ಪ್ರತಿಯೊಂದು ವಿಷಯವನ್ನು ಹಣದೊಂದಿಗೆ ಹೋಲಿಸುವುದು ಆರ್ಥಿಕ ತಜ್ಞರೆನಿಸಿಕೊಳ್ಳುವವರ ವೈಶಿಷ್ಟ್ಯವಾಗಿದೆ. ಅರ್ಥವ್ಯವಸ್ಥೆಯ ಕೆಲವು ಸಮರ್ಥಕರು, ಕೊರೋನಾವನ್ನು ಹರಡಲು ಬಿಡಬೇಕು, ಆ ಮೇಲೆ ತಾನಾಗಿಯೇ ಯುವಕರಲ್ಲಿ ‘ಸಮೂಹ ಪ್ರತಿಕಾರಶಕ್ತಿ (ಹರ್ಡ್ ಇಮ್ಮ್ಯುನಿಟಿ) ನಿರ್ಮಾಣವಾಗುತ್ತದೆ ಮತ್ತು ಕೊರೋನಾ ನಿಯಂತ್ರಣಕ್ಕೆ ಬರುತ್ತದೆ ಎಂಬ ಕಲ್ಪನೆಯನ್ನು ಮಂಡಿಸಿದ್ದಾರೆ. ಔದ್ಯೋಗೀಕರಣವೆಂದರೆ ನಮ್ಮ ಪ್ರಗತಿ, ಎಂಬುದು ಎಲ್ಲಕ್ಕಿಂತ ದೊಡ್ಡ ಮೂಢನಂಬಿಕೆಯಾಗಿದೆ. ಇಂದಿನ ಅರ್ಥಶಾಸ್ತ್ರವು ಯಾವುದೇ ಶಾಶ್ವತ ಅಡಿಪಾಯವಿಲ್ಲದ, ಅಸತ್ಯ, ಅವೈಜ್ಞಾನಿಕ, ತರ್ಕಹೀನ, ಅನೈತಿಕ ಹಾಗೂ ಆಧಾರಹೀನ ವಿಷಯ ಮತ್ತು ಸಂಕಲ್ಪನೆಯಾಗಿದೆ. ‘ಭಾರತೀಯ ಜೀವನ ಮತ್ತು ಪೃಥ್ವಿರಕ್ಷಣಾ ಚಳವಳಿಯ ನಿಮಂತ್ರಕರಾದ ವಕೀಲ ಗಿರೀಶ ರಾವುತ್ ಇವರು ಇವೆಲ್ಲ ವಿಷಯಗಳನ್ನು ಚರ್ಚಿಸುವ ಲೇಖನವನ್ನು ಬರೆದಿದ್ದು ಅದನ್ನು ನಾವು ನಮ್ಮ ವಾಚಕರಿಗಾಗಿ ಪ್ರಕಟಿಸುತ್ತಿದ್ದೇವೆ. (ಭಾಗ ೨)
೮. ಔದ್ಯೋಗೀಕರಣವೆಂದರೆ ಪ್ರಗತಿ, ಎಂಬುದು ದೊಡ್ಡ ಮೌಢ್ಯತೆಯಾಗಿದೆ !
ಔದ್ಯೋಗೀಕರಣವೆಂದರೆ ಪ್ರಗತಿ, ಎಂಬುದು ಎಲ್ಲಕ್ಕಿಂತ ದೊಡ್ಡ ಮೌಢ್ಯತೆಯಾಗಿದೆ. ಇಂದಿನ ಅರ್ಥ ಶಾಸ್ತ್ರವು ಯಾವುದೇ ಶಾಶ್ವತವಾದ ಅಡಿಪಾಯವಿಲ್ಲದ ಸಂಪೂರ್ಣ ಅಸತ್ಯ, ಅವೈಜ್ಞಾನಿಕ, ತರ್ಕ ಹೀನ, ಅನೈತಿಕ ಹಾಗೂ ಆಧಾರವಿಲ್ಲದ ವಿಷಯ ಮತ್ತು ಸಂಕಲ್ಪನೆಯಾಗಿದೆ. ಯಾರೆ ಇರಲಿ ಈ ವಿಷಯದಲ್ಲಿ ಸ್ವಲ್ಪ ವಿಚಾರವಿನಿಮಯ ಮಾಡಿದರೆ ಅದು ಸ್ಪಷ್ಟವಾಗಬಹುದು. ಜೀವನ ಅಮೂಲ್ಯವಾಗಿದೆ. ಲಾಕ್‌ಡೌನ್ ಇದುವೇ ಉಪಾಯವಾಗಿದೆ. ಪೃಥ್ವಿ ಜೀವನವನ್ನು ನೀಡಲಿಕ್ಕಾಗಿಯೇ ಇದ್ದು ಅದನ್ನು ಧ್ವಂಸ ಮಾಡುವ ಉದ್ಯೋಗಗಳಿಗಾಗಿ ಅಲ್ಲ. ಅದು ಪೃಥ್ವಿಯ ಅವಮಾನ ಮತ್ತು ಅಗೌರವವಾಗಿದೆ. ಮನುಷ್ಯ ಪೃಥ್ವಿ ಮತ್ತು ನಿಸರ್ಗಗಳಿಂದ ಜೀವನವನ್ನು ಅನುಭವಿಸುತ್ತಾನೆ. ಔದ್ಯೋಗಿಕ ಯುಗದಲ್ಲಿನ ನೌಕರಿಯು ಜೀವನಕ್ಕೆ ಸ್ವಲ್ಪವೂ ಆವಶ್ಯಕವಿಲ್ಲದ ಹಾಗೂ ಜೀವನದ ವಿರುದ್ಧ ಹೋಗುವ, ಕೃತಕ ಉತ್ಪಾದನೆಗಳನ್ನು ಖರೀದಿಸಿ ಅರ್ಥವ್ಯವಸ್ಥೆ ಎಂಬ ಹೆಸರಿನ ಭ್ರಮೆಯನ್ನು ಮುನ್ನಡೆಸಲು ಮಾಡಿರುವ, ಯಂತ್ರೋತ್ತರ ಕೃತಕ ಜಗತ್ತಿನಲ್ಲಿನ ಆಘಾತಕಾರಿ ವ್ಯವಸ್ಥೆಯಾಗಿದೆ. ಔದ್ಯೋಗಿಕ ಕೃತಕ ಜಗತ್ತೆ ಕೊರೋನಾವನ್ನು ತಂದಿದೆ. ಜೈವಿಕ ವಿವಿಧತೆ ಮತ್ತು ಪೃಥ್ವಿಯ ಮೇಲಿನ ದಟ್ಟವಾದ ಗುಡ್ಡ ಬೆಟ್ಟಗಳು, ಅರಣ್ಯ ಇತ್ಯಾದಿಗಳ ಅಸ್ಪರ್ಶ ಚಟುವಟಿಕೆಗಳನ್ನು ನಾಶಗೊಳಿಸುವುದಿರಲಿ ಅಥವಾ ಜೈವಿಕ ಅಸ್ತ್ರಕ್ಕಾಗಿ ಅನುವಂಶಿಕ ಪ್ರಯೋಗಗಳನ್ನು ಮಾಡುವುದಿರಲಿ, ಮಾನವನನ್ನು ಈಗಲೂ ನಿಸರ್ಗವೇ ರಕ್ಷಿಸುತ್ತಿದೆ; ಆದರೆ ಜನರಿಗೆ ಆ ವಿಷಯವು ತಿಳಿಯುವುದಿಲ್ಲ.
೯. ಭಾರತದಲ್ಲಿನ ಲಾಕ್‌ಡೌನ್ ಹಾಗೂ ವಸಂತ ಋತುವಿನ ಆಗಮನದಿಂದ ಆಗಿರುವ ಲಾಭ
ಕೊರೋನಾವು ಚೀನಾ, ಯುರೋಪ್‌ಗಳಲ್ಲಿ ಕೋಲಾಹಲವೆಬ್ಬಿಸಿತು ಹಾಗೂ ಅದು ಅಮೇರಿಕಾಗೆ ಪೆಟ್ಟು ನೀಡಲು ಆರಂಭಿಸಿತು. ಭಾರತಕ್ಕೆ ಹೊರಗಿನಿಂದ ಜನರು ಬರಲು ಆರಂಭಿಸಿದರು ಹಾಗೂ ದೇಶದಲ್ಲಿನ ನಾಗರಿಕರು ಲಾಕ್‌ಡೌನ್‌ದಿಂದಾಗಿ ಮನೆಯಲ್ಲಿಯೆ ಕುಳಿತರು. ಲಾಕ್‌ಡೌನ್ ಅನ್ವಯವಾದ ನಂತರ ವಸಂತ ಋತು ಆರಂಭವಾಯಿತು. ಈ ಹವಾಮಾನವು, ವಾತಾವರಣ ಮತ್ತು ಅರೋಗ್ಯಕ್ಕಾಗಿ ಅತ್ಯುತ್ತಮ ಕಾಲವಾಗಿದೆ ! ಸ್ವಚ್ಛವಾದ ಸೂರ್ಯಪ್ರಕಾಶ ಮತ್ತು ಬೀಸುವ ಗಾಳಿಯ ನೈಸರ್ಗಿಕ ಲಾಭವು ಈ ಕಾಲದಲ್ಲಿ ಸಿಗುತ್ತದೆ, ಅದು ಸಿಕ್ಕಿತು. ವಾಹನ ಮತ್ತು ಇತರ ವಾಹನಗಳು ಸ್ತಬ್ದವಾದವು. ಉದ್ಯೋಗ, ಕಾರ್ಖಾನೆಗಳು, ನಿರ್ಮಾಣ ಕಾರ್ಯಗಳು ನಿಂತಿತು. ಸಂಕ್ಷಿಪ್ತದಲ್ಲಿ ಹೇಳುವುದಾದರೆ, ಔದ್ಯೋಗಿಕರಣ ನಿಂತುಹೋಯಿತು. ಆದ್ದರಿಂದ ಕೊರೋನಾ ಯಾವುದರ ಮೇಲೆ ಆಕ್ರಮಣ ಮಾಡುತ್ತದೆಯೊ, ಆ ಶ್ವಸನಮಾರ್ಗ ಮತ್ತು ಪುಪ್ಪುಸಗಳಿಗೆ ವಾಯು ಮಾಲಿನ್ಯದಿಂದಾಗುವ ಹಾನಿಯು ಕಡಿಮೆಯಾಯಿತು. ಇದರಿಂದ ಹಿಂದೆ ಆಗಿರುವ ಇಂದ್ರಿಯಗಳ ಹಾನಿಯನ್ನು ದುರಸ್ತಿ ಮಾಡಲು ಅವಕಾಶ ಸಿಕ್ಕಿತು.
೧೦. ತಂತ್ರಪ್ರಿಯ ನಾಗರಿಕರು ಮಾಡಿದ ನಿಸರ್ಗದ ವಿನಾಶವು ಅವರಿಗೆ ತಿರುಗುಬಾಣವಾಯಿತು !
ಚೀನಾ, ಯುರೋಪ್ ಮತ್ತು ಅಮೇರಿಕಾಗಳ ಔದ್ಯೋಗಿಕ ನಗರಗಳಲ್ಲಿಯೇ ಸಾವಿರಾರು ಜನರನ್ನು ಕೊರೋನಾ ಬಲಿ ತೆಗೆದುಕೊಳ್ಳುತ್ತಿದೆ. ಅಮೇರಿಕಾದಲ್ಲಿ ಇಷ್ಟರವರೆಗೆ ೫೫ ಸಾವಿರಕ್ಕಿಂತಲೂ ಹೆಚ್ಚು (ಮೇ ತಿಂಗಳ ಕೊನೆಯ ವಾರದಲ್ಲಿನ ಸಂಖ್ಯೆ ೧ ಲಕ್ಷಕ್ಕಿಂತಲೂ ಹೆಚ್ಚಾಗಿತ್ತು – ಸಂಕಲನಕಾರರು) ಜನರು ಸಾವನ್ನಪ್ಪಿದ್ದಾರೆ. ವೈಜ್ಞಾನಿಕ ಸಂಸ್ಥೆಗಳ ಅಭಿಪ್ರಾಯಕ್ಕನುಸಾರ ಮೋಟಾರು ವಾಹನಗಳು ಮತ್ತು ಉದ್ಯೋಗಗಳಿಂದ ಹೊರ ಸೂಸುವ ‘ನೈಟ್ರೋಜನ್ ಡೈಆಕ್ಸೈಡ್, ಹಾಗೂ ಇತರ ವಾಯುಗಳ ಮಾಲಿನ್ಯತೆ ಮತ್ತು ನಿರ್ಮಾಣ ಕಾರ್ಯಕ್ಕಾಗಿ ಉಪಯೋಗಿಸುವ ಸಿಮೆಂಟ್ ಹಾಗೂ ಟೈಲ್ಸ್‌ಗಳ ಸೂಕ್ಷ್ಮಕಣ ಮಿಶ್ರಿತ ಧೂಳಿನಿಂದ ಶ್ವಸನವ್ಯೂಹ ಹಾಗೂ ಪುಪ್ಪುಸದ ಆವರಣದ ದಾಹ ಮತ್ತು ಸವೆಯುವಿಕೆಯಿಂದಾಗಿ ಮರಣ ಸಂಭವಿಸಿದೆ. ಕೊರೋನಾದ ಹರಡುವಿಕೆಯ ನಂತರ ತಕ್ಷಣ ಲಾಕ್‌ಡೌನ್ ಅನ್ವಯಗೊಳಿಸದಿರುವುದರಿಂದ ಈ ವಾಯುಮಾಲಿನ್ಯತೆಯು ಮುಂದುವರಿಯಿತು. ಇದರಿಂದ ಈ ನಗರಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಸಾವನ್ನಪ್ಪಿದರು ಹಾಗೂ ಸಾಯುತ್ತಿದ್ದಾರೆ. ಈಗ ಜಪಾನ್ ಕೂಡ ಕೊರೋನಾದ ಮುಂದೆ ಮೊಣಕಾಲೂರಿದೆ. ಈ ದೇಶಗಳು ಶೇ. ೯೫ ರಿಂದ ೯೮ ರಷ್ಟು ಜನರನ್ನು ಔದ್ಯೋಗಿಕ ನಗರೀಕರಣಗೊಳಿಸಿದ್ದರು. ಅವರು ತಮ್ಮನ್ನು ವಿಕಸಿತರೆಂದು ಹೇಳುತ್ತಿದ್ದರು. ಎಲ್ಲಿ ನೈಸರ್ಗಿಕ, ಗ್ರಾಮೀಣ ಜೀವನವಿದೆಯೋ ಆ ದೇಶಗಳನ್ನು ಅವರು ಅವಿಕಸಿತವೆಂದು ಹೇಳುತ್ತಿದ್ದರು. ಭಾರತದಂತಹ ದೇಶಗಳಲ್ಲಿ ಅವರು ಕೀಳರಿಮೆಯನ್ನು ಬಿತ್ತಿದರು ಮತ್ತು ತಮ್ಮ ಉದ್ದೇಶವನ್ನು ಸಾಧಿಸಿದರು. ಈಗ ಈ ಬಲೆಯಲ್ಲಿ ಅವರು ಸ್ವತಃ ಸಿಲುಕಿದ್ದಾರೆ. ತಂತ್ರಪ್ರೇಮಿ ನಾಗರಿಕರ ಅಹಂಕಾರ ಮತ್ತು ನಿಸರ್ಗದ ನಾಶವು ಅವರ ಮೇಲೆಯೆ ತಿರುಗು ಬಾಣವಾಗಿದೆ. ಇದರಿಂದ ನಾವು ಕಲಿಯಬೇಕು.
೧೧. ಭಾರತದಲ್ಲಿ ವೈಶಾಖ ಮಾಸದಲ್ಲಿ ಉಷ್ಣತೆಯಿಂದಾಗಿ ಕೊರೋನಾದ ಹರಡುವಿಕೆ ಕಡಿಮೆಯಾಗುವ ಹಾಗೂ ಮಳೆಗಾಲದಲ್ಲಿ ಹೆಚ್ಚಾಗುವ ಸಾಧ್ಯತೆ
ಈಗ ನಮ್ಮ ದೇಶದಲ್ಲಿ ಚೈತ್ರ ಮಾಸ ಮುಗಿದು ಗ್ರೀಷ್ಮ ಋತು ಮತ್ತು ವೈಶಾಖ ಮಾಸ ಆರಂಭವಾಗಿದೆ. ಈ ಮಾಸದಲ್ಲಿ ಜಾಗತಿಕ ಉಷ್ಣತೆಯು ಹೆಚ್ಚಾಗುತ್ತದೆ. ಇದರ ಪರಿಣಾಮವು ಎರಡೂ ಬದಿಯಿಂದಾಗುತ್ತದೆ. ನಿರ್ಜಲೀಕರಣದಿಂದಾಗಿ (ಡಿಹೈಡ್ರೇಶನ್) ಉಷ್ಮಾಘಾತ ಹಾಗೂ ಇತರ ಕಾಯಿಲೆಗಳು ಬರುವವು. ಆದರೆ ಅದೇ ವೇಳೆಗೆ ಕೊರೋನಾವನ್ನು ನಾಶ ಮಾಡುವ ಕಾರ್ಯವನ್ನು ಮೇ ತಿಂಗಳ ಉಷ್ಣತೆಯು ಮಾಡಬಹುದು. ಕೊರೋನಾದ ಎಲ್ಲ ಗುಣ ಧರ್ಮಗಳು ಇದುವರೆಗೂ ಅಜ್ಞಾತವಾಗಿದೆ. ಅನೇಕ ವಿಷಾಣುಗಳು ಹಿಂದೆ ತನ್ನಿಂತಾನೆ ಪ್ರಭಾವಹೀನವಾಗಿ ನಿಸ್ತೇಜವಾದವು; ಆದರೆ ಈ ಲಾಭ ಸಿಗಬೇಕಾದರೆ ಔದ್ಯೋಗಿಕ ಜೀವನಶೈಲಿಯ ಮೋಟಾರ್, ಇತರ ವಾಹನಗಳು, ಕಾರ್ಖಾನೆಗಳು ಮತ್ತು ಸಿಮೆಂಟ್ ನಿರ್ಮಾಣ ಕಾರ್ಯಗಳ ಮಾಲಿನ್ಯತೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕಾಗುವುದು. ‘ಎಸಿ ಬಂದಾಗಿರಬೇಕು. ‘ಕೃತಕ ತಂಪು ಮತ್ತು ಮಲಿನ ವಾಯು ಕೊರೋನಾದ ವಿಷಾಣುಗಳನ್ನು ಹೆಚ್ಚಿಸುತ್ತವೆ, ಎಂದು ಹಾಪ್ಕಿನ್ಸ್ ಇನ್‌ಸ್ಟಿಟ್ಯೂಟ್ ನಂತಹ ಯುರೋಪಿನ ವೈಜ್ಞಾನಿಕ ಸಂಸ್ಥೆಗಳು ಸ್ಪಷ್ಟಪಡಿಸಿವೆ.
ಮುಂಬರುವ ಮಳೆಗಾಲವು ನಿಜವಾದ ಸತ್ವ ಪರೀಕ್ಷೆಯ ಕಾಲವಾಗಿರುವುದು. ‘ಹೆಚ್ಚಾಗಿರುವ ಆದ್ರತೆ, ಕುಸಿದಿರುವ ಸೂರ್ಯಪ್ರಕಾಶ, ಕಡಿಮೆಯಾದ ತಾಪಮಾನ, ಅದರಲ್ಲಿ ಸ್ವಚ್ಛತೆಯ ಅಭಾವ, ನೀರು ನಿಲ್ಲುವುದು, ಚರಂಡಿಗಳು ತುಂಬುವುದು, ನೆರೆ ಇತ್ಯಾದಿಗಳಿಂದ ಈ ಕಾಲದಲ್ಲಿ ಜೀವಜಂತುಗಳು ಹೆಚ್ಚಳವಾಗುತ್ತಿರುತ್ತದೆ. ಇದರಿಂದ ಈ ಕಾಲದಲ್ಲಿ ಭಾರತದಲ್ಲಿ ಕೋಟಿಗಟ್ಟಲೆ ಜನರು ಕೊರೋನಾ ಪೀಡಿತರಾಗಿ ವೈದ್ಯಕೀಯ ವ್ಯವಸ್ಥೆ ಸಹಿತ ಎಲ್ಲ ವ್ಯವಸ್ಥೆಗಳು ಅವ್ಯವಸ್ಥಿತವಾಗಬಹುದು, ಎಂದು ಜಗತ್ತಿನ ತಜ್ಞರ ಅಭಿಪ್ರಾಯವಾಗಿದೆ. ದೆಹಲಿ-ಮುಂಬಯಿಗಳಂತಹ ಸುಮಾರು ೧೫ ಅತೀ ಹೆಚ್ಚು ವಾಯುಮಾಲಿನ್ಯ ಹಾಗೂ ಹೆಚ್ಚು ಜನಸಂಖ್ಯೆ ಇರುವ ನಗರಗಳು ಭಾರತದಲ್ಲಿವೆ. ಲಾಕ್ಡೌನ್‌ವನ್ನು ಸ್ವಲ್ಪ ಶಿಥಿಲಗೊಳಿಸಿದಾಗ ರಸ್ತೆಯಲ್ಲಿ ಹೆಚ್ಚಾಗುವ ವಾಹನಗಳ ಸಂಖ್ಯೆ ಸಹಿತ ಕೊರೋನಾ ಪೀಡಿತ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ.
೧೨. ಅರ್ಥಸಮರ್ಥಕರಿಗೆ ಜೀವನಕ್ಕಿಂತ ಅರ್ಥವ್ಯವಸ್ಥೆಯೆ ಮಹತ್ವದ್ದೆನಿಸುತ್ತದೆಯೆ ?
ಸದ್ಯ ‘ಮಾಸ್ಕ್, ‘ಬೆಡ್, ‘ವೆಂಟಿಲೇಟರ್, ೨ ಜನರ ನಡುವೆ ೧ ಮೀಟರ್ ಅಂತರವನ್ನಿಡುವುದು ಮತ್ತು ಎಷ್ಟು ಸಾವಿರ ಅಥವಾ ಲಕ್ಷಕೋಟಿ ರೂಪಾಯಿಗಳನ್ನು ಸಂಗ್ರಹಿಸುವುದು ಎನ್ನುವುದರ ಬಗ್ಗೆಯೆ ಚರ್ಚೆ ನಡೆಯುತ್ತಿದೆ; ಆದರೆ ಅಯೋಗ್ಯ ಜೀವನ ಶೈಲಿಯ ಪರಿಣಾಮಗಳ ಕಡೆಗೆ ದುರ್ಲಕ್ಷ ವಾಗುತ್ತಿದೆ. ಇದು ಹೇಗಿದೆಯೆಂದರೆ, ‘ಅರ್ಬುದ ರೋಗ ಹೆಚ್ಚಾದ ನಂತರ ಪ್ರತಿಯೊಂದು ತಾಲೂಕಿನಲ್ಲಿ ಆಸ್ಪತ್ರೆಗಳನ್ನು ನಿರ್ಮಿಸಿರಿ ಅಥವಾ ‘ಹೆದ್ದಾರಿಗಳಲ್ಲಿನ ಅಪಘಾತಗಳಲ್ಲಿ ಪ್ರತಿದಿನ ಸಾವಿರಾರು ಜನರು ಸಾಯಲು ಆರಂಭವಾದ ನಂತರ ೨ – ೨ ಕಿಲೋಮೀಟರ್ ಅಂತರದಲ್ಲಿ ಲೇಝರ್ ತಂತ್ರಜ್ಞಾನದ ವೇಗವನ್ನು ಅಳೆಯುವ ಉಪಕರಣಗಳು ಮತ್ತು ಅಂಬ್ಯುಲೆನ್ಸ್‌ಗಳನ್ನು ನಿಲ್ಲಿಸಬೇಕು, ಎಂದು ಮಾಡಿ ದಂತಾಗುವುದು. ಮೂಲತಃ ಸಾರಿಗೆ ವ್ಯವಸ್ಥೆಯ ದೃಷ್ಟಿಯಲ್ಲಿ ಮೋಟಾರ್ ಇದು ಸಾರಿಗೆಯ ಮಾಧ್ಯಮವೆಂದು ಉಪಯೋಗಿಸುವ ಬದಲು ಸಾರ್ವಜನಿಕ ವಾಹನಗಳಿಂದ ಸಾಗಬೇಕು ಎಂದು ಹೇಳುವುದಿಲ್ಲ. ಮೋಟಾರ್, ಕಲ್ಲಿದ್ದಲಿನಿಂದ ವಿದ್ಯುತ್ ನಿರ್ಮಾಣ, ರಿಯಾಕ್ಟರ್, ಸಿಮೆಂಟ್ ಮತ್ತು ಕೃಷಿಗಾಗಿ ರಸಾಯನಗಳನ್ನು ಉಪಯೋಗಿಸುವುದನ್ನು ನಿಲ್ಲಿಸಿದರೆ ಅರ್ಬುದ ರೋಗದ ಉಪಚಾರಕ್ಕಾಗಿ ಆಸ್ಪತ್ರೆಗಳನ್ನು ನಿರ್ಮಿಸುವ ಅವಶ್ಯಕತೆಯಿಲ್ಲ. ಆ ಮೇಲೆ ಜಿಡಿಪಿ (‘ಗ್ರಾಸ್ ಡೊಮೆಸ್ಟಿಕ್ ಪ್ರೊಡಕ್ಟ್ ಅಂದರೆ ಸಂಪೂರ್ಣ ರಾಷ್ಟ್ರೀಯ ಉತ್ಪನ್ನ) ಮತ್ತು ಅರ್ಥವ್ಯವಸ್ಥೆಯಲ್ಲಿ ಹೆಚ್ಚಳವಾಗುವುದು ಹೇಗೆ ? ಇವರಿಗೆ (ಅರ್ಥ ಸಮರ್ಥಕರಿಗೆ) ಅರ್ಥವ್ಯವಸ್ಥೆಯು ಜೀವನಕ್ಕಿಂತ ಮಹತ್ವದ್ದಾಗಿದೆ !
೧೩. ‘ವಿಜ್ಞಾನ ಏನು ಬೇಕಾದರೂ ಮಾಡಬಹುದು, ಎನ್ನುವ ರಂಗುಬಿರಂಗಿನ ಕಲ್ಪನೆಯನ್ನು ಮಾಡುವ ಇಂದಿನ ಯುವವರ್ಗದ ಮಾನಸಿಕತೆ !
ಠಾಣೆ ನಗರದಲ್ಲಿ ವಾಸಿಸುವ ಕಲಾ ಮಹಾವಿದ್ಯಾಲಯದಿಂದ ಸುವರ್ಣಪದಕವನ್ನುಗಳಿಸಿರುವ ನಿಸರ್ಗಪ್ರೇಮಿ ಯುವಕನು, “ತಾಮಮಾನ ಹೆಚ್ಚಳದ ಚಿಂತೆ ಮಾಡಬೇಡಿ. ಪೃಥ್ವಿಯ ಸಂಪೂರ್ಣ ಆವರಣವನ್ನು ತೆಗೆದು ಇನ್ನೊಂದು ಗ್ರಹದ ಮೇಲೆ ಕೊಂಡೊಯ್ಯಲಾಗುವುದು ಹಾಗೂ ಜೀವ ಸೃಷ್ಟಿಯ ರಕ್ಷಣೆಯಾಗುವುದು, ಎಂದು ನನಗೆ ಹೇಳಿದನು ಮೊದಲು ನನಗೆ ಅನಿಸಿತು, ಈ ಯುವಕ ನನಗೆ ತಮಾಶೆ ಮಾಡುತ್ತಿದ್ದಾನೆ; ಆದರೆ ನಂತರ ನೋಡಿದರೆ ಅವನಿಗೆ ನಿಜವಾಗಿಯೂ ಹಾಗೆಯೆ ಇದೆ ಎಂದು ಅನಿಸುತ್ತದೆ. ನಾನು ಈ ಮಾಹಿತಿ ಎಲ್ಲಿ ಸಿಕ್ಕಿತು, ಎಂದು ಅವನಿಗೆ ಕೇಳಿದೆನು. ಆಗ ಅವನು, ‘ಒಂದು ವೈಜ್ಞಾನಿಕ ನಿಯತಕಾಲಿಕೆಯಲ್ಲಿ ಈ ಮಾಹಿತಿ ಸಿಕ್ಕಿತು ಹಾಗೂ ದೂರಚಿತ್ರವಾಹಿನಿಯಲ್ಲಿಯೂ ಕಾರ್ಯಕ್ರಮವನ್ನು ನೋಡಿದೆನು ಎಂದನು. ನಂತರ ನಾನು ಅವನೊಂದಿಗೆ ಸುಮಾರು ೩ ಗಂಟೆ ಚರ್ಚೆ ಮಾಡಿದೆ. ಅನಂತರ ಅವನಿಗೆ ವಾಸ್ತವಿಕತೆಯ ಅರಿವಾಯಿತು. ಈಗ ಕಳೆದ ೫ ವರ್ಷಗಳಿಂದ ಅವನು ಕರ್ನಾಟಕದಲ್ಲಿ ತನ್ನ ಹಳ್ಳಿಯಲ್ಲಿ ಕೃಷಿ ಮಾಡುತಿದ್ದಾನೆ.
೧೯೯೦ ರ ನಂತರ ಜನ್ಮ ತಾಳಿದ ಅಥವಾ ಆ ಕಾಲದಲ್ಲಿನ ಇಂದಿನ ಯುವವರ್ಗವು ಒಂದು ವಿಚಿತ್ರ ಜಗತ್ತಿನಲ್ಲಿ ಬೆಳೆದಿದ್ದಾರೆ. ಅವರಿಗೆ ‘ಗಜೆಟ್ನ ಕಾಲ್ಪನಿಕ ಜಗತ್ತು ಮತ್ತು ಸತ್ಯ ಜಗತ್ತು ಇವುಗಳಲ್ಲಿನ ವ್ಯತ್ಯಾಸವನ್ನು ಕಂಡು ಹಿಡಿಯಲು ಸಾಧ್ಯವಾಗುವುದಿಲ್ಲ. ಪೃಥ್ವಿಯಲ್ಲಿನ ವಾಸ್ತವಿಕತೆಯೊಂದಿಗೆ ಅವರ ಪ್ರತ್ಯಕ್ಷ ಸಂಬಂಧ ಆಗಿಲ್ಲ. ವಿಜ್ಞಾನ (ತಂತ್ರಜ್ಞಾನ) ಏನು ಬೇಕಾದರೂ ಮಾಡಬಹುದು, ಎಂಬುದು ಅವರ ರಂಗುಬಿರಂಗಿ ಕಲ್ಪನೆಯಾಗಿದೆ; ಆದ್ದರಿಂದಲೆ ‘ಅಮೇಝಾನ್ ಕಂಪನಿಯ ಮಾಲೀಕ ಜೆಫ್ ಬೆಝಾಸ್ ಹೇಳುತ್ತಾರೆ, ‘ಇನ್ನು ಮುಂದೆ ಪೃಥ್ವಿಯ ಮೇಲಿನ ಖನಿಜಗಳು ಮುಗಿದರೂ, ಚಿಂತೆಯಿಲ್ಲ. ಮಂಗಳದಿಂದ ಖನಿಜಗಳನ್ನು ತರೋಣ ಮತ್ತು ಚಂದ್ರನನ್ನು ಸಾರಿಗೆಗಾಗಿನ ತಾಣವೆಂದು ಉಪಯೋಗಿಸೋಣ.
ಅಮೇರಿಕಾದಲ್ಲಿ ಕೊರೋನಾದ ಹಾವಳಿ ಮುಂದುವರಿದಿದೆ. ಅವರು ಮಾಡಿರುವ ತಪ್ಪು ನಮ್ಮಿಂದ ಆಗಬಾರದು. ಅವರು ಜೀವನಶೈಲಿಯ ಗುಲಾಮರಾಗಿದ್ದರು; ಆದರೆ ನಾವು ಹಾಗಾಗಬಾರದು, ನಮ್ಮ ಅಖಂಡ ಸಂಸ್ಕೃತಿಯನ್ನು ಕಾಪಾಡುವ ಈ ಭಾರತದದಲ್ಲಿ ಮತ್ತು ಉಚ್ಚಭ್ರೂ ಅಮೇರಿಕಾದಲ್ಲಿ ವ್ಯತ್ಯಾಸವೇನು? ಈಗ ನಮಗೆ ಕೊರೋನಾ ಇರುವ ಜಗತ್ತಿನಲ್ಲಿ ಅದರ ಷರತ್ತಿನಲ್ಲಿ ವಾಸಿಸಬೇಕೆನ್ನುವ ಅರಿವು ಇರಬೇಕು.
– ವಕೀಲ ಗಿರಿಶ ರಾವುತ್, ಆಮಂತ್ರಿತ, ಭಾರತೀಯ ಜೀವನ ಮತ್ತು ಪೃಥ್ವಿರಕ್ಷಣ ಚಳುವಳಿ (೨೮.೪.೨೦೨೦)