ್ನುವ ಭಯವಿದೆ. ‘ಕಾಂಗ್ರೆಸ್ ಮುಕ್ತ ಭಾರತ’ ಎಂಬ ಮೋದಿಯವರ ಘೋಷಣೆಯಿಂದ ಕಾಂಗ್ರೆಸ್ಸಿನ ಜನರು ಭಾಜಪವನ್ನು ದ್ವೇಷದಿಂದ ನೋಡುತ್ತಾರೆ. ಇಂತಹ ಎಲ್ಲ ಗುಲಾಮಿ ಮಾನಸಿಕತೆಯಿಂದಾಗಿ ಮೊರಾರಜಿ ಮತ್ತು ವಾಜಪೇಯಿ ಇವರಂತೆಯೆ ಮೋದಿಯವರಿಗೂ ಕೇವಲ ಒಂದೇ ಟರ್ಮ್ (ನಿರ್ಧಿಷ್ಟ ಅವಧಿ) ಆಡಳಿತ ನಡೆಸಲು ಸಿಗಬಹುದೇನೋ ? ಎಂದು ಭಯವಿತ್ತು. ಇಸ್ರೇಲ್‌ನ ಸ್ಥಿತಿ ಅದರ ವಿರುದ್ಧವಾಗಿದೆ. ಭಾರತದಲ್ಲಿ ‘ಸಂಸತ್ತು’, ಅಮೇರಿಕಾದಲ್ಲಿ ‘ಸಿನೆಟ್’, ಇದರಂತೆ ಇಸ್ರೇಲ್‌ನಲ್ಲಿ ‘ಸೆನೆಟ್’ ಇದೆ. ಅಲ್ಲಿ ನಡೆದ ಚುನಾವಣೆಯಲ್ಲಿ ಅಲ್ಲಿನ ರಾಷ್ಟ್ರವಾದಿ ಭಾಜಪ ಅಂದರೆ ‘ಲಿಕುಡ್ ಪಕ್ಷ’ ಆರಿಸಿ ಬಂದಿದೆ. ಅವರ ಮೋದಿ ಅಂದರೆ ಬೆಂಜಾಮಿನ್ ನೆತನ್ಯಾಹೂ ನಾಲ್ಕನೆ ಬಾರಿ ಪ್ರಧಾನಮಂತ್ರಿಯೆಂದು ಆರಿಸಿ ಬಂದ್ದಾರೆ. ಭಾರತದ ಹಾಗೆಯೆ ಅಲ್ಲಿಯೂ ಮೈತ್ರಿಯ ರಾಜಕಾರಣವಿದೆ. ಮೈತ್ರಿಯಿಲ್ಲದೆ ಗತಿಯಿಲ್ಲ. ಅಲ್ಲಿಯೂ ಒಂದು ಕಾಂಗ್ರೆಸ್ಸಿನಂತಹ ಸೌಮ್ಯ ಪಕ್ಷವಿದೆ ಮತ್ತು ಅದು ಇತರ ಪಕ್ಷದವರನ್ನು ಒಡೆದು, ಇತರರೊಂದಿಗೆ ಒಪ್ಪಂದ ಮಾಡಿಕೊಂಡು ಅಧಿಕಾರವನ್ನು ಗಿಟ್ಟಿಸುವ ಪ್ರಯತ್ನ ಮಾಡುತ್ತಿರುತ್ತದೆ. ಅಲ್ಲಿನ ಲಿಕುಡ್ ಪಕ್ಷವು ರಾಷ್ಟ್ರವಾದಿ ಹಾಗೂ ಆಕ್ರಮಕ ಪಕ್ಷವಾಗಿದೆ. ಅವರಿಗೆ ಹಿಂಸೆ ತ್ಯಾಜ್ಯವಿಲ್ಲ. ಹಿಬ್ರೂ ಭಾಷೆಯಲ್ಲಿ ಲಿಕುಡ್ ಶಬ್ದದ ಅರ್ಥ ‘ಹಟವಾದಿ’ ಅಥವಾ ‘ದೃಢ’ ಎಂದಾಗಿದೆ. ಈ ಪಕ್ಷದಿಂದಾಗಿ ಇಸ್ರೇಲ್‌ನ ಪರಿಚಯವು ಹಟವಾದಿ ದೇಶವೆಂದೇ ಆಗಿದೆ. ‘ನಾವು ಆಕ್ರಮಕರಾಗದಿದ್ದರೆ, ಈ ಮುಸಲ್ಮಾನ ರಾಷ್ಟ್ರಗಳು ನಮ್ಮನ್ನು ನುಂಗಿಬಿಡಬಹುದು’, ಎಂಬುದು ಈ ಪಕ್ಷದ ಅಭಿಪ್ರಾಯವಾಗಿದೆ. ಭಾರತದಲ್ಲಿ ನಾವೆಲ್ಲ ಹಿಂದೂಗಳು ಕಳೆದ ಸಾವಿರಾರು ವರ್ಷಗಳಿಂದ ಬಾಳಿಬದುಕಿದ್ದೇವೆ, ಇದು ನಮ್ಮ ಭಾಗ್ಯವೆ ಆಗಿದೆ.

೩. ಶತ್ರು ರಾಷ್ಟ್ರಕ್ಕೆ ಸಹಾಯ ಮಾಡುತ್ತದೆ, ಎಂದು ಅಮೇರಿಕಾಕ್ಕೆ ಗದರಿಸುವ ಧೈರ್ಯಶಾಲಿ ಇಸ್ರೇಲ್

೨ ಸಾವಿರದ ೫೦೦ ವರ್ಷಗಳ ನಂತರ ಇಸ್ರೇಲಗೆ ರಾಷ್ಟ್ರವೆಂದು ಒಟ್ಟಾಗುವ ಅವಕಾಶ ಸಿಕ್ಕಿತು ಹಾಗೂ ಅದನ್ನು ತನ್ನ ಕೈಯಿಂದ ಕಳೆದುಕೊಳ್ಳುವ ಇಚ್ಛೆ ಅದಕ್ಕಿರಲಿಲ್ಲ. ಅಮೇರಿಕಾದಲ್ಲಿನ ಜ್ಯೂ ಲಾಬಿ (ಕಾನೂನು ಮಂಡಳಿಯಲ್ಲಿನ ಸದಸ್ಯರ ಮೇಲೆ ಒತ್ತಡ ಹೇರಲು ಪ್ರಯತ್ನಿಸುವವರ ಗುಂಪು) ಸಕ್ಷಮ ಹಾಗೂ ಸಂಪನ್ನವಾಗಿದೆ. ತೈಲಬಾವಿ ಅಗೆಯುವ ಕ್ಷೇತ್ರ (ಆಯಿಲ್ ಡ್ರಿಲ್ಲಿಂಗ್ ಸೆಕ್ಟರ್), ಹಣಕಾಸಿನ (ಬ್ಯಾಂಕಿಂಗ್ ಮತ್ತು ಫೈನಾನ್ಸ್) ಹಾಗೂ ಸರಪಳಿ ಪದ್ದತಿಯಲ್ಲಿನ ಚಿಲ್ಲರೆ ವ್ಯಾಪಾರ (ರಿಟೈಲ್ ಚೈನ್ ಬಿಝ್‌ನೆಸ್) ಎಲ್ಲವೂ ಜ್ಯೂಗಳ ಕೈಯಲ್ಲಿದೆ. ಈ ಸಮೂಹವು ಇಸ್ರೇಲ್‌ನ ಮೇಲೆ ನಿರಂತರವಾಗಿ ಗಮನವಿಟ್ಟಿರುತ್ತದೆ. ಒಮ್ಮೆ ನೇತಾನ್ಯಾಹೂ ಅಮೇರಿಕಾಗೆ ಹೋದಾಗ ಅವರು ‘ಅಮೇರಿಕಾ ಅಣುಬಾಂಬ್ ನಿರ್ಮಾಣ ಮಾಡುವ ಇರಾಣ್‌ಕ್ಕೆ ಸಹಾಯ ಮಾಡುತ್ತಿದೆ’, ಎಂದು ಹೇಳಿ ಅಂದಿನ ರಾಷ್ಟ್ರಾಧ್ಯಕ್ಷ ಓಬಾಮಾರವರಿಗೆ ಗದರಿಸಿದ್ದರು. ಅಮೇರಿಕಾದ ಭೂಮಿಯ ಮೇಲೆ ನಿಂತು ಅಮೇರಿಕಾದ ಅಧ್ಯಕ್ಷರನ್ನು ಗದರಿಸಲು ನಮ್ಮಲ್ಲಿ ‘ಧೈರ್ಯ’ ಇರಬೇಕಾಗುತ್ತದೆ ಹಾಗೂ ಅದು ಈ ಚಿಕ್ಕ ದೇಶದ ಪ್ರಧಾನಮಂತ್ರಿಯವರಲ್ಲಿದೆ. ‘ಇರಾನ್‌ನ ಕೈಗೆ ಅಣುಬಾಂಬ್ ಬಂದರೆ ಅದು ತನಗೆ ಬೇಕಾದಾಗ ಇಸ್ರೇಲನ್ನು ಜಗತ್ತಿನ ನಕಾಶೆಯಿಂದ ಅಳಿಸಿಬಿಡಬಹುದು’, ಎಂದು ಹೇಳುವ ಧೈರ್ಯವನ್ನು ತೋರಿಸಲು ಆ ನೇತಾರನಿಗೆ ಅವರ ನಾಗರಿಕರ ಸಂಪೂರ್ಣ ಬೆಂಬಲ ಇರಬೇಕಾಗುತ್ತದೆ.

೪. ರಾಷ್ಟ್ರರಕ್ಷಣೆಗಾಗಿ ನಿರಂತರ ಸಿದ್ಧವಾಗಿರುವ ಇಸ್ರೇಲ್‌ನಲ್ಲಿನ ಯುವಕರು

ನಾವು ಇದುವರೆಗೆ ನಮ್ಮ ‘ರಾಷ್ಟ್ರೀಯ ಧೋರಣೆ’ ಯಾವುದು ?, ಎಂಬುದನ್ನು ನಿರ್ಧರಿಸಿಲ್ಲ. ಆದ್ದರಿಂದ ಗೋಹತ್ಯೆಯ ಸಮಸ್ಯೆ ನಿರ್ಮಾಣವಾದ ಕೂಡಲೇ ಕಾಂಗ್ರೆಸ್‌ನ ಮುಖಂಡರು ಮತಾಂಧರ ಪಕ್ಷ ವಹಿಸಿ ಜಗಳಾಡುತ್ತಾರೆ. ಇದು ನಮ್ಮ ದುರ್ಭಾಗ್ಯ, ಇದಕ್ಕೇನು ಹೇಳಬೇಕು ? ತದ್ವಿರುದ್ಧ ೬ ದಿನಗಳ ಯುದ್ಧದಲ್ಲಿ ಗೆದ್ದುಕೊಂಡಿರುವ ‘ವೆಸ್ಟ್ ಬ್ಯಾಕ್’ನ ಭೂಭಾಗದ ಮೇಲೆ ಅಲ್ಲಿ ಅರಬರನ್ನು ನೆಲೆಗೊಳಿಸಿರಿ, ಎಂದು ಯುನೋ ಹೇಳಿದರೂ, ಇಸ್ರೇಲ್ ಆ ಭೂಭಾಗವನ್ನು ಬಿಟ್ಟು ಕೊಡಲಿಲ್ಲ. ಅರಬರು ನಿರಂತರವಾಗಿ ಅಲ್ಲಿ ಆಕ್ರಮಣ ಮಾಡುತ್ತಾರೆ; ಆದರೆ ಇಸ್ರೇಲ್‌ನ ಸೈನಿಕರ ಮುಂದೆ ಅವರ ಬೇಳೆ ಬೇಯುವುದಿಲ್ಲ. ವೆಸ್ಟ್ ಬ್ಯಾಕ್‌ನಲ್ಲಿನ ಬಡ ಜ್ಯೂ ಹುಡುಗ-ಹುಡುಗಿಯರು ಅಲ್ಲಿಂದ ಕಾಣೆಯಾಗಿದ್ದರು. ಈ ವಿಭಾಗದಲ್ಲಿ ಪ್ಯಾಲೆಸ್ಟಿನಿ ಮತ್ತು ಜ್ಯೂ ಇವರ ನಡುವೆ ರಾಕೇಟ್ ಯುದ್ಧ ನಡೆಯುತ್ತಿತ್ತು. ಹೆಬ್ರಮ್ ವಿಭಾಗದಲ್ಲಿ ಅರಬ ಮತ್ತು ಜ್ಯೂ ಇವರ ಸಮ್ಮಿಶ್ರ ವಸತಿಯಿದೆ. ಇಸ್ರೇಲ್‌ನಲ್ಲಿನ ಪ್ರತಿಯೊಬ್ಬ ಯುವಕ-ಯುವತಿಯರು ಸೈನಿಕ ದೃಷ್ಟಿಯಿಂದ ತರಬೇತಿ ಪಡೆದಿದ್ದಾರೆ. ಸ್ವಲ್ಪ ಸಂಕಟದ ಸುಳಿವು ಸಿಕ್ಕಿದರೂ, ಈ ಯುವಕರು ಸಿದ್ಧರಾಗಿ ಮಾತೃಭೂಮಿಯ ರಕ್ಷಣೆಗಾಗಿ ಮುಂದೆ ಬರುತ್ತಾರೆ ಹಾಗೂ ಗಾಝಾಪಟ್ಟಿಯಲ್ಲಿ ನುಗ್ಗಿ ಶತ್ರುವನ್ನು ಸದೆಬಡಿದು ಹೊರದಬ್ಬುತ್ತಾರೆ. – ದಾದೂಮಿಯಾ (ಆಧಾರ : ‘ಧರ್ಮಭಾಸ್ಕರ’, ಎಪ್ರಿಲ್ ೨೦೧೫)