ಪ್ರಗತಿಪರ(ಅಧೋಗತಿ) ಪತ್ರಕರ್ತ ರಾಜದೀಪ ಸರದೇಸಾಯಿ ಅವರ ಹಿಂದೂದ್ವೇಷವನ್ನು ತಿಳಿಯಿರಿ !

೧. ಖಲಿಸ್ತಾನಿ ಭಯೋತ್ಪಾದಕರ ಹಿಂದೂದ್ವೇಷವನ್ನು ತಿಳಿಯಿರಿ !

ಪಂಜಾಬನಲ್ಲಿ ಖಲಿಸ್ತಾನಿ ಉಗ್ರರು ಹಿಂದುತ್ವನಿಷ್ಠರ ಮೇಲೆ ಹಲ್ಲೆ ನಡೆಸಲು ಸಿದ್ಧತೆ ಮಾಡುತ್ತಿದ್ದಾರೆ ಎಂಬ ಮಾಹಿತಿ ದೆಹಲಿಯಲ್ಲಿ ಬಂಧಿಸಲಾಗಿರುವ ಮೂವರು ‘ಖಲಿಸ್ತಾನ್ ಲಿಬರೇಶನ್ ಫ್ರಂಟ್’ನ ಉಗ್ರರ ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಅನಂತರ ಪಂಜಾಬ್ ಪೊಲೀಸರು ಹಿಂದುತ್ವನಿಷ್ಠ ನಾಯಕರ ಭದ್ರತೆಯನ್ನು ಹೆಚ್ಚಿಸಿದ್ದಾರೆ.

೨. ಹಿಂದೂಗಳ ನರಮೇಧ ಮಾಡುವ ಮತಾಂಧರ ವೈಭವೀಕರಣವನ್ನು ತಿಳಿಯಿರಿ !

ಕೇರಳದಲ್ಲಿ ೧೯೨೦-೨೧ ರಲ್ಲಿ ‘ಮೊಪ್ಲಾ ದಂಗೆ’ ಹೆಸರಿನಲ್ಲಿ ಮತಾಂಧರಿಂದ ಮಾಡಲಾಗಿದ್ದ ಸಾವಿರಾರು ಹಿಂದೂಗಳ ಹತ್ಯಾಕಾಂಡಕ್ಕೆ ೨೦೨೧ ರಲ್ಲಿ ೧೦೦ ವರ್ಷಗಳು ಪೂರ್ಣವಾಗುತ್ತಿರುವುದರಿಂದ ಹತ್ಯಾಕಾಂಡದ ಮುಖ್ಯ ರೂವಾರಿ ವಿ.  ಅಹಮ್ಮದ ಹಾಜಿ ಬಗ್ಗೆ ೩ ಚಲನಚಿತ್ರಗಳು ನಿರ್ಮಿಸಲಾಗುತ್ತಿವೆ.

೩. ಇಂತಹ ಮತಾಂಧರಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು !

ಒಮ್ಮುಖ ಪ್ರೀತಿಯಿಂದ ಆರಿಫ್ ಎಂಬ ಮತಾಂಧನು ಹರಿಯಾಣದ ‘ಟಿಕ್-ಟಾಕ್ ಸ್ಟಾರ್’ ಶಿವಾನಿಯ ಹತ್ಯೆ ಮಾಡಿದನು. ಆಕೆಯ ಮೃತದೇಹವು ‘ಟಚ್ ಅಂಡ್ ಫೇರ್’ ಎಂಬ ಶಿವಾನಿಯ ಸಲೂನ್‌ನಲ್ಲಿಯೇ ಕಂಡುಬಂದಿದೆ.

೪. ಭಾರತವು ಇಸ್ರೇಲ್‌ನಿಂದ ಕಲಿಯಬೇಕು !

ಜ್ಯೂ ಬಹುಸಂಖ್ಯಾತ ಇಸ್ರೇಲ್ ದೇಶದಲ್ಲಿ ಹಿಬ್ರೂ ಭಾಷೆಯಲ್ಲಿ ಪ್ರಸಾರ ಮಾಡುವ ‘ಗಾಡ್ ಟಿವಿ ಎಂಬ ಕ್ರಿಶ್ಚಿಯನ್ ಮಿಶನರಿಯವರ ಖಾಸಗಿ ಟೆಲಿವಿಸನ್ ಚಾನೆಲ್‌ನಲ್ಲಿ ಪ್ರಸಾರ ಮಾಡುವುದನ್ನು ನಿಷೇಧಿಸಿದೆ. ‘ಈ ಚಾನೆಲ್ ದೇಶದಲ್ಲಿ ಮತಾಂತರಕ್ಕೆ ಕುಮ್ಮಕ್ಕು ನೀಡುತ್ತಿದೆ’ ಎಂದು ಅದು ಹೇಳಿದೆ.

೫. ಪ್ರಗತಿಪರ(ಅಧೋಗತಿ) ಪತ್ರಕರ್ತ ರಾಜದೀಪ ಸರದೇಸಾಯಿ ಅವರ ಹಿಂದೂದ್ವೇಷವನ್ನು ತಿಳಿಯಿರಿ !

ಮಹಾರಾಷ್ಟ್ರದ ಖ್ಯಾತ ‘ಲಾಲ್‌ಬಾಗ್‌ನ ರಾಜ (ಅಂದರೆ ಗಣೇಶಮೂರ್ತಿ) ಈ ವರ್ಷ ಬರುವುದಿಲ್ಲ. ಕೊರೋನಾದಿಂದಾಗಿ ಮುಂಬೈನಲ್ಲಿ ಅನೇಕ ವರ್ಷಗಳ ಹಳೆಯ ಪರಂಪರೆಯು ನಿಂತಿತು. ಯೋಚಿಸಿ, ಸಾಂಕ್ರಾಮಿಕತೆಯ ಮುಂದೆ ದೇವರು ಸಹ ಸೋಲೊಪ್ಪಿದ್ದಾನೆ’ ಎಂದು ಪತ್ರಕರ್ತ ರಾಜದೀಪ ಸರದೇಸಾಯಿ ಟ್ವೀಟ್ ಮಾಡಿದ್ದಾರೆ.

೬. ಇಂತಹ ‘ಗೃಹವಂಚಕ’ ಪೊಲೀಸರಿಗೆ ಶಿಕ್ಷೆ ನೀಡಿ !

ಕಾನಪೂರ(ಉತ್ತರಪ್ರದೇಶ)ದಲ್ಲಿ ಎಂಟು ಜನ ಪೊಲೀಸರ ಹತ್ಯೆಯ ಪ್ರಕರಣದಲ್ಲಿ ಚೌಬೆಪುರದ ಪೊಲೀಸ್ ಉಪನಿರೀಕ್ಷಕ ವಿನಯ ತಿವಾರಿಯನ್ನು ಅಮಾನತ್ತುಗೊಳಿಸಲಾಗಿದೆ. ಗೂಂಡಾ ವಿಕಾಸ್ ದುಬೆ ವಿರುದ್ಧದ ಪೊಲೀಸ್ ಕಾರ್ಯಾಚರಣೆ ಬಗ್ಗೆ ತಿವಾರಿ ಆತನಿಗೆ ಮುನ್ಸೂಚನೆಯನ್ನು ನೀಡಿರುವುದಾಗಿ ಆರೋಪಿಸಲಾಗುತ್ತಿದೆ.

೭. ಪಾಕಿಸ್ತಾನದ ಮತಾಂಧರ ಹಿಂದೂದ್ವೇಷವನ್ನು ತಿಳಿಯಿರಿ !

ಇಸ್ಲಾಮಾಬಾದ್ (ಪಾಕಿಸ್ತಾನ) ದಲ್ಲಿ ಇತ್ತೀಚೆಗೆ ಮೊದಲ ಹಿಂದೂ ದೇವಾಲಯದ ಭೂಮಿಪೂಜೆ ಮತ್ತು ಬುನಾದಿಯನ್ನು ಹಾಕಲಾಗಿತ್ತು. ಅಜ್ಞಾತ ಮತಾಂಧರು ಬುನಾದಿ ಹಾಕುವ ಸಮಯದಲ್ಲಿ ಇಲ್ಲಿ ನಿರ್ಮಿಸಲಾದ ಸಣ್ಣಕಟ್ಟಡಗಳನ್ನು ಕೆಡವಿದರು. ಪಾಕಿಸ್ತಾನ ಸರಕಾರವೂ ದೇವಾಲಯಗಳ ನಿರ್ಮಾಣವನ್ನು ನಿಷೇಧಿಸಿದೆ.